bank, ಬ್ಯಾಂಕ್

ಎಲ್ಲಾ ಬ್ಯಾಂಕ್​ ಗ್ರಾಹಕರಿಗೆ ಶುಭ ಸುದ್ದಿ !!! ಏನಂತೀರಾ ಈ ಲೇಖನ ನೋಡಿ…

198

ಬ್ಯಾಂಕ್​ ಗ್ರಾಹಕರಿಗೆ ಶುಭ ಸುದ್ದಿ ನೀಡಿರುವ ಆರ್​ಬಿಐ.

ಮೊಬೈಲ್ ನಂಬರ್ ವರ್ಗಾವಣೆಯಂತೆ ಈಗ ನಿಮ್ಮ  ಬ್ಯಾಂಕ್ ಖಾತೆ ವರ್ಗಾವಣೆಗೂ ಮುಂದಾಗಿದೆ. ಅಂದರೆ ತಮಗಿಷ್ಟ ಬಂದ ಬ್ಯಾಂಕ್‌ನಲ್ಲಿ ಖಾತೆ ಹೊಂದಬಹುದಾಗಿದೆ.

 

ಅಂದುಕೊಂಡಂತೆ ನಡೆದರೆ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಇನ್ನೊಂದು ಬ್ಯಾಂಕ್​ಗೆ ವರ್ಗಾಹಿಸಿಕೊಳ್ಳಬಹುದಾಗಿದೆ. ಯಾವುದೇ ಸಮಯದಲ್ಲಿ ಬ್ಯಾಂಕ್​ ಖಾತೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ತಮ್ಮ ಅನುಕೂಲತೆಗೆ ತಕ್ಕಂತೆ ಬ್ಯಾಂಕ್​ಗಳ ವರ್ಗಾವಣೆಗೆ ಅವಕಾಶ ಕಲ್ಪಿಸುವ ಯೋಜನೆ ಇದಾಗಿದೆ.

ಗ್ರಾಹಕರು ಚಾಲ್ತಿಯಲ್ಲಿರುವ ತಮ್ಮ ಖಾತೆಯನ್ನು ತಮಗೆ ಇಷ್ಟಬಂದ/ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ವರ್ಗಾಹಿಸಿಕೊಳ್ಳಬಹುದಾಗಿದೆ.

ನಿಮ್ಮ ಮೊಬೈಲ್ ಸೇವಾ ಕಂಪನಿಯಂತೆ (ಮೊಬೈಲ್ ಆಪರೇಟರ್) ನಿಮ್ಮ ಬ್ಯಾಂಕ್ ಅನ್ನು ನೀವು ಬದಲಾಯಿಸಿದರೂ ಕೂಡಾ ನಿಮ್ಮ ಹಳೆಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಲು ಸಾಧ್ಯವಾಗುತ್ತದೆ.

ಈ ಬಗ್ಗೆ ಮಾತನಾಡಿರುವ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಎಸ್.ಎಸ್.ಮುಂದ್ರ, ಭಾರತದಲ್ಲಿ ಬ್ಯಾಂಕ್ ಖಾತೆಯ ಪೋರ್ಟಬಿಲಿಟಿ ಪರಿಚಯಿಸಲು ಆರ್​ಬಿಐ ಸಿದ್ದತೆ ನಡೆಸಿದೆ. ಪಾವತಿಯ ವ್ಯವಸ್ಥೆಯಲ್ಲಿನ ತಂತ್ರಜ್ಞಾನದ ಪ್ರಗತಿಗಳೊಂದಿಗೆ ಖಾತೆಯ ವರ್ಗಾವಣೆಗೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಎಂಪ್ಲಾ ಯೀಸ್  ಫೆಡರೇಷನ್ ಅಧ್ಯಕ್ಷ ವಸಂತ ಪೈ, ಕೇಂದ್ರದ ಈ ನಿರ್ಧಾರ ಉತ್ತಮವಾಗಿದೆ. ಇದರಿಂದ ತಮಗಿಷ್ಟ ಬಂದ ಬ್ಯಾಂಕ್‌ನಲ್ಲಿ ಖಾತೆ ಹೊಂದಬಹುದಾಗಿದೆ. ಇದರ ಜತೆಗೆ ಕಟ್ಟುನಿಟ್ಟಿನ ಷರತ್ತು ಜಾರಿಗೊಳಿಸಬೇಕು.

ಗ್ರಾಹಕರನ್ನು ಸೆಳೆಯೋಕೆ ಬ್ಯಾಂಕ್‌ಗಳು ಆಮಿಷ ಒಡ್ಡಬಹುದು. ಇಲ್ಲವಾದರೆ ಭ್ರಷ್ಟಾಚಾರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಅಂಜೂರ ಹಣ್ಣು ಮನುಷ್ಯನ ದೇಹಕ್ಕೆ ಎಷ್ಟೊಂದು ಲಾಭವಿದೆ ಗೋತ್ತಾ..?ತಿಳಿಯಲು ಈ ಲೇಖನ ಓದಿ..

    ಅಂಜೂರ ಮನುಷ್ಯನ ದೇಹಕ್ಕೆ ತುಂಬಾನೇ ಸಹಕಾರಿಯಾಗಿದೆ. ಇದರ ಸೇವನೆಯನ್ನು ಮಾಡೋದ್ರಿಂದ ಸಿಗುವ ಆರೋಗ್ಯಕಾರಿ ಲಾಭಗಳು ಯಾವುವು ಅನ್ನೋದು ಮುಂದೆ ನೋಡಿ.

  • ವಿಚಿತ್ರ ಆದರೂ ಸತ್ಯ

    ಗೊಮಟೇಶ್ವರಕ್ಕೆ ಬಟ್ಟೆ ಹಾಕುವಂತೆ ಸಿ.ಎಂ ಗೆ ಪತ್ರ ಬರೆದ ಪತ್ರಕರ್ತ..!ತಿಳಿಯಲು ಈ ಲೇಖನ ಓದಿ…

    ಪ್ರಗತಿಪರ ಚಿಂತಕೆರೆನಿಸಿಕೊಂಡವರು ಐತಿಹಾಸಿಕ ಸ್ಥಳಗಳ ರಕ್ಷಣೆ, ಅವುಗಳ ನವೀಕರಣಕ್ಕಾಗಿ ಸರಕಾರಕ್ಕೆ ಪತ್ರ ಬರೆಯುವುದನ್ನು ನಾವು ನೋಡಿದ್ದೇವೆ. ಮಾನ ಮುಚ್ಚಲು ಬಾಹುಬಲಿ ಪತ್ರಿಮೆಗೆ ಬಟ್ಟೆ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತರೊಬ್ಬರು ಪತ್ರದ ಮೂಲಕ ವಿಚಿತ್ರ ಮನವಿ ಸಲ್ಲಿಸಿದ್ದಾರೆ.

  • ಸಿನಿಮಾ

    ವಿಶ್ವಾದ್ಯಂತ 3 ಸಾವಿರ ಥಿಯೇಟರ್‌ಗಳಲ್ಲಿ ಪೈಲ್ವಾನ್ ಹವಾ-ಚಿತ್ರಮಂದಿರದ ಎದುರು 101 ತೆಂಗಿನಕಾಯಿ ಒಡೆದ ಅಭಿಮಾನಿ…!

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಇಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ. ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಮುಂಜಾನೆ 5.30ರಿಂದ ಪ್ರದರ್ಶನ ಶುರುವಾಗಿದೆ. ಇತ್ತ ಮೆಜೆಸ್ಟಿಕ್‍ನ ಸಂತೋಷ್ ಚಿತ್ರಮಂದಿರದಲ್ಲಿ ಇದೇ ಮೊದಲ ಬಾರಿಗೆ ಬೆಳಗ್ಗೆ 7 ಗಂಟೆಗೆ ಶೋ ಆರಂಭವಾಗಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಚಿತ್ರಮಂದಿರದ ಎದುರು 101 ತೆಂಗಿನ ಕಾಯಿಯನ್ನು ಒಡೆದಿದ್ದಾರೆ. ಸುದೀಪ್ ಅವರ ಸಿನಿಮಾ ಇದೇ ಮೊದಲ…

  • ಸುದ್ದಿ

    ಎಂದಿನಂತೆ ಮರಳಿ ಬಂದ ಫೇಸ್ಬುಕ್ ಮತ್ತು ವಾಟ್ಸಪ್….! ತೊಂದರೆಯಾಗಿದ್ದಕ್ಕೆ ಕ್ಷಮೆ ಯಾಚನೆ…

    ವಿಶ್ವದೆಲ್ಲೆಡೆ ಡೌನ್ ಆಗಿದ್ದ ಫೇಸ್‍ಬುಕ್, ವಾಟ್ಸಪ್, ಇನ್‍ಸ್ಟಾಗ್ರಾಮ್ ಮತ್ತೆ ಎಂದಿನಂತೆ ಕೆಲಸ ಮಾಡುತ್ತಿವೆ. ಈ ಬಗ್ಗೆ ಫೇಸ್‍ಬುಕ್ ಇಂದು ಬೆಳಗ್ಗೆ ಸ್ಪಷ್ಟನೆ ನೀಡಿ, ನಮ್ಮ ಕೆಲ ಬಳಕೆದಾರರಿಗೆ ಫೋಟೋ, ವಿಡಿಯೋ ಅಪ್ಲೋಡ್ ಮತ್ತು ಕಳುಹಿಸಲು ಕಷ್ಟವಾಗಿತ್ತು. ಈಗ ಈ ಸಮಸ್ಯೆ ಬಗೆಹರಿದಿದ್ದು ನಾವು ಮರಳಿ ಬಂದಿದ್ದೇವೆ. ಈ ತೊಂದರೆ ಆಗಿದ್ದಕ್ಕೆ ಕ್ಷಮೆ ಕೇಳುತ್ತೇವೆ ಎಂದು ಟ್ವೀಟ್ ಮಾಡಿದೆ. ನಮ್ಮ ಕೆಲ ಬಳಕೆದಾರರಿಗೆ ಫೋಟೋ, ವಿಡಿಯೋ ಅಪ್ಲೋಡ್ ಮತ್ತು ಕಳುಹಿಸಲು ಕಷ್ಟವಾಗುತ್ತಿದೆ ಎನ್ನುವ ವಿಚಾರ ನಮ್ಮ ಗಮನಕ್ಕೆ ಬಂದಿದೆ….

  • inspirational

    ರೇವಣ್ಣ ಕುಟುಂಬ ಆದರೆ ಸೂರಜ್ ರೇವಣ್ಣ ಅವರ ಪತ್ನಿ ಎಲ್ಲಿ

    ಹೆಚ್.ಡಿ. ರೇವಣ್ಣ ಅವರ ಕುಟುಂಬ ವೃಕ್ಷ (Family Tree) 🌳 ಹೆಚ್.ಡಿ. ರೇವಣ್ಣ ಕುಟುಂಬ  ಹೆಚ್.ಡಿ. ದೇವೇಗೌಡ (ಭಾರತದ ಮಾಜಿ ಪ್ರಧಾನಮಂತ್ರಿ) │ ┌─────────────────────┴──────────────────────┐ │ │ ಹೆಚ್.ಡಿ. ರೇವಣ್ಣ (ವಿಧಾಯಕ) ಹೆಚ್.ಡಿ. ಕುಮಾರಸ್ವಾಮಿ (ಮಾಜಿ ಸಿಎಂ) │ │ │ ಅನಿತಾ ಕುಮಾರಸ್ವಾಮಿ (ಪತ್ನಿ) │ │ │ ನಿಖಿಲ್ ಕುಮಾರಸ್ವಾಮಿ (ನಟ ಹಾಗೂ ರಾಜಕಾರಣಿ) │ ಭಾವನಿ ರೇವಣ್ಣ (ಪತ್ನಿ) │ ┌────────────────────┬────────────────────────┐ │ │ ಪ್ರಜ್ವಲ್ ರೇವಣ್ಣ ಡಾ. ಸೂರಜ್ ರೇವಣ್ಣ (ಮಾಜಿ…

  • inspirational

    ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

    ಮಯೂನ್ ಎನ್ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು ಆಧುನಿಕ ವೈದ್ಯರು ಆರೋಪಣೆ ಮಾಡುತ್ತಿದ್ದಾರೆ.ನಿವು ಸರಿಯಾಗಿ ಉಸಿರಾಡುತಿದ್ತ್ದೀರ? ಇದನ್ನು ತಿಳಿದುಕೊಳ್ಳಲು ಒಂದು ಸರಳ ವಿಧಾನ ಇದೆ. ನೀವು ಈಗ ಎಲ್ಲೇ ಇರಿ. ಏನೇ ಮಾಡುತ್ತಿರಿ. ಒಮ್ಮೆ ಆಳವಾಗಿ…