ಸಿನಿಮಾ

ದೊಡ್ಮನೆ ಅಮ್ಮ “ಪಾರ್ವತಮ್ಮ ರಾಜ್ ಕುಮಾರ್” ವಿಧಿವಶ

789

ವರನಟ ಡಾ. ರಾಜ್ ಕುಮಾರ್ ಅವರ ಪತ್ನಿ, ಕನ್ನಡ ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ (77)ಅವರು ಬುಧವಾರ ಬೆಳಗ್ಗೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಬುಧವಾರ(ಮೇ 31) ಬೆಳಗ್ಗೆ 4.40ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಎಂಎಸ್ ರಾಮಯ್ಯ ಡಾ. ಸಂಜಯ್ ಕುಲಕರ್ಣಿ ಪ್ರಕಟಿಸಿದ್ದಾರೆ. ಕಳೆದ 16 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪಾರ್ವತಮ್ಮ ಅವರು ಕನ್ನಡ ಚಲನಚಿತ್ರರಂಗದ ವರನಟ ಡಾ. ರಾಜ್ ಕುಮಾರ್ ಅವರ ಪತ್ನಿಯಾಗಿ, ಚಿತ್ರರಂಗದ ಶಕ್ತಿಯಾಗಿ ಬೆಳೆದವರು. ಪಾರ್ವತಮ್ಮ ಅವರು ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್, ಇಬ್ಬರು ಪುತ್ರಿಯರಾದ ಪೂರ್ಣಿಮಾ, ಲಕ್ಷ್ಮಿ, ಸೋದರರಾದ ಎಸ್ಎ ಚಿನ್ನೇಗೌಡ, ಗೋವಿಂದರಾಜ್ ಹಾಗೂ ಶ್ರೀನಿವಾಸ್ ಸೇರಿದಂತೆ ಮೊಮ್ಮಕ್ಕಳು, ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

ಪೂರ್ಣಿಮಾ ಎಂಟರ್ ಪ್ರೈಸರ್ ಮೂಲಕ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಲ್ಲದೆ, ಸುಧಾರಾಣಿ, ಮಾಲಾಶ್ರೀ, ಪ್ರೇಮಾ, ರಕ್ಷಿತಾ, ರಮ್ಯಾ ಅವರನ್ನು ಚಿತ್ರರಂಗಕ್ಕೆ ಕರೆ ತಂದವರು.

ಸರಿ ಸುಮಾರು 80ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಿಸಿದ್ದರು. ಡಾ. ರಾಜ್ ಅಭಿನಯದ ಹಾಲು ಜೇನು, ಕವಿರತ್ನ ಕಾಳಿದಾಸ, ಜೀವನ ಚೈತ್ರ , ಶಿವರಾಜ್ ಅಭಿನಯದ ಆನಂದ್, ಓಂ, ಜನುಮದ ಜೋಡಿ, ರಾಘವೇಂದ್ರ ರಾಜ್ ಕುಮಾರ್ ಅಭಿನಯದ ನಂಜುಂಡಿ ಕಲ್ಯಾಣ, ಪುನೀತ್ ಅಭಿನಯದ ಅಪ್ಪು, ಅಭಿ, ಹುಡುಗರು ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿದವರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಂದ ಹೆಚ್ಚಿಸಿಕೊಳ್ಳಲು ಹೋದ ವೈದ್ಯೆ ಆಸ್ಪತ್ರೆ ಪಾಲು ….! ಬ್ಯೂಟಿಪಾರ್ಲರ್​ಗೆ ಹೋಗುವ ಹೆಂಗಸರೇ ಎಚ್ಚರ…ಎಚ್ಚರ!!

    ಹಬ್ಬ ಬಂತು ಅಂದ್ರೆ ಖುಷಿ ಖುಷಿಯಿಂದ ಆಚರಣೆಗೆ ಸಿದ್ಧವಾಗೋ ಹೆಣ್ಣುಮಕ್ಕಳು ಏನೇ ವಿಶೇಷ ಕಾರ್ಯಕ್ರಮ ಇದ್ದರೂ ಬ್ಯೂಟಿಪಾರ್ಲರ್​ಗೆ ಒಮ್ಮೆ ಭೇಟಿ ಕೊಟ್ಟು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ. ಆದರೆ ಇಂತಹದ್ದೆ ಆಸೆಯಿಂದ ಬ್ಯೂಟಿಪಾರ್ಲರ್​ಗೆ ಹೋಗಿದ್ದ ವೈದ್ಯೆಯೊಬ್ಬರು ತಮ್ಮ ಮುಖವನ್ನು ಶಾಶ್ವತವಾಗಿ ಹಾಳುಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಿಎಂಎಚ್​ ರಸ್ತೆಯಲ್ಲಿರುವ ಕ್ಲಬ್​ ಸಿಟ್ರಸ್​​ ಸಲೂನ್​ನಲ್ಲಿ ಈ ಘಟನೆ ನಡೆದಿದೆ. ಯಶೋಧಾ ಎಂಬ ವೈದ್ಯೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್​ಗೆ ತೆರಳಿದ್ದರು. ಈ ವೇಳೆ…

  • ಸುದ್ದಿ

    ಖ್ಯಾತ ಸ್ಯಾಕ್ಸೋಫೋನ್ ವಾದಕ,ಪದ್ಮಶ್ರೀ ಪುರಸ್ಕೃತ ವಿಜೇತ ಕದ್ರಿ ಗೋಪಾಲನಾಥ್ ಇನ್ನಿಲ್ಲ …..

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಲನಾಥ್(70)​ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಕೆಲವು ತಿಂಗಳುಗಳಿಂದ ವಯೋಸಹಜ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಗುರುವಾರ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣಿ ಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು. ಆಕಾಶವಾಣಿ ‘ಎ’ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು…

  • ಸುದ್ದಿ

    ಭರ್ಜರಿ ಶಾಪಿಂಗ್ ಸ್ಟಾರ್ಟ್ ಮಾಡಿದ ಯಶ್ ಮತ್ತು ರಾಧಿಕಾ ಪಂಡಿತ್ ಇದಕ್ಕೆ ಕಾರಣ? ಇಲ್ಲಿದೆ ನೋಡಿ,.!

    ರಾಧಿಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು . ಅಕ್ಟೋಬರ್ ಮೊದಲ ವಾರದಲ್ಲಿ ಅವರ ಮನೆಗೆ ತುಂಟ ಕೃಷ್ಣನೋ ಅಥವಾ ಮಹಾಲಕ್ಷ್ಮೀಯೋ ಬರುತ್ತಾರೆ. ಇತ್ತೀಚೆಗಷ್ಟೇ ಯಶ್ ಮಗಳ ಜೊತೆಗಿನ ವಿಡಿಯೋ ಶೇರ್ ಮಾಡಿದ್ದರು. ಆ ವಿಡಿಯೋದಲ್ಲಿ ಆಯ್ರಾ ಕ್ಯಾಮೆರಾ ನೋಡಿ, ತಂದೆ ಯಶ್ ಹೇಳಿಕೊಟ್ಟಂತೆ ಟಾಟಾ ಮಾಡುತ್ತಿದ್ದಳು. ಇವಳ ಚೂಟಿತನ ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದರು.  ಸ್ಯಾಂಡಲ್‌ವುಡ್‌ನ ಬೆಸ್ಟ್ಬ್ಯೂಟಿಫುಲ್ ದಂಪತಿ ಯಶ್ ಹಾಗೂರಾಧಿಕಾ ಪಂಡಿತ್. ಮದುವೆಯ ನಂತರದಲ್ಲಿರಾಧಿಕಾ ಸದ್ಯ ಸಿನಿಮಾಗಳಿಂದ ದೂರವಿದ್ದಾರೆ.ಯಶ್ ‘ಕೆಜಿಎಫ್ 2’ ಸಿನೆಮಾದಲ್ಲಿ ಬಿಜಿಯಿದ್ದಾರೆ. ಇವರಿಬ್ಬರಿಗೂ ಮುದ್ದಾದ ಆಯ್ರಾ ಎಂಬಮಗಳಿರೋದು ಗೊತ್ತೇ ಇದೆ. ಆಗಾಗದಂಪತಿ…

  • ವಿಚಿತ್ರ ಆದರೂ ಸತ್ಯ

    ಜುರಾಸಿಕ್ ಅವಧಿಯ ಡೈನೋಸರ್ ಮೊಟ್ಟೆಗಳು ಪತ್ತೆ..!ತಿಳಿಯಲು ಈ ಲೇಖನ ಓದಿ…

    ಚೀನದ ಜಿಯಾಂಗ್ಸಿ ಪ್ರಾಂತ್ಯದಲ್ಲಿನ ಗ್ವಾಂಗ್ಝೋ ನಗರ ಡೈನೋಸಾರ್ಗಳ ತವರು ಎಂದೇ ಖ್ಯಾತವಾಗಿದ್ದು ಈಚೆಗೆ ಇಲ್ಲಿ ಈಚೆಗೆ ಡೈನೋಸಾರ್ಗಳ ಪಳೆಯುಳಿಕೆ ರೂಪದಲ್ಲಿರುವ ಸುಮಾರು 30 ಮೊಟ್ಟೆಗಳು ಪತ್ತೆಯಾಗಿವೆ. ಪರಿಣತರು ಈ ಮೊಟ್ಟೆಗಳು ಸುಮಾರು 130 ದಶಲಕ್ಷ ವರ್ಷಗಳಷ್ಟು ಹಿಂದಿನವು ಎಂದು ಅಂದಾಜಿಸಿದ್ದಾರೆ.

  • ತಂತ್ರಜ್ಞಾನ

    ಚಾಲಕನಿಲ್ಲದ ವಿಮಾನ!!!

    ಪೈಲಟ್ ಇಲ್ಲದ ವಿಮಾನ ತಯಾರಿಸಲು ಬೋಯಿಂಗ್ ಕಂಪನಿ ಮುಂದೆ ಬಂದಿದೆ. ವಿಮಾನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಬೋಯಿಂಗ್ ಕಂಪನಿ ಮುಂದಿನ ವರ್ಷದ ವೇಳೆಗೆ ಪೈಲಟ್ ಇಲ್ಲದ ವಿಮಾನ ನಿರ್ಮಾಣದ ಕನಸು ನನಸಾಗಿರುವ ಗುರಿ ಹೊಂದಿದೆ.

  • ಸುದ್ದಿ

    ಇನ್ಮುಂದೆ ಎಟಿಎಂ ನಿಂದ ಕ್ಯಾಶ್ ವಿತ್ ಡ್ರಾ ಮಾಡಲು ಈ ನಿಯಮವನ್ನು ತಪ್ಪದೆ ಪಾಲಿಸಬೇಕು…!

    ಬ್ಯಾಂಕ್ ನಿಂದ  ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಎಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ . ನವದೆಹಲಿ ,ಗ್ರಾಹಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದ್ದು, ಇನ್ನು ಮುಂದೆ 10 ಸಾವಿರ ರೂಪಾಯಿಗೂ ಅಧಿಕ ಹಣವನ್ನು ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಲು ಒಟಿಪಿಯನ್ನು ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಹೌದು.. ಖ್ಯಾತ…