ಆರೋಗ್ಯ, ಉಪಯುಕ್ತ ಮಾಹಿತಿ

ನೀವು ಸುಸ್ತು ಅಂತ ಮಲಗುತ್ತಿದಿರಾ..!ಹಾಗಾದ್ರೆ ಈ ಟಿಪ್ಸ್ ಗಳನ್ನು ಅಳವಡಿಸಿಕೊಳ್ಳಿ..

1583

ಹಲವರಲ್ಲಿ ನಿಶ್ಯಕ್ತಿ ಸಿಕ್ಕಾಪಟ್ಟೆ ಕಾಟ ಕೊಡ್ತಿರುತ್ತೆ. ಸ್ವಲ್ಪನೇ ಕೆಲಸ ಮಾಡಿದ್ರು ಜಾಸ್ತಿ ಸುಸ್ತಾಗೋವಂತ ತುಂಬಾ ಜನ ನಮ್ಮ ಮಧ್ಯನೇ ಇದಾರೆ. ಸುಸ್ತು ಖಾಯಿಲೆಯ ಗುರುತಾಗಿರಬಹುದು.ಥೈರಾಯಿಡ್ ಸಮಸ್ಯೆ, ಅಜೀರ್ಣ, ಮಲಬದ್ಧತೆ, ಮಧುಮೇಹ, ಅಧಿಕ ರಕ್ತದೊತ್ತಡ, ಅಪೌಷ್ಟಿಕತೆ, ರಕ್ತಹೀನತೆ, ಮಾನಸಿಕ ಒತ್ತಡ ಇತರೆ ಹತ್ತು ಹಲವು ಸಮಸ್ಯೆಗಳು ನಿಶ್ಯಕ್ತಿಗೆ ಮೂಲ ಕಾರಣವಾಗಿರಬಹುದು.

ಇಂದು ನಮ್ಮ ಜೀವನ ಹೇಗಾಗಿದೆ ಎಂದರೆ ಮನೆ ಯಿಂದ ಹೊರಗೆ ಹೋಗಿ ಮತ್ತೆ ಮನೆಗೆ ಬಂದು ಕುಳಿತ ಕೂಡಲೆ ಸುಸ್ತು ಬಂದು ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಮನೆಯಿಂದ ಐದು ಕಿ.ಮೀ ಇರುವ ಆಫೀಸಿನಿಂದ ಮನೆಗೆ ಬರುವಷ್ಟರಲ್ಲಿ ಟ್ರಾಫಿಕ್ ಸಿಗ್ನಲ್ ಗಳ ಸೀಮೋಲ್ಲಂಘನ ಮಾಡಲಾಗದೆ ಬಸವಳಿ ಯುವ ಸರದಿ ನಮ್ಮದಾಗಿರುತ್ತದೆ. ಬರೀ ಟ್ರಾಫಿಕ್ ಮಾತ್ರ ನಮ್ಮನ್ನು ಸುಸ್ತು ಮಾಡುತ್ತದೆ ಎಂದು ಭಾವಿಸಬೇಡಿ. ಜೊತೆಗೆ ನಮ್ಮ ಅನಾರೋಗ್ಯಕರ ಆಹಾರ ಸೇವನೆ ಕ್ರಮವು ಸಹ ನಮ್ಮನ್ನು ಹಾಳು ಮಾಡುತ್ತಿದೆ. ಸೇವಿಸುವ ಆಹಾರದಲ್ಲಿ ಸತ್ವ ಇಲ್ಲವೆಂದಾದಲ್ಲಿ ನಮ್ಮ ದೇಹಕ್ಕೆ ಶಕ್ತಿ ಎಲ್ಲಿಂದ ಬರಬೇಕು?

ಮಾನವ ಅನಾದಿ ಕಾಲದಲ್ಲಿ ಬೇಟೆಯಾಡುತ್ತಾ ಬದುಕುತ್ತಿದ್ದ ಕಾಲದಲ್ಲಿ, ಪ್ರಾಣಿಗಳಿಗೆ ಸರಿಸಮಾನವಾದ ಸಾಮರ್ಥ್ಯವನ್ನು ಹೊಂದಿದ್ದನು. ಆಗ ಅವನಿಗೆ ಆರೋಗ್ಯದ ಸಮಸ್ಯೆಗಳು ಬಂದಾಗ ಅವನು ಮೊರೆ ಹೋಗುತಿದ್ದುದು ಸ್ವಾಭಾವಿಕ ಪದಾರ್ಥಗಳನ್ನೆ. ಸ್ವಾಭಾವಿಕವಾದ ಉತ್ಪನ್ನಗಳು ನಮ್ಮ ದೇಹಕ್ಕೆ ಶಕ್ತಿಯನ್ನು, ಆರೋಗ್ಯವನ್ನು ಮತ್ತು ತಾಕತ್ತನ್ನು ಎಲ್ಲವನ್ನೂ ನೀಡುತ್ತದೆ. ಬನ್ನಿ ಅದಕ್ಕಾಗಿಯೇ ಇಂದು ಬೋಲ್ಡ್‌ಸ್ಕೈ ನಿಮಗಾಗಿ ತಕ್ಷಣ ನಿಮ್ಮ ತಾಕತ್ತನ್ನು ಹೆಚ್ಚಿಸುವ ಜ್ಯೂಸ್ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಆ ಜ್ಯೂಸ್ ಯಾವುದು ಎಂಬ ಕುತೂಹಲ ನಿಮಗಿದೆಯಲ್ಲವೇ? ಅದೇ ಬೀಟ್‌ರೂಟ್ ಜ್ಯೂಸ್. ಇದು ನಿಮ್ಮ ಶಕ್ತಿ ಮತ್ತು ಸಾಮರ್ಥ್ಯ ಗಳನ್ನು ತಕ್ಷಣ ಹೆಚ್ಚಿಸುತ್ತದೆ.

ಸುಸ್ತು ಸುಸ್ತು ಅಂತ ಸುಮ್ನೆ ಮಲಗಿ ಜೀವನ ವೇಸ್ಟ್ ಮಾಡ್ಕೊಳೋ ಬದ್ಲು ಈ ಟಿಪ್ಸ್ ಅಳವಡಿಸ್ಕೊಳಿ ಲೈಫ್ ಎಂಜಾಯ್ ಮಾಡಿ!!!

ಬೀಟ್‌ರೂಟ್‌ಗಳಲ್ಲಿ ಸಾವಯವವಲ್ಲದ ನೈಟ್ರೇಟ್ ಸಮೃದ್ಧವಾಗಿರುತ್ತದೆ. ಇದು ನಿಮಗೆ ಶಕ್ತಿಯನ್ನು ನೀಡಲು ಪ್ರಮುಖ ಪಾತ್ರವನ್ನು ನಿರ್ವ ಹಿಸುತ್ತದೆ. ಅಧ್ಯಯನಗಳ ಪ್ರಕಾರ ಬೀಟ್ ರೂಟ್ ಜ್ಯೂಸ್   ಪ್ರತಿಯೊಬ್ಬರ ಕಾರ್ಯ ವೈಖರಿಯನ್ನು ಸುಧಾರಿಸುತ್ತದೆ ಎಂದು ತಿಳಿದು ಬಂದಿದೆ. ಆದ್ರೆ ಬೀಟ್ರೂಟ್ನಲ್ಲಿ ರುಟಿನ್, ಕೆಫೀಕ್ ಆಸಿಡ್, ಎಪಿಕೆಟೆಚಿನ್ ಮತ್ತೆ ಬೀಟಾಲಿನ್ಸ್ ಅನ್ನೋ ರೋಗನಿರೋಧಕಗಳು ಹೇರಳವಾಗಿದೆ. ಅವು ಫ್ರೀ ರಾಡಿಕಲ್ಸ್ ಹಾರಾಟನ ತಣ್ಣಗ್ ಮಾಡತ್ತೆ. ಹಾಗಾಗಿ ಪದೇ ಪದೇ ಖಾಯಿಲೆ ಬೀಳದು ತಪ್ಪಿ, ಪ್ರತಿರೋಧ ಶಕ್ತಿ ಬರತ್ತೆ. ಫ್ರೀ ರಾಡಿಕಲ್ಸ್, ದೇಹದಲ್ಲಿ ಕೆರಳಿ ಹಾನಿ ಮಾಡೋದನ್ನ ಬೀಟ್ ರೂಟ್ ತಡಿಯತ್ತೆ.

ಈ ಫ್ರೀ ರಾಡಿಕಲ್ ನಮ್ ದೇಹದಲ್ಲಿ ನಡಿಯೋ ಮಾಮೂಲಿ ಪಚನ ಕ್ರಿಯೆಯಿಂದ, ಜೀವನಶೈಲಿಯಿಂದ, ತಿನ್ನೋ ಅಭ್ಯಾಸದಿಂದ ಮತ್ತೆ ಮಾನಸಿಕ ಒತ್ತಡದಿಂದಾನೂ ಉತ್ಪತ್ತಿಯಾಗಿ ಕೆರಳ್ಬೋದು. ಇದೆಲ್ಲಾ ಒಳಗಿಂದ ಆಗೋದು. ಇನ್ನು ಹೊರಗೆ ಓಡಾಡುವಾಗ ವಾತವರಣದಲ್ಲಿರೋ ಧೂಳು, ಫ್ಯಾಕ್ಟರಿಯಿಂದ ಬಿಡುಗಡೆ ಆಗೋ ರಾಸಾಯನಿಕಗಳಿಂದಾನೂ ಉತ್ಪತ್ತಿಯಾಗತ್ತೆ. ಅದೇನ್ ಮಾಡತ್ತೆ ಬಿಡಿ ಅನ್ನೋಹಾಗಿಲ್ಲ ಯಾಕಂದ್ರೆ ಈ ಫ್ರೀ ರಾಡಿಕಲ್ಸ್ ಕೆರಳೋದ್ರಿಂದನೇ ಕ್ಯಾನ್ಸರ್, ಸಂಧಿವಾತ ಮತ್ತೆ ಆಲ್ಝೈಮರ್ಸ್ ಖಾಯಿಲೆ ಎಲ್ಲಾ ಬರೋದು. ಬಹುತೇಕ ಅಥ್ಲಿಟ್‌ಗಳು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಬೀಟ್‌ರೂಟ್ ರಸದ ಮೊರೆ ಹೋಗುತ್ತಾರೆ. ಕೆಲವೊಂದು ಅಧ್ಯಯನಗಳ ಪ್ರಕಾರ ಬೀಟ್‌ರೂಟ್ ರಸವನ್ನು ಸೇವಿಸಿದರೆ ಆಯಾಸ ವಿಲ್ಲದೆ ಎಲ್ಲಾ ಕೆಲಸ ಕಾರ್ಯ ಗಳನ್ನು ಮಾಡಬಹುದಂತೆ. ಬನ್ನಿ ಇನ್ನು ತಡ ಮಾಡದೆ ಈ ರಸವನ್ನು ತಯಾರಿಸಿ ಕೊಳ್ಳುವ ವಿಧಾನವನ್ನು ತಿಳಿದುಕೊಳ್ಳೋಣ…

ಅಗತ್ಯವಾದ ಪದಾರ್ಥಗಳು:-

1-2 ಹಣ್ಣಾದ ಬೀಟ್‌ರೂಟ್   1 ಸೇಬು  1 ಶುಂಠಿ ತುಂಡು  ಬೀಟ್‌ರೂಟ್ ಅನ್ನು ಮೊದಲು ಚೆನ್ನಾಗಿ ತೊಳೆದುಕೊಂಡು, ಸಣ್ಣ ಸಣ್ಣ ಹೋಳು ಮಾಡಿಕೊಳ್ಳಿ. ನಂತರ ಇದನ್ನು ಶೋಧಿಸಿಕೊಳ್ಳಿ. ನಿಮಗೆ ಅಗತ್ಯವಾದರೆ ಇದಕ್ಕೆ ಐಸ್ ಕ್ಯೂಬ್ ಸಹ ಬೆರೆಸಿಕೊಳ್ಳಬಹುದು.

ವಾರಕ್ಕೆ ೩-೪ ಬಾರಿ ಈ ರಸವನ್ನು ಸೇವಿಸಿ. ಆಗ ನೋಡಿ, ನಿಮ್ಮ ಸಾಮರ್ಥ್ಯವು ಹೇಗೆ ಸುಧಾರಿಸುತ್ತದೆ ಎಂದು. ಆದರೆ ಒಂದು ಮಾತು ನೆನಪಿಡಿ. ಇದನ್ನು ಒಂದೇ ಬಾರಿಗೆ ಸೇವಿ ಸುವ ಮೊದಲು ಸ್ವಲ್ಪ ಸೇವಿಸಿ, ರುಚಿ ನೋಡಿ. ಇದರ ರುಚಿಯು ನಿಮಗೆ ಒಗ್ಗಿದರೆ ಮುಂದುವರಿಯಿರಿ. ಇಲ್ಲವಾದರೆ ಬೇಡ.

ಸುಸ್ತು ಅಂತ ಸುಮ್ನೆ ಮಲಗ ಬೇಡಿ ಬೀಟ್ ರೂಟ್ ಜ್ಯೂಸ್  ತಯಾರಿಸಿ ಕುಡಿದು ಲೈಫ್ ಎಂಜಾಯ್ ಮಾಡಿ..!

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕೇವಲ 21 ವರ್ಷಕ್ಕೆ ಜಗತ್ತಿನ ಎಲ್ಲ ‘ದೇಶ’ ಸುತ್ತಿ ಬಂದಂತಹ ಯುವತಿ…!

    ನಮ್ಮ ದೇಶದಲ್ಲಿ ಮಕ್ಕಳು 21 ವರ್ಷದವರಾದರೆ ಅವರು ಇನ್ನು ಬಹುತೇಕ ಕಾಲೇಜಿನಲ್ಲಿರುತ್ತಾರೆ. ಪ್ರಮುಖವಾಗಿ ತಮ್ಮ ಓದನ್ನು ಮುಗಿಸಿಕೊಳ್ಳುವ ಒತ್ತಡವಿರುತ್ತದೆ. ಪ್ರವಾಸವೊಂದು ಐಷಾರಾಮಿ ಬದುಕಾಗಿರುತ್ತದಷ್ಟೇ. ಆದರೆ ಅಮೆರಿಕದ ಲೆಕ್ಸಿ ಅಲ್ಫೋರ್ಡ್ ಎನ್ನುವ ಯುವತಿ 21 ವರ್ಷ ದಾಟುವಷ್ಟರಲ್ಲಿ 196 ದೇಶಗಳಲ್ಲಿ ಹೋಗಿ ಜಗತ್ತಿನ ಎಲ್ಲ ದೇಶಗಳಲ್ಲಿ ಪ್ರಯಾಣಿಸಿದ, ಅತ್ಯಂತ ಕಿರಿಯ ವ್ಯಕ್ತಿ ಎಂದು ಗಿನ್ನಿಸ್ ಬುಕ್ ಆಫ್ ರೇಕಾರ್ಡ್ಸ್‌ನಲ್ಲಿ ಸೇರಿದ್ದಾರೆ. ಮೇ 31ರಂದು ಉತ್ತರ ಕೊರಿಯಾ ಪ್ರವೇಶಿಸಿದ ನಂತರ ಅವರು ಈ ದಾಖಲೆಗೆ ಭಾಜನರಾಗಿದ್ದಾರೆ. ಈ ಹಿಂದೆ ಈ…

  • ಸುದ್ದಿ

    ಯುವತಿ ಸ್ನಾನ ಮಾಡೋವಾಗ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್‍ಮೇಲ್ ಮಾಡಿ ಅತ್ಯಾಚಾರ…!

    34 ವರ್ಷದ ವ್ಯಕ್ತಿಯೊಬ್ಬ ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ಮೂಲಕ ಬ್ಲ್ಯಾಕ್‍ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‍ಗಡದ ರಾಜ್‍ನಂದ್‍ಗಾಂವ್‍ನಲ್ಲಿ ನಡೆದಿದೆ. 22 ವರ್ಷದ ಯುವತಿಯ ಮೇಲೆ ಆರೋಪಿ ಅತ್ಯಾಚಾರ ಮಾಡಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರವಿ ಕನ್ನೌಜೆ ಎಂದು ಗುರುತಿಸಲಾಗಿದ್ದು, ಈತ ಚ್ಚುಯಿಖಾದನ್ ಪಟ್ಟಣದ ಪುರೈನಾ ಗ್ರಾಮದ ಮೂಲದವಾಗಿದ್ದಾನೆ. ಅಷ್ಟೇ ಅಲ್ಲದೇ ಆರೋಪಿ ಯುವತಿಯ ದೂರದ ಸಂಬಂಧಿಯಾಗಿದ್ದು, ಯುವತಿ ನರ್ಸಿಂಗ್ ವಿದ್ಯಾರ್ಥಿನಿ ಎಂದು ಪೊಲೀಸ್ ಅಧಿಕಾರಿ ನರೇಂದ್ರ…

  • ಜ್ಯೋತಿಷ್ಯ

    ಬೆಳಿಗ್ಗೆ ಎದ್ದ ತಕ್ಷಣ ನೀವು ಇವುಗಳನ್ನು ನೋಡಲೆಬೇಡಿ!ನೋಡಿದ್ರೆ ದಾರಿದ್ರ ಖಂಡಿತ…

    ಪ್ರತಿದಿನದ ಬೆಳಗು ನಮ್ಮ ಬದುಕಿನ ಶುಭಾರಂಭವಿದ್ದಂತೆ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಯಾವುದೇ ವಿಘ್ನಗಳು ಎದುರಾಗಬಾರದು. ಅದಕ್ಕಾಗಿ ಕೆಲವೊಂದು ಕೆಲಸಗಳಿಂದ ನೀವು ದೂರವಿರಬೇಕು. ಯಾಕಂದ್ರೆ ಅವು ನಮ್ಮ ಕೆಲಸವನ್ನೇ ಬಿಗಡಾಯಿಸಿಬಿಡುತ್ತವೆ. ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬೇಡಿ : ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಏಳ್ತಿದ್ದಂತೆ ಕನ್ನಡಿ ನೋಡುವುದರಿಂದ ರಾತ್ರಿಯ ನಕಾರಾತ್ಮಕತೆ ಪುನಃ ಸ್ಥಾಪಿತವಾಗುತ್ತದೆ. ಇಡೀ ದಿನ ನಿಮ್ಮ ಮನಸ್ಸು ಅದೇ ರೀತಿಯಾಗಿರುತ್ತದೆ. ಹಾಗಾಗಿ ಬೆಳಗ್ಗೆ ಎದ್ದು ಸ್ವಲ್ಪ ಸಮಯದ ನಂತರ ಕನ್ನಡಿಯಲ್ಲಿ ಮುಖ ದರ್ಶನ ಮಾಡಿ. ಬೆಳಗ್ಗೆ…

  • Health, ಆರೋಗ್ಯ, ಉಪಯುಕ್ತ ಮಾಹಿತಿ

    ಸೇಬುಗಳ ಕುರಿತ೦ತೆ ಪ್ರಮುಖವಾದ ಕೆಲವು ಆರೋಗ್ಯ ಸ೦ಬ೦ಧಿ ಪ್ರಯೋಜನಗಳು!!

    ಸೇಬು ಗುಲಾಬಿ ಕುಟುಂಬದಲ್ಲಿನ (ರೋಸೇಸೀ) ಜಾತಿಯಾದ  ಮೇಲಸ್ ಡೊಮೆಸ್ಟಿಕಾಕ್ಕೆ ಸೇರಿದ ಪೋಮ್ ಲಕ್ಷಣಗಳಿರುವ ಸೇಬಿನ ಮರದ ಹಣ್ಣು  ಅದು ಅತ್ಯಂತ ವ್ಯಾಪಕವಾಗಿ ಬೇಸಾಯಮಾಡಲಾದ ಮರಹಣ್ಣುಗಳ ಪೈಕಿ ಒಂದು, ಮತ್ತು ಮಾನವರಿಂದ ಬಳಸಲಾಗುವ ಮೇಲಸ್ಪಂಗಡದ ಅನೇಕ ಸದಸ್ಯಗಳ ಪೈಕಿ ಅತ್ಯಂತ ವ್ಯಾಪಕವಾಗಿ ಪರಿಚಿತವಾಗಿರುವ ಸದಸ್ಯವಾಗಿದೆ. ಈ ಮರವು ಮಧ್ಯ ಏಷ್ಯಾದ ಮೂಲದ್ದು, ಮತ್ತು ಇಂದೂ ಕೂಡ ಇದರ ಕಾಡುಪೂರ್ವಜವನ್ನು ಇಲ್ಲಿ ಕಾಣಬಹುದು. ಸೇಬು ಮೂಲತಃ ಸಮಶೀತೋಷ್ಣ ವಲಯದ ಬೆಳೆ. ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ ನಡುವಿನ ಭೂಭಾಗವು ಇದರ ಮೂಲ ಪ್ರದೇಶವೆಂದು ತಿಳಿಯಲಾಗಿದ್ದು,ನಂತರ ಈ ಬೆಳೆ ಸಮಶೀತೋಷ್ಣ ವಲಯದ ಎಲ್ಲ…

  • ರಾಜಕೀಯ

    ಉಪ್ಪಿ ತಮ್ಮ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದಾರೆ..!ತಿಳಿಯಲು ಇದನ್ನು ಓದಿ ..

    ನಟ ಉಪೇಂದ್ರ ರಾಜಕೀಯಕ್ಕೆ ಬರುವ ವಿಷಯ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಉಪ್ಪಿ ರಾಜಕೀಯಕ್ಕೆ ಬರಲಿ ಎಂದು ಸ್ವಾಗತಿಸುತ್ತಿದ್ದರೇ, ಇನ್ನೂ ಕೆಲವರು ಇದು ಸಿನಿಮಾದಷ್ಟು ಸುಲಭವಲ್ಲ ಎಂದು ಹೇಳುತ್ತಿದ್ದಾರೆ.