ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ ಎಂದು ಸಿಗರೇಟ್ ಪ್ಯಾಕ್‍ಗಳ ಮೇಲೆ ಬರೆದುಕೊಂಡು ಇದ್ದರೂ ಜನರು ಲೆಕ್ಕಿಸುವುದಿಲ್ಲ. ಅದನ್ನು ನೋಡಿಯೇ ಸಿಗರೇಟನ್ನು ಸೇದುತ್ತಾರೆ. ನಿಧಾನವಾಗಿಯೇ ಶ್ವಾಸಕೋಶಗಳನ್ನು ದುರ್ಬಲಗೊಳಿಸುವ ಧೂಮ ಪಾನ ವ್ಯಸನಿಯ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆಂತರಿಕವಾಗಿ ಅನೇಕ ಆರೋಗ್ಯ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುವುದು. ಅವು ನಿಧಾನವಾಗಿ ಗಂಭೀರ ಸಮಸ್ಯೆಗಳಾಗಿ ಪರಿವರ್ತನೆ ಹೊಂದುವವು.
ಇತ್ತೀಚೆಗೆ ನಡೆಸಿದ ಕೆಲವು ಸಂಶೋಧನೆ ಹಾಗೂ ಅಧ್ಯಯನದ ಪ್ರಕಾರ ಧೂಮಪಾನದಿಂದ ಕರುಳಿಗೆ ಹಾನಿ ಉಂಟಾಗುವುದು. ಕೊಲೈಟಿಸ್ ಅಪಾಯವನ್ನು ಹೆಚ್ಚಿಸುವುದು. ಸಿಗರೇಟ್ ಹೊಗೆಯಿಂದ ದೇಹದಲ್ಲಿರುವ ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದು. ಪ್ರೋಟೀನ್‍ಗಳು ಇಳಿಮುಖ ಹೊಂದುವವು. ಸ್ನಾಯುಗಳಲ್ಲಿ ಹಾಗೂ ಆಂತರಿಕ ವ್ಯವಸ್ಥೆಯಲ್ಲಿ ಉರಿಯೂತ ಉಂಟಾಗುವುದು. ಧೂಮಪಾನವು ಕ್ರೋನ್ಸ್ ಕಾಯಿಲೆ, ಕರುಳಿನ ಉರಿಯೂತ ಮತ್ತು ಕೊಲೈಟಿಸ್‍ನಂತಹ ಅಪಾಯವನ್ನುಂಟು ಮಾಡುವುದು.
ಧೂಮಪಾನ ಎನ್ನುವ ಭಯಾನಕ ಚಟದಿಂದ ದೂರವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆದರೆ ಒಮ್ಮೆ ಚಟ ಆರಂಭವಾದಮೇಲೆ ಅದರಿಂದ ಬಿಡುಗಡೆ ಹೊಂದುವುದು ಅಷ್ಟು ಸುಲಭವಲ್ಲ. ಆದರೆ ಕೆಲವು ಮನೆ ಮದ್ದು ಮಾಡುವುದರ ಮೂಲಕ ಧೂಮಪಾನದಿಂದ ದೂರ ಸರಿಯಬಹುದು ಎನ್ನುವುದನ್ನು ಕೆಲವು ಸಂಶೋಧನೆಯು ದೃಢಪಡಿಸಿದೆ. ಹಾಗಾದರೆ ಆ ಮನೆಮದ್ದು ಯಾವುದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವುದಾದರೆ ಲೇಖನದ ಮುಂದಿನ ಭಾಗವನ್ನು ಓದಿ..
ನೀರು:-
ನೀರು ನೈಸರ್ಗಿಕ ಡಿಟೊಕ್ಸಿಫೈಯರ್‍ಗಳಲ್ಲಿ ಒಂದಾಗಿದೆ. ದೇಹದಿಂದ ವಿಷಕಾರಿ ಪದಾರ್ಥಗಳನ್ನು ತೊಡೆದುಹಾಕಲು ಮತ್ತು ಧೂಮಪಾನದ ಚಟದಿಂದ ದೂರವಾಗಲು ಸಾಕಷ್ಟು ನೀರನ್ನು ಕುಡಿಯಬೇಕು.
ನೀರು ಸೇವನೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಜೇನುತುಪ್ಪ:-
ಧೂಮಪಾನದಿಂದ ದೂರ ಸರಿಯಲು ಸಹಾಯ ಮಾಡುವ ಇನ್ನೊಂದು ನೈಸರ್ಗಿಕ ಉತ್ಪನ್ನವೆಂದರೆ ಜೇನುತುಪ್ಪ. ಜೇನುತುಪ್ಪವು ಜೀವಸತ್ವ, ಕಿಣ್ವಗಳು ಮತ್ತು ಪ್ರೋಟೀನ್‍ಗಳನ್ನು ಒಳಗೊಂಡಿರುತ್ತದೆ.
ಇದರ ಸೇವನೆಯಿಂದ ಧೂಮಪಾನದ ಅಭ್ಯಾಸವನ್ನು ಬಿಡಬಹುದು. ಧೂಮಪಾನದ ಪ್ರಚೋದನೆ ಉಂಟಾದಾಗ ಇದನ್ನು ಸೇವಿಸಿ ನೀರು ಕುಡಿಯಬೇಕು. ಆಗ ಧೂಮಪಾನದ ಬಯಕೆಯು ಕಡಿಮೆಯಾಗುವುದು.
ಶುಂಠಿ:-
ಧೂಮಪಾನ ತೊರೆದಾಗ ಕೆಲವರಿಗೆ ವಾಕರಿಕೆ ಸಂವೇಧನೆ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಚಿಕ್ಕ ಶುಂಠಿ ಚೂರನ್ನು ಜಗೆಯುವುದು ಅಥವಾ ಶುಂಠಿ ಚಹಾ ಸೇವಿಸುವುದರಿಂದ ವಾಕರಿಕೆ ಉಂಟಾಗುವುದನ್ನು ತಡೆಯಬಹುದು.
ಅಲ್ಲದೆ ಧೂಮಪಾನ ಮಾಡಲು ಮನಸ್ಸಾಗದಂತೆ ಪ್ರೇರೇಪಿಸುತ್ತದೆ.
ಕ್ಯಾಮೋಮೈಲ್ ಟೀ:-
ನಿಕೋಟಿನ್ ಅಗತ್ಯತೆಯ ಬೇಡಿಕೆಯನ್ನು ಕಡಿಮೆಗೊಳಿಸುವ ಮತ್ತು ನರಗಳಿಗೆ ಪ್ರಶಾಂತತೆ ನೀಡುವ ಏಕಮಾತ್ರ ಪದಾರ್ಥವೆಂದರೆ ಕ್ಯಾಮೋಮೈಲ್ ಟೀ, ಹೀಗೆಂದು Molecular Medicine Reports ಎಂದ ವೈದ್ಯಕೀಯ ಪತ್ರಿಕೆ ತಿಳಿಸಿದೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಧೂಮಪಾನದ ಮೂಲಕ ದೇಹದಲ್ಲಿ ಉತ್ಪತ್ತಿಯಾಗಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ಪ್ರಭಾವದಿಂದ ದೇಹಕ್ಕೆ ಹಾನಿಯಾಗದಂತೆ ತಡೆಯುತ್ತದೆ.
ಜಿನ್ಸೆಂಗ್:-
ಒಂದು ವರದಿಯ ಪ್ರಕಾರ ಜಿನ್ಸೆಂಗ್ ಎಂಬ ಶುಂಠಿಯಂತಹ ಗಡ್ಡೆಯ ರಸದ ಸೇವನೆಯಿಂದ ಡೋಪಮೈನ್ ಎಂಬ ನರಪ್ರಚೋದಕ ಹಾರ್ಮೋನೊಂದು ಬಿಡುಗಡೆಯಾಗುತ್ತದೆ.
ಇದು ಸಿಗರೇಟು ಸೇದಿದಾಗ ಸಿಗುವಂತಹ ಪರಿಣಾಮವನ್ನೇ ನೀಡುವ ಕಾರಣ ಸಿಗರೇಟು ಸೇದುವ ಬಯಕೆಯುಂಟಾಗುವುದಿಲ್ಲ. ಇದು ಧೂಮಪಾನ ತ್ಯಜಿಸುವವರಿಗೆ ವರದಾನವಾಗಿದೆ.
ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳು:-
ಸಿಗರೇಟಿನ ಹೊಗೆಯ ಮೂಲಕ ರಕ್ತಕ್ಕೆ ಧಾವಿಸಿದ ನಿಕೋಟಿನ್ ಅನ್ನು ನಿಭಾಯಿಸಲು ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಗತ್ಯವಿದೆ. ಇದು ಲಭ್ಯವಿರುವ ವಿಟಮಿನ್ ಸಿ ಪ್ರಮಾಣವನ್ನೆಲ್ಲಾ ಕಬಳಿಸಿ ಬಿಡುತ್ತದೆ.
ಇದೇ ಕಾರಣದ ವ್ಯತಿರಿಕ್ತ ಪರಿಣಾಮವಾಗಿ ದೇಹದಲ್ಲಿ ವಿಟಮಿನ್ ಸಿ ಕೊರತೆಯಾದಾಗಲೆಲ್ಲಾ ಸಿಗರೇಟು ಸೇದುವಂತೆ ಮೆದುಳಿಗೆ
ಸೂಚನೆ ಹೋಗುತ್ತದೆ ಎಂಬ ವಿಷಯವನ್ನು American Journal of Public Health ಎಂಬ ಪತ್ರಿಕೆಯಲ್ಲಿ ವರದಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಾವುಗಳನ್ನು ಕಂಡ್ರೆ ಎಂತಹವರಿಗೂ ಎದೆ ಜಲ್ ಅನ್ನುವ ಅನುಭವ ಆಗ್ತದೆ. ಆಗಂತ ಹಾವಿಗೆ ಭಯ ಇಲ್ದೆ ಇರಲ್ಲ. ಆದ್ರೆ ಹಾವನ್ನು ಸಾಯಿಸಬೇಕಾದ್ರೆ ಅರ್ಧ ಪ್ರಾಣ ಹೋಗಿ ಅರ್ಧ ಪ್ರಾಣ ಉಳಿಯುವಂತೆ ಸಾಯಿಸಬೇಡಿ ಅಂತ ಹೇಳುವುದು ವಾಡಿಕೆ. ಯಾಕಂದ್ರೆ ಅಂತಹವರನ್ನು ಏಟು ತಿಂದ ಹಾವುಗಳು ಸುಮ್ಮನ್ನೇ ಬಿಡೋದಿಲ್ಲ ಅಂತ ಹೇಳ್ತಾರೆ.
ನಾವು ದಿನಾಲು ಬೆಳಿಗ್ಗೆ ಎದ್ದ ತಕ್ಷಣ ನಮಗೆ ಏನಿಲ್ಲಾ ಅಂದ್ರು ಬಿಸಿ ಬಿಸಿ ಚಹಾ(ಟೀ) ಬೇಕೇ ಬೇಕು. ಒಂದು ಸಮೀಕ್ಷೆಯ ಪ್ರಕಾರ ಶೇ. ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ. ಆದರೆ ಚಹಾ ಕುಡಿಯುವವರಲ್ಲಿ ಹೆಚ್ಚಿನವರು ದಿನದ ಪ್ರಥಮ ಆಹಾರವಾಗಿ ಒಂದು ಟೀ ಸೇವಿಸುತ್ತಾರೆ. ಕೆಲವರಂತೂ ಹಾಸಿಗೆಯಿಂದ ಏಳುವ ಮುನ್ನವೇ ಬೆಡ್ ಟೀ ಎಂದು ಕುಡಿಯುತ್ತಾರೆ.
ಹುಡುಗಿ ತುಂಬಾ ಕುಳ್ಳಿ ಅನ್ನುವ ಮಾತುಗಳನ್ನ ನಾವು ಪ್ರತಿದಿನ ಕೇಳುತ್ತಲೇ ಇರುತ್ತೇವೆ, ಹುಡುಗಿ ಕುಳ್ಳಗಿರುವುದು ಅವರ ವೀಕ್ನೆಸ್ಸ್ ಅಲ್ಲ ಅವರ ಪ್ಲಸ್ ಪಾಯಿಂಟ್ ಅನ್ನುವುದು ಇನ್ನು ಕೆಲವರಿಗೆ ತಿಳಿದಿಲ್ಲ. ಇನ್ನು ಹೆಚ್ಚಿನ ಹುಡುಗರು ಹುಡುಗಿ ಕುಳ್ಳಿ ಅನ್ನುವ ಕಾರಣಕ್ಕೆ ಅವರನ್ನ ಮದುವೆ ಮಾಡಿಕೊಳ್ಳಲು ನಿರಾಕರಣೆ ಮಾಡುತ್ತಾರೆ, ಆದರೆ ಅದೂ ದೊಡ್ಡ ತಪ್ಪು ಸ್ನೇಹಿತರೆ. ಇನ್ನು ಉದ್ದ ಇರುವ ಹುಡುಗಿಯರಿಗಿಂತ ಕುಳ್ಳಗಿರುವ ಹುಡುಗಿಯರ ತುಂಬಾ ವಾಸಿ ಅನ್ನುವುದು ಪರಿಣಿತರ ಅಭಿಪ್ರಾಯವಾಗಿದೆ. ಇನ್ನು ಕುಳ್ಳಗಿರುವ ಹುಡುಗಿಯರ ವಯಸ್ಸನ್ನ ಅಂದಾಜು ಮಾಡುವುದು…
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಲು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಭೇಟಿ ಮಾಡಿದ್ದಾರೆ. ರತನ್, ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಚಿಕ್ಕವಯಸ್ಸಿನಲ್ಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ದರ್ಶನ್ ಅವರನ್ನು ನೋಡುವುದು ರತನ್ನ ಬಹುದಿನದ ಆಸೆ ಆಗಿದ್ದು. ಒಂದೇ ಒಂದು ಬಾರಿ ದರ್ಶನ್ ಅವರನ್ನು ನೋಡಬೇಕೆಂದು ರತನ್ ತುಂಬಾ ಹಂಬಲಿಸುತ್ತಿದ್ದನು. ಈ ವಿಷಯ ತಿಳಿದ ದರ್ಶನ್, ರತನ್ ಕುಟುಂಬವನ್ನು ಹಾಸನದಿಂದ ಬೆಂಗಳೂರಿಗೆ ಕರೆಸಿಕೊಂಡರು. ಬಳಿಕ ರತನ್ ದರ್ಶನ್ ಅವರನ್ನು ಭೇಟಿ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾನೆ….
ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಗುರುವಾರ ನರೇಂದ್ರ ಮೋದಿಯವರು ಸಾಯಂಕಾಲ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಇದಕ್ಕೂ ಮುನ್ನ ಇಂದು ಮುಂಜಾನೆ ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ನಂತರ ಹುತಾತ್ಮರಾದ ಯೋಧರಿಗೆ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು. ನರೇಂದ್ರ ಮೋದಿಯವರ ಜೊತೆ ನಿರ್ಗಮಿತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಆರ್…
ನಮ್ಮ ನೆಚ್ಚಿನ ಸ್ಟಾರ್ ನಟರು ಏನು ಓದಿದ್ದಾರೆ, ಏಕೆ ಅವರು ಮುಂದೆ ಓದಲಿಲ್ಲ ಎನ್ನುವ ಕುತೂಹಲ ಕೆಲವು ಅಭಿಮಾನಿಗಳಿಗೆ ಇರಬಹುದು. ಅಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. ನಟ ರಾಜ್ ಕುಮಾರ್, ವಿಷ್ಣುವರ್ಧನ್, ರಮೇಶ್ ಅರವಿಂದ್, ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್ ಈ ನಟರ ವಿದ್ಯಾಬ್ಯಾಸ ಹಾಗೂ ಅವರು ಓದು ನಿಲ್ಲಿಸಲು ಕಾರಣವೇನು ಅಂತ ಇಲ್ಲಿದೆ ನೋಡಿ…. ಡಾ.ರಾಜ್ ಕುಮಾರ್.. …