ವಿಚಿತ್ರ ಆದರೂ ಸತ್ಯ

ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ..!ತಿಳಿಯಲು ಇದನ್ನು ಓದಿ…

1391

ಅವಿವಾಹಿತ ಜೋಡಿಯೊಂದು ಮುಂದಿನ ಜೀವನವನ್ನು ಜೊತೆಯಾಗಿ ಕಳೆಯುವ ನಿರ್ಧಾರ ಕೈಗೊಂಡಾಗ ಇಬ್ಬರೂ ಮುಂದಿನ ಜೀವನದ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಯಾವ ಸಮಾಜ ತಮ್ಮನ್ನು ಸ್ವೀಕರಿಸುತ್ತದೆ ಎಂಬುದರಿಂದ ಹಿಡಿದು ಇತರ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

 

ಇಂದು ಭಾರತದಂತಹ ವಿವಿಧ ಸಂಸ್ಕೃತಿಗಳ ದೇಶದಲ್ಲಿ ಯುವಜನತೆ ವೈವಾಹಿಕ ಸಂಬಂಧಕ್ಕೆ ಧುಮುಕುವ ಮುನ್ನ ಮುಂದಿನ ದಿನಗಳಲ್ಲಿ ತಮ್ಮ ಜೋಡಿ ಸಮರ್ಪಕವಾಗಬಹುದೇ ಎಂದು ಪ್ರಮಾಣಿಸಿ ನೋಡಿದ ಬಳಿಕವೇ ಮುಂದಡಿಯಿಡುವ ಪರಿಯನ್ನು ನಿಧಾನವಾಗಿ ಅನ್ವಯಿಸಿಕೊಳ್ಳುತ್ತಿದೆ.

ಆದರೆ ರಾಜಸ್ಥಾನದ ಗ್ರಾಮವೊಂದರಲ್ಲಿ ಮಗುವಾದ ಬಳಿಕವೇ ವಿವಾಹ ಮಾಡಿಸುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಗರಾಸಿಯಾ ಎಂಬ ಜನಾಂಗಕ್ಕೆ ಸೇರಿದ ಜನರು ತಮ್ಮ ವಿಶಿಷ್ಟ ಸಂಪ್ರದಾಯದಿಂದಲೇ ಹೆಸರುವಾಸಿಯಾಗಿದ್ದಾರೆ. ಯುವಜನತೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದು, ವಿವಾಹ ಬಂಧನದ ಗೊಡವೆಯೇ ಇಲ್ಲದೆ ಜೊತೆಯಾಗಿ ಇರಲೂ ಅವಕಾಶವಿದೆ. ಇದು ಮಹಿಳಾ ಪ್ರಧಾನ ಜನಾಂಗವಾಗಿದ್ದು, ಇಲ್ಲಿ ಅತ್ಯಾಚಾರ, ವರದಕ್ಷಿಣೆ ಕಿರುಕುಳದಂತಹ ಪ್ರಕರಣಗಳೇ ಕಂಡುಬರುವುದಿಲ್ಲ. ಮೂಲತಃ ಕೃಷಿಕರಾಗಿರುವ ಇವರು ಜೀವನ ನಡೆಸುವಷ್ಟು ಹಣ ಸಂಗ್ರಹಿಸಿಕೊಂಡ ಬಳಿಕ ಮದುವೆ ಮಾಡಿಕೊಳ್ಳುತ್ತಾರೆ.

ಇತ್ತೀಚೆಗಷ್ಟೇ ವೃದ್ಧೆಯೊಬ್ಬರು ಮದುವೆಯಾಗಿದ್ದರು. ಇಷ್ಟು ವರ್ಷ ಈಕೆ ತನ್ನ ಜೀವನ ಸಂಗಾತಿ ಜೊತೆ ಲಿವಿಂಗ್‌ ಟು ಗೆದರ್‌ ಸಂಬಂಧದಲ್ಲಿದ್ದು, ವಯಸ್ಸಾದ ಬಳಿಕ ಮದುವೆಯಾಗಿದ್ದಾರೆ. ಆದರೆ ಈ ಜೋಡಿಗೆ ಮೂವರು ಗಂಡು ಮಕ್ಕಳಿದ್ದು, ಮೂವರೂ ಒಟ್ಟಿಗೇ ಮದುವೆಯಾಗಿದ್ದಾರೆ.

ಅಲ್ಲದೆ ಈ ಜನಾಂಗದವರು ವಿಚಿತ್ರ ಸಂಪ್ರದಾಯವೊಂದನ್ನು ಆಚರಿಸಿಕೊಂಡು ಬರುತ್ತಿದ್ದು, ಹದಿಹರೆಯದಲ್ಲಿರುವ ಹೆಣ್ಣು ಮಕ್ಕಳನ್ನು ಹದಿಹರೆಯದ ಗಂಡು ಮಕ್ಕಳು ಆಯ್ಕೆ ಮಾಡಿಕೊಳ್ಳಲು ಎರಡು ದಿನದ ಮೇಳ ಆಯೋಜಿಸಲಾಗುತ್ತದೆ. ಈ ಜನಾಂಗಕ್ಕೆ ಸೇರಿದ ಎಲ್ಲರೂ ತಮ್ಮ ಮಕ್ಕಳನ್ನು ಮೇಳಕ್ಕೆ ಕರೆತಂದು ಮಕ್ಕಳನ್ನು ಅಲ್ಲಿಯೇ ಬಿಟ್ಟು ದೊಡ್ಡವರೆಲ್ಲ ತೆರಳುತ್ತಾರೆ. ಬಳಿಕ ಯುವಕರು ತಮಗಿಷ್ಟವಾದವರನ್ನು ಆಯ್ಕ ಮಾಡಿಕೊಂಡು ವಾಪಸ್‌ ತಮ್ಮ ಮನೆಗಳಿಗೆ ತೆರಳುತ್ತಾರೆ. ಬಳಿಕ ಇವರು ಲಿವಿಂಗ್ ಟು ಗೆದರ್‌ ಸಂಬಂಧದಲ್ಲೋ, ಅಥವಾ ಮದುವೆಯಾಗಿಯೋ ಜೀವನ ಸಾಗಿಸುತ್ತಾರೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕರ್ನಾಟಕ

    ಮೋದಿಯವರಿಗೆ ತನ್ನ ರಕ್ತದಲ್ಲಿ, ಪತ್ರ ಬರೆದ ಕರುನಾಡಿನ ಹಳ್ಳಿ ಯುವಕ! ಆ ಪತ್ರದಲ್ಲಿ ಏನಿದೆ ಗೊತ್ತಾ?

    ರೈತರು ಎದುರಿಸುತ್ತಿರುವ ಕಷ್ಟಗಳನ್ನ ಪ್ರಧಾನ ಮಂತ್ರಿ ಅವರಿಗೆ ಮನವರಿಕೆ ಮಾಡಲು ಸಿಂಧನೂರು ತಾಲೂಕಿನ ಯುವಕರೊಬ್ಬರು ತನ್ನ ರಕ್ತದಲ್ಲಿ ಎರಡು ಪತ್ರಗಳನ್ನ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.

  • ಸುದ್ದಿ

    30 ಸೆಕೆಂಡಿಗೆ ಮೊಬೈಲ್ ಫುಲ್ ಚಾರ್ಜ್ ಆಗುವ ಡಿವೈಸ್ ಕಂಡುಹಿಡಿದ ಭಾರತದ ಹುಡುಗಿ, ದೊಡ್ಡ ದೊಡ್ಡ ಕಂಪನಿಗಳು ಶಾಕ್.

    ನಮ್ಮ ಬಳಿ ಹಣ ಇದ್ದರೆ ಅದನ್ನ ಯಾರು ಬೇಕಾದರೂ ಕದ್ದುಕೊಂಡು ಹೋಗಬಹುದು ಆದರೆ ನಮ್ಮ ಬಳಿ ಇರುವ ಬುದ್ದಿವಂತಿಕೆಯನ್ನ ಪ್ರಪಂಚದ ಯಾವ ಶಕ್ತಿಯಿಂದ ಕೂಡ ಕದ್ದುಕೊಂಡು ಹೋಗಲು ಸಾಧ್ಯವಿಲ್ಲ. ನಾವು ನಮ್ಮ ಬುದ್ಧಿಶಕ್ತಿಯಿಂದ ಇಡೀ ಪ್ರಪಂಚವನ್ನ ಆಳಬಹುದು, ತನ್ನ ಬುದ್ದಿಶಕ್ತಿಯಿಯನ್ನ ಬಳಸಿಕೊಂಡ ಈ ಭಾರತದ ಹುಡುಗಿ ಇಡೀ ಪ್ರಪಂಚವೇ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾಳೆ. ಇನ್ನು ಈಕೆ ಮಾಡಿದ ಕೆಲಸಕ್ಕೆ ದೊಡ್ಡ ದೊಡ್ಡ ಕಂಪನಿಗಳು ಶಾಕ್ ಆಗಿದ್ದು ಈಕೆಯನ್ನ ತಮ್ಮ ಕಂಪನಿಗೆ ಸೇರಿಸಿಕೊಳ್ಳಲು ದೊಡ್ಡ ದೊಡ್ಡ…

  • ಸುದ್ದಿ

    ತಮಿಳುನಾಡು ವಿರುದ್ಧ 1 ರನ್ ರೋಚಕ ಗೆಲುವು ಸಾಧಿಸಿ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆ.

    ಮನೀಶ್ ಪಾಂಡೆ ಹಾಗೂ ಆಶ್ರಿತಾ ಸುಮಾರು ದಿನಗಳಿಂದ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇವರಿಬ್ಬರು ಮದುವೆಯಾಗುವ ಮೂಲಕ ಗಾಸಿಪ್‍ಗಳಿಗೆ ತೆರೆ ಎಳೆದಿದ್ದಾರೆ. ಹೌದು ಈಗ ಭಾರತ ತಂಡದ ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಅವರು ತುಳು ಹಾಗೂ ದಕ್ಷಿಣ ಭಾರತದ ನಟಿಯಾಗಿರುವ ನಟಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಪಿಎಲ್‍ನಲ್ಲಿ ಮನೀಶ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾರೆ. ಹಾಗಾಗಿ ಮನೀಶ್ ಮದುವೆಯ ಫೋಟೋವನ್ನು ಮೊದಲು ಸನ್‍ರೈಸರ್ಸ್ ಹೈದರಾಬಾದ್ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ….

  • ಸೌಂದರ್ಯ

    ಹಣ್ಣಿನ ಹಾಗು ತರಕಾರಿ ಸಿಪ್ಪೆಗಳನ್ನು ಬಿಸಾಡ್ತಿದ್ದೀರಾ!ನಿಲ್ಲಿ, ಎಸೆಯಬೇಡಿ ಆ ಸಿಪ್ಪೆಗಳ ಉಪಯೋಗ ನಾವು ಹೇಳ್ತೀವಿ…..

    ಹಣ್ಣು ತರಕಾರಿಗಳನ್ನು ತಿನ್ನುವುದು ಒಂದು ಅತ್ಯುತ್ತಮ ಅಭ್ಯಾಸವಾಗಿದೆ.ನಿರಂತರವಾಗಿ ತಿನ್ನುವ ಹವ್ಯಾಸ ಉಳ್ಳವರಾಗಿದ್ದರೆ ನೀವು ಸಿಪ್ಪೆಗಳನ್ನು ಎಸೆಯುತ್ತಿರಾ… ನಿಲ್ಲಿ ನಿಲ್ಲಿ ಎಸೆಯಬೇಡಿ ಆ ಸಿಪ್ಪೆಗಳ ಉಪಯೋಗ ನಾವು ಹೇಳ್ತೀವಿ ನಿಮ್ಮ ಸೌಂದರ್ಯ ಕಾಂತಿ ಹೆಚ್ಚಿಸೋಕೆ ಈ ಸಿಪ್ಪೆಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ತಿಳಿಯಿರಿ…..

  • ಉಪಯುಕ್ತ ಮಾಹಿತಿ

    ಕೆಟ್ಟ ದೃಷ್ಟಿ ಇದ್ದರೆ ತಪ್ಪದೆ ವಿಳ್ಳೆದೆಲೆಯಿಂದ ಹೀಗೆ ಮಾಡಿ ಸಾಕು.

    ಮಕ್ಕಳು ಎಂದರೆ ಎಲ್ಲರಿಗೂ ಕೂಡ ಬಹಳನೇ ಪ್ರೀತಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಸಣ್ಣ ಪುಟ್ಟ ಮಕ್ಕಳು ಇರುತ್ತಾರೆ ನಾವು ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ಸಂಜೆವರೆಗೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿ ಆಯಾಸ ಬೇಜಾರು ಬೇಸರ ಇದರಲ್ಲಿ ಮುಳುಗಿ ಹೋಗಿರುತ್ತದೆ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಪುಟ್ಟ ಮಕ್ಕಳು ಜೊತೆ ಒಂದಷ್ಟು ಸಮಯ ಕಳೆದರೆ ಆಯಾಸ ಹೋಗುತ್ತದೆ ಮನೆಯಲ್ಲಿರುವ ಮಕ್ಕಳು ದೇವರಿಗೆ ಸಮಾನ ಅವು ಯಾವಾಗಲೂ ನಗುನಗುತ್ತಾ ಖುಷಿಯಿಂದ ಇರಬೇಕು. ಆದರೆ ಸಾಮಾನ್ಯವಾಗಿ ಪುಟ್ಟಮಕ್ಕಳು ರಾತ್ರಿಯ ವೇಳೆ ಚಿಕ್ಕ ಪುಟ್ಟ…

  • ಸುದ್ದಿ

    ಇಲ್ಲಿ ಮಹಿಳೆಯರು ಹೆಚ್ಚು ಮೇಕಪ್ ಮಾಡಿಕೊಂಡಲ್ಲಿ ಕಠಿಣ ಶಿಕ್ಷೆ ಪಕ್ಕಾ..!ಎಲ್ಲಿ ಗೊತ್ತ?

    ಈ ದೇಶದಲ್ಲಿ ಮಹಿಳೆಯರು ಹೆಚ್ಚು ಮೇಕಪ್ ಮಾಡಿಕೊಂಡರೆ ಕಠಿಣ ಶಿಕ್ಷೆಗೆ ವಿಧಿಸಲಾಗುತ್ತದೆ. ಸಂಪ್ರದಾಯ ದೇಶ ಸೌದಿ ಅರೇಬಿಯಾದಲ್ಲಿ ಪುರುಷರಂತೆ ಮಹಿಳೆಯರಿಗೆ ಸಮಾನ ಹಕ್ಕುಗಳು ಇಲ್ಲ. ಈ ದೇಶದಲ್ಲಿ ಶರ್ಯ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತದೆ.ಷ್ಟರ ಮಟ್ಟಿಗೆ ಎಂದರೆ ಮಹಿಳೆಯರು ತಾವು ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು ತಮ್ಮ ಗಂಡನ ಆಯ್ಕೆಯನ್ನು ಕೂಡ ಮಾಡಿಕೊಳ್ಳಲು ಇಲ್ಲಿ ಸ್ವತಂತ್ರ ಇಲ್ಲ. ಅಂತ ಕಟ್ಟು ಪಾಡುಗಳನ್ನು ಮೀರಿದರೆ ಕಠಿಣವಾಗಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ ಸೌದಿ ಹೆಣ್ಣು ಮಕ್ಕಳು ತಮ್ಮ ಸೌಂದರ್ಯ ಪ್ರದರ್ಶಿಸುವ ಹಾಗೆ ಇಲ್ಲ.ಹೌದು…