ನೀತಿ ಕಥೆ

ಸ್ವರ್ಗ..ನರಕಗಳ ನಡುವೆ ಇರುವ ವ್ಯತ್ಯಾಸವೇನೆಂದು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ …

1129

ಅದೊಂದು ಶಾಲೆ…ಅದರಲ್ಲಿ ಒಬ್ಬ ವಿದ್ಯಾರ್ಥಿಗೆ ಯಾವುದಾದರೂ ಹೊಸ ವಿಷಯವನ್ನು ತಿಳಿದುಕೊಳ್ಳುವು ದೆಂದರೆ ಬಹಳ ಇಷ್ಟ. ಈ ನಿಟ್ಟಿನಲ್ಲಿ ಒಂದು ದಿನ ಆ ಹುಡುಗ ತನ್ನ ಟೀಚರ್ ಬಳಿ ಸ್ವರ್ಗ ಹಾಗೂ ನರಕ ಎಂದರೇನು. ಇವೆರಡರ ನಡುವೆ ಇರುವ ವ್ಯತ್ಯಾಸವೇನು? ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಟೀಚರ್…’ ಮಕ್ಕಳೆ ನಾಳೆ ಬೆಳಿಗ್ಗೆ ಶಾಲೆಗೆ ಬೇಗ ಬನ್ನಿ …ನಿಮಗೆ ಸ್ವರ್ಗ ಹಾಗೂ ನರಕಗಳನ್ನು ತೋರಿಸುತ್ತೇನೆ’ ಎಂದು ಹೇಳುತ್ತಾರೆ. ಅವುಗಳನ್ನು ನೋಡಿದ ಮೇಲೆ ಅವುಗಳ ವ್ಯತ್ಯಾಸ ನಿಮಗೇ ತಿಳಿಯುತ್ತದೆ. ಎನ್ನುತ್ತಾರೆ.

ಮಾರನೇ ದಿನ ಮಕ್ಕಳೆಲ್ಲರೂ ಬೇಗ ಶಾಲೆಗೆ ಬರುತ್ತಾರೆ.ಅವರಲ್ಲಿ ಸ್ವರ್ಗ ಹಾಗೂ ನರಕಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ.ಭೋಜನ ವಿರಾಮದ ಸಮಯದಲ್ಲಿ … ನರಕದಲ್ಲಿ ಇರುವವರೆಲ್ಲರೂ ಊಟ ಮಾಡಲು ಕುಳಿತುಕೊಳ್ಳುತ್ತಾರೆ. ಅವರ ತಟ್ಟೆಗಳಲ್ಲಿ ಪಂಚ ಭಕ್ಷ್ಯ ಪರಮಾನ್ನಗಳಿರುತ್ತವೆ. ಆದರೆ, ಯಾರಿಂದಲೂ ತಿನ್ನಲು ಸಾಧ್ಯವಾಗುತ್ತಿಲ್ಲ. ಕಾರಣವೇನೆಂದರೆ… ಅವರೆಲ್ಲರ ಕೈಗಳಿಗೆ ಮುಳ್ಳುಗಳಿಂದ ಕೂಡಿರುವ ಬಳೆಗಳನ್ನು ಹಾಕಿರುತ್ತಾರೆ. ಪದಾರ್ಥಗಳನ್ನು ತಿನ್ನಲು ಮುಂದಾದಾಗ ,ಬಳೆಯ ಮುಳ್ಳುಗಳು ತುಟಿಗಳಿಗೆ ಚುಚ್ಚುತ್ತವೆ. ಹಾಗಾಗಿ ತಮ್ಮ ಎದುರು ಪಂಚ ಭಕ್ಷ್ಯ ಪರಮಾನ್ನಗಳಿದ್ದರೂ ಅವುಗಳನ್ನು ತಿನ್ನಲಾಗುವುದಿಲ್ಲ. ಅರ್ಧ ಹಸಿವೆಯಿಂದಲೇ ಕಾಲ ಕಳೆಯ ಬೇಕಾಗಿದೆ.

ಈಗ ಟೀಚರ್ ಮಕ್ಕಳನ್ನು… ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ. ಇಲ್ಲಿಯೂ ಸಹ ಅವರ ತಟ್ಟೆಗಳಲ್ಲಿ ಪಂಚಭಕ್ಷ್ಯ ಪರಮಾನ್ನಗಳಿರುತ್ತವೆ. ಎಲ್ಲರ ಕೈಗಳಿಗೂ ಮುಳ್ಳುಗಳಿಂದ ಕೂಡಿದ ಬಳೆಗಳಿರುತ್ತವೆ. ಆದರೆ, ಇವರು ಯಾವುದೇ ತೊಂದರೆ ಪಡದೆ ತಮ್ಮ ಮುಂದಿರುವ ಆಹಾರವನ್ನು ಹೊಟ್ಟೆ ತುಂಬಾ ತಿನ್ನುತ್ತಾರೆ.

ಈಗ ಟೀಚರ್ ಮಕ್ಕಳಲ್ಲಿ…ಮಕ್ಕಳೇ ನೀವೇ ನೋಡಿದಿರಲ್ಲಾ..?ಎಂದು ಕೇಳುತ್ತಾರೆ. ನರಕದಲ್ಲಿರುವವರ ಕೈಗಳಲ್ಲಿ ಮುಳ್ಳುಗಳಿಂದ ಕೂಡಿದ ಬಳೆಗಳಿವೆ , ಸ್ವರ್ಗದಲ್ಲಿರುವವರ ಕೈಯಲ್ಲೂ ಇವೆ. ಆದರೆ, ಅವರಿಂದ ತಿನ್ನಲಾಗಲಿಲ್ಲ. ಇವರು ಹೊಟ್ಟೆ ತುಂಬಾ ತಿಂದರು.

ಇದು ಹೇಗೆ ಸಾಧ್ಯವಾಯಿತೆಂದರೆ…ನರಕದಲ್ಲಿರುವವರು ತಮ್ಮ ಕೈಗಳಿಂದ ಅಹಾರವನ್ನು ತಿನ್ನಲು ಹೋದಾಗ ಬಳೆಗಳಲ್ಲಿದ್ದ ಮುಳ್ಳುಗಳು ಅವರ ಮೂತಿಗೆ ಚುಚ್ಚಿಕೊಳ್ಳುತ್ತಿದ್ದವು. ಆದರೆ, ಸ್ವರ್ಗದಲ್ಲಿರುವವರು… ಪ್ರತಿಯೊಬ್ಬರೂ ತಾವೇ ತಿನ್ನದೆ…ತಮ್ಮ ಎದುರಿಗೆ ಕುಳಿತವರಿಗೆ ತಿನ್ನಿಸುತ್ತಿದ್ದರು. ಹಾಗಾಗಿ ಮುಳ್ಳುಗಳು ಚುಚ್ಚಿಕೊಳ್ಳುವ ಪ್ರಶ್ನೆಯೇಯಿಲ್ಲ.

ಅಂದರೆ…ಮನುಷ್ಯ ಪರೋಪಕಾರದಿಂದ ಜೀವಿಸುವುದೇ ಸ್ವರ್ಗ. ಸ್ವಾರ್ಥದಿಂದ ಜೀವಿಸುವುದೇ ನರಕ. ಎಂದು ಟೀಚರ್ ಹೇಳಿದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಏರ್ಟೆಲ್ ಬಂಪರ್ ಆಫರ್! ಪ್ರಿಪೇಡ್ ಪ್ಲಾನ್ ಜೊತೆಗೆ 4 ಲಕ್ಷ ವಿಮೆ ಸೌಲಭ್ಯ ಪಡೆಯಬಹುದು…!

    ದೇಶದ ಟೆಲಿಕಾಂ ರಂಗದಲ್ಲಿ ಭಾರೀ ಪೈಪೋಟಿ ಬೆಳೆದಿರುವ ಹಿನ್ನೆಲೆಯಲ್ಲಿ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳನ್ನು ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿವೆ. ಈ ನಿಟ್ಟಿನಲ್ಲಿ ಏರ್ಟೆಲ್ ಕೂಡ ಹಿಂದೆ ಬಿದ್ದಿಲ್ಲ. ಆರ್ಥಿಕವಾಗಿ ಸುರಕ್ಷಿತವಾದ ಭಾರತವನ್ನು ನಿರ್ಮಿಸಲು ಮೊಬೈಲ್ ಸೇವೆಗಳ ಕಾರ್ಯತಂತ್ರದ ಭಾಗವಾಗಿ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ವಿಮಾ ರಕ್ಷಣೆಯ ರಕ್ಷಣೆಯೊಂದಿಗೆ ಪ್ರಿಪೇಡ್ ಯೋಜನೆಯನ್ನು ನೀಡಲು ಭಾರ್ತಿ ಆಕ್ಸಾ ಲೈಫ್ ಇನ್ಶುರೆನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಏರ್ಟೆಲ್ ರೂ. 599 ಯೋಜನೆ ಭಾರ್ತಿ ಏರ್ಟೆಲ್ ಭಾರ್ತಿ ಆಕ್ಸಾ…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ,ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ….

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(6 ಡಿಸೆಂಬರ್, 2018) ಸ್ನೇಹಿತರು, ವ್ಯಾಪಾರ ಪಾಲುದಾರರು ಹಾಗೂ ಸಂಬಂಧಿಗಳ ಜೊತೆ ವ್ಯವಹರಿಸುವಾಗ ನಿಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಿ – ಅವರು ನಿಮ್ಮ…

  • ಸುದ್ದಿ

    ಟಿಕ್‌ಟಾಕ್‌ಗೆ ಮತ್ತೊಂದು ಬಲಿ : ಕೋಲಾರದಲ್ಲಿ ಕೃಷಿ ಹೊಂಡದ ಬಳಿ ವಿಡಿಯೋ ಮಾಡಲು ಹೋಗಿ ವಿದ್ಯಾರ್ಥಿನಿ ಸಾವು…!

    ಟಿಕ್ ಟಾಕ್ ಹಾವಳಿ ಎಲ್ಲೇ ಮೀರುತ್ತಿದೆ. ಈ ಆ್ಯಪ್​​ ನಿಷೇಧವಾಗಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಟಿಕ್​ಟಾಕ್​ ಆ್ಯಪ್​ನಿಂದ ಜೀವ ಕಳೆದುಕೊಳ್ಳುತ್ತಿರುವವ ಸಂಖ್ಯೆಯೂ ಹೆಚ್ಚುತ್ತಿದೆ. ತುಮಕೂರಿನಲ್ಲಿ ಯುವಕನೊರ್ವ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಇದೀಗ ಕೋಲಾರದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಟಿಕ್​ಟಾಕ್​ ಕ್ರೇಜ್​​ಗೆ ಬಲಿಯಾಗಿದ್ದಾಳೆ. ಮಾಲಾಗೆ ವಿಪರೀತ ಟಿಕ್​ಟಾಕ್​ ಗೀಳು ಅಂಟಿಕೊಂಡಿತ್ತು. ಹೀಗಾಗಿ ಕೂತಲ್ಲಿ ನಿಂತಲ್ಲಿ ಟಿಕ್​ಟಾಕ್​ ಚಿತ್ರೀಕರಿಸುತ್ತಿದ್ದಳು. ಇದೇ ರೀತಿ ಅಪಾಯಕಾರಿ ಕೃಷಿ ಹೊಂಡದ ಬಳಿ ಟಿಕ್​ಟಾಕ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ. ಕೋಲಾರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮಾಲಾ…

  • ಸುದ್ದಿ

    ಪೌರಕಾರ್ಮಿಕರು ಕುಡಿಯಲು ನೀರು ಕೇಳಿದ್ದಕ್ಕೆ ಸಿಟ್ಟುಗೊಂಡು ರಸ್ತೆ ಮಧ್ಯದಲ್ಲಿ ಅಮಾನವೀಯ ರೀತಿ ವರ್ತಿಸಿದ ಮಹಿಳೆ.

    ಕೊರೊನಾ ಮಹಾಮಾರಿ ದೇಶ ಅದರಲ್ಲೂ ರಾಜ್ಯವನ್ನು ವಕ್ಕರಿಸಿದ ಬಳಿಕ ಅನೇಕ ಅಮಾನವೀಯ ಘಟನೆಗಳು ಬೆಳಕಿಗೆ ಬಂದಿವೆ. ಕೆಲವೊಂದು ಮಾನವೀಯ ಕೆಲಸಗಳು ಕೂಡ ನಡೆದಿವೆ. ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಪೌರಕಾರ್ಮಿಕರ ಮೇಲೆ ಮಹಿಳೆಯೊಬ್ಬರು ಅಮಾನವೀಯವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ. ಹೌದು. ಪೌರಕಾರ್ಮಿಕರು ಕುಡಿಯಲು ನೀರು ಕೇಳಿದ್ದಕ್ಕೆ ಸಿಟ್ಟುಗೊಂಡ ಮಹಿಳೆ ಅವರನ್ನು ನಿಂದಿಸಿದ್ದಲ್ಲದೇ, ಬಾಟಲಿಯಲ್ಲಿ ನೀರು ತುಂಬಿಸಿ ನಂತರ ಅದನ್ನು ರಸ್ತೆ ಮಧ್ಯದಲ್ಲಿಟ್ಟು ಬಂದಿದ್ದಾರೆ. ಈ ಮೂಲಕ ಅಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ಇದನ್ನು ಅಲ್ಲೆ ಇದ್ದ ಕೆಲವರು ತಮ್ಮ ಮೊಬೈಲ್…

  • ಸುದ್ದಿ

    40 ವರ್ಷಗಳ ಬಳಿಕ ಕಾಂಚಿಪುರ ಭಕ್ತಾದಿಗಳಿಗೆ ದರ್ಶನ ನೀಡಿದ `ಅಥಿ ವರದಾರ್’….!

    ತಮಿಳುನಾಡಿನ ದೇಗುಲಗಳ ನಗರಿ ಕಾಂಚಿಪುರದಲ್ಲಿ 40 ವರ್ಷಗಳಿಂದ ನೀರಿನಲ್ಲಿದ್ದ `ಅಥಿ ವರದಾರ್’ ಮೂರ್ತಿಯನ್ನು ಮೇಲಕ್ಕೆ ಎತ್ತಲಾಗಿದ್ದು, ದೇವರನ್ನು ನೋಡಲು ಲಕ್ಷಾಂತರ ಮಂದಿ ಭಕ್ತಾದಿಗಳು ದೇಗುಲದತ್ತ ಬರುತ್ತಿದ್ದಾರೆ.ಪುರಾತನ ಕಾಲದಿಂದಲೂ ಈ ದೇಗುಲ 40 ವರ್ಷಕ್ಕೊಮ್ಮೆ ಮಾತ್ರ ಬಾಗಿಲನ್ನು ತೆರೆಯಲಾಗುತ್ತದೆ. ಈ ವೇಳೆ 48 ದಿನಗಳ ಕಾಲ ಮಾತ್ರ ಅಥಿ ವರದಾರ್ ದೇವರ ದರ್ಶನ ಪಡೆಯಬಹುದಾಗಿದೆ. ಈ ಅವಧಿ ಮುಗಿದ ಬಳಿಕ ಮತ್ತೆ ಮೂರ್ತಿಯನ್ನು ನೀರಿನಲ್ಲಿ ಇಡಲಾಗುತ್ತದೆ. ಈ ಹಿಂದೆ 1979ರಲ್ಲಿ ದರ್ಶನ ಭಾಗ್ಯ ಸಿಕ್ಕಿತ್ತು. ಇದಕ್ಕೂ ಮೊದಲು 1939ರಲ್ಲಿ…