ಕಾನೂನು

ಬಿಪಿಎಲ್ ಪಡಿತರ ಚೀಟಿದಾರರಿಗೆ ಸಚಿವ ‘ಯು.ಟಿ.ಖಾದರ್’ ತಿಳಿಸಿರುವ ಸಿಹಿ ಸುದ್ದಿ ಏನು ಗೊತ್ತಾ..?ತಿಳಿಯಲು ಇದನ್ನು ಓದಿ..

9067

ಬಿಪಿಎಲ್ ಪಡಿತರ ಚೀಟಿದಾರರು ಇನ್ನು ಮುಂದೆ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಾದರೂ ತಮ್ಮ ಪಾಲಿನ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ನೊಂದಾಯಿತ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯುವ ವ್ಯವಸ್ಥೆ ಇತ್ತು. ಈ ಅನಿವಾರ್ಯತೆಯ ಕಾರಣಕ್ಕಾಗಿ ನ್ಯಾಯಬೆಲೆ ಅಂಗಡಿಯವರು ಫಲಾನುಭವಿಗಳ ಜೊತೆ ಒರಟಾಗಿ ಮಾತನಾಡುತ್ತಿದ್ದರು.

ಇನ್ನು ಮುಂದೆ ಈ ರೀತಿಯ ಮುಜುಗರ ತಪ್ಪಲಿದೆ. ರಾಜ್ಯದ ಯಾವುದೇ ಭಾಗದ ನ್ಯಾಯಬೆಲೆ ಅಂಗಡಿಯಲ್ಲಿ ನೋಂದಣಿಯಾಗಿ ಆಧಾರ್ ಸಂಖ್ಯೆಯನ್ನು ಸಂಪರ್ಕಿಸಿದ್ದರೆ ಸಾಕು. ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಾದರೂ ಬಿಪಿಎಲ್ ಚೀಟಿದಾರರು ಪಡಿತರ ಪಡೆದುಕೊಳ್ಳಬಹುದು ಎಂದರು. ಇನ್ನು ಮುಂದೆ ಪಡಿತರಚೀಟಿ ಪಡೆಯಲು ಆಧಾರ್ ಸಂಖ್ಯೆ ಇದ್ದರೆ ಸಾಕು, ಮನೆ ಸಂಖ್ಯೆ, ವಿದ್ಯುತ್ ಬಿಲ್ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಪಿಎಲ್ ಕಾರ್ಡ್‍ಗಾಗಿ ಇದುವರೆಗೂ 9.05 ಲಕ್ಷ ಅರ್ಜಿಗಳು ಬಂದಿವೆ. ಅದರಲ್ಲಿ 4.05 ಲಕ್ಷ ಕಾರ್ಡ್‍ಗಳು ಮುದ್ರಣಗೊಂಡಿವೆ. ಪ್ರತಿದಿನ 40 ಸಾವಿರ ಕಾರ್ಡ್‍ಗಳು ಮುದ್ರಣಗೊಳ್ಳುತ್ತಿವೆ. ಇನ್ನು ಕೆಲವು ಕಾರ್ಡ್‍ನ ಮಾಹಿತಿಗಳು ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಜನಸ್ನೇಹಿ ಕೇಂದ್ರಗಳಲ್ಲಿ ಉಳಿದಿದ್ದು, ಸುಮಾರು 5 ಲಕ್ಷ ಕಾರ್ಡ್‍ಗಳ ವಿತರಣೆ ಬಾಕಿ ಇದೆ. ಮಾಹಿತಿ ಸಂಪೂರ್ಣ ಲಭ್ಯವಾದರೆ 10 ದಿನದೊಳಗಾಗಿ ಫಲಾನುಭವಿಗಳ ಮನೆಗೆ ಕಾರ್ಡ್‍ಗಳನ್ನು ಕಳುಹಿಸಲಾಗುವುದು ಎಂದು ತಿಳಿಸಿದರು.

ಅನಿಲಭಾಗ್ಯ ಯೋಜನೆ ಫಲಾನುಭವಿಗಳ ಆಯ್ಕೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು , ಶಾಸಕರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಸಮಿತಿಗೆ ಶಾಸಕರು ವಾರದೊಳಗಾಗಿ ಫಲಾನುಭವಿಗಳ ಪಟ್ಟಿ ಕೊಡಬೇಕು.

ಸರ್ಕಾರ ಜಿಲ್ಲಾವಾರು ಕೋಟಾವನ್ನು ನಿಗದಿಮಾಡಿದ್ದು ಮೊದಲ ಹಂತದಲ್ಲಿ 10 ಲಕ್ಷ ಮಂದಿಗೆ ಅನಿಲ ಭಾಗ್ಯ ಯೋಜನೆಯಡಿ ಉಚಿತ ಸಂಪರ್ಕ, ಎರಡು ರಿಫೀಲಿಂಗ್ ಸಿಲಿಂಡ್, ಗ್ಯಾಸ್ ಸ್ಟವ್ ನೀಡಲಾಗುವುದು. 2ನೇ ಹಂತದಲ್ಲಿ 10 ಲಕ್ಷ ಫಲಾನುಭವಿಗಳಿಗೆ ಅನಿಲಭಾಗ್ಯ ಸಂಪರ್ಕ ನೀಡಲಾಗುತ್ತದೆ ಎಂದು ಹೇಳಿದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕ್ರೀಡೆ

    ಕ್ರಿಕೆಟ್ ವಿಶ್ವಕಪ್’ನಲ್ಲಿ ರನ್ನರ್’ಅಪ್ ಆಗಿದ್ದ ಭಾರತ ತಂಡದ, ಕನ್ನಡದ ಈ ಮಹಿಳೆಯರಿಗೆ ಸಿಕ್ಕಿದ್ದೇನು ಗೊತ್ತಾ?

    ಇತ್ತೀಚಿಗೆ ನಡೆದ ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಸೋಲು ಅನುಭವಿಸಿತ್ತು.

  • ಸುದ್ದಿ

    ಮೆಡಿಸಿನ್ ಫ್ಯಾಕ್ಟರಿಯಲ್ಲಿ ರಿಯಾಕ್ಟರ್ ಬ್ಲಾಸ್ಟ್- ವಿಷಾಪೂರಿತ ಅನಿಲ ಸೋರಿಕೆಯಿಂದ ಗ್ರಾಮಸ್ಥರು ಕಂಗಾಲು……!

    ಬೆಳ್ಳಂಬೆಳಗ್ಗೆ ಮೆಡಿಸಿನ್ ತಯಾರಿಕಾ ಘಟಕದ ರಿಯಾಕ್ಟರ್ ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ತುಮಕೂರಿನ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿದ್ದ ಬೇಳೂರು ಬಾಯರ್ ಮೆಡಿಸಿನ್ ತಯಾರಿಕಾ ಘಟಕದ ಬಾಯ್ಲರ್ ನ ರಿಯಾಕ್ಟರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ 8:30ರ ಸುಮಾರಿಗೆ ಸೋರಿಕೆಯಾಗಿ ಸ್ಫೋಟಗೊಂಡಿದೆ. ಬೆಳ್ಳಂಬೆಳಗ್ಗೆ ಗ್ರಾಮದ ಮೆಡಿಸಿನ್ ಫ್ಯಾಕ್ಟರಿಯ ಬಾಯ್ಲರ್‍ನ ತಾಪಮಾನದಲ್ಲಿ ಏರುಪೇರಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಫ್ಯಾಕ್ಟರಿಯ ಛಾವಣಿ ಕಿತ್ತು ಹೋಗಿದ್ದು, ಅವಶೇಷಗಳು ಗ್ರಾಮದ ಸುತ್ತಮುತ್ತಲ ಮನೆಗಳ…

  • inspirational

    ಸೀತಾಫಲ ಹಣ್ಣನ್ನು ನೀವು ತಿಂದಿರಬಹುದು ಆದರೆ, ಇದರ ಅದ್ಬುತ ರಹಸ್ಯಗಳನ್ನು ನೋಡಿ.

    ಈ ಪ್ರಪಂಚದಲ್ಲಿ ಹಲವು ರೀತಿಯ ಹಣ್ಣುಗಳು ಸಿಗುತ್ತದೆ ಮತ್ತು ಅದರಲ್ಲಿ ಕೆಲವು ಹಣ್ಣುಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದರೆ ಇನ್ನು ಕೆಲವು ಹಣ್ಣುಗಳು ಕೇವಲ ರುಚಿಯನ್ನ ಮಾತ್ರ ನೀಡುತ್ತದೆ. ಇನ್ನು ಸೀತಾಫಲ ಹಣ್ಣನ್ನು ಯಾರು ತಾನೇ ಇಷ್ಟಪಡಲ್ಲ ಹೇಳಿ, ಪ್ರತಿಯೊಬ್ಬರು ಕೂಡ ಒಮ್ಮೆಯಾದರೂ ಈ ಹಣ್ಣಿನ ರುಚಿ ನೋಡಿರುತ್ತೀರಿ, ಇನ್ನು ಈ ಹಣ್ಣಿನ ಜ್ಯೂಸ್ ಕೂಡ ಕುಡಿದಿರಬಹುದು ಆದರೆ ಈ ಹಣ್ಣಿನಲ್ಲಿರುವ ಕೆಲವು ಅದ್ಬುತ ರಹಸ್ಯಗಳ ಬಗ್ಗೆ ಮಾತ್ರ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಹೌದು ಸೀತಾಫಲ ಸಾಮಾನ್ಯವಾದ…

  • ರಾಜಕೀಯ

    ಮೋದಿ ಅಭಿಮಾನಿಗಳಿಗೆ ಸವಾಲು ಹಾಕಿದ, ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು!ಏನದು ಸವಾಲು ಗೊತ್ತಾ?

    ಸೋಲಿಲ್ಲದ ಸರದಾರ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಪ್ರಧಾನಿ ಮೋದಿ ಅವರ ಅಭಿಮಾನಿಗಳಿಗೆ ಸವಾಲು ಹಾಕಿದ್ದಾರೆ. ‘ಬಿಜೆಪಿಯ ನಕಲಿ, ಮೋದಿಯ ಫೇಕ್ ಅಕೌಂಟ್ ಭಕ್ತರೇ’ ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ಸಿನಿಂದ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಲೇವಡಿ ಮಾಡಿದ್ರಿ ಈಗ ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿದೆ. ಈ ಬಗ್ಗೆ ಯಾರೊಬ್ಬರು ಚಕಾರವೆತ್ತುತ್ತಿಲ್ಲ. ಈಗ ಸ್ವಾಭಿಮಾನಿ ಮೋದಿ…

  • ಸಿನಿಮಾ

    ಆ ಆರೋಪವನ್ನು ಪ್ರೂವ್ ಮಾಡಿದ್ರೆ ಮಂಡ್ಯ ಅಲ್ಲ, ರಾಜ್ಯವನ್ನೇ ಬಿಟ್ಟು ಹೋಗ್ತೀನಿ ಎಂದು ದಳಪತಿಗಳಿಗೆ ಸವಾಲು ಹಾಕಿದ ಯಶ್.!?

    ನಾನು ಜೆಡಿಎಸ್​​ ಕಳ್ಳರ ಪಕ್ಷ ಅಂತಾ ಹೇಳಿದ್ದೇನೆ ಎಂದು ನನ್ನ ಮೇಲೆ ಒಬ್ಬರು ಆರೋಪ ಮಾಡಿದ್ದಾರೆ. ನಾನು ತುಂಬಾ ನಂಬೋದು ಧರ್ಮಸ್ಥಳದ ಮಂಜುನಾಥ ಸ್ವಾಮಿ. ಆ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡುತ್ತೇನೆ. ಒಂದು ವೇಳೆ ನಾನು ಕಳ್ಳರ ಪಕ್ಷ ಅಂತಾ ಹೇಳಿದ್ದರೆ ಅವ್ರು ಹೇಳಿದ್ದನ್ನ ಕೇಳುತ್ತೇನೆ. ಒಂದು ವೇಳೆ ಹಾಗೆ ಹೇಳಿದ್ದು ಸತ್ಯವಾಗಿದ್ದರೆ ನಾನು ಮಂಡ್ಯ ಅಲ್ಲ, ಸಿನಿಮಾ ಇಂಡಸ್ಟ್ರಿ ಅಲ್ಲ, ಕರ್ನಾಟಕವನ್ನೇ ಬಿಟ್ಟು ಹೋಗುತ್ತೇನೆ. ರಾಜ್ಯ ಬಿಡ್ತೀನಿ ಅಂತಾ ಸುಮ್ಮನೇ ಹೇಳುತ್ತಿಲ್ಲ. ಹಾಗೆ ಹೇಳಿ…

  • ಜ್ಯೋತಿಷ್ಯ

    ನೀವು ಇಷ್ಟಪಡುವ ದೇವರನ್ನು ನೆನಯುತ್ತ ನಿಮ್ಮ ಇಂದಿನ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Friday, December 10, 2021) ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದ್ದಾಗ ಮಾತ್ರ ಮಾನಸಿಕ ಮತ್ತು ನೈತಿಕ ಶಿಕ್ಷಣದ ಜೊತೆ ದೈಹಿಕ ಶಿಕ್ಷಣವನ್ನೂ ತೆಗೆದುಕೊಳ್ಳಿ. ಆರೋಗ್ಯಕರ ಮನಸ್ಸು ಯಾವಾಗಲೂ ಆರೋಗ್ಯಕರ ದೇಹದಲ್ಲಿ ಪರ್ಯವಸಾನವಾಗುತ್ತದೆಂದು ನೆನಪಿಡಿ. ಹಿಂದೆ ತಮ್ಮ ಹಣವನ್ನು ಹೂಡಿಕೆ ಮಾಡಿದ ಜನರು ಇಂದು ಆ ಹಣದಿಂದ ಲಾಭ ಪಡೆಯುವ ಸಾಧ್ಯತೆಯಿದೆ. ಪತ್ನಿಯ ವ್ಯವಹಾರಗಳಲ್ಲಿ ನಿಮ್ಮ ಹಸ್ತಕ್ಷೇಪ ಅವಳಿಗೆ ಕಿರಿಕಿರಿ ಮಾಡಬಹುದು. ಕೋಪ ಭುಗಿಲೇಳುವುದನ್ನು ತಪ್ಪಿಸಲು ಅವಳ ಅನುಮತಿ ತೆಗೆದುಕೊಳ್ಳಿ. ನೀವು ಸುಲಭವಾಗಿ ಸಮಸ್ಯೆಯನ್ನು ತಪ್ಪಿಸಬಹುದು….