ವಿಚಿತ್ರ ಆದರೂ ಸತ್ಯ

ಈ ಮಹಿಳೆಯ ಕಾಲಿನಿಂದ ಸೂಜಿ, ಸಿರಿಂಜಿನ ಮುಳ್ಳು, ಪಿನ್ನುಗಳು ಹೊರಬರುತ್ತಿವೆ..!ತಿಳಿಯಲು ಈ ಲೇಖನ ಓದಿ…

555

ಭಾರತದಲ್ಲಿ ಓರ್ವ ಮಹಿಳೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜಿನ ಮುಳ್ಳುಗಳು ಹಾಗೂ ಪಿನ್ನುಗಳು ನಿಯಮಿತವಾಗಿ ಹೊರಗೆ ಬರುತ್ತಿವೆ ಎಂದು ಹೇಳಿಕೊಂಡಿದ್ದಾಳೆ. ಈ ತೊಂದರೆ ತನಗೆ ಕೆಲವು ಕಾಲದಿಂದಲೂ ಇದ್ದು ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.  ಆದರೆ ಕಾಲಿನಿಂದ ಸೂಜಿ ಹೊರಬರುವುದೆಂದರೆ? ಇದು ನೈಸರ್ಗಿಕವಂತೂ ಆಗಿರಲಿಕ್ಕಿಲ್ಲ.

ಆಕೆಯೇ ತಾನೇ ಚುಚ್ಚಿಕೊಂಡು ಬಳಿಕ ಇದು ದೇಹದೊಳಗಿನಿಂದ ಬರುತ್ತಿದೆ ಎನ್ನುತ್ತಿದ್ದಾಳೆಯೇ? ಈ ಪ್ರಶ್ನೆಗೆ ಆಕೆ ಸ್ಪಷ್ಟವಾಗಿ ನಿರಾಕರಿಸುತ್ತಾ ಇವೆಲ್ಲವೂ ತಾವೇ ತಾವಾಗಿ ಹೊರಬರುತ್ತಿವೆ ಎಂದು ಹೇಳುತ್ತಾಳೆ. ಇದಲ್ಲೇನೋ ಮೋಸ ಇದೆ. ಈ ಮಹಿಳೆಯೇ ಮೋಸ ಮಾಡುತ್ತಿರಬಹುದು ಅಥವಾ ಮೋಸದಿಂದ ಆಕೆಯ ದೇಹದಲ್ಲಿ ಬೇರೆ ಯಾರೋ ಸೂಜಿಗಳನ್ನು ಚುಚ್ಚಿರಬಹುದು ಎಂಬ ಅನುಮಾನ ಕಾಡುತ್ತದೆ.

ಈಕೆ ಈ ಸ್ಥಿತಿಯಿಂದ ಬಳಲಲು ತೊಡಗಿ ಬಹುಕಾಲವೇ ಆಗಿದೆ:-

ಅನುಸೂಯ್ಯಾ ದೇವಿ ಎಂಬ ಹೆಸರಿನ ಈ ಮಹಿಳೆ ಉತ್ತರಪ್ರದೇಶ ರಾಜ್ಯದ ಫತೆಹ್ ಪುರ್ ಜಿಲ್ಲೆಯ ಒಂದು ಪುಟ್ಟ ಗ್ರಾಮದ ನಿವಾಸಿಯಾಗಿದ್ದಾಳೆ. ಈಕೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜುಗಳು ಹಾಗೂ ಪಿನ್ನುಗಳು ಹೊರಬರುವುದು 2012 ರಿಂದ ಪ್ರಾರಂಭವಾಯಿತು ಎಂದು ವಿವರಿಸಿದ್ದಾಳೆ.

ಈಕೆ ವೈದ್ಯಕೀಯ ನೆರವು:-

ಸುಮಾರು ಐದು ವರ್ಷಗಳಿಂದಲೂ ಸತತವಾಗಿ ಸೂಜಿಗಳ ಯಾತನೆಯಿಂದ ಬಳಲಿದ ಈಕೆ ಮೊದಮೊದಲು ನೋವನ್ನು ಸಹಿಸಿಕೊಳ್ಳಲು ಶಕ್ತಳಿದ್ದರೂ ಈಗ ಹೆಚ್ಚೂ ಕಡಿಮೆ ಸೋತು ಹೋಗಿದ್ದಾಳೆ. ನೋವಿಲ್ಲದೇ ನಡೆಯಲು, ಕುಳಿತುಕೊಳ್ಳಲು ಅಥವಾ ನಿಲ್ಲಲೂ ಆಕೆಗೆ ಸಾಧ್ಯವಿಲ್ಲ. ಈ ನೋವನ್ನು ವಿವರಿಸಿ ಆಕೆ ಹಲವಾರು ವೈದ್ಯರ ನೆರವನ್ನೂ ಯಾಚಿಸಿದ್ದಳು.

ಈಕೆಯ ವಿವರಣೆಯ ಪ್ರಕಾರ:-

ಈ ಸ್ಥಿತಿ ಹೇಗೆ ಎದುರಾಯಿತು ಎಂಬ ಪ್ರಶ್ನೆಗೆ ಆಕೆ ಹೀಗೆ ಹೇಳುತ್ತಾಳೆ: “ನನಗೆ ಈ ತೊಂದರೆ ಕಳೆದ ಐದು ವರ್ಷಗಳಿಂದಲೂ ಇದೆ. ಸೂಜಿಗಳು ನನ್ನ ಕಾಲಿನಿಂದ ಹೊರಬರುತ್ತವೆ. ಇದು ಹೇಗೆ, ಏಕೆ ಎಂದು ನನಗೆ ವಿವರಿಸಲು ಸಾಧ್ಯವಿಲ್ಲ. ಇವು ಹೇಗೆ ಒಳಗೆ ಬಂದವು ಎಂದು ನನಗೆ ಗೊತ್ತಿಲ್ಲ. ಆದರೆ ಈ ನೋವಿನಿಂದಂತೂ ಜರ್ಝರಿತಳಾಗಿದ್ದೇನೆ, ಇನ್ನು ಸಹಿಸಲು ಸಾಧ್ಯವಿಲ್ಲ”

ವೈದ್ಯರ ವಿವರಣೆ:-

ವೈದ್ಯರು ಇದೊಂದು ಮಾನಸಿಕ ರೋಗ ಎಂದು ಊಹಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ರೋಗಿ ತನಗೆ ಅರಿವೇ ಇಲ್ಲದಂತೆ ಕೆಲವು ಮೊನಚಾದ ವಸ್ತುಗಳನ್ನು ತನ್ನ ದೇಹದೊಳಗೆ ತೂರಿಸಿಕೊಳ್ಳುವುದು ಒಂದು ಮಾನಸಿಕ ವ್ಯಾಧಿಯ ಲಕ್ಷಣವಾಗಿದೆ. ಈ ಮಹಿಳೆಯೂ ಇಂತಹ ಯಾವುದೋ ಮಾನಸಿಕ ವ್ಯಾಧಿಗೆ ತುತ್ತಾಗಿದ್ದು ತನಗರಿವಿಲ್ಲದಂತೆಯೇ ಚೂಪಾದ ವಸ್ತುಗಳನ್ನು ತನ್ನ ಕಾಲುಗಳ ಒಳಗೆ ಚುಚ್ಚಿಕೊಳ್ಳುತ್ತಿದ್ದರಬಹುದು. ಆದರೆ ಈ ಆರೋಪವನ್ನು ಅನುಸೂಯ್ಯಾ ಸ್ಪಷ್ಟವಾಗಿ ತಳ್ಳಿ ಹಾಕಿ ತನಗಾವುದೇ ರೋಗವಿಲ್ಲ ಹಾಗೂ ತಾನು ತನ್ನ ಕಾಲುಗಳಿಗೆ ಚುಚ್ಚಿಕೊಂಡಿಲ್ಲ ಎಂದೇ ವಾದಿಸುತ್ತಾಳೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ