ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಇವತ್ತು ಇಡೀ ಪ್ರಪಂಚದಲ್ಲೇ ವೇಗವಾಗಿ ಓಡೋನು ಅನುಸ್ಕೊಂಡಿರೋ ಉಸೇನ್ ಬೋಲ್ಟ್ ಸಹ, ಸೋತು, ಬಿದ್ದು ಎದ್ದು ಈಗ ಗೆಲ್ತಾ ಇರೋದು.. ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..!

ಜೀವನ ಹೆಂಗಿರುತ್ತೆ ಗೊತ್ತಾ..? ಎಂತವರನ್ನೆ ಕೇಳಿ ನೋಡಿ, ಸಾಕಾಗಿದೆ ಅನ್ನೋ ಉತ್ತರ ಕೊಡ್ತಾರೆ.. ಅವನು ರಸ್ತೇಲಿ ಭಿಕ್ಷೆ ಬೇಡೋನಾದ್ರೂ ಅಷ್ಟೆ, ಆಡಿ ಕಾರಲ್ಲಿ ಜುಮ್ ಅಂತ ಹೋಗೋನಾದ್ರೂ ಅಷ್ಟೆ..! ಅವರವರಿಗೆ ಅವರವರ ಸಮಸ್ಯೆಗಳು.. ಹಂಗಂತ ಸಮಸ್ಯೆಗಳನ್ನ ತಲೆ ಮೇಲೆ ಹೊತ್ಕೊಂಡು ಕೂತ್ರೆ ಸಮಸ್ಯೆ ಕಮ್ಮಿ ಆಗೋದೇ ಇಲ್ಲ..! ಸಮಸ್ಯೆ ಬರೋಕೆ ಮುಂಚೇನೇ ಅದನ್ನ ಹೆದರಿಸಿ ಓಡ್ಸೋ ಪ್ರಯತ್ನ ಮಾಡಬೇಕು. ಸಾಧ್ಯ ಆಗಲೇ ಇಲ್ಲ, ಸಮಸ್ಯೆ ಆಗೇ ಹೋಯ್ತು ಅಂದಾಗ ಅದನ್ನು ಎದುರಿಸೋ ತಾಕತ್ತು ಇರಬೇಕು.. ಐಸ್ ಕ್ರೀಮ್ ತಿನ್ನಬೇಕಾದ್ರೆ ಎಂಜಾಯ್ ಮಾಡ್ಕೊಂಡು ತಿನ್ನೋರು ಶೀತ ಆದ್ರೆ ಮಾತ್ರೆ ತಿನ್ನೋಕೂ ರೆಡಿ ಇರಬೇಕು..! ಬರೀ ಐಸ್ ಕ್ರೀಂ ಬೇಕು, ಶೀತ ಬೇಡ ಅಂದ್ರೆ ಆಗಲ್ಲ.. ಹಾಗೇನೇ, ಬರೀ ಗೆಲುವೇ ಬೇಕು, ಸೋಲು ಬರಲೇಬಾರದು ಅಂದ್ರೆ ಸಾಧ್ಯವೇ ಇಲ್ಲ..! ಇವತ್ತು ಗೆದ್ದವರೆಲ್ಲಾ ಸೋತು ಸೋತು ಸೋತು ಗೆದ್ದವರು..! ಗೆಲುವಿನ ಹಿಂದೆ ಸೋಲಿನ ಸರಮಾಲೆಗಳಿರುತ್ತೆ.

ಕೆಲವರು ಏನೋ ಮಾಡ್ಬೇಕು ಅಂತ ಹೋಗ್ತಾರೆ, ಆದ್ರೆ ಕೈ ಸುಟ್ಟುಕೊಂಡು ಸುಮ್ಮನಾಗಿಬಿಡ್ತಾರೆ.. ಒಂದು ಇಡ್ಲಿ ಅಂಗಡಿ ಓಪನ್ ಮಾಡೋನು ಮೊದಲ ದಿನವೇ 1000 ಇಡ್ಲಿ ಸೇಲ್ ಆಗಬೇಕು ಅಂತ ಯೋಚನೆ ಮಾಡೋದ್ರಲ್ಲಿ ತಪ್ಪಿಲ್ಲ..! ಆದ್ರೆ ಆಗಿಲ್ಲ ಅಂತ ಮಾರನೇ ದಿನವೇ ಅಂಗಡಿ ಮುಚ್ಚಿದ್ರೆ ಹೇಗೆ..? ಇವತ್ತು ಇಡ್ಲಿ ತಿಂದ ಹತ್ತಾರು ಜನ ನಾಳೆ ನೂರಾರು ಜನರಿಗೆ ಹೇಳಬೇಕು. ಅವರು ನಿಮ್ಮ ಹೋಟೆಲ್ ಹುಡುಕಿ ಬರಬೇಕು.. ಅವರಿಗೆ ನೀವು ಕೊಟ್ಟ ಇಡ್ಲಿ ಇಷ್ಟ ಆಗಬೇಕು. ಮತ್ತೆ ಅವರು ಮತ್ತಷ್ಟು ಜನರಿಗೆ ಹೇಳಬೇಕು.. ಹೀಗೆ ಮಾಡಿದಾಗ ಮಾತ್ರ ಸಾವಿರ ಇಡ್ಲಿ ಮಾರಬೇಕು ಅನ್ಕೊಂಡೋರು ಎರಡು ಸಾವಿರ ಇಡ್ಲಿ ಮಾರೋಕೆ ಸಾಧ್ಯ..! ಮೊದಲ ದಿನ ಅನ್ಕೊಂಡಷ್ಟು ಆಗದೇ ಇರಬಹುದು, ಆದ್ರೆ ಮುಂದೊಂದು ದಿನ ಅನ್ಕೊಂಡಿದ್ದಕ್ಕಿಂತ ಜಾಸ್ತಿ ಆಗುತ್ತೆ..! ಅಲ್ಲಿ ತನಕ ಕಾಯೋ ತಾಳ್ಮೆ ಇರಬೇಕು. ಫಸ್ಟ್ ಡೇ ಆಗಿಲ್ಲ ಅಂದಮಾತ್ರಕ್ಕೆ ಅದು ಸೋಲಲ್ಲ..!

ನೆನಪಿಟ್ಕೊಳಿ ಸೋಲು ನಿಮಗೆ ನಿಮ್ಮವರು ಯಾರು ಅನ್ನೊದು ಪರಿಚಯಿಸುತ್ತೆ..! ಸೋತಾಗ ನಿಮ್ಮ ಜೊತೆಗೆ ಯಾರಿರ್ತಾರೋ ಅವರು ಮಾತ್ರ ಸಾಯೋ ತನಕ ಜೊತೆಗಿರ್ತಾರೆ.. ನೀವು ಸೋತು ಗೆದ್ದಾಗ ಮಾತ್ರ ಪ್ರಪಂಚ ಏನು ಅಂತ ನಿಮಗೆ ಅರ್ಥ ಆಗೋದು.. ಗೆಲುವು ಈಸಿಯಾಗಿ ಸಿಕ್ಕಿದ್ರೆ ಅಷ್ಟೆ ಬೇಗ ಅದು ನಿಮ್ಮ ಕೈ ಜಾರಿ ಹೋಗುತ್ತೆ.. ಸೋತು ಗೆದ್ದವನಿಗೆ ಮಾತ್ರ ಗೆಲುವು ಉಳಿಸ್ಕೊಳೋ ಐಡಿಯಾ ಇರುತ್ತೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಹಳಷ್ಟು ವಿದ್ಯಾರ್ಥಿಗಳು ಪಿಯುಸಿ ನಂತರ ಹೆಚ್ಚಾಗಿ ಆರ್ಟ್ಸ್ ಆಯ್ಕೆ ಮಾಡುಕೊಳ್ಳುತ್ತಾರೆ. ಆದರೆ ಹೆಚ್ಚಿನವರ ನಂಬಿಕೆ ಏನೆಂದರೆ ಸಯನ್ಸ್ ಮತ್ತು ಕಾಮರ್ಸ್ನಲ್ಲಿ ಇರೋವಷ್ಟು ಕರಿಯರ್ ಆಪ್ಷನ್ ಆರ್ಟ್ಸ್ನಲ್ಲಿ ಇಲ್ಲ ಎಂದು ಹೇಳಲಾಗುತ್ತದೆ. ಆದರೆ ಅದು ಸುಳ್ಳು ಆರ್ಟ್ಸ್ನಲ್ಲಿ ಬಹಳಷ್ಟು ಕರಿಯರ್ ಅವಕಾಶಗಳು ಇವೆ. ಅದಕ್ಕಾಗಿ ನೀವು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿ ತಿಳಿದುಕೊಳ್ಳಬೇಕು.
ರಾಜ್ಯದ ಜನರಿಗೆ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹಾಗೂ ನೆಲ-ಜಲ, ನಾಡು-ನುಡಿ ರಕ್ಷಣೆಗಾಗಿ ಹಾಗೂ ನೀರಾವರಿ ಯೋಜನೆಗಳು ಹಾಗೂ ಸಾಲ ಮನ್ನಾಕ್ಕೆ
ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಪ್ಯಾಂಟ್ ಜಿಪ್ ಹಾಕದೆ ಫೋಟೋಶೂಟ್ ಮಾಡಿಸಿದ್ದು, ಈಗ ಈ ಫೋಟೋವನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ.ಇತ್ತೀಚೆಗೆ ರಕುಲ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ರಕುಲ್ ಜೀನ್ಸ್ ಹಾಗೂ ಕ್ರಾಪ್ ಟಾಪ್ ಧರಿಸಿದ್ದಾರೆ. ಆದರೆ ರಕುಲ್ ತಾವು ಧರಿಸಿದ್ದ ಜೀನ್ಸ್ ಪ್ಯಾಂಟಿನ ಬಟನ್ ಹಾಗೂ ಜಿಪ್ ಧರಿಸದೆ ಹಾಗೆಯೇ ಕುಳಿತು ಫೋಟೋಶೂಟ್ ಮಾಡಿಸಿದ್ದಾರೆ. ರಕುಲ್ ಜೀನ್ಸ್ ಪ್ಯಾಂಟ್ನ ಬಟನ್ ಹಾಗೂ ಜಿಪ್ ಧರಿಸದೆ ಮಾಡಿದ ಫೋಟೋಶೂಟ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ…
ಬೆಳ್ಳಂಬೆಳಗ್ಗೆ ಮೆಡಿಸಿನ್ ತಯಾರಿಕಾ ಘಟಕದ ರಿಯಾಕ್ಟರ್ ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ತುಮಕೂರಿನ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿದ್ದ ಬೇಳೂರು ಬಾಯರ್ ಮೆಡಿಸಿನ್ ತಯಾರಿಕಾ ಘಟಕದ ಬಾಯ್ಲರ್ ನ ರಿಯಾಕ್ಟರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ 8:30ರ ಸುಮಾರಿಗೆ ಸೋರಿಕೆಯಾಗಿ ಸ್ಫೋಟಗೊಂಡಿದೆ. ಬೆಳ್ಳಂಬೆಳಗ್ಗೆ ಗ್ರಾಮದ ಮೆಡಿಸಿನ್ ಫ್ಯಾಕ್ಟರಿಯ ಬಾಯ್ಲರ್ನ ತಾಪಮಾನದಲ್ಲಿ ಏರುಪೇರಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಫ್ಯಾಕ್ಟರಿಯ ಛಾವಣಿ ಕಿತ್ತು ಹೋಗಿದ್ದು, ಅವಶೇಷಗಳು ಗ್ರಾಮದ ಸುತ್ತಮುತ್ತಲ ಮನೆಗಳ…
ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚೆಗಷ್ಟೇ ಗಂಡುಮಗುವಿಗೆ ಜನ್ಮವಿತ್ತಿದ್ದು, ಈಗ ತಮ್ಮ ಪುತ್ರನೊಂದಿಗೆ ಆಸ್ಪತ್ರೆಯಲ್ಲಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗಾಗಲೇ ತಮ್ಮ ಪುತ್ರನಿಗೆ ಸಾನಿಯಾ ಮಿರ್ಜಾ ಮತ್ತು ಪತಿ ಶೋಯೆಬ್ ಮಲಿಕ್ ಇಜ್ಹಾನ್ ಮಿರ್ಜಾ ಮಲಿಕ್ ಎಂದು ನಾಮಕರಣ ಮಾಡಿದ್ದಾರೆ.ಇಝಾನ್ ಎಂದರೆ ಅರೇಬಿಕ್ ಭಾಷೆಯಲ್ಲಿ ದೇವರು, ಗಾಡ್ ಗಿಫ್ಟ್ ಅರ್ಥ ಇದೆ. ಈಗ ಸಾನಿಯಾ ಮಿರ್ಜಾ ತನ್ನ ಮಗುವಿನೊಂದಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗು…
ಮೌಢ್ಯಾಚರಣೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂಬ ಸರ್ಕಾರದ ಪ್ರಯತ್ನ ವಿಫಲವಾಯಿತು. ಆದರೆ ಕೋಟೆನಾಡಿನಲ್ಲಿರುವ ಐತಿಹಾಸಿಕ ಹಿನ್ನೆಲೆಯ ಮುರುಘಾ ಮಠ ಮಾತ್ರ ಮೌಢ್ಯ ನಿಷೇಧದ ವಿಚಾರದಲ್ಲಿ ತನ್ನ ಗುರಿಯನ್ನು ಮೊಟಕುಗೊಳಿಸದೇ ಆಷಾಢದಲ್ಲೂ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಮೌಢ್ಯಾಚರಣೆ ವಿರುದ್ಧ ಸಮರ ಸಾರಿದೆ. ಮುರುಘಾ ಮಠದ ಆಶ್ರಯದಲ್ಲಿ ಅಲ್ಲಮಪ್ರಭು ಭವನದಲ್ಲಿ ಆಯೋಜಿಸಿದ್ದ 29ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿದೆ. ಆಷಾಢ ಶುಕ್ರವಾರವಾದರೂ ಸಹ ಮುರುಘಾಮಠ ನುಡಿದಂತೆ ನಡೆಯುತ್ತಿದೆ. ಮೌಢ್ಯಾಚರಣೆ ನಿಷೇಧಕ್ಕಾಗಿ ಟೊಂಕಕಟ್ಟಿ ನಿಂತಿರುವ ಡಾ. ಶಿವಮೂರ್ತಿ ಮುರುಘಾ ಶರಣರು…