ಆರೋಗ್ಯ

ನೆಲ್ಲಿಕಾಯಿಯಲ್ಲಿರುವ ಔಷದಿ ಗುಣಗಳ ಬಗ್ಗೆ ..! ತಿಳಿಯಲು ಈ ಲೇಖನ ಓದಿ…

804

ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ನಿಮ್ಮ ಬಾಯಲ್ಲಿ ನೀರೂರಲು ಆರಂಭವಾಗದಿದ್ದರೆ ನಿಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ. ಉಪ್ಪು ಖಾರ ಮಿಶ್ರಣವನ್ನು ಹಚ್ಚಿ ಚುರಕ್ ಅಂತ ಕಚ್ಚಿದಾಗ ಲಾವಾರಸದ ಬುಗ್ಗೆಯುಕ್ಕಿಸುವ ಮತ್ತು ಹಲ್ಲನ್ನು ಚುಳ್ ಎನ್ನಿಸುವ ನಾಡಿನ ನೆಲ್ಲಿಕಾಯಿ ಒಂದು ಬಗೆಯದಾದರೆ.

ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಒಗರು ಒಗರು ಬೆಟ್ಟದ ನೆಲ್ಲಿಕಾಯಿ ಮಹಿಮೆ ಹೇಳಬೇಕೆಂದರೆ ಒಂದು ಥೀಸಸ್ ಬರೆಯಬೇಕಾಗುತ್ತದೆ. ಶತಮಾನಗಳಿಂದ ಬಳಸಿಕೊಂಡು ಬರಲಾಗುತ್ತಿರುವ, ಆಯುರ್ವೇದದಲ್ಲಿ ಪ್ರಧಾನ ಗಿಡ ಮೂಲಿಕೆಯಾಗಿರುವ ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲ ಎಂದು ಕರೆಯಲ್ಪಡುವ ರಾಮ ಬಾಣವನ್ನು ಪ್ರಯೋಗಿಸಿ.

ನೆಲ್ಲಿಕಾಯಿ ಪೇಸ್ಟ್ :-

ನೆಲ್ಲಿಕಾಯಿಯನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿಕೊಂಡು ತಲೆ ಕೂದಲ ಬುಡಕ್ಕೆ ಲೇಪಿಸಿ. ಇದನ್ನು ಲೇಪಿಸಿ, 30 ನಿಮಿಷಗಳ ಕಾಲ ಬಿಡಿ, ನಂತರ ನೀರಿನಿಂದ ತೊಳೆಯಿರಿ. ಇದು ತಲೆ ಹೊಟ್ಟನ್ನು ನಿವಾರಿಸಿಕೊಳ್ಳಲು ಅದ್ಭುತವಾದ ಪರಿಹಾರವಾಗಿರುತ್ತದೆ.

 

ನೆಲ್ಲಿಕಾಯಿ-ಲಿಂಬೆಹಣ್ಣಿನ ಪ್ಯಾಕ್:-

ನೆಲ್ಲಿಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಂಡು ಅದನ್ನು ಚೆನ್ನಾಗಿ ಒಣಗಿಸಿ. ನಂತರ ಅದನ್ನು ಚೆನ್ನಾಗಿ ಪುಡಿ ಮಾಡಿಕೊಂಡು, ಕಂಟೇನರ್‌ನಲ್ಲಿ ಹಾಕಿಟ್ಟುಕೊಳ್ಳಿ.

ನಿಮಗೆ ಅಗತ್ಯವಾದಾಗ ಇದನ್ನು ನೀರು ಮತ್ತು ಲಿಂಬೆರಸದಲ್ಲಿ ಬೆರೆಸಿಕೊಂಡು ತೆಳುವಾದ ಪೇಸ್ಟ್ ಮಾಡಿಕೊಂಡು, ಕೂದಲಿನ ಬುಡಕ್ಕೆ ಲೇಪಿಸಿಕೊಳ್ಳಿ. ಇದನ್ನು 30 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ. ಹೆಚ್ಚಿನ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಲು, ಕೂದಲನ್ನು ತೊಳೆಯುವಾಗ ಸೀಗೆಕಾಯಿಯನ್ನು ಬಳಸಬಹುದು.

ನೆಲ್ಲಿಕಾಯಿ-ತುಳಸಿ ಪ್ಯಾಕ್:-

ನೆಲ್ಲಿಕಾಯಿಯನ್ನು ತುಳಸಿ ಮತ್ತು ನೀರಿನೊಂದಿಗೆ ಬೆರೆಸಿಕೊಂಡು ಮೃದುವಾದ ಪೇಸ್ಟ್ ಮಾಡಿ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಬಳಿ ನೆಲ್ಲಿಕಾಯಿ ಇಲ್ಲವಾದಲ್ಲಿ, ನೆಲ್ಲಿ ಕಾಯಿ ಪುಡಿಯನ್ನು ಸಹ ಬಳಸಬಹುದು. ಈ ಪ್ಯಾಕನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ 30 ನಿಮಿಷಗಳ ಕಾಲ ಬಿಡಿ, ನಂತರ ಇದನ್ನು ತೊಳೆಯಿರಿ.

 

ಈ ಬಗೆಯಲ್ಲಿ ನೆಲ್ಲಿಕಾಯಿ ರಸವನ್ನು ಲೇಪಿಸಿಕೊಳ್ಳುವುದರಿಂದ, ತಲೆಹೊಟ್ಟನ್ನು ನಿವಾರಿಸಿಕೊಳ್ಳಬಹುದು. ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಮಾಡಿ, ತ್ವರಿತಗತಿಯಲ್ಲಿ ಫಲಿತಾಂಶವನ್ನು ಪಡೆಯಬಹುದು. ಇದು ನಿಮಗೆ ತಲೆಹೊಟ್ಟನ್ನು ಮಾತ್ರ ನಿವಾರಿಸುವುದಿಲ್ಲ, ಜೊತೆಗೆ ನಿಮ್ಮ ಕೂದಲಿಗೆ ಕಂಡೀಶನರನ್ನು ಸಹ ನೀಡಿ, ಸ್ವಾಭಾವಿಕವಾಗಿ ಕೂದಲು ಹೊಳೆಯುವಂತೆ ಮಾಡುತ್ತದೆ.

1.ಬೆಟ್ಟದ ನಲ್ಲಿಕಾಯಿ ಜ್ಯೂಸ್ ತಯಾರಿಸಿ ಸ್ನಾನದ ನೀರಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಬೆವರು ವಾಸನೆಗೆ ಕಡಿವಾಣ.

2.ಎರಡು ಚಮಚ ಅಂಟುವಾಳದ ಪುಡಿಗೆ ಎರಡು ಚಮಚ ಬೆಟ್ಟದ ನೆಲ್ಲಿಕಾಯಿ ಪುಡಿ ಹಾಕಿ ತಲೆಕೂದಲಿಗೆ ಹಚ್ಚಿ ತೊಳೆದು ನೋಡಿ ಕೂದಲು ಕಾಂತಿಯುತವಾಗುವುದು.

3.ಹೇನಿನ ಕಾಟ ಹೆಚ್ಚಾಗಿದ್ದರೆ ಬೆಟ್ಟದ ನೆಲ್ಲಿಕಾಯಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದಕ್ಕೆ ನಿಂಬೆರಸ ಸೇರಿಸಿ ಕೂದಲ ಬುಡಕ್ಕೆ ಹಚ್ಚಿ ಒಂದೆರೆಡು ತಾಸು ಬಿಟ್ಟು ತೊಳೆಯಿರಿ.

4.ಕಪ್ಪು ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯನ್ನು ಒಣಗಿಸಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ ಇಟ್ಟುಕೊಳ್ಳಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ