ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀಲ್ಸನ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಅನ್ವಯ 3೦,೦೦೦ ನಗರದ ಗ್ರಾಹಕರು ಅಂದರೆ ಶೇ.67 ರಷ್ಟು ಭಾರತೀಯರು ಉಪಾಹಾರಕ್ಕೆ ಬದಲಾಗಿ ಈ ತಿಂಡಿಗಳನ್ನು ಸೇವಿಸುತ್ತಿದ್ದರು. ಶೇ.56ರಷ್ಟು ಮಂದಿ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲು ಈ ತಿಂಡಿಗಳನ್ನು ಸೇವಿಸುತ್ತಿದ್ದಾರೆ ಇದಕ್ಕೆ ತಜ್ಞರು ಏನು ಹೇಳುತ್ತಾರೆ ನೋಡಿ.
ಇಂಡಿಯನ್ ಡಯಾಟೆಟಿಕ್ ಅಸೋಸಿ ಯೇ?ನ್, ಬೆಂಗಳೂರು ಚಾಪ್ಟರ್ ಇಂದು ಜನಪ್ರಿಯವಾದ ಅಷ್ಟೇನು ಆರೋಗ್ಯಕರವಲ್ಲದ ತಿನಿಸಿ ಗಿಂತ ಆರೋಗ್ಯಕರ ಕುರುಕುಲು ತಿಂಡಿಗಳ ಆಯ್ಕೆ ಯ ವಿನೂತನ ಆರೋಗ್ಯ ಉಪಕ್ರಮ- ದಿ ಹೆಲ್ತ್ ಸ್ವಾಪ್‌ಗೆ ಚಾಲನೆ ನೀಡಿತು. ಸಮೀಕ್ಷೆಯ ಅನ್ವಯ 3೦,೦೦೦ ನಗರದ ಗ್ರಾಹಕರು ಅಂದರೆ ಶೇ.67 ರಷ್ಟು ಭಾರತೀಯರು ಉಪಾಹಾರಕ್ಕೆ ಬದಲಾಗಿ ಕುರುಕಲು ತಿಂಡಿಗಳನ್ನು ಸೇವಿಸುತ್ತಿದ್ದರು. ಶೇ.56ರಷ್ಟು ಮಂದಿ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲು ಕುರುಕಲು ತಿಂಡಿಗಳನ್ನು ಸೇವಿಸುತ್ತಿದ್ದರು.
ಪ್ರಸ್ತುತದ ಕುರುಕುಲು ತಿನಿಸಿನ ಪ್ರವೃತ್ತಿಯನ್ನು ಗಮನಿಸಿ ಖ್ಯಾತ ಪೌಷ್ಠಿಕ ತಜ್ಞರು, ಐಡಿಎ ಬೆಂಗಳೂರು ಚಾಪ್ಟರ್ ಅಧ್ಯಕ್ಷರು ಹಾಗೂ ಮೌಂಟ್ ಕಾರ್ಮಲ್ ಕಾಲೇಜಿನ ನ್ಯೂಟ್ರಿನ್ ಅಂಡ್ ಡಯಾಟೆಟಿಕ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಗೀತಾ ಸಂತೋಷ್, ಡಯೆಟ್,ನ್ಯೂಟ್ರಿನ್ ಅಂಡ್ ವೆಲ್‌ನೆಸ್ ಕನ್ಸಲ್ಟೆಂಟ್ ಶೀಲಾ ಕೃಪಸ್ವಾಮಿ, ವೆಲ್‌ನೆಸ್ ಉದ್ಯಮದ ಆರ‍್ಡಿ, ಟ್ರಾನ್ಸ್‌ವ್ಯೂ ಎಂಟರ‍್ಪ್ರೈಸ್‌ನ ಜನರಲ್ ಮ್ಯಾನೇಜರ್ ಅಂಜನಾ ನಾಯರ್, ಚೀಫ್ ಕ್ಲಿನಿಕಲ್ ಡಯೆಟಿಷಿಯನ್ ಮತ್ತು ಅಪೋಲೋ
ಆಸ್ಪತ್ರೆಗಳ ಮುಖ್ಯಸ್ಥೆ ಡಾ.ಪ್ರಿಯಾಂಕ ರೋಹಟಗಿ ಭಾರತೀಯರಿಗೆ ರುಚಿಕರ, ಪೋಷಕಾಂಶ ಶಕ್ತಿಯುಳ್ಳ ಆರೋಗ್ಯಕರ ಆಯ್ಕೆಗಳ ಮೂಲಕ ಅನಾರೋಗ್ಯಕರ ಆಯ್ಕೆಗಳನ್ನು ನಿವಾರಿಸುವ ಉಪಕ್ರಮಕ್ಕೆ ಚಾಲನೆ ನೀಡಿದರು.
ಈ ಉಪಕ್ರಮ ಕುರಿತು ಡಾ.ಗೀತಾ ಸಂತೋಷ, ‘ವೇಗದ ಜೀವನದ ಯುಗ ದಲ್ಲಿ ಆರೋಗ್ಯಕರ ಕುರುಕುಲು ನಿಮ್ಮ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕುರುಕುಲು ಸೇವನೆ ಸರಿಯಾದ ಪೋಷಕಾಂಶಗಳನ್ನು ಪಡೆ ಯಲು ಮತ್ತೊಂದು ಅವಕಾಶ ನೀಡುತ್ತದೆ. ಕುರುಕುಲು ತಿನಿಸನ್ನು ಸರಿ ಯಾದ ಪ್ರಮಾಣದ ಪೋಷಕಾಂಶಗಳ ಅದರಲ್ಲೂ
ಕಾರ್ಬೊ ಹೈಡ್ರೇಟ್‌ಗಳು, ಪ್ರೊಟೀನ್, ವಿಟಮಿನ್‌ಗಳು ಮತ್ತು ಮಿನರಲ್‌ಗಳೊಂದಿಗೆ ಸೇವಿಸುವುದು ಸೂಕ್ತ. ಕುರುಕುಲು ತಿಂಡಿಯ ಪೌಷ್ಠಿಕತೆಯ ಅಂಶವನ್ನು ಅದರಲ್ಲಿ ಪೌಷ್ಠಿಕತೆಯ ಅಂಶ ಕುರಿತು ಓದುವುದರಿಂದ ಪಡೆಯಬಹುದು. ಉತ್ತಮ ಆರೋಗ್ಯಕ್ಕೆ ಮುಖ್ಯವಾದುದು ವ್ಯಾಯಾಮದೊಂದಿಗೆಪೋಷಕಾಂಶಯುಕ್ತ ಸಮತೋಲನದ ಆಹಾರ’ಎಂದರು.
ಡಾ.ಪ್ರಿಯಾಂಕ ರೋಹಟಗಿ, ‘ಆರೋಗ್ಯಕರ ಕುರುಕುಲು ಸೇವನೆ ಊಟದ ಅಂತರದ ನಡುವೆ ಹಸಿವನ್ನು ನಿವಾರಿಸಲು ಮಹತ್ತರ ಕ್ರಮವಾಗಿದೆ. ಇದರೊಂದಿಗೆ ಅಂತಿಮವಾಗಿ
ಹಸಿವು ಮತ್ತು ಮುಂದಿನ ಊಟದಲ್ಲಿ ಹೆಚ್ಚು ತಿನ್ನುವುದು ತಪ್ಪುತ್ತದೆ. ಇದರಿಂದ ದೇಹತೂಕ ನಿರ್ವಹಿಸಲು ನೆರವಾಗುತ್ತದೆ. ಅನಾರೋಗ್ಯಕರ ಆಹಾರವನ್ನು ಉತ್ತಮ ಆಹಾರ ಹಾಗೂ ವ್ಯಾಯಾಮದೊಂದಿಗೆ ಬದಲಾಯಿಸಿದರೆ ನಿಮ್ಮ ಜೀವನಶೈಲಿ ಬದಲಾಯಿಸುವಲ್ಲಿ ಬಹಳ ಪರಿಣಾಮ ಬೀರುತ್ತದೆ’ ಎಂದರು.
ಗ್ರಾಹಕರಿಗೆ ಆರೋಗ್ಯಕರ ಆಯ್ಕೆಗಳನ್ನು ನೀಡುವಲ್ಲಿ ಆಹಾರ ಉತ್ಪಾದಕರ ಪಾತ್ರ ಕುರಿತು ಡಾ.ಅಂಜನಾ ನಾಯರ್, ‘ಇಂದು ನಾವು ಮೊಸರು, ಪ್ರೊಟೀನ್ ಬಾರ‍್ಗಳು
ಇತ್ಯಾದಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಆರೋಗ್ಯಕರ ಕುರುಕುಲು ವಿಭಾಗದಲ್ಲಿ ಹೆಚ್ಚು ಆವಿಷ್ಕಾರ ನಡೆಯಬೇಕಿದೆ’ ಎಂದರು.
ಈ ಕುರಿತು ಶೀಲಾ ಕೃಷ್ಣಸ್ವಾಮಿ ‘ಆರೋಗ್ಯಕರವಾದ ಆಹಾರ ಸೇವಿಸುವುದು ಕಷ್ಟವಲ್ಲ. ಇದು ಸರಿಯಾದ ಆಹಾರದ ಆಯ್ಕೆಗಳನ್ನು ಮಾಡುವುದು. ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಮಂದಿ ಆಯ್ಕೆಯ ಅವಕಾಶವಿಲ್ಲದೆ ಅನಾರೋಗ್ಯಕರ ಆಹಾರ ಆಯ್ಕೆ ಮಾಡಿಕೊಳ್ಳುವುದನ್ನು ಕಂಡಿದ್ದೇನೆ. ಮೊಳಕೆಕಾಳು, ತಾಜಾ ಹಣ್ಣುಗಳು ಮತ್ತಿತರೆ ಉತ್ತಮ ಆರೋಗ್ಯ ನೀಡುತ್ತವೆ’ ಎಂದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ಎಂಬುವುದು ನನ್ನ ಪರಿಸ್ಥತಿ. ನಾನು ಯಾರನ್ನು ದೋಷಿಸಿಲ್ಲ. ಕೊಡಗು ಸಂತ್ರಸ್ಥರಿಗೆ ಸರ್ಕಾರ ಚೆನ್ನಾಗಿರುವ ಮನೆ ನಿರ್ಮಿಸಿ ಕೊಡಲಿ ಎಂದು ಮನವಿ ಮಾಡಿದ್ದು ಎಂದು ಸಚಿವ ಸಾರಾ ಮಹೇಶ್ಗೆ ನಟಿ ಹರ್ಷಿಕಾ ಪೂಣಚ್ಚ ತಿರುಗೇಟು ನೀಡಿದ್ದಾರೆ.ವಿಡಿಯೋ ಮೂಲಕ ಶನಿವಾರ ತಾವು ಕೊಡಗು ಸಂಸ್ರಸ್ಥರ ಬಗ್ಗೆ ನೀಡಿದ ಹೇಳಿಕೆಗೆ ಹರ್ಷಿಕಾ ಪೂಣಚ್ಚ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋದಲ್ಲಿ ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ನನ್ನ…
ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇದೆ, ಭಾರತದಲ್ಲಿ ಕೊರೋನಾ ಈಗ ಸ್ಟೇಜ್ 2 ಹಂತದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಸ್ಟೇಜ್ 4 ಗೆ ಕೊರೋನಾ ಆಕ್ರಮಿಸಿದರೆ ಖಂಡಿತ ದುರಂತ ಸಂಭವಿಸಲಿದೆ ಎಂದು ಹಲವಾರು ಮಂದಿ ಅಭಿಪ್ರಾಯ ಪಟ್ಟಿದ್ದಾರೆ, ಚೀನಾ ಈಗಾಗಲೇ ಈ ಸಂಕಷ್ಟದಿಂದ ಪಾರಾಗಿದೆ ಮತ್ತು ಭಾರತ ಈಗಾಗಲೇ ಹಲವಾರು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ. ಇಷ್ಟೇ ಅಲ್ಲದೆ ಕೊರೋನಾ ಅಬ್ಬರಕ್ಕೆ ಈಗಾಗಲೇ ಆರ್ಥಿಕ ವಹಿವಾಟು ಕುಸಿದು ಬಿದ್ದಿದೆ, ಕೇವಲ ಏಳು ದಿನಗಳಲ್ಲಿ ಅಂತರದಲ್ಲಿ…
ಧಾರವಾಡ: ಸಾಮಾನ್ಯವಾಗಿ ನಲ್ಲಿಯನ್ನ ತಿರುವಿದರೆ ನೀರು ಬರುತ್ತದೆ. ಆದರೆ ಧಾರವಾಡದ ಒಂದು ಕಾಲೋನಿಯ ಜನರು ನಲ್ಲಿಯನ್ನ ತಿರುವಿದರೆ ಅಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿದೆ. ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಮಂಗಳವಾರ ನೀರು ಬರಬೇಕಿತ್ತು. ಅದನ್ನೆ ಕಾಯುತ್ತಾ ಕುಳಿತಿದ್ದ ಜನರು ನಲ್ಲಿ ತಿರುಗಿಸಿದ ತಕ್ಷಣವೇ ನೀರಿನ ಬದಲು ರಕ್ತದ ಬಣ್ಣವಿರುವ ನೀರು ಬಂದಿದೆ. ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನ ನೀಡಿದ್ದಾರೆ. ಅಸಲಿಗೆ ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ…
ಸ್ಯಾಂಡಲ್ ವುಡ್ ನ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದು ಮಗಳ ಹೆಸರಿನ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಇತ್ತು. ಬೇಬಿ ವೈಆರ್ ಎಂದೇ ಎಲ್ಲರು ಕರೆಯುತ್ತಿದ್ದರು. ಅಭಿಮಾನಿಗಳು ಸಹ ಸಾಕಷ್ಟು ಹೆಸರುಗಿಳಿಂದ್ದ ಯಶ್-ರಾಧಿಕಾ ಮುದ್ದು ಮಗಳನ್ನು ಕರೆಯುತ್ತಿದ್ದರು. ಆದ್ರೀಗ ಬೇಬಿ ವೈಆರ್ ಗೆ ನಾಮಕರಣ ಮಾಡಲಾಗಿದೆ. ನಿನ್ನೆ(ಜೂನ್ 23) ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಯಶ್ ಮುದ್ದು ಮಗಳ ನಾಮಕರಣವನ್ನು ಸರಳವಾಗಿ ಮಾಡಲಾಗಿದೆ. ಈ ಸಮಾರಂಭಕ್ಕೆ ಕುಟುಂಬದವರು, ಆಪ್ತರಿಗೆ ಮಾತ್ರ…
ಕೆಲವು ದಿನಗಳ ಹಿಂದಷ್ಟೇ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಕಂಪನಿ ಕಡಿಮೆ ಬೆಲೆ ಜಿಯೋ ಫ್ಯೂಚರ್ ಫೋನ್ ಬಿಡುಗಡೆ ಮಾಡಿದ್ದರು. ಈ ಜಿಯೋ ಫೋನ್ ಬೆಲೆ ಕೇವಲ 1500ರೂ ಗಳು ಇರಲಿದ್ದು, ಈ 1500ರೂ ಗಳನ್ನು ಡೆಪಾಸಿಟ್ ಮಾಡಿದ್ರೆ, ಮೂರೂ ವರ್ಷದ ನಂತರ ಈ ಹಣವನ್ನು ಹಿಂದಿಗಿಸುವುದಾಗಿ ಹೇಳಿಕೊಂಡಿತ್ತು.
ಬಿಟಾ-ಕೆರೋಟಿನ್, ವಿಟಾಮಿನ್ ಇ,ಸಿ ಮತ್ತು ಬಿ-6, ಪೊಟ್ಯಾಷಿಯಂ ಮತ್ತು ಕಬ್ಬಿಣವನ್ನು ಪುಷ್ಕಳವಾಗಿ ಹೊಂದಿರುವ ಗೆಣಸು ಬಟಾಟೆಗೆ ಹೋಲಿಸಿದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ನ್ನು ಹೊಂದಿದೆ. ಹೀಗಾಗಿ ಅದು ಮಧುಮೇಹಿಗಳ ಸ್ನೇಹಿತನಾಗಿದೆ. ನಾವು ಸೇವಿಸುವ ಆಹಾರದಲ್ಲಿನ ಕಾರ್ಬೊಹೈಡ್ರೇಟ್ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಬೀರುವ ಪ್ರಮಾಣವನ್ನು ತಿಳಿಯಲು ಗ್ಲೈಸೆಮಿಕ್ ಇಂಡೆಕ್ಸ್ ಮಾನದಂಡವಾಗಿದೆ.