ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ಧರ್ಮದಲ್ಲಿ ಶಿವನನ್ನು “ದೇವಾದಿದೇವ” ಮಹಾದೇವ ಎಂದು ಆರಾಧಿಸುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ. ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವಜ್ರ ವೈಢೂರ್ಯಗಳಿಂದ ಭೂಷಿತನಾಗ ಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾನೆ.
ಶಿವನ ತಾ೦ಡವ ನೃತ್ಯದಲ್ಲಡಗಿದೆ ಜಗತ್ತಿನ ಸೃಷ್ಟಿಯ ತತ್ವಗಳು. ಶಿವನ ಈ ಶಕ್ತಿ ಮತ್ತು ವೈಶಿಷ್ಟ್ಯಗಳನ್ನು ಕಂಡ ಭಕ್ತರು ಶಿವನಿಗೆ ಪ್ರತ್ಯೇಕವಾದ ಗುಡಿಗಳನ್ನು ಕಟ್ಟಿದ್ದಾರೆ.
ಶಿವನ ಪರಾಕ್ರಮ ಮತ್ತು ಲೀಲೆಗಳ ಬಗ್ಗೆ ಹಲವಾರು ಕಥೆಗಳಿದ್ದರೂ, ಶಿವನ ಎಂಟು ಶೃಂಗಾರ ಆಭರಣಗಳ ಬಗ್ಗೆ ಹೆಚ್ಚಿನವರಿಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ಇದು ಮಹತ್ವದ ರಹಸ್ಯಗಳನ್ನು ತನ್ನಲ್ಲಿ ಒಳಗೊಂಡಿದೆ.
ತಲೆಯಲ್ಲಿರುವ ಅರ್ಧ ಚಂದ್ರ ಮತ್ತು ಬಿಚ್ಚಿದ ಕೂದಲಿನಲ್ಲಿ ಗಂಗೆಯ ಹರಿವು ಅವರ ಡಮರು, ಸೃಷ್ಟಿಯ ನಾದವಾಗಿದೆ. ಆಧ್ಯಾತ್ಮಿಕ ಮಹತ್ವಗಳನ್ನು ಈ ಆಭರಣಗಳು ಒಳಗೊಂಡಿದ್ದು,
ಶಿವ ದೇವರ ಮೂರು ಆಭರಣಗಳು ಮೂರು ಶಕ್ತಿಗಳನ್ನು ಈ ಮೂರು ಆಭರಣಗಳು ಎತ್ತಿ ತೋರಿಸುತ್ತಿದ್ದು ಜ್ಞಾನ, ಬಯಕೆ ಮತ್ತು ಅನುಷ್ಟಾನ ಹೀಗೆ ಮೂರೂ ಶಕ್ತಿಗಳನ್ನು ಇದು ಪ್ರತಿನಿಧಿಸುತ್ತದೆ.
ಡಮರು ವಿಶೇಷತೆ ಡಮರು ಶಬ್ಧವನ್ನು ಪ್ರತಿನಿಧಿಸುತ್ತದೆ. ವೇದಗಳ ಶಬ್ಧವಾಗಿ ಇದನ್ನು ಪರಿಗಣಿಸಲಾಗಿದ್ದು, ಈ ಪವಿತ್ರ ಗ್ರಂಥಗಳಲ್ಲಿರುವ ಸಾರವು ದೇವರ ಮೂಲಕ ನಮ್ಮ ಜೀವನಕ್ಕೆ ಮಾರ್ಗದರ್ಶನ ಮಾಡುತ್ತದೆ.
ಕೊರಳಲ್ಲಿರುವ ಸರ್ಪ ದೇವರ ಕೊರಳಲ್ಲಿ ಹಾರವಾಗಿರುವ ಸರ್ಪವು ಮಾನವನ ಅಹಂಕಾರದ ಪ್ರತೀಕವಾಗಿದೆ.
ದೇವರ ಕೈಯಲ್ಲಿರುವ ಜಪಮಾಲೆ ದೇವರ ಕೈಯಲ್ಲಿರುವ ಜಪಮಾಲೆಯನ್ನು ರುದ್ರಾಕ್ಷಿ ಮಣಿಗಳಿಂದ ತಯಾರಿಸಲಾಗಿದೆ. ಇದು ಶುದ್ಧತೆಯ ಸಂಕೇತವಾಗಿದೆ. ಈ ಮಾಲೆಯು, ದೇವರ ಬಲಗೈಯಲ್ಲಿ ಇದ್ದು ಏಕಾಗ್ರತೆಯ ಸಂಕೇತವಾಗಿದೆ.
ದೇವರ ಶಿರಭಾಗ ದೇವರ ಶಿರವು ಪವಿತ್ರ ನದಿ ಗಂಗೆಯನ್ನು ಪ್ರತಿನಿಧಿಸಿದೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಾದುಹೋಗುವ ಬುದ್ಧಿವಂತಿಕೆ ಧರ್ಮಗ್ರಂಥಗಳ ಬೋಧನೆಯ ಹರಿವನ್ನು ಇದು ಸಂಕೇತಿಸಿದೆ.
ಶಿವನ ತಲೆಯನ್ನು ಅಲಂಕರಿಸುವ ಚಂದ್ರ ಶಿವನು ಸಮಯಕ್ಕೆ ಅಧಿಪತಿಯಾಗಿದ್ದು ಆತ ಸಮಯಾತೀತ (ಅಂದರೆ ಸಮಯದ ಕಟ್ಟುಪಾಡಿಗೆ ಬಗ್ಗದವರು) ಎಂಬುದಾಗಿ ಚಂದ್ರನು ಸಂಕೇತಿಸಿದ್ದಾನೆ.
ಹಣೆಯಲ್ಲಿರುವ ತಿಲಕ ಶಿವನ ಹಣೆಯಲ್ಲಿರುವ ಗೋಲಾಕಾರದ ತಿಲಕವು ಜ್ಞಾನದ ಮೂರನೇ ಕಣ್ಣು ಎಂದೇ ಪ್ರಸಿದ್ಧವಾಗಿದೆ. ಮೂರನೇ ಕಣ್ಣು ತೆರೆದಲ್ಲಿ, ಎದುರಿಗಿರುವವರನ್ನೇ ಇದು ಸುಟ್ಟು ಬೂದಿ ಮಾಡುತ್ತದೆ ಎಂದೇ ಹೇಳಲಾಗಿದೆ.ದುಷ್ಟ ನಾಶ ಮತ್ತು ಅಜ್ಞಾನದ ಅಂತ್ಯವನ್ನು ಇದು ಸಂಕೇತಿಸುತ್ತದೆ.
ಹುಲಿಯ ಚರ್ಮದ ಮೇಲೆ ಕುಳಿತಿರುವುದು ಶಿವನು ಸ್ವತಃ ಹುಲಿಯ ಚರ್ಮವನ್ನು ಧರಿಸಿದ್ದು ಅದೇ ಪ್ರಾಣಿಯ ಚರ್ಮದ ಮೇಲೆ ಕುಳಿತಿದ್ದಾರೆ ಇದು ಅವರು ಧೈರ್ಯಶಾಲಿ ಎಂಬುದನ್ನು ಸಂಕೇತಿಸುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಪಲ್ ಪ್ರತಿದಿನ ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ. ಹೌದು ಆಪಲ್ ಅಂತಹ ಗುಣಗಳನ್ನ ಹೊಂದಿದೆ. ಆದರೆ ಆಪಲ್ ಬೀಜ ಸಿಪ್ಪೆ ತಿನ್ನುವುದು ಸರಿಯೇ…? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿರುತ್ತದೆ.ಬೀಜವನ್ನ ನಾವು ಆಪಲ್ ತಿನ್ನುವಾಗ ಗೊತ್ತಾಗದೆ ಒಮ್ಮೊಮ್ಮೆ ತಿಂದುಬಿಡುತ್ತೇವೆ, ಸಿಪ್ಪೆಯನ್ನು ಸಹ ತಿನ್ನುತ್ತೆವೆ, ಸಿಪ್ಪೆಯೊಂದಿಗೆ ಆಪಲ್ ಸೇವಿಸುವುದು ಸಾಮಾನ್ಯ ಆದರೆ ಇನ್ನು ಮುಂದೆ ಇಂತಹ ತಪ್ಪನ್ನ ಅಪ್ಪಿ ತಪ್ಪಿಯೂ ಮಾಡಬೇಡಿ.
ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯ ಮೂರನೇ ವಾರ ದುನಿಯಾ ರಶ್ಮಿ ಎಲಿಮಿನೇಟ್ ಆಗಿದ್ದಾರೆ. ಬಿಗ್ ಮನೆಯಿಂದ ಹೊರಬಂದ ಬಳಿಕ ಸಂದರ್ಶನ ಒಂದರಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ಜರ್ನಿ ಬಗ್ಗೆ ತಮ್ಮ ಅನುಭವಗಳನ್ನ ಹೇಳಿದ ರಶ್ಮಿ, ಒಬ್ಬ ಸೂಪರ್ ಸ್ಟಾರ್ ಜೊತೆ ನಟಿಸಬೇಕು ಎಂಬ ಆಸೆಯನ್ನು ಅಂಚಿಕೊಂಡಿದ್ದಾರೆ. ರಶ್ಮಿ ಅವರನ್ನು ನಿಮಗೆ ಕನ್ನಡದ ಯಾವ ನಟ ಇಷ್ಟ ಎಂದು ಸಂದರ್ಶನದಲ್ಲಿ ಕೇಳಿದರು. ಇದಕ್ಕೆ ಉತ್ತರವಾಗಿ ಇಬ್ಬರು ನಟರ ಹೆಸರನ್ನು ಹೇಳಿದರು, ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ದುನಿಯಾ ರಶ್ಮಿ…
ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಎಂತಹ ಒಳ್ಳೆಯ ಉದಾಹರಣೆಯಾಗಿರುವ ಈ ಯುವತಿ ಕುರಿ ಕಾಯುವವಳು. ವಲಸೆಗಾರರಾಗಿ ಬಂದು, ಬಡತನದಲ್ಲಿ ಬೆಳೆದು, ಆ ದೇಶ – ಭಾಷೆಯನ್ನು ಕಲಿತು, ಸಮಾಜವನ್ನು ತನ್ನದಾಗಿಸಿಕೊಂಡು ಅದೇ ದೇಶದಲ್ಲಿ ಮಂತ್ರಿಯಾಗುವುದು ಸಹಜ ಸಾಧನೆಯಲ್ಲ. ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇಂತಹ ಒಳ್ಳೆಯ ಉದಾಹರಣೆ. ಇವಳ ಹೆಸರು ನಜತ್ ವಲ್ಲದ್-ಬೆಲ್ಕಾಸೆಮ್. ಇಂದು ಇವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ. ಶಿಕ್ಷಣ ಇಲಾಖೆಗೆ ಮಂತ್ರಿಯಾಗಿ ಬಂದ ಮೊದಲ ಮಹಿಳೆಯಂತೆ. ನಜತ್ ವಲ್ಲದ್-ಬೆಲ್ಕಾಸೆಮ್(4…
ಸಚಿವರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲೇ ಮಹಿಳಾ ಸಹೋದ್ಯೋಗಿಯೊಬ್ಬರ ಸೊಂಟಕ್ಕೆ ಕೈ ಹಾಕಿ ಅನುಚಿತವಾಗಿ ವರ್ತಿಸಿರುವ ಶಾಕಿಂಗ್ ಘಟನೆ ಅಗರ್ತಾಲದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತ್ರಿಪುರಾದ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಸಚಿವ ಮನೋಜ್ ಕಾಂತಿ ದೇಬ್ ಇಂತಹ ಗುರುತರ ಆರೋಪಕ್ಕೆ ಒಳಗಾಗಿದ್ದು, ಶನಿವಾರದಂದು ಅಗರ್ತಾಲದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರ ವೇಳೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ನೆರವೇರಿಸಿದ ಸಂದರ್ಭದಲ್ಲಿ ಸಚಿವ ಮನೋಜ್ ಕಾಂತಿ…
ಆನ್ಲೈನಿನಲ್ಲಿ ಮಾರಕಟ್ಟಗೆ ಬಂದ ಶಿಯೋಮಿ ರೆಡ್ಮಿ ನೋಟ್ 4 ಸ್ಮಾರ್ಟ್ಪೋನು ಈ ಹಿಂದಿನ ನೋಟ್ 3 ಮಾರಾಟದ ದಾಖಲೆಯನ್ನು ಅನಾಯಸವಾಗಿ ಆಳಿಸಿ ಹಾಕಿತ್ತು. ಮೂರು ವಿಧದಲ್ಲಿ ಈ ಪೋನು ಲಭ್ಯವಿದ್ದು, 4 GB RAM ಮತ್ತು 64 GB ROM ಮಾದರಿಗಳಲ್ಲಿ ಮಾರಾಟವಾಗುತ್ತಿದೆ….
ವಿಶ್ವ ಆಹಾರ ದಿನದ ಹಿನ್ನೆಲೆ ಆಹಾರ ವಿಷವಾಗಲು ಕಾರಣಗಳೇನು, ಅದಕ್ಕೆ ಚಿಕಿತ್ಸೆ ಹಾಗೂ ಪರಹಾರವೇನು ಎಂದು ಮುಂದೆ ಲೇಖನದಲ್ಲಿ ತಿಳಿಯೋಣ. ಆಹಾರಕ್ಕಾಗಿಯೇ ಮನುಷ್ಯ ದಿನವಿಡೀ ನಾನಾ ಸರ್ಕಸ್ ಮಾಡಿಕೊಂಡು ಜೀವನ ಸಾಗಿಸುತ್ತಾನೆ. ಆದರೆ ಮನುಷ್ಯ ಕೆಲವೊಮ್ಮೆ ತಿನ್ನುವಂತಹ ಆಹಾರವು ವಿಷವಾಗುವುದು ಇದೆ. ಇಂತಹ ಸಮಸ್ಯೆಯು ಹೆಚ್ಚಿನವರನ್ನು ಕಾಡುವುದು ಇದೆ. ಆಹಾರವು ವಿಷವಾಗುವ ಪರಿಣಾಮ ಹಲವಾರು ರೀತಿಯ ಅಡ್ಡಪರಿಣಾಮಗಳು ದೇಹದ ಮೇಲೆ ಆಗಬಹುದು. ಆಹಾರ ವಿಷವಾಗುವುದು ಹೇಗೆ, ಅದಕ್ಕೆ ಪರಿಹಾರವೇನು ಎಂದು ನಾವು ಈ ಲೇಖನದ ಮೂಲಕ ತಿಳಿಯುವ….