ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಂಡ ಹಾಕುವ ಮುನ್ನ ಉಪ್ಪಿ ಮಾತು ಕೇಳಿ
ನಾವು ಬೈಕ್ ಓಡಿಸ್ತಾ ಇರ್ತೇವೆ. ಹೆಲ್ಮೆಟ್ ಹಾಕಿರಲ್ಲ. ಪೊಲೀಸರು ದಂಡ ಹಾಕ್ತಾರೆ. ಓವರ್ ಸ್ಪೀಡ್ ಡ್ರೈವಿಂಗ್ ಮಾಡ್ತಿರ್ತೀವಿ. ಪೊಲೀಸರು ದಂಡ ಹಾಕ್ತಾರೆ. ಸೀಟ್ ಬೆಲ್ಟ್ ಹಾಕಿರಲ್ಲ. ಸಿಗ್ನಲ್ ಜಂಪ್ ಮಾಡ್ತೀವಿ. ದಂಡ ಕಟ್ತೀವಿ. ಆದರೆ.. ದಂಡ ಕಟ್ಟುವ ಮುನ್ನ ನಾವು ಸರ್ಕಾರಕ್ಕೆ ಕೇಳಬೇಕಾದ ಪ್ರಶ್ನೆಗಳೂ ಇವೆ ತಾನೆ. ಅಂತಹ ಕೆಲವು ಪ್ರಶ್ನೆಗಳನ್ನು ಉಪೇಂದ್ರ ಕೇಳಿದ್ದಾರೆ.
ಕಾನೂನು ಮೀರಿ ವಾಹನ ಚಲಾಯಿಸಿದ್ದು ನಮ್ಮ ತಪ್ಪು. ದಂಡ ಕಟ್ಟುತ್ತೇವೆ. ಅದು ನಮ್ಮ ಜವಾಬ್ದಾರಿ. ಆದರೆ, ನಾವು ಹೆಲ್ಮೆಟ್ ಹಾಕುವುದು, ಸೀಟ್ ಬೆಲ್ಟ್ ಹಾಕುವುದು ನಮ್ಮ ಸುರಕ್ಷತೆಗಾಗಿ ತಾನೇ. ನಿಮಗೆ ನಿಜವಾಗಿಯೂ ನಮ್ಮ ಸುರಕ್ಷತೆ ಬಗ್ಗೆ ಕಾಳಜಿಯಿದ್ದರೆ, ದಯವಿಟ್ಟು ರಸ್ತೆಗಳನ್ನು ಕಾಲಕಾಲಕ್ಕೆ ರಿಪೇರಿ ಮಾಡಿಸಿ. ಆನಂತರ ನಿಮ್ಮ ಅಧಿಕಾರಿಗಳನ್ನು ರಸ್ತೆಗೆ ಕಳಿಸಿ, ದಂಡ ವಸೂಲಿ ಮಾಡಲು ಹೇಳಿ.
ಅದ್ಯಾವುದನ್ನೂ ಮಾಡದೆ ನೀವು ದಂಡ ಹಾಕಲು ಬರುತ್ತೀರಿ. ನಾನು ದಂಡ ಕಟ್ಟಬೇಕೆಂದರೆ, ದಂಡ ಕಟ್ಟುವ ತಪ್ಪು ನಾನು ಮಾಡಿದ್ದೇನೆ ಎಂದಾದರೆ, ನೀವು ನಮಗೆ ಪರಿಹಾರ ಕೊಡಬೇಕಾದ ತಪ್ಪು ಮಾಡಿದ್ದೀರಿ.
ಉಪೇಂದ್ರ ಹೇಳೋದರಲ್ಲಿ ತಪ್ಪೇನಿಲ್ಲ. ಪೊಲೀಸರು ದಂಡ ಹಾಕುವುದು, ನಮ್ಮ ಸುರಕ್ಷತೆಯ ಬಗ್ಗೆ ನಾವು ಜಾಗ್ರತೆ ವಹಿಸಬೇಕು ಎಂದೇ ಹೊರತು, ಶಿಕ್ಷಿಸಬೇಕು ಎಂದಲ್ಲ. ಅದು ಕಾನೂನಿನಲ್ಲಿರುವ ಭಾಷೆ. ಆದರೆ, ನಮ್ಮ ಸುರಕ್ಷತೆಗೆ ವಹಿಸಬೇಕಾದ ಕಾಳಜಿಯನ್ನೇ ವಹಿಸದೆ ದಂಡ ಕಟ್ಟಿಸಿಕೊಳ್ಳುವುದು ಯಾವ ನ್ಯಾಯ..? ನಾವೆಲ್ಲರೂ ಕೇಳಬೇಕಾದ ಪ್ರಶ್ನೆಯನ್ನ ಉಪೇಂದ್ರ ಕೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಿಯೋ ಫೋನ್ ನಿರೀಕ್ಷೆಯಲ್ಲಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಮುಂಗಡ ಬುಕ್ಕಿಂಗ್ ಮಾಡಿದ್ದ ಗ್ರಾಹಕರ ಕೈಗೆ ಈ ವಾರಾಂತ್ಯದಲ್ಲಿ ಜಿಯೋ 4ಜಿ ಫೀಚರ್ ಫೋನ್ ಸಿಗಲಿದೆ. ಮೂಲಗಳ ಪ್ರಕಾರ ಅಕ್ಟೋಬರ್ 1ರಂದು ಜಿಯೋ ತನ್ನ ಫೀಚರ್ ಫೋನ್ ಡಿಲೆವರಿ ಶುರು ಮಾಡಲಿದೆ. ಮೊದಲ ಬಾರಿ ಪ್ರಿ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ಕಿಂಗ್ ಆಗಿತ್ತು.
ನಮ್ಮ ಸುರಕ್ಷತೆಗೋಸ್ಕರ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸಿ ನಾವು ವಾಹನ ಚಲಾಯಿಸಬೇಕಾಗುತ್ತದೆ. ಆದರೆ ಕೆಲವೊಂದು ಸಮಯಗಳಲ್ಲಿ ಮಾತ್ರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸದೇ ಬೇರೆ ವಿದಿಯೇ ಇಲ್ಲ. ಇದೇ ರೀತಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿಧ್ಯಾರ್ಥಿಯೊಬ್ಬಳು ಪರೀಕ್ಷೆಗೆ ತಡವಾಗುತ್ತದೆ ಎಂಬ ಕಾರಣದಿಂದ ರಸ್ತೆ ನಿಯಮ ಉಲ್ಲಂಘಿಸಿ ಗಾಡಿ ಚಲಾಯಿಸಿದ ಕಾರಣ ಪೊಲೀಸರು ತಡೆದಿದ್ದಾರೆ. ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಪರೀಕ್ಷೆಗೆ ವಿಳಂಬವಾಗುತ್ತದೆ ಎಂಬ ಕಾರಣದಿಂದ ಓನ್ ವೇನಲ್ಲಿ ಬೈಕ್ ಚಲಾಯಿಸಿಕೊಂಡು ಹೋಗಿದ್ದಾಳೆ. ಇದನ್ನು ಗಮನಿಸಿದ ರಸ್ತೆ ಸಂಚಾರ…
ಊಟದ ನಂತರ ತಾಂಬೂಲ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಏನು ಲಾಭ: ವೀಳ್ಯದೆಲೆ ಅಥವಾ ವೀಳ್ಯೆಲೆ ಅನೇಕ ಔಷಧಿ ಗುಣಗಳಿಂದ ಕೂಡಿದ್ದು, ಆಯುರ್ವೇದ ವೈದ್ಯರು ಇದನ್ನು ಅಮೃತ ಸಮಾನವಾದ ವನಸ್ಪತಿ ಎಂದು ಗುರುತಿಸಿದ್ದಾರೆ.
ಮನುಷ್ಯತ್ವ ಮರೆತು ಮಂಗವನ್ನು ಹಗ್ಗದಿಂದ ಮರಕ್ಕೆ ಕಟ್ಟಿ ಬಡಿಗೆಯಿಂದ ಹೊಡೆದು ಅಮಾನುಷವಾಗಿ ಹಲ್ಲೆ ಮಾಡಿ ಕೊಂದಿದ್ದ ಆರೋಪಿ ಪವನ್ ಬಂಗಾರ್ ಗೆ ಕೋರ್ಟ್ ಎರಡು ಬಾರಿ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪಾನ್ ಕಾರ್ಡ್ಗೆ ಆಧಾರ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, 30 ಸೆಪ್ಟೆಂಬರ್ 2019 ಇದಕ್ಕೆ ಕೊನೆಯ ದಿನವಾಗಿದೆ. ಆಧಾರ್ ಜೊತೆ ಪಾನ್ ಕಾರ್ಡ್ ಅನ್ನು ನೀವೇ ಲಿಂಕ್ ಮಾಡಿಕೊಳ್ಳಲು ಇಲ್ಲಿದೆ ಎರಡು ಸುಲಭದ ಉಪಾಯ. ಮೊದಲು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ, ‘ಲಿಂಕಿಂಗ್ ಆಧಾರ್’ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ವಿಂಡೋ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಜನ್ಮ ದಿನಾಂಕ ಇತ್ಯಾದಿ ಮಾಹಿತಿ…
ರಸ್ತೆ ಅಪಘಾತದ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಸ್ತೆಯಲ್ಲಿ ಸಂಚಾರ ಮಾಡುವಾಗ ಸುರಕ್ಷಿತವಾಗಿ ಇರಲು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕಳೆದ ವರ್ಷ ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬಕ್ಕೆ ದೂರದ ಊರಿನಿಂದ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ರಸ್ತೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಅಭಿಮಾನಿಯೊಬ್ಬರು ನಿಧನ ಹೊಂದಿದರು. ಈ ದುರ್ಘಟನೆಯನ್ನು ದರ್ಶನ್ ಇನ್ನು ಮರೆತಿಲ್ಲ. ಈ ವರ್ಷ ವಿನೀಶ್ ಹುಟ್ಟುಹಬ್ಬ ಹತ್ತಿರದಲ್ಲಿ ಇದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದಾರೆ. ”ಅಭಿಮಾನಿಗಳಲ್ಲಿ ಕಳಕಳಿಯ ಮನವಿ….