ರಾಜಕೀಯ

ಈ ಸಮೀಕ್ಷೆಯ ಪ್ರಕಾರ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಯಾರು ಗೊತ್ತಾ? ಯಾರಿಗೆ ಎಷ್ಟು ಮತ?ತಿಳಿಯಲು ಈ ಲೇಖನ ಓದಿ…

1031

ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆ 2018 ಕುರಿತಂತೆ ಸಿ ಫೋರ್ ಸಂಸ್ಥೆಯು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ, ಆಗಸ್ಟ್ 20 ರಂದು ಪ್ರಕಟಿಸಿದೆ.

ಸಮೀಕ್ಷೆ ಏನು ಹೇಳುತ್ತೆ…


ಸಮೀಕ್ಷೆ ವರದಿಗಳ ಪ್ರಕಾರ ರಾಜ್ಯದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಅಧಿಕಾರ ಸ್ಥಾಪಿಸಲಿದೆ. ಭರ್ಜರಿ ಬಹುಮತ ಪಡೆಯಲಿದ್ದು, ಸ್ವಂತ ಬಲದಿಂದ ಪೀಠಕ್ಕೇರಲಿದೆ.

ಇದರ ಜತೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಯೋಜನೆಗಳು, ನೂನ್ಯತೆಗಳ ಬಗ್ಗೆ ಕೂಡಾ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ವರದಿಗಳ ಪ್ರಕಾರ  2018ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 150 ಸ್ಥಾನ ದೊರೆಯಲಿದೆ.

ಅಲ್ಲದೆ, ಇತ್ತೀಚಿನ ಸರ್ಕಾರಗಳ ಪೈಕಿ ಕರ್ನಾಟಕದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಯಾರು? ಮುಂದೆ ಯಾರನ್ನು ಸಿಎಂ ಆಗಿ ಕಾಣಲು ಬಯಸಿದ್ದೀರಿ? ಕಾಂಗ್ರೆಸ್ ಸರ್ಕಾರ ತೃಪ್ತಿ ತಂದಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಾಗಿದೆ.

ಸಿ ಫೋರ್ ನಡೆಸಿದ ಸಮೀಕ್ಷೆ ಎಲ್ಲ ಜಿಲ್ಲೆಗಳಿಂದ ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ. ರಾಜ್ಯಾದ್ಯಂತ 340 ನಗರ ಹಾಗೂ 550 ಗ್ರಾಮೀಣ ಪ್ರದೇಶಗಳನ್ನು ಹಾಗೂ ವಿವಿಧ ಧರ್ಮ, ಜಾತಿಯ ಜನರನ್ನು ಒಳಗೊಂಡು ಈ ಸಮೀಕ್ಷೆ ನಡೆಸಲಾಗಿದೆ ಎಂದು ಸಿ ಫೋರ್ ತಿಳಿಸಿದೆ.

2008 ಹಾಗೂ 2013ರ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಸಿ ಫೋರ್ ನಡೆಸಿದ ಸಮೀಕ್ಷೆ 99 ಶೇ. ನಿಜವಾಗಿತ್ತು.

ಯಾರನ್ನು ಸಿಎಂ ಆಗಬೇಕು?ಯಾರಿಗೆ ಎಷ್ಟು ಮತ?

ಸಿದ್ದರಾಮಯ್ಯನವರು:-     ಇವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ     ಆಗಬೇಕೆಂದು ಶೇ 46ರಷ್ಟು ಮಂದಿ ಮತ ಹಾಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ:-  ಶೇ 17 ರಷ್ಟು ಮತದಾರರು ಮಾತ್ರ ಮತ ಹಾಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ :-   ಶೇ 27 ಮತದಾರರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಮತ ಹಾಕಿದ್ದಾರೆ.

ಶೇ 4ರಷ್ಟು ಮಂದಿ ಮಾತ್ರ  ಇವರಲ್ಲದೆ ಬೇರೆಯವರು ಸಿಎಂ ಆಗಲಿ ಎಂದಿದ್ದಾರೆ.

ಇತ್ತೀಚಿನ ಮುಖ್ಯಮಂತ್ರಿಗಳಲ್ಲಿ ಯಾರು ಹೆಚ್ಚು ಜನಪ್ರಿಯ ಮುಖ್ಯಮಂತ್ರಿ :-


ಸಿದ್ದರಾಮಯ್ಯ: ಶೇ 46ರಷ್ಟು ಮತ ಸಿಕ್ಕಿದೆ.

ಬಿಎಸ್ ಯಡಿಯೂರಪ್ಪ: ಶೇ 27

ಎಚ್. ಡಿ ಕುಮಾರಸ್ವಾಮಿ : ಶೇ 18

ನಮಗೆ ಗೊತ್ತಿಲ್ಲ : ಶೇ 6

ಇತರೆ : ಶೇ 3 ರಷ್ಟು ಮತಗಳು ಬಂದಿವೆ.

ಯಾವ ಸರ್ಕಾರ ಚೆನ್ನಾಗಿ ಆಡಳಿತ ನಡೆಸಿತ್ತು:-

ಹಾಲಿ ಕಾಂಗ್ರೆಸ್ ಸರ್ಕಾರ: ಶೇ 44ರಷ್ಟು ಮತಗಳು

ಈ ಹಿಂದಿನ ಬಿಜೆಪಿ ಸರ್ಕಾರ : ಶೇ 28

ಕುಮಾರ ಸ್ವಾಮಿ  ಅವರ ಸರ್ಕಾರ : ಶೇ 18

ಗೊತ್ತಿಲ್ಲ/ ಏನನ್ನೂ ಹೇಳಲಾರೆ : ಶೇ 10

ಕಾಂಗ್ರೆಸ್ ಸರ್ಕಾರದ ಆಡಳಿತ ತೃಪ್ತಿದಾಯಕವಾಗಿದೆಯೇ ?

ಸಂಫೂರ್ಣ ತೃಪಿದಾಯಕ : ಶೇ 18

ಪರ್ವಾಗಿಲ್ಲ, ತಕ್ಕಮಟ್ಟಿಗೆ ತೃಪ್ತಿ: ಶೇ 53

ತೃಪ್ತಿದಾಯಕವಾಗಿಲ್ಲ: ಶೇ 29.
ಮೂಲ:

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ