ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಚಿತ್ರ ರಂಗದ ನಟ ಉಪೇಂದ್ರರವರ ರಾಜಕೀಯ ಸುದ್ದಿಗಳು ದಿನಕ್ಕೊಂದಂತೆ ತಿರುವು ಪಡೆದುಕೊಳ್ಳುತ್ತಿವೆ.ಈಗ ಬಂದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, ನಿಮಗೆಲ್ಲ ಗೊತ್ತಿರುವಂತೆ ಅವರು ಸ್ಥಾಪಸಲು ಹೊರಟಿರುವ ಪಕ್ಷದ ಹೆಸರು ಪ್ರಜಾಕೀಯ ಎಂದು. ಆದ್ರೆ ಮೂಲಗಳ ಪ್ರಕಾರ ಅವರ ಪಕ್ಷದ ಹೆಸರು ಪ್ರಜಾಕೀಯ ಅಲ್ಲ..!
ಹೌದು, ಚಿತ್ರನಟ ಉಪೇಂದ್ರ ಅವರು ಸ್ಥಾಪಿಸಲು ಉದ್ದೇಶಿಸಿರುವ ಹೊಸ ರಾಜಕೀಯ ಪಕ್ಷದ ಹೆಸರು ಪ್ರಜಾಕೀಯ ಅಲ್ಲ. ‘ ಉತ್ತಮ ಪ್ರಜಾ ಪಾರ್ಟಿ.‘ ಈ ಬಗ್ಗೆ ಉಪೇಂದ್ರ ಅವರು ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ ನಂತರ ತೀರ್ಮಾನ ಕೈಗೊಂಡಿದ್ದು, ಮುಂದಿನ ನೋಂದಣಿ ಮತ್ತಿತರ ತಾಂತ್ರಿಕ ಪ್ರಕ್ರಿಯೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಸದಸ್ಯತ್ವ ನೀವು ಪಡೆದುಕೊಳ್ಳಬಹುದು..!
ಈ ಹೊಸ ಪಕ್ಷದ ಸದಸ್ಯತ್ವ ಪಡೆದುಕೊಳ್ಳಲು ಬಯಸುವವರಿಗೆ ಅರ್ಜಿಯನ್ನೂ ಸಿದ್ಧಪಡಿಸಲಾಗಿದೆ. ಆಸಕ್ತರು ಇತರೆ ಎಲ್ಲ ವೈಯಕ್ತಿಕ ವಿವರಗಳ ಜೊತೆ ತಮ್ಮ ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಯ ಎರಡು ಪ್ರತಿಗಳನ್ನೂ ಅರ್ಜಿಯೊಂದಿಗೆ ಲಗತ್ತಿಸಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಇಲ್ಲಿ ಓದಿ:-ಉಪ್ಪಿಗೆ ಆಟೋ ಚಾಲಕ ಬರೆದ ಪತ್ರದಲ್ಲಿ ಏನಿತ್ತು ಗೊತ್ತಾ..?
ಕೆಲವು ದಿನಗಳ ಹಿಂದಷ್ಟೇ ಉಪೇಂದ್ರ ಅವರು ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಘೋಷಣೆ ಮಾಡಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉದ್ದೇಶ ಹೊಂದಿರುವ ಉಪೇಂದ್ರ ಅವರು ಬಿರುಸಿನ ತಯಾರಿ ಆರಂಭಿಸಿದ್ದಾರೆ ಎನ್ನಲಾಗಿದೆ.
ಚಲನಚಿತ್ರಗಳಿಗೆ ಸಂಬಂಧಿಸಿದ ತಮ್ಮ ಎಲ್ಲ ಕೆಲಸಗಳನ್ನೂ ಶೀಘ್ರದಲ್ಲೇ ಮುಗಿಸಿಕೊಂಡು ಚುನಾವಣಾ ಅಖಾಡಕ್ಕೆ ಇಳಿಯಲು ಮುಂದಾಗಿರುವ ಉಪೇಂದ್ರ ಅವರು ಅಗತ್ಯ ಕಂಡು ಬಂದರೆ ರಾಜ್ಯದ ವಿವಿಧ ನಗರಗಳಿಗೂ ತೆರಳಿ ಪಕ್ಷ ಸ್ಥಾಪನೆಯ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.
ಜತೆಗೆ ಸಾಮಾಜಿಕ ಜಾಲತಾಣದ ಮೂಲಕ ಅರ್ಜಿ ಸ್ವೀಕರಿಸುವುದೂ ಸೇರಿದಂತೆ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಪರಿಶೀಲಿಸಿ ಮುಂದಿನ ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್,ಶಿವರಾಜ್ ಕುಮಾರ್ ನಂತರ ಕನ್ನಡದ ಮತ್ತೊಬ್ಬ ನಟ ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ. ಅವರು ಬೇರೆ ಯಾರು ಅಲ್ಲ ಕ್ರೇಜಿ ಸ್ಟಾರ್ ರವಿ ಚಂದ್ರನ್. ಬೆಂಗಳೂರಿನ ಸಿ ಎಮ್ ಆರ್ ವಿಶ್ವ ವಿದ್ಯಾನಿಲಯ ರವಿ ಚಂದ್ರನ್ ರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ. ಈ ಹಿಂದೆ ರವಿಚಂದ್ರನ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಡಾಕ್ಟರೇಟ್ ನೀಡಬೇಕು ಎಂದು ತಮ್ಮ ಆಸೆ ವ್ಯಕ್ತ ಪಡಿಸಿದ್ದರು. ಇದೀಗ ಅವರ ಬಯಕೆ ಈಡೇರಿದೆ. ನವೆಂಬರ್ 3 ರಂದು ದೊಡ್ಡ ಕಾರ್ಯಕ್ರಮದ ಮೂಲಕ…
ಲಕ್ಷದ್ವೀಪದ ಪ್ರವೇಶದ್ವಾರ ಅಂತಲೇ ಅಗಟ್ಟಿ ನಡುಗಡ್ಡೆ ಜನಪ್ರಿಯವಾಗಿದೆ. ಅಗಟ್ಟಿಯಲ್ಲಿ ಸ್ಥಳೀಯ ವಿಮಾನ ನಿಲ್ದಾಣವಿದೆ. 1988ರಲ್ಲಿ ಇಲ್ಲಿನ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕ ಕಲ್ಪಿಸುವ ಏಕೈಕ ದ್ವೀಪವೂ ಇದೇ ಆಗಿದೆ.
ಮಂಗಳೂರು: ರೈತನೊಬ್ಬ ಅಡಕೆ ಮರವನ್ನು ಯಂತ್ರವೊಂದರ ಸಹಾಯದಿಂದ ಹತ್ತುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅಡಕೆ ಮರಕ್ಕೆ ಅತ್ಯಂತ ಸುಲಭವಾಗಿ ಹತ್ತಿ ಅಡಕೆ ಕೀಳುವ ಬೈಕ್ ಮಾದರಿಯ ಯಂತ್ರವೊಂದನ್ನು ಬಂಟ್ವಾಳದ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ್ದು, ಇದಕ್ಕೀಗ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಂದಲೂ ಮೆಚ್ಚುಗೆಯಿಂದ ಟ್ವೀಟ್ ಮಾಡಿದೆ. ಸಜೀಪಮೂಡ ಗ್ರಾಮದ ಕೋಮಾಲಿ ನಿವಾಸಿ, ಗಣಪತಿ ಭಟ್ ಅವರ ಯಂತ್ರದ ಮೂಲಕ ಮಹಿಳೆಯರೂ ಮರ ಏರಲು ಸಾಧ್ಯವಾಗಿದೆ. ಯುವತಿಯೋರ್ವಳು ಮರ ಏರುತ್ತಿರುವ…
ತುಮಕೂರು, ಜು. 27- ಬಾಣಂತನಕ್ಕೆ ಹೋಗಿದ್ದ ಪತ್ನಿಯನ್ನು ಮನೆಗೆ ಕರೆಸದ ತಾಯಿ ಜತೆ ಜಗಳವಾಡಿ ಪದೇ ಪದೇ ಅವರ ಮೇಲೆ ಹಲ್ಲೆ ನಡೆಸುತ್ತಿದ್ದ ಅಣ್ಣನ ವರ್ತನೆಯಿಂದ ಕುಪಿತಗೊಂಡ ತಮ್ಮ ರಾತ್ರಿ ಅಣ್ಣನ ಕುತ್ತಿಗೆಗೆ ಚಾಕುವಿನಿಂದ ಬಲವಾಗಿ ಇರಿದು ಕೊಲೆ ಮಾಡಿರುವ ಧಾರುಣ ಘಟನೆ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಾಮಗೊಂಡನಹಳ್ಳಿಯ ಮಹೇಶ್ (35) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ತಮ್ಮ ಅಂಜನಮೂರ್ತಿ ಪೊಲೀಸರ ಅತಿಥಿಯಾಗಿದ್ದಾನೆ. ಚಿಕ್ಕಹನುಮಯ್ಯ-ಗಂಗಮ್ಮ ದಂಪತಿಯ ಮೊದಲ ಮಗನಾದ ಮಹೇಶ್ ನಿಗೆ ಮದುವೆಯಾಗಿದ್ದು ಬಾಣಂತನಕ್ಕೆಂದು ಪತ್ನಿ ತನ್ನ…
ಬಿಗ್ಬಾಸ್ ರಿಯಾಟಲಿ ಶೋ ದಿನದಿಂದ ದಿನಕ್ಕೆ ತನ್ನ ಕುತೂಹಲವನ್ನು ದ್ವಿಗುಣಗೊಳಿಸುತ್ತಿದೆ. ಚಿತ್ರರಂಗದಲ್ಲಿ ಘಟಿಸಿಹೋದಂತಹ ಹಲವು ಘಟನೆಗಳು ಬಿಗ್ಬಾಸ್ನಲ್ಲಿ ಅನಾವರಣಗೊಳ್ಳುತ್ತಿದೆ. ಮೊನ್ನೆ ಶಂಕರ್ನಾಗ್ ಹಾಗೂ ಮಂಜುಳಾ ಬಗ್ಗೆ ರವಿಬೆಳಗೆರೆ ಅವರು ಮಾತನಾಡಿದ್ದರು. ಇದೀಗ ಹಿರಿಯ ನಟ ಜೈ ಜಗದೀಶ್ ಶಂಕರ್ನಾಗ್ ಬಗ್ಗೆ ಕುತೂಹಲಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ನಿನ್ನೆ ನಡೆದ ಸಂಚಿಕೆಯಲ್ಲಿ ಜೈ ಜಗದೀಶ್ ಇತರೆ ಸ್ಪರ್ಧಿಗಳ ಜತೆ ಮಾತನಾಡುವಾಗ ಒಂದು ಪ್ರಶ್ನೆಯನ್ನು ಮುಂದಿಟ್ಟರು. ಒಬ್ಬ ಫೇಮಸ್ ನಟ ತನ್ನ ಮಾರ್ಕೆಟ್ ಬಿದ್ದಾಗ ವ್ಯಾನ್ ಒಳಗೆ ಕ್ಯಾಂಟೀನ್ ಇಟ್ಟುಕೊಂಡು ಓಡಾಡುತ್ತಿದ್ದರು….
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನಸರಣಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಮುನ್ನ ಭಾರತ ಕ್ರಿಕೆಟ್ ತಂಡ& ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದೆ ಭಾರತ ಕ್ರಿಕೆಟ್ ತಂಡ(18 ಸದಸ್ಯರು) ಕೆ.ಎಲ್.ರಾಹುಲ್(ನಾಯಕ) ಜಸ್ಪ್ರೀತ್ ಬುಮ್ರಾ(ಉಪನಾಯಕ) ಶಿಖರ್ ಧವನ್ ಋತುರಾಜ್ ಗಾಯಕ್ವಾಡ್ ವಿರಾಟ್ ಕೊಹ್ಲಿ ಸೂರ್ಯ ಕುಮಾರ್ ಯಾದವ್ ಶ್ರೇಯಸ್ ಅಯ್ಯರ್ ವೆಂಕಟೇಶ್ ಅಯ್ಯರ್ ರಿಷಭ್ ಪಂತ್(ವಿ.ಕೀ) ಇಷಾನ್ ಕಿಷನ್ (ವಿ.ಕೀ) ಯಜುವೇಂದ್ರ ಚಹಲ್ ರವಿಚಂದ್ರನ್ ಅಶ್ವಿನ್ ವಾಷಿಂಗ್ಟನ್ ಸುಂದರ್ ಭುವನೇಶ್ವರ ಕುಮಾರ್ ದೀಪಕ್ ಚಹರ್ ಪ್ರಸಿದ್ಧ ಕೃಷ್ಣ ಶಾರ್ದೂಲ್ ಠಾಕೂರ್…