ಸಂಬಂಧ

ರಕ್ಷಾಬಂಧನಕ್ಕೂ ಭಗವಾನ್ ಶ್ರೀ ಕೃಷ್ಣನ ಈ ಕತೆಗೂ ಇರುವ ಸಂಬಂದ ಏನ್ ಗೊತ್ತಾ…..

1589

ನಮ್ಮ ಭಾರತವು ಹಲುವು ಧರ್ಮ, ಜಾತಿಗಲಿರುವ ಒಂದು ರಾಷ್ಟ್ರ. ಇಲ್ಲಿ ಹಲವು ಹಬ್ಬಗಳನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಅದೇ ರೀತಿ   ರಕ್ಷಾಬಂಧನ ಹಬ್ಬವನ್ನು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ. ಈ ಹಬ್ಬ ಸಂಬಂಧಗಳನ್ನು ಗಟ್ಟಿಗೊಳಿಸುವ ಮಹತ್ವವನ್ನು ಹೊಂದಿದೆ. ರಕ್ಷಾಬಂಧನ ಸಹೋದರ-ಸಹೋದರಿಯರ ವಿಶ್ವಾಸದ ಹಬ್ಬವಾಗಿದೆ. ಹಿರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.

ಸಂಬಂಧಗಳನ್ನು ಬೆಸೆಯುವ ರಕ್ಷಾಬಂಧನ ದಿನದಂದು ಸಹೋದರರು ಕೇವಲ ರಾಖಿಯನ್ನು ಕಟ್ಟಿಸಿಕೊಂಡು ಉಡುಗೊರೆ ಕೊಟ್ಟ ಮಾತ್ರಕ್ಕೆ ಅವರ ಕರ್ತವ್ಯ ಮುಗಿಯುವುದಿಲ್ಲ. ರಕ್ಷಾಬಂಧನ ಅರ್ಥ ಬಾಂಧವ್ಯ ಹಾಗೂ ರಕ್ಷೆ ಎಂದು. ರಾಖಿ ಕಟ್ಟಿಕೊಂಡ ಸಹೋದರು ಸದಾಕಾಲ ಸಹೋದರಿಯ ಬೆನ್ನ ಹಿಂದೆ ನಿಂತು ಆಕೆಯ ರಕ್ಷಣೆ ಮಾಡುವುದು ಆತನ ಕರ್ತವ್ಯವಾಗಿರುತ್ತದೆ. ರಕ್ಷಾ ಬಂಧನದ ಅರ್ಥವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ತಮ್ಮ ಕರ್ತವ್ಯವನ್ನು ಪಾಲಿಸಿದರೆ ರಕ್ಷಾ ಬಂಧನದ ದಿನದ ಆಚರಣೆಗೆ ನಿಜಕ್ಕೂ ಅರ್ಥ ಸಿಕ್ಕಂತಾಗುತ್ತದೆ.

ರಕ್ಷಾಬಂಧನ ಹಬ್ಬದ ಮಹತ್ವ:-

 

  • ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ ‘ರಕ್ಷಾಬಂಧನ’ ಅಥವಾ ‘ರಾಖಿ’ ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.

  • ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ

ರಕ್ಷಾ ಬಂಧನಕ್ಕೂ ಇದೆ ಪೌರಾಣಿಕ ಹಿನ್ನಲೆ…

ಎಲ್ಲ ಹಬ್ಬಗಳಂತೆ ರಕ್ಷಾಬಂಧನ ಹಬ್ಬದ ಹಿಂದೆಯೂ ಇದೆ ಒಂದು ಪೌರಾಣಿಕ ಕತೆ.  ರಕ್ಷಾಬಂಧನ ಆರಂಭವಾದ ಬಗ್ಗೆ ಹಲವು ಕಥೆಗಳೂ ಇವೆ. ಅದರಲ್ಲಿ ಪ್ರಮುಖವಾದದ್ದು ಕೃಷ್ಣ ಹಾಗೂ ದ್ರೌಪದಿಯ ಕಥೆ. ಶಿಶುಪಾಲನನ್ನು ವಧಿಸುವ ಸಂದರ್ಭದಲ್ಲಿ ಕೃಷ್ಣನು ತನ್ನ ಬೆರಳನ್ನು ಕುಯಿದುಕೊಂಡನು. ಆ ಸಂದರ್ಭದಲ್ಲಿ ದ್ರೌಪದಿ ತನ್ನ ವಸ್ತ್ರದ ತುಂಡನ್ನೇ ಹರಿದು ಅವನ ಬೆರಳಿಗೆ ಕಟ್ಟಿದಳು.

ಇದರಿಂದ ಭಾವಪರವಶನಾದ ಕೃಷ್ಣ ದ್ರೌಪದಿಯ ವಸ್ತ್ರದ ಒಂದೊಂದು ನೂಲಿನ ಋಣವನ್ನು ತೀರಿಸುತ್ತೇನೆ ಎಂದು ಮಾತುಕೊಟ್ಟ. ಅದರಂತೆಯೇ ಸದಾ ದ್ರೌಪದಿಯ ರಕ್ಷಣೆ ಮಾಡಿದ. ಕೃಷ್ಣ ಹಾಗೂ ದ್ರೌಪದಿಯ ಸಂಬಂಧವನ್ನು ಒಂದು ಆದರ್ಶ ಅಣ್ಣ ತಂಗಿಯರ ಸಂಬಂಧಕ್ಕೆ ಹೋಲಿಸುತ್ತಾರೆ. ಇನ್ನೊಂದು ಕಡೆ ಹಿಂದೆ ದೇವ ದಾನವರ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ದಾನವ ಚಕ್ರವರ್ತಿ ಬಲಿಯ ಮುಂದೆ ದೇವೇಂದ್ರನ ಶಕ್ತಿ ಸಾಲದಾಗಿತ್ತು. ಅಂತಹ ಸಂದರ್ಭದಲ್ಲಿ ದೇವೇಂದ್ರನ ಪತ್ನಿ ಸಚಿ ಸಹಾಯಕ್ಕಾಗಿ ಮಹಾವಿಷ್ಣುವಿನ ಮೊರೆ ಹೋದಳು.

ಆಗ ವಿಷ್ಣು ಆಕೆಯ ಕೈಯಲ್ಲಿ ಒಂದು ಪವಿತ್ರವಾದ ದಾರವನ್ನು ಕೊಟ್ಟು ಅದನ್ನು ಇಂದ್ರನ ಕೈಗೆ ಕಟ್ಟಲು ಹೇಳಿದನು. ಸಚಿ ಅದನ್ನು ದೇವೇಂದ್ರನ ಕೈಗೆ ಕಟ್ಟಿ ಆತನ ವಿಜಯಕ್ಕಾಗಿ ಭಕ್ತಿಯಿಂದ ಪ್ರಾರ್ಥಿಸಿದಳು. ಕೊನೆಗೆ ದೇವೇಂದ್ರ ಪ್ರಬಲ ಎದುರಾಳಿ ಬಲಿಯನ್ನೇ ಮಣಿಸಿದ. ಹೀಗಾಗಿ ರಾಖಿಯನ್ನು ಕೇವಲ ಅಣ್ಣತಂಗಿಯರ ಮಧ್ಯೆ ಮಾತ್ರವಲ್ಲ ಯಾರದೇ ವಿಜಯಕ್ಕಾಗಿ ಅಥವಾ ಅವರ ರಕ್ಷಣೆಗಾಗಿ ಪ್ರಾರ್ಥಿಸಬೇಕಾದಾಗ ಕಟ್ಟುವ ರೂಢಿಯೂ ಇದೆ.  ಹಾಗಾಗಿ ಅದನ್ನು ‘ರಕ್ಷೆ’ ಎನ್ನುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಬೆಳಗಿನ ತಿಂಡಿ ಸ್ಕಿಪ್ ಮಾಡುತ್ತಿದ್ದೀರಾ; ಹಾಗಾದರೆ ಈ ಎಲ್ಲಾ ಕಾಯಿಲೆಗಳು ಬರಬಹುದು ಎಚ್ಚರ!

    ಬಿಸಿ ಬಿಸಿ ತಿಂಡಿ ಟೇಬಲ್ ಮೇಲೆ ರೆಡಿ ಇದ್ದರೂ ತಿನ್ನುವಷ್ಟು ವ್ಯವಧಾನ ನಮ್ಮ ಜನರಿಗೆ ಇರುವುದಿಲ್ಲ. ಹರಿಬಿರಿ ಮಾಡಿಕೊಂಡು ಬ್ಯಾಗ್ ನೇತಾಕಿಕೊಂಡು, ನಾನು ಆಫೀಸ್ ನಲ್ಲೇ ತಿನ್ನುತ್ತೇನೆ ಎಂದು ಹೊರಡುವವರೇ ಹೆಚ್ಚು. ಕೆಲವರು ಹಾಸಿಗೆಯಿಂದ ಏಳುವುದು ತಡ ಮಾಡಿಕೊಂಡು ತಿನ್ನದೆ ಹಾಗೆ ಹೊರಟರೆ, ಇನ್ನು ಕೆಲವರಿಗೆ ಬೆಳಗ್ಗೆ ತಿನ್ನಬೇಕೆಂದರೆ ಅಲರ್ಜಿ. ಆದರೆ ನೀವು ಬೆಳಗಿನ ಹೊತ್ತು ಉಪಹಾರ (ಬ್ರೇಕ್ ಫಾಸ್ಟ್) ಸೇವಿಸಿದಿದ್ದರೆ ಮುಂದೆ ಏನೆಲ್ಲಾ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಗೊತ್ತಾ? ಇಲ್ಲಿ ನೋಡಿ. ಹೃದಯಾಘಾತದ ಸಾಧ್ಯತೆ ಜಾಮಾ…

  • ಆರೋಗ್ಯ

    ಹಾಗಲಕಾಯಿಯನ್ನು ನೀವು ತಿನ್ನೋದಿಲ್ವಾ ಹಾಗಾದರೆ ಈ ಹಾಗಲಕಾಯಿಯ ಮಹಿಮೆಯನ್ನು ನೋಡಿ.

    ಹಾಗಲಕಾಯಿಯ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಇದರ ನಿಯಮಿತ ಸೇವನೆಯಿಂದ ಯಕೃತ್‌ನಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇದರ ನಿಯಮಿತ ಸೇವನೆಯಿಂದ ಮುಖದ ಮೊಡವೆಗಳೂ ಕಲೆನೀಡದೇ ಮಾಗಲು ಸಾಧ್ಯವಾಗುತ್ತದೆ… ಬನ್ನಿ ಹಾಗಲಕಾಯಿಯ ಆರೋಗ್ಯಕಾರಿ ಗುಣಗಳ ಬಗ್ಗೆ ತಿಳಿಯೋಣ. ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ : ಕೆಲವೊಮ್ಮೆ ಆಹಾರ ಜೀರ್ಣಗೊಳ್ಳಲು ಸಾಮಾನ್ಯಕ್ಕಿಂತಲೂ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುವುದರಿಂದ ಹೊಟ್ಟೆಯಲ್ಲಿಯೇ ಉಳಿದು ಹಲವು ವಾಯುಗಳು ಉತ್ಪತ್ತಿಯಾಗಿ ಉರಿ ತರಿಸುತ್ತವೆ. ಅಜೀರ್ಣವ್ಯಾಧಿ (dyspepsia) ಎಂದು ಕರೆಯಲಾಗುವ ಈ ತೊಂದರೆಗೆ ಹಾಗಲಕಾಯಿಯ ರಸ…

  • ಜೀವನಶೈಲಿ

    ತನ್ನ ಸಂಗಾತಿ ಜೋತೆಗಿದ್ರೂ ಬೇರೆ ಹುಡುಗಿಯರನ್ನು ನೋಡುವ ಅಭ್ಯಾಸ ಏಕೆ ಗೊತ್ತಾ..?

    ಸಂಗಾತಿ ನಮ್ಮನ್ನು ಬಿಟ್ಟು ಇತರರನ್ನು ಹೊಗಳಿದ್ರೂ ಅಸೂಯೆ ಉಂಟಾಗೋದು ಸಹಜ. ಸಾಮಾನ್ಯವಾಗಿ ಪ್ರೇಯಸಿ ಎದುರಲ್ಲೇ ಹುಡುಗರು ಇತರ ಯುವತಿಯರತ್ತ ಕಣ್ಣು ಹಾಯಿಸ್ತಾರೆ. ಫ್ಲರ್ಟ್ ಮಾಡ್ತಾರೆ. ಇದನ್ನೆಲ್ಲ ಪ್ರೇಯಸಿ ತಮಾಷೆಯಾಗಿ ತೆಗೆದುಕೊಂಡ್ರೆ ಓಕೆ, ಇಲ್ಲದೇ ಇದ್ರೆ ಬ್ರೇಕಪ್ ಕೂಡ ಆಗಿಬಿಡಬಹುದು. ಎಂಥಾ ಸುದೀರ್ಘ ಕಾಲದ ಪ್ರೇಮಮಯ ಸಂಬಂಧವಾಗಿದ್ರೂ ಇತರರ ಕಡೆಗೆ ಆಕರ್ಷಿತರಾಗುವುದು ಸಹಜ ಎನ್ನುತ್ತಾರೆ ಸಂಶೋಧಕರು. ಯಾಕೆ ಎಲ್ಲರೂ ಈ ರೀತಿ ಮಾಡ್ತಾರೆ ಅನ್ನೋದಕ್ಕೆ ಕೂಡ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಗಂಡು-ಹೆಣ್ಣು ಪರಸ್ಪರ ಆಕರ್ಷಿತರಾಗುವುದು ಸಹಜ. ಮಹಿಳೆ ಸಾಮಾನ್ಯವಾಗಿ…

  • ಜ್ಯೋತಿಷ್ಯ

    ಪಾಂಡುರಂಗ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(24 ಮಾರ್ಚ್, 2019) ನಿಮ್ಮ ಅಧಿಕ ಚೈತನ್ಯದ ಹೊರತಾಗಿಯೂ ನೀವು ಇಂದು ನಿಮ್ಮೊಡನೆ ಇರಲಾರದ ಯಾರನ್ನಾದರೂ ನೆನಪಿಸಿಕೊಳ್ಳುತ್ತಿದ್ದೀರಿ….