ಆಧ್ಯಾತ್ಮ

ಆ ದಿನ ಈ ಯಾಗ ಪೂರ್ಣವಾಗಿ ನಡೆದಿದ್ದರೆ,ಈ ದಿನ ನಾವು ನೋಡಲಿಕ್ಕೆ ಹಾವಿನ ಸಂತತಿಯೇ ಇರುತ್ತಿರಲಿಲ್ಲ!ಯಾಕೆ ಗೊತ್ತಾ..?ಈ ಲೇಖನಿ ಓದಿ…

3172

ಆಗ ಹಸ್ತಿನಾಪುರದಲ್ಲಿ ಪರೀಕ್ಷಿತನ ಮಗ ಜನಮೇಜಯನು ರಾಜ್ಯ ಆಳುತಿದ್ದ. ಅವನ ಅಸ್ತಾನಕ್ಕೆ ಉತ್ತಂಕನೆಂಬ ಮುನಿಯು ಆಗಮಿಸಿದ. ಈ ಮುನಿಗೆ ತಾನು ತಕ್ಷಕಎಂಬ ಹಾವಿನಿಂದ ಒದಗಿದ ಅನ್ಯಾಯಕ್ಕಾಗಿ ಸೇಡು ತೀರಿಸಿಕೊಳ್ಳಲು ಜನಮೇಜಯನ ಆಸ್ಥಾನಕ್ಕೆ ಬಂದಿದ್ದ.   ಹಾಗಾಗಿ ತನಗೆ ನಮಸ್ಕರಿಸಿದ ರಾಜನನ್ನೂ ಅವನ ಪರಿವಾರವನ್ನು ಅಷಿರ್ವದಿಸಿದ. ರಾಜನು ನೀಡಿದ ಆಸನದಲ್ಲಿ ಕುಳಿತು ಅತಿಥ್ಯ ಸ್ವೀಕರಿಸಿದ. ಎಲ್ಲರ ಕುಶಲವನ್ನೂ ವಿಚಾರಿಸಿದ. ಅನಂತರ ರಾಜನನ್ನೂ ಕುರಿತು – ‘’ ಮಹಾರಾಜ ! ನೀನು ನಿನ್ನ ತಂದೆ ಪರಿಕ್ಷಿತನ ದುರ್ಮರಣಕ್ಕೆ ಪ್ರತೀಕಾರ  ಕೈಗೊಂಡರುವೆಯ ?’’ – ಎಂದು ಪ್ರಶ್ನಿಸಿದ. ಜನುಮೆಜಯನನ್ನು – ಪ್ರತಿಕರವೇ ? ಯಾರ ಮೇಲೆ ಏಕೆ ?’’ ಎಂದ. ಉತ್ತಂಕನು – ‘’ ಜನಮೇಜಯ ! ನಿನ್ನ ತಂದೆಯನ್ನು ಅಮತ್ಯರೂ ಸೇನಾಪತಿಗಳು. ಇತರರೂ ಎಚ್ಹರಿಕೆಯಿಂದ ಕಾವಲೂ ಕಾಯುತ್ತಿದ್ದರೂ, ತಕ್ಷಕನು ಅವರ ಕಣ್ಣು ತಪ್ಪಿಸಿ ನಿಮ್ಮ ತಂದೆಯನ್ನು ಮೋಸದಿಂದ ಸಯಿಸಿಲಿಲ್ಲವೇ ? ಅದಕ್ಕೆ ನೀನು ಪ್ರತಿಕಾರ ಮಾಡಬೇಡವೇ ? – ಎಂದು ಕೇಳಿದ.

ಜನಮೇಜಯನಿಗೆ ತನ್ನ ತಂದೆಯು ಮರಣಹೊಂದಿದ ಸನ್ನಿವೇಶದ ಸ್ಮರಣೆಯಾಗಿ ದುಃಖ ಉಕ್ಕಿ ಬಂತು. ತಕ್ಷಕನ ಮೇಲೆ ಅಪಾರ ಕೋಪ ಉಂಟಾಯಿತು. ‘’ಋಷಿಕುಮಾರ ! ಕರ್ತವ್ಯ ಮರೆತಿದ್ದ ನನ್ನನ್ನು ಎಚರಿಸಿದಿರಿ. ತುಂಬ ವಂದನೆಗಳು. ಆಹಾ ನಮ್ಮ ತಂದೆಯವರ ಮರಣಕ್ಕೆ ಕಾರಣನಾದ ಆ ತಕ್ಷಕನ ವಂಶವನ್ನೇ ತೊಡೆದೂ ಹಾಕಿಬಿಡಬೇಕೆನ್ನಿಸುತ್ತದೆ. ಅದಕ್ಕಾಗಿ ನಾನೇನೂ ಮಾಡಬೇಕು, ದಯವಿಟ್ಟು ತಿಳಿಸಿ’’ – ಎಂದು ಕೇಳಿಕೊಂಡ ಆಗ ಸಮೀಪದಲ್ಲಿದ್ದ ಪುರೋಹಿತರು ‘’ಮಹಾರಾಜ ! ಸರ್ಪಸತ್ರವೆಂಬ ಮಹಾಯುಗವೊಂದಿದೆ. ಈ ಯಾಗವನ್ನು ಮಾಡಿ ಸರ್ಪಗಳೆಲ್ಲವನ್ನು ಅಗ್ನಿಗೆ ಆಹುತಿ ನೀಡಬಹುದಲ್ಲಾ !’’ ಎಂದರು. ಜನಮೇಜಯನು ಕೂಡಲೇ ರುತ್ವಿಜರನ್ನು ಕರೆಸಿದನು ‘’ನಾನು ಸರ್ಪಯಾಗ ಮಾಡಲು ನಿಶ್ಚಯಿಸಿದ್ದೇನೆ. ಅದಕ್ಕೆ  ಬೇಕಾದ ಸಿದ್ದತೆಗಳನ್ನು ನಡೆಸಿ’’ – ಎಂದ ಸರ್ಪಯಾಗದ ಸಿದ್ದತೆಗಳಾರಂಬಿಸಿದವು.

ಸೌತಿಗಳು ಹೇಳುತ್ತಿದ್ದ ಕಥೆಯನ್ನು ಕೇಳುತ್ತಿದ್ದ ನೈಮಿಷಾರಣ್ಯದ ಋಷಿಗಳ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸಿದವು. ಅವರು ‘’ಸೌತಿಗಳೆ ! ನಮಗೆ ಕೆಲವು ಸಂಶಯಗಳು ಉಂಟಾಗಿವೆ. ಅವನ್ನು ದಯವಿಟ್ಟು ಪರಿಹರಿಸಿ. ಉತ್ತಂಕನು ತನಗೆ ತೊಂದರೆ ನೀಡಿದ ತಕ್ಷಕನೊಬ್ಬನ ಮೇಲೆ ಮಾತ್ರ ಪ್ರತೀಕಾರ ಕೈಗೊಳ್ಳದೆ ಇಡೀ ಸರ್ಪಕುಲವನ್ನೇ ನಾಶ ಮಾಡುವ ಪ್ರಯತ್ನ ಮಾಡಿದ್ದೂ ಸರಿಯೇ ಅಲ್ಲದೆ, ಆ ಯಾಗ ಮಾಡಿದ ಮೇಲೆ, ಇಡೀ ಸರ್ಪಕುಲವೇ ನಾಶವಾಗಿ ಬಿಡಬೇಕಾಗಿತ್ತಲ್ಲವೇ ? ಹಾಗಾಗದೇ ಇಗಲೂ ಸರ್ಪಕುಲ ಉಳಿದುಕೊಂಡಿದೆಯಲ್ಲಾ. ಅದಕ್ಕೆ ಕಾರಣವೇನು ?’’ – ಎಂದು ಕೇಳಿದರು. ಇಲ್ಲಿ ಓದಿ:-ಸರ್ಪಗಳ ತಾಯಿ ತನ್ನ ಮಕ್ಕಳಾದ ಸರ್ಪಗಳಿಗೆ ಕೊಟ್ಟ ಶಾಪ ಹಾಗೂ ಸರ್ಪಗಳು ಮತ್ತು ಗರುಡ ಹುಟ್ಟಿದ ಕತೆ ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ…

‘’ಈಗ ನಿಮಗೆ ಎಲ್ಲವೂ ಸ್ವಷ್ಟವಾಗಿರಬೆಕಲ್ಲವೇ ? ಕದ್ರುವಿನ ಶಾಪವೇ ಸರ್ಪಯಾಗದ ಮೂಲಕಾರಣ ಉತ್ತಂಕ ಮತ್ತು ಜನಮೇಜಯರು ಬರೀ ನಿಮಿತ್ತರು ಮಾತ್ರ.

ಜನಮೇಜಯನು ತಾನು ನಿಶ್ಚಯಸಿದ್ದಂತೆ ಸರ್ಪಯಾಗವನ್ನು ಪ್ರಾರಂಬಿಸಿದರು. ಯಾಗದಲ್ಲಿ ಹೋತೃ. ಅದ್ವರ್ಯು, ಉದ್ಗಾತೃ  ಬ್ರಹ್ಮ ಎಂಬ ನಾಲ್ಕು ಪ್ರಮುಕ ಪುರೋಹಿತರಿರುತ್ತಾರೆ. ಇವರಿಗೆ ಋತ್ವಿಕ್ಕುಗಳೆಂದು ಹೆಸರು. ಋಗ್ವೇದದ ಮಂತ್ರಗಳನ್ನು ಪಠಿಸಿ ಯಾಗದ ಹವಿಸ್ಸನ್ನು ತೆಗೆದುಕೊಂಡು ಹೋಗುವಂತೆ ದೇವತೆಗಳನ್ನು ಅಹ್ವಾನಿಸುವವನೇ ಹೋತೃ. ಪ್ರಾರ್ಥನಾ ನಿಯಮಗಳ ಸಂಗ್ರಹವಾದ ಯಜುರ್ವೇದದಲ್ಲಿ ಪರಿಣಿತನಾಗಿದ್ದು ದೇವತೆಗಳನ್ನೂ ಕರೆಯುವಾಗ ‘ಸ್ವಾಹಾ’ ಎನುತ್ತಾ ಅಗ್ನಿಕುಂಡದಲ್ಲಿ ತುಪ್ಪವನ್ನು ಹಾಕುವವನು ಅದ್ವರ್ಯ. ಉಚ್ಚಸ್ವರದಲ್ಲಿ ದೇವತೆಗಳನ್ನು ಕುರಿತು ಸಾಮವೇದದ ಮಂತ್ರಗಳನ್ನು ಇಂಪಾಗಿ ಹಾಡುವವನು ಉದ್ಗಾತೃ ಅಥರ್ವವೇದದಲ್ಲಿ ಪಂಡಿತನಾಗಿದ್ದು ಯಗ್ನಯಾಗದಿಗಳ ಅಧ್ಯಕ್ಷಸ್ಥಾನವನ್ನು ಅಲಂಕರಿಸುವವನು ಬ್ರಹ್ಮ. ಜನುಮೆಜಯನು ಮಾಡಿದ ಸರ್ಪಯಾಗದಲ್ಲಿ ಚ್ಯವನಮಹರ್ಶಿಯ ವಂಶಸ್ಥಾನದ ಚಂಡ ಭಾರ್ಗವನೆಂಬುವವನು ಹೋತೃವಾಗಿದ್ದನು. ವಿದ್ವಾಂಸನಾದನು ಕೌತ್ಸನು ಉದ್ಗಾತೃವಾಗಿದ್ದನು. ಶಾಙ್ಗರವ, ಪಿಂಗಲರು ಅಧ್ವರ್ಯವಾಗಿದ್ದರು. ಜೈಮಿನಿಯ ಬ್ರಹ್ಮನಾಗಿದ್ದನು.

ಆ ಸರ್ಪಯಾಗದಲ್ಲಿ ಋತ್ವಿಜರು ಸರ್ಪಗಳ ಹೆಸರನ್ನು ಹೇಳಿ ಅವುಗಳನ್ನು ಅಗ್ನಿಯ ಬಳಿಗೆ ಆಕರ್ಶಿಸಿ ‘ಸ್ವಾಹಾ’ ಎನ್ನುತ್ತಿದ್ದರು. ಕೂಡಲೇ ಆಯಾ ಸರ್ಪಗಳು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದಲ್ಲಿ ಬಂದು ಬಿಳುತಿದ್ದವು ಅಗ್ನಿಯ ಬಳಿಗೆ ಬರುವಾಗ ಅವು ತಪ್ಪಿಸಿಕೊಳ್ಳಲೆತ್ನಿಸುತ್ತಿದ್ದವು. ಪರಸ್ವರ ಧೈನದಿಂದ ನೋಡುತ್ತ ನಿತ್ತುಸಿರುಬಿದುತ್ತಿದ್ದುವು. ಬೆದರಿಕೆಯಿಂದ ಬುಸುಗುಟ್ಟುತ್ತಿದ್ದವು; ದಾರುಣವಾಗಿ ಶಬ್ಧಮಾದುಡುತಿದ್ದವು ವಿಲಿವಿಲಿ ವದ್ದಾಡುತಿದ್ದವು. ಬಿಳಿಯ ಹಾವುಗಳು, ಕಾಳಿಂಗ ಸರ್ಪಗಳು ನೀಲವರ್ಣದ ದೊಡ್ಡ ಹಾವುಗಳು ಮಾರಿನಗರಗಳು, ಎಲ್ಲವೂ ಪ್ರದೀಪ್ತನಾದ ಯಜ್ಞೆಶ್ವರನಲ್ಲಿ ಬಂದು ಬೀಳುತಿದ್ದವು. ಹೀಗೆ ಲಕ್ಷೋಪಲಕ್ಷ ಸರ್ಪಗಳು ಅಗ್ನಿಯಲ್ಲಿ ಬಿದ್ದು ಪ್ರಾಣ ಬಿಟ್ಟವು.

ಜನುಮೆಜಯನು  ಮಾಡುತಿದ್ದ ಯಾಗವನ್ನು ನೋಡಿ ತಕ್ಷಕನು ಭಿತನಾದನು. ತನ್ನ ಗೆಳೆಯ ದೆವೆಂದ್ರನನ್ನು ಮೊರೆ ಹೋದನು. ‘’ನನ್ನನ್ನು ಮಾಡುತಿದ್ದಾನೆ ನನ್ನನ್ನು ಅಗ್ನಿಗೆ ಆಹುತಿ ಕೊಡುವುದಕ್ಕಾಗಿ ಜನುಮಜೆಯನು ಸರ್ಪಯಾಗವನ್ನು ಮಾಡುತಿದ್ದಾನೆ. ನನ್ನ್ನನ್ನು ಕಾಪಾಡು’’ – ಎಂದು ಬೇಡಿಕೊಂಡನು ಆಗ ಇಂದ್ರನು ‘’ನೀನು ನನ್ನ ಅರಮನೆಯಲ್ಲಿ ಇದ್ದುಬಿಡು. ಇಲ್ಲಿ ಅಗ್ನಿಯ ಭಯವಿಲ್ಲ ‘’ ಎಂದು – ಎಂದು ದೈರ್ಯ ಹೇಳಿದನು. ತಕ್ಷಕನು ಇಂದ್ರನನ್ನು ಗಟ್ಟಿಯಾಗಿ ಹಿಡಿದುಕೊಂಡು ಅಲ್ಲಿಯೇ ನಿಂತನು.

ಆ ಸಮಯದಲ್ಲಿ ವಾಸುಕಿ ಮೊದಲಾದ ಸರ್ಪಗಳ ತಮ್ಮ ತಂಗಿಯ ಮಗನಾದ ಆಸ್ತಿಕನ ಬಳಿಗೆ ಹೋದರು, ‘’ಆಕಸ್ಮಿಕ ! ನಮ್ಮ ತಾಯಿಯ ಶಾಪದ ಪರಿಣಾಮವಾಗಿ ನಾವೆಲ್ಲರೂ ಯಜ್ಞ್ಯಕುಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ನಿನಗೊಬ್ಬನಿಗೆ ಮಾತ್ರ ನಮ್ಮನ್ನು ಈ ದುರವಸ್ಥೆಯಿಂದ ಪಾರುಮಾಡಲು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು’’ – ಎಂದರು ಅಸ್ಥಿಕನು ‘’ಮಾವಂದಿರ ! ನಿಮ್ಮನ್ನು ಉಳಿಸಲು ಏನು ಮಾಡಬೇಕೆಂದು ಹೇಳಿ. ಖಂಡಿತ ಮಾಡುತ್ತೇನೆ’’-ಎಂದನು. ವಾಸುಕಿಯು ‘’ಮಗೂ ! ಜನಮೇಜಯನು ಸರ್ಪಯಾಗವನ್ನು ಮಾಡುತಿದ್ದಾನೆ. ನೀನು ಅವನ ಬಳಿಗೆ ಹೋಗಿ ಆ ಯಜ್ಞ್ಯವನ್ನು ನಿಲ್ಲಿಸುವಂತೆ ಮಾಡು ‘’-ಎಂದನು ಆಸ್ತಿಕನು ಕೂಡಲೇ ಯಜ್ಞಶಾಲೆಯ ಕಡೆ ಹೆಜ್ಜೆ ಹಾಕಿದನು.

ಇತ್ತ ಸರ್ಪಯಾಗದಲ್ಲಿ ಅನೇಕ ಸರ್ಪಗಳು ಯಜ್ಞೆಶ್ವರನಿಗೆ ಆಹುತಿಯಾದರು ತಕ್ಷಕ ಮಾತ್ರ ಕಾಣಿಸಿಕೊಂಡಿರಲಿಲ್ಲ. ಜಾನುಮಜೆಯನು ಹೊತೃವನ್ನು ಕುರಿತು ‘’ಸ್ವಾಮಿ ! ನನ್ನ ಪರಮವೈರಿಯಾದ ತಕ್ಷಕನೆ ಇನ್ನೂ ಬಂದಿಲ್ಲವಲ್ಲ. ಅವನನ್ನು   ಬೇಗ ಬರ ಮಾಡಿಕೊಂಡು ಅಗ್ನಿಗೆ ಅರ್ಪಿಸಿ’’ ಎಂದ. ಹೊತೃವು ತಕ್ಷಕನನ್ನು ಆಕರ್ಷಿಸುವ ಮಂತ್ರವನ್ನು  ಪಟಿಸಿದನು ಆದರೂ ತಕ್ಷಕನು ಬರಲಿಲ್ಲ. ಆಗ ರುತ್ವಿಜಯರಿಗೆ ತಕ್ಷಕನು ಇಂದ್ರನು ಆಶ್ರಯ ಪಡೆದಿರುವುದು ತಿಳಿಯಿತು. ಅವರು ‘’ ಇಂದ್ರನು ತಕ್ಷಕನಿಗೆ ಆಶ್ರಯ ಕೊಟ್ಟಿದ್ದಾರೆ ಆ ಇಂದ್ರನ ಸಹಿತ ತಕ್ಷಕನು ಬರಲಿ’’- ಎಂದು ಮಂತ್ರ ಹೇಳಿದರು. ಆಗ ಇಂದ್ರನು ಭಯಗೊಂಡು ತನ್ನನ್ನು ಬಲವಾಗಿ ಅಪ್ಪಿಕೊಂಡಿದ್ದ ತಕ್ಷಕನನ್ನು ಕೆಳಕ್ಕೆ ಕೆಡವಿಬಿಟ್ಟನು ಭ್ಯಯವಿಹ್ವಲನಾದ ತಕ್ಷಕನು ಮಂತ್ರದಿಂದ ಆಕರ್ಷಿತನಾಗಿ ಅಗ್ನಿಯ ಕಡೆಗೆ ಬೀಳತೊಡಗಿದನು.

ಇದೇ ಸಮಯಕ್ಕೆ ಸರಿಯಾಗಿ ಅಸ್ತೀಕನು ಯಜ್ಞಶಾಲೆಯ ಬಳಿಗೆ ಬಂದನು ಉಚ್ಚದ್ವನಿಯಲ್ಲಿ ಯಜ್ಞವನ್ನು ಕುರಿತು ಸ್ತೋತ್ರಮಾಡಲು ಪ್ರಾರಂಬಿಸಿದನು. ಜನಮೇಜಯ ಋತ್ವಿಜರು ಅಗ್ನಿ ಎಲ್ಲರನ್ನೂ ಪ್ರಶಂಸಿಲಾರಂಬಿಸಿದರು ಆ ಬಾಲಕನ ಗಾಂಬಿರ್ಯ ಮುಖ ಸೌಂದರ್ಯ ಕಂಠಮಾದುರ್ಯಗಳನ್ನು ಕಂಡು ಜನಮೇಜಯ ಪ್ರೀತನದನು, ಭ್ರಾಹ್ಮಣ ಕುಮಾರ ! ನಿನಗೆ ಬೇಕಾದ ವರವನ್ನು ಕೇಳಿಕೋ’’- ಎಂದ ಅಸ್ತಿಕನು ‘’ಈ ಕ್ಷಣದಿಂದಲೇ ಯಾಗವನ್ನು ನಿಲ್ಲಿಸು ಮಹಾರಾಜ!’’- ಎಂದು ಪ್ರಾರ್ಥಿಸಿದನು.

ಜನಮೇಜಯನು ದಿಗ್ಮುಡನಾದನು ಆಸ್ಥಿಕನು ‘ಭೂಮಿಯನ್ನೋ ಹಣವನ್ನೋ ದಾನವಾಗಿ ಕೇಳಬಹುದೆಂದು ಅವನು ಭಾವಿಸಿದ್ದನು ಆದರೆ ಆ ಬಾಲಕ ಯಜ್ಞ್ಯವನ್ನೇ ನಿಲ್ಲಿಸಬೇಕೆಂದು ಕೆಳುತಿದ್ದಾನೆ ಅದೂ ಈ ಕ್ಷಣದಿಂದಲೇ ತಕ್ಷಕನು ಅಗ್ನಿಕುಂಡದೊಳಗೆ ಬೀಳುವ ಮುನ್ನವೇ ಆದರೆ ಮಾಡುವುದೇನು ? ಮಾತು ಕೊಟ್ಟಾಗಿದೆ ಹಿಂದೆಗೆಯುವ ಹಾಗಿಲ್ಲ. ತನಗೆ ಅಪಾರ ಸಂಕಟವಾದರೂ ಸಹ ಜನಮೇಜಯನು ಸಮಾಧಾನತಂದುಕೊಂಡ. ‘’ಹಾಗೆಯೆ ಆಗಲಿ’’ ಎಂದ ಕೂಡಲೇ ಸರ್ಪಗಳು ಅಗ್ನಿಯಲ್ಲಿ ಬೀಳುವುದು ನಿಂತುಹೋಯಿತು. ಇನ್ನೇನು ಯಜ್ಞೆಶ್ವರನಿಗೆ ಅಹುತಿಯಗುತ್ತಾನೆ ಎಂದುಕೊಳ್ಳುವುಷ್ಟರಲ್ಲಿ ತಕ್ಷಕನು ತಪ್ಪಿಸಿಕೊಂಡು ಬಿಟ್ಟ. ಸೌತಿಗಳು ಹೇಳಿದ ಸರ್ಪಯಾಗದ ಕಥೆಯನ್ನು ಕೇಳಿ ಆಶ್ರಮವಾಸಿಗಳ ಮೈ ರೋಮಂಚನಗೊಂಡಿತು.

About the author / 

Editors Pick

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ, ಹಣ

    ನೀವು ದುಡ್ಡು ಉಳಿಸಬೇಕು, ಅಂದ್ರೆ ಮಾತ್ರ ಓದಿ..ಶೇರ್ ಮಾಡಿ..

    ಏನ್ಮಾಡಿದರು ಖರ್ಚು ಕಡಿಮೆ ಆಗ್ತಿಲ್ಲ !ನಮ್ಮನ ಬಡವರು ಅಂತ ನಾವೇ ಕರೆದುಕೊಳ್ಳೋ ಸ್ಥಿತಿ ಬಂದ್ಬಿಟ್ಟಿದೆ. ಇದಕ್ಕೆ ಸರಿಯಾದ ಪರಿಹಾರ ನಿಮ್ಮ ಹತ್ತಿರಾನೆ ಇದೆ. ಈ ಹಳ್ಳಿ ಹುಡುಗರು ಮಾಡುವ ಬುದ್ದಿವಂತಿಕೆ ಮಾಡಿ ಸಾಕು – ಏನದು ತಿಳಿಹಿರಿ.

  • ದೇವರು-ಧರ್ಮ

    ಸಹಸ್ರ ದೇವತೆಗಳ ಅನುಗ್ರಹಕ್ಕಾಗಿ ಕಾರ್ತಿಕ ಹುಣ್ಣಿಮೆಯಂದು ಹೀಗೆ ಮಾಡಿ…!

    ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನ. ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡ ಈ ದಿನ ಸಮಸ್ತ ದೇವತೆಗಳಿಗೂ ಪೂಜೆ ಹಾಗೂ ಪ್ರಾರ್ಥನೆಯನ್ನುಸಲ್ಲಿಸಬೇಕು. ಈ ದಿನ ಹರಿ-ಹರರ ಭಕ್ತರು ತಮ್ಮ ದೇವರಿಗಾಗಿ ವಿಶೇಷ ಉಪವಾಸ ವ್ರತಗಳನ್ನು ಕೈಗೊಂಡರೆ ಅವರು ಪ್ರಸನ್ನರಾಗುವರು. ಜೊತೆಗೆ ಭಕ್ತರ ಜೀವನೋದ್ಧಾರಕ್ಕೆ ಆಶೀರ್ವದಿಸುವರು ಎನ್ನಲಾಗುವುದು. ಕಾರ್ತಿಕ ಹುಣ್ಣಿಮೆಯನ್ನು ಈ ಬಾರಿ ನವೆಂಬರ್12 ರಂದು ಆಚರಿಸಲಾಗುತ್ತದೆ, ಇದನ್ನು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುವುದು. ಕೆಲವು ಪುರಾಣ ಕಥೆಗಳ…

  • ಸುದ್ದಿ

    ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ಸೂಕ್ತ ಸಮಿತಿಗಳ ರಚನೆ – ಡಿಸಿ ಸಸಿಕಾಂತ್ ಸೆಂಥೀಲ್…!

    ಮಂಗಳೂರು: ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ಸೂಕ್ತವಾದ ಸಮಿತಿಗಳ ರಚನೆ ಆಗಬೇಕು ಎಂದು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳ ಆಶ್ರಯದಲ್ಲಿ ನಡೆದ ಮಂಗಳಮುಖಿಯರ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಕೋಶ/ಸಮಿತಿ: ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಕೋಶ/ಸಮಿತಿಯು 17 ಮಂದಿ ಸದಸ್ಯರನ್ನು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ…

  • ಜ್ಯೋತಿಷ್ಯ

    ಲಕ್ಷ್ಮೀದೇವಿಯನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

      ಮೇಷ ರಾಶಿ ಭವಿಷ್ಯ (Friday, December 3, 2021) ನೀವು ಪ್ರಯಾಣಿಸಲು ತುಂಬಾ ದುರ್ಬಲರಾಗಿದ್ದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ಬಹಳ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ವೆಚ್ಚಗಳ ಮೇಲೆ ಮಿತಿ ಹೇರಿ. ನೀವು ಕೆಲಸದ ಜಾಗದಲ್ಲಿ ಅತಿಯಾಗಿ ಶ್ರಮಪಡುವುದರಿಂದ ಕೌಟುಂಬಿಕ ಅಗತ್ಯಗಳು ಮತ್ತು ಅವಶ್ಯಕತೆಗಳು ನಿರ್ಲಕ್ಷಿಸಲ್ಪಡುತ್ತವೆ ನೀವು ನಿಜವಾದ ಪ್ರೀತಿ ಕಾಣಲು ಸಾಧ್ಯವಾಗದಿರುವುದರಿಂದ ಪ್ರಣಯಕ್ಕೆ ಉತ್ತಮ ದಿನವಲ್ಲ. ನಿಮ್ಮ ಯೋಜನೆಗಳ ಬಗ್ಗೆ ತುಂಬಾ ಮುಕ್ತತೆ ಹೊಂದಿದ್ದಲ್ಲಿ ನೀವು…

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಶುಕ್ರವಾರ, ಈ ದಿನದ ರಾಶಿಭವಿಷ್ಯದಲ್ಲಿ ಈ ರಾಶಿಗಳಿಗೆ ರಾಜಯೋಗವಿದ್ದು, ವಿಪರೀತ ಧನಲಾಭವಿದೆ!ಇದ್ರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892Raghavendrastrology@gmail.com ಮೇಷ(28 ಡಿಸೆಂಬರ್, 2018) ಕಲ್ಪನೆಗಳ ಹಿಂದೆ ಓಡಬೇಡಿ ಹಾಗೂಸಾಧ್ಯವಾದಷ್ಟೂ ವಾಸ್ತವವಾದಿಗಳಾಗಿರಿ. ನಿಮ್ಮ ಸ್ನೇಹಿತರ ಜೊತೆ ಸಮಯ ಕಳೆಯಿರಿ -ಇದು ಒಳ್ಳೆಯದನ್ನು ಮಾಡುತ್ತದೆ. ಇಂದು,…

  • ಸುದ್ದಿ

    ನಿವೃತ್ತಿ ವಯಸ್ಸಿನ ಗೊಂದಲಗಳಿಗೊಂದು ತೆರೆ : ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ…..!

    ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 33 ವರ್ಷ ಸೇವೆ ಸಲ್ಲಿಸಿದವರ ಅಥವಾ 60 ವರ್ಷ ತುಂಬಿದವರನ್ನು ಸೇವೆಯಿಂದ ನಿವೃತ್ತಿಗೊಳಿಸುವ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತ ಗೊಂದಲಗಳಿಗೆ ತೆರೆ ಬಿದ್ದಿದೆ. ನಿವೃತ್ತಿ ವಯಸ್ಸನ್ನು ಕಡಿಮೆ ಮಾಡುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹ ಮತ್ತು ವದಂತಿಗಳು ಹರಡಿದ ಬಗ್ಗೆ ಕೇಂದ್ರ ಸರ್ಕಾರ…