ಉಪಯುಕ್ತ ಮಾಹಿತಿ

ಜೀವನದಲ್ಲಿ ಯಶಸ್ಸು ಸಿಗಬೇಕಂದ್ರೆ,ಈ ಅಂಶಗಳನ್ನು ಅನುಸರಿಸಿ…

4375

ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.

ಯಶಸ್ಸಿನ ಹಾದಿ ಸುಲಭವಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಒಬ್ಬ ಯಶಸ್ವಿ ಮನುಷ್ಯನ ಹಿಂದೆ ಸಾಕಷ್ಟು ಹೋರಾಟವಿರುತ್ತದೆ. ನಮ್ಮ ಪ್ರೀತಿಯ ಮೇಷ್ಟ್ರು ದಿವಂಗತ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ಹೇಳುತ್ತಾರೆ: “ಯಶಸ್ಸಿನ ಕಥೆಯನ್ನು ಓದಿದರೆ ಕೇವಲ ನಿಮಗೊಂದು ಸಂದೇಶ ಸಿಗಬಹುದು ಆದರೆ ಸೋಲಿನ ಕಥೆಗಳಿಂದ ಗೆಲುವಿನ ದಾರಿಯಲ್ಲಿ ಸಹಾಯವಾಗುವುದು” ಎಂದು.

 

ಯಶಸ್ಸಿನ ಹಾದಿಯಲ್ಲಿ ಈ ಅಂಶಗಳನ್ನು ಅನುಸರಿಸಿ, ನಡೆಯುವ ದಾರಿಯನು ಸುಗಮಗೊಳಿಸಿ

  • ಮೊಟ್ಟಮೊದಲನೇಯದಾಗಿ ನಿಮ್ಮನ್ನು ನೀವು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿಯೊಬ್ಬನ ಹೋರಾಟ ಬೇರೆಯೇ
  • ನಿಮಗೆ ಕೊಟ್ಟ ಎಲ್ಲಾ ಕೆಲಸಗಳು ತುಂಬಾನೆ ಸುಲಭವಾಗಿರುತ್ತವೆ. ಆದರೆ ಅದನ್ನು ಮಾಡಲು ನೀವು ಸೋಮಾರಿತನ ಮಾಡಿ, ನಾಳೆ ಮಾಡುತ್ತೇನೆ ಎಂದು ಮುಂದೂಡುತ್ತಿದ್ದರೆ ಯಶಸ್ಸು ಕಷ್ಟ.

  • ಯಾರೊಂದಿಗೂ ಪೈಪೋಟಿ ಮಾಡಬೇಡಿ. ಅದರಿಂದ ಅಸಮಾಧಾನ ಅತೃಪ್ತಿಯ ವಿನಃ ಏನೂ ಪ್ರಯೋಜನವಿಲ್ಲ.
  • ಯಶಸ್ಸಿನ ಹಾದಿಯಲ್ಲಿ ಮಾರ್ಗದರ್ಶಕರಿರಲಿ ಆದರೆ ಇನ್ನೊಬ್ಬರ ಮೇಲೆ ಅವಲಂಬಿಸಬೇಡಿ. ನಿಮ್ಮ ದಾರಿಯಲ್ಲಿ ನೀವೇ ನಡೆಯಬೇಕು
  • ಎಲ್ಲದಕ್ಕಿಂತ ಮುಖ್ಯವಾಗಿ ಆತ್ಮವಿಶ್ವಾಸವಿರಲಿ. ಅನುಮಾನದಿಂದ ಮಾಡಿದ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ.

  • ಆತ್ಮೀಯರೊಂದಿಗೆ ಸರಿ ತಪ್ಪುಗಳ ವಿಮರ್ಶೆ ಅತ್ಯಗತ್ಯ. ಯಾರಾದರೂ ಒಳ್ಳೆಯ ಸಲಹೆ ಕೊಟ್ಟರೆ ಪರಗಣಿಸದಿದ್ದರೂ ಸರಿ ನಿರಾಕರಿಸಬೇಡಿ.
  • ನೀವು ಯಶಸ್ವಿಯಾಗಲು ಮತ್ತೊಬ್ಬರನ್ನು ತುಳಿಯಬೇಡಿ. ಒಂದೊಮ್ಮೆ ನೀವು ಯಶಸ್ವಿಯಾದರೂ ಆ ಅಪರಾಧಿ ಪ್ರಜ್ಞೆ ಬಾಧಿಸದೇ ಬಿಡದು.
  • ಯಾವುದೇ ಕೆಲಸದ ಕುರಿತಂತೆ ಒಂದು ಒಳ್ಳೆ ಗಟ್ಟಿ ನಿರ್ಧಾರ ತೆಗೆದುಕೊಂಡು ಮುನ್ನೆಡೆಯಿರಿ.
  • ನಿಮಗೆ ಆಫೀಸ್‌‌ನಲ್ಲಿ ಈ ಹಿಂದೆ ಯಾರಾದರು ಏನಾದರು ಮಾಡಿದರೆ ಅದಕ್ಕಾಗಿ ಅವರ ಮೇಲೆ ಇಂದಿಗೂ ಕೋಪ ಮಾಡುತ್ತ ಕೂರುತ್ತೀರಿ. ಇದರಿಂದ ಕೆಲಸ ಮಾಡುವಲ್ಲಿ ನಿಮಗೆ ಸಹಕಾರ ಸಿಗೋದಿಲ್ಲ.ಇಲ್ಲಿ ಓದಿ:-ಈ 6 ಗುಣಗಳು ನಿಮ್ಮಲ್ಲಿದ್ರೆ, ಯಾರಾದ್ರೂ ನಿಮ್ಮನ್ನು ನಂಬುತ್ತಾರೆ…

  • ಯಾವಾಗಲೂ ಬರೀ ಕೆಲಸದಲ್ಲೇ ತಲ್ಲೀನರಾಗದೆ, ನಿಮ್ಮ ಬೇರೆ ಮನರಂಜನೆ ಕಾರ್ಯಕ್ರಮಗಳಿಗೆ ಸಮಯ ಕೊಡಿ.
  • ನೀವು ಶಾರೀರಿಕ ಮತ್ತು ಮಾನಸಿಕವಾಗಿ ಸಧೃಢರಾಗಿದ್ದರೆ ಮಾತ್ರ ಕೆಲಸದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಆದರೆ ನೀವು ಏನೇನೋ ತಿಂದು ಆರೋಗ್ಯ ಕೆಡಿಸಿದರೆ ಅಥವಾ ಮಾನಸಿಕವಾಗಿ ತುಂಬಾ ಕುಂದಿಹೋಗಿದ್ದರೆ ಕೆಲಸ ಮಾಡಲು ಸಾಧ್ಯವಿಲ್ಲ.

  • ಕೆಲಸದ ಅವಧಿಯಲ್ಲಿ ಹೆಚ್ಚಿನ ಸಮಯ ಸೋಶಿಯಲ್‌ ಮೀಡಿಯಾ ನೋಡುತ್ತ ಕಳೆದರೆ ನಿಮಗೆ ಯಶಸ್ಸು ಸಿಗಲು ಹೇಗೆ ಸಾಧ್ಯ ಹೇಳಿ. ಇದರಿಂದ ಸಮಯ ವೇಸ್ಟ್‌ ಆಗುತ್ತದೆ ಅಷ್ಟೆ.
  • ಕೊನೆಯದಾಗಿ ಏನೆಂದರೆ ನೀವು ಯಶಸ್ಸು ಸಾಧಿಸಬೇಕು ಎಂದಾದರೆ ಜೀವನದಲ್ಲಿ ಏನಾದರು ರಿಸ್ಕ್ ತೆಗೆದುಕೊಳ್ಳಲು ರೆಡಿಯಾಗಿರಬೇಕು. ಇಲ್ಲವಾದರೆ ಸಕ್ಸಸ್‌ ನಿಮ್ಮತ್ತ ಸುಳಿಯೋದೆ ಇಲ್ಲ.

ಈ ಯಶಸ್ಸು ಅನ್ನೋದು ಮರೀಚಿಕೆಯಂತೆ. ನೀವು ಅದರ ಹಿಂದೆ ಓಡಿದಷ್ಟು ಅದು ನಿಮ್ಮಿಂದ ದೂರ ಓಡುತ್ತದೆ. ಅದಕ್ಕೇ ಏನೋ ಕೃಷ್ಣ ಹೇಳಿದ್ದು :- ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ ಅಂತ. ಅಂದರೆ ಫಲದ ಅಪೇಕ್ಷೆ ಇಲ್ಲದೇ ನಿನ್ನ ಕರ್ಮ (ಕರ್ತವ್ಯ) ನೀನು ಮಾಡು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮದ್ಯ ಪ್ರಿಯರಿಗೊಂದು ಶಾಕಿಂಗ್ ಸುದ್ದಿ : ಆನ್ ಲೈನ್ ಮದ್ಯ ಮಾರಾಟಕ್ಕೆ ಹೈಕೋರ್ಟ್ ಬ್ರೇಕ್…!

    ಆನ್ ಲೈನ್ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತಾದರೂ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದರಿಂದ ಹಿಂದೆ ಸರಿದಿತ್ತು. ಇದರ ಮಧ್ಯೆ ಚೆನ್ನೈ ಮೂಲದ ಹಿಪ್ ಬಾರ್ ಪ್ರೈವೇಟ್ ಲಿಮಿಟೆಡ್, ಡಿಜಿಟಲ್ ವಾಲೆಟ್ ಮೂಲಕ ಆನ್ ಲೈನ್ ಲಿಕ್ಕರ್ ವೆಡಿಂಗ್ ಗೆ ಅನುಮತಿ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಈ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ಏಕಸದಸ್ಯ ಪೀಠ, ಆನ್ ಲೈನ್ ಮೂಲಕ ಮದ್ಯ ಸರಬರಾಜು ಮಾಡುವುದು ಅಕ್ರಮ…

  • ಉಪಯುಕ್ತ ಮಾಹಿತಿ, ದೇವರು

    ದೇವರ ಪೂಜೆ ಮಾಡುವಾಗ ನಿಮ್ಮ ಮನಸ್ಸು ಚಂಚಲವಾಗುವುದಾ ಹೀಗೆ ಮಾಡಿ.

    ನಾವು ನಮ್ಮ ಮನಸ್ಸನ್ನು ನಿರಂತರ ಭಗವಂತನನಲ್ಲಿ ನೆಲೆ ನಿಲ್ಲುವಂತೆ ಮಾಡಲು ‘ನಿರಂತರ ಮನನ’ ಅತ್ಯಂತ ಮುಖ್ಯ ಅಂಶ. ಸಾಮಾನ್ಯವಾಗಿ ನಮ್ಮ ಚಿತ್ತ ಬೇಡದ ವಿಷಯಗಳತ್ತ ಹರಿಯುತ್ತದೆ. ಆದರೆ ನಾವು ಅದನ್ನು ಕೇವಲ ಭಗವಂತನನ್ನು ಚಿಂತಿಸುವಂತೆ ತರಬೇತಿಗೊಳಿಸಬೇಕು. ಚಿತ್ತಕ್ಕೆ ಭಗವಂತನನ್ನು ಅನನ್ಯಗಾಮಿಯಾಗಿ ಚಿಂತನೆ ಮಾಡುವಂತೆ ನಿರಂತರ ಅಭ್ಯಾಸ ಮಾಡಿಸಬೇಕು. ನಮ್ಮ ಮನಸ್ಸು, ಬುದ್ಧಿ, ಚಿತ್ತ ಎಲ್ಲವೂ ನಾವು ಅಭ್ಯಾಸ ಮಾಡಿಸಿದಂತೆ ಕೆಲಸ ಮಾಡುತ್ತವೆ. ಅವುಗಳಿಗೆ ನಾವು ಭಗವಂತನ ಚಿಂತನೆಯ ಅಭ್ಯಾಸ ಮಾಡಿಸಬೇಕು. ಮನಸ್ಸು ಚಿತ್ತವನ್ನು ಮಣಿಸುವ ಏಕಮಾತ್ರ ಸಾಧನ…

  • ಜ್ಯೋತಿಷ್ಯ

    ವೆಂಕಟೇಶ್ವರಸ್ವಾಮಿಯ ಕೃಪೆಯಿಂದ ಈ ರಾಶಿಗಳಿಗೆ ಧನಲಾಭ..ನಿಮ್ಮ ರಾಶಿ ಯಾವುದು ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(23 ಏಪ್ರಿಲ್, 2019) ನೀವು ಮನಸ್ಸಿನ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ, ಜಾಣತನ ಮತ್ತು ಸಭ್ಯತೆಯನ್ನು ಬಳಸಬೇಕಾಗುತ್ತದೆ. ದೀರ್ಘ…

  • ಸುದ್ದಿ

    ಬೆಂಗಳೂರಿನಲ್ಲಿ ದುಬಾರಿ ಬಡ್ಡಿಯನ್ನು ಪಡೆಯುತ್ತಿದ್ದ ಫೈನಾನ್ಸ್ ಗಳ ಮೇಲೆ ದಾಳಿ, 6 ಜನರ ಬಂಧನ

    ಬೆಂಗಳೂರು: ಹಣವನ್ನು ಸಾಲ ನೀಡಿ ದುಬಾರಿ ಬಡ್ಡಿ ನೀಡಬೇಂಕು ಎಂದು ಒತ್ತಾಯಿಸುತ್ತಿದ್ದ ನಗರದ ಏಳು ಪೈನಾನ್ಸ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ. ಲಲಿತ್ ಕಾನೂಗ (52), ಆಶೀಸ್ (28) ಹಾಗೂ ಸಂಜಯ್ ಸಚ್ ದೇವ್ (35) ಚಂದ್ರು (55), ಓಂ ಪ್ರಕಾಶ್ (56) ಹಾಗೂ ಮಾತಾ ಪ್ರಸಾದ್ (34) ಬಂಧಿತ ಆರೋಪಿಗಳು. ಲೇವಾದೇವಿಗಾರರು ಹಾಗೂ ಅವರ ಏಜೆಂಟ್ ಗಳು ಹಣವನ್ನು ಸಾಲ ನೀಡಿ, ಬಳಿಕ ಶೇ.20ರಿಂದ 25ರಷ್ಟು ದುಬಾರಿ…