ಕಾನೂನು

ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ

125

ಪೋಕ್ಸೊ ಕಾಯಿದೆ ಅಡಿ ಆರೋಪಿಗೆ
20 ವರ್ಷ ಸಜೆ-30 ಸಾವಿರ ದಂಡ
ಕೋಲಾರ:- ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ, ಅತ್ತಿಗಿರಿಕೊಪ್ಪ ಗ್ರಾಮದ ನಾಗೇಂದ್ರ @ ಚಿನ್ನಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ, ಅತ್ಯಾಚಾರ ಎಸಗಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ.


ಸದರಿ ಆರೋಪಿಯ ವಿರುದ್ದ ಬೂದಿಕೋಟೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು ಕಲಂ 6 ಪೋಕ್ಸೋ ಕಾಯ್ದೆ ಹಾಗೂ ಕಲಂ 9 ಬಾಲ್ಯ ವಿವಾಹ ನಿಷೇಧ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ಆರೋಪಿತನ ವಿರುದ್ದ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ಸ್ಪೇಷಲ್ ಸಿ.(ಪೋಕ್ಸೋ) 98/2022 ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿ ನಾಗೇಂದ್ರ @ ಚಿನ್ನಿ ಎಂಬಾತನಿಗೆ ಕಲಂ 6 ಪೋಕ್ಸೋ ಕಾಯ್ದೆ ಅಡಿಯಲ್ಲಿ 20 ವರ್ಷ ಸಜೆ ಜೊತೆಗೆ ರೂ.30 ಸಾವಿರ ರೂ ದಂಡ ವಿಧಿಸಿ ದಂಡ ತೆರಲು ವಿಫಲರಾದಲ್ಲಿ 6 ತಿಂಗಳು ಹೆಚ್ಚುವರಿ ಸಜೆ ವಿಧಿಸಿದ್ದಾರೆ.


ನೊಂದ ಬಾಲಕಿಗೆ ರೂ. 4 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಶ್ರೀಮತಿ ಡಿ.ಲಲಿತಕುಮಾರಿ ರವರು ವಾದ ಮಂಡಿಸಿದ್ದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ದೀಪಾವಳಿಯ ಹಬ್ಬಕ್ಕೆ-ಮನೆಯ ಮುಂಭಾಗ ಎಷ್ಟು ದೀಪಗಳಿರಬೇಕು ಗೊತ್ತಾ?

    ದೀಪಾವಳಿ ಬಂದ್ರೆ ಸಾಕು ಮಹಿಳೆಯರಿಗೆ ಮನೆ ಮುಂದೆ ದೀಪಗಳನ್ನು ಜೋಡಿಸುವುದೇ ಒಂದು ಸಂಭ್ರಮ. ಬಾಗಿಲು, ಕಿಟಕಿ, ರಂಗೋಲಿ, ಕಾಂಪೌಂಡ್, ಹೂ ಕುಂಡಗಳಲ್ಲಿ ಹೀಗೆ ಅನಕೂಲವಾಗುವ ಸ್ಥಳಗಳಲ್ಲಿ ದೀಪಗಳನ್ನಿಟ್ಟು ಮನೆಯನ್ನು ಅಲಂಕರಿಸುತ್ತಾರೆ. ಆದ್ರೆ ದೀಪಗಳನ್ನು ಇಂತಿಷ್ಟೇ ಸಂಖ್ಯೆಯಲ್ಲಿ ಹಚ್ಚಬೇಕೆಂದು ನಿಯಮಾವಳಿಗಳಿವೆ. ಪೂಜಾ ಗೃಹದಲ್ಲಿ ಗಜಲಕ್ಷ್ಮಿ ಸ್ವರೂಪದಲ್ಲಿರುವ ಕಾಮಾಕ್ಷಿ ದೀಪಗಳನ್ನು ಹಚ್ಚಬೇಕು. ದೀಪಗಳಿಗೆ ಮೂರು ಅಥವಾ ಐದುಬಗೆಯ ಎಣ್ಣೆಯನ್ನು ಹಾಕುತ್ತಿರಬೇಕು. ಮನೆಯ ಮುಂಭಾಗ ಅಲಂಕರಿಸಲು ವ್ಯವಸ್ಥಿತ ದೀಪಗಳನ್ನು ಜೋಡಿಸಬೇಕೆಂದು ಹಿರಿಯರು ಹೇಳುತ್ತಾರೆ. ಹಾಗೆಯೇ ವ್ಯವಸ್ಥಿತವಾಗಿ ದೀಪಾಲಂಕಾರ ಮಾಡಬೇಕು. ನಿಮ್ಮ ಶಕ್ತಿಗನುಸಾರವಾಗಿ 12,…

  • ಸೌಂದರ್ಯ

    ವಯಸ್ಸು 50 ವರ್ಷವಾದರೂ, 20 ವರ್ಷದ ಹುಡುಗನಂತೆ ಕಾಣಿಸುತ್ತಾನೆ..!ತಿಳಿಯಲು ಈ ಲೇಖನ ಓದಿ..

    ಪುರುಷರು ತುಂಬಾ ಅಂದದಿಂದ ಇದ್ದರೆ ಸ್ತ್ರೀಯರು ಅವರನ್ನು ಹೊಗಳುತ್ತಾರೆ.ಇದು ಜಗತ್ತಿಗೆ ಗೊತ್ತಿರುವ ಸತ್ಯ.ಯಾವ ಪುರುಷ ತನ್ನ ಅಂದದಿಂದ ಆಕರ್ಷಿಸುತ್ತಾನೋ ಅಂತವರು ಸ್ತ್ರೀಯರ ಮನಸ್ಸನ್ನು ಸುಲಭವಾಗಿ ಕದಿಯುತ್ತಾನೆ.

  • ಜ್ಯೋತಿಷ್ಯ

    ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಆ ಜಾಗದಲ್ಲಿ ಇಟ್ಟರೆ ಏನಾಗುತ್ತೆ ಗೊತ್ತಾ..?

    ಶ್ರೀಮಂತನಾಗುವುದು ಪ್ರತಿಯೊಬ್ಬನ ಬಯಕೆ. ಹಗಲು-ರಾತ್ರಿ ದುಡಿದು ಹಣ ಸಂಪಾದನೆ ಮಾಡ್ತಾರೆ ಅನೇಕರು. ಆದ್ರೆ ಶ್ರೀಮಂತರಾಗಲು ದುಡಿಮೆ ಜೊತೆ ಅದೃಷ್ಟ ಜೊತೆಗಿರಬೇಕು. ಅಡುಗೆ ಮನೆಯಲ್ಲಿರುವ ಉಪ್ಪು, ನಿಮ್ಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಅಡುಗೆ ರುಚಿ ಹೆಚ್ಚಿಸುವ ಉಪ್ಪಿನಿಂದ ಅನೇಕ ಲಾಭಗಳಿವೆ. ಮನೆಯ ಮುಖ್ಯ ದ್ವಾರದ ಬಳಿ, ಕೆಂಪು ಬಟ್ಟೆಯಲ್ಲಿ ಸ್ವಲ್ಪ ಉಪ್ಪನ್ನು ಕಟ್ಟಿ ನೇತುಹಾಕಿ. ಇದು ನಿಮ್ಮ ಅದೃಷ್ಟ ಬದಲಿಸುತ್ತದೆ. ಯಾವುದೇ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಹಾಗೆ ಯಶಸ್ಸು ನಿಮ್ಮದಾಗುತ್ತದೆ. ವ್ಯಾಪಾರ ಸ್ಥಳದ ಮುಖ್ಯ ದ್ವಾರದ ಬಳಿ…

  • ಉಪಯುಕ್ತ ಮಾಹಿತಿ

    ನಿಮ್ಮ ತ್ವಚೆಯನ್ನು ಕಾಪಾಡಿಕೊಂಡು ಸೌಂದರ್ಯವಾಗಿ ಕಾಣಬೇಕೇ? ಹಾಗಾದರೆ ನೀವು ಇದನ್ನು ಬಳುಸುವುದು ಉತ್ತಮ.!

    ಯೌವ್ವನದಲ್ಲಿ ತ್ವಚೆಯ ಸೌಂದರ್ಯದ ಕಾಳಜಿವಹಿಸಿದರೆ ವಯಸ್ಸಾದಂತೆ ಅದರ ಪ್ರತಿಫಲ ಕಾಣಬಹುದು. ಸಾಮಾನ್ಯವಾಗಿ ಹೆಚ್ಚಿನವರು ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಹಲವು ರೀತಿಯ ರಾಸಾಯನಿಕ ಸೌಂದರ್ಯವರ್ಧಕಗಳ ಮೊರೆ ಹೋಗುವವರೇ ಹೆಚ್ಚು. ಆದರೆ ಎಲ್ಲ ಕಡೆಯು ಹೇರಳವಾಗಿ ದೊರೆಯುವ ಕೆಲ ಗಿಡಗಳಿಂದಲೂ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಹೌದು, ಲೋಳೆಸರ, ಕತ್ಲಿಗಿಡ ಎಂದೆಲ್ಲಾ ಕರೆಸಿಕೊಳ್ಳುವ ಅಲೋವೇರ ಎಲೆಗಳನ್ನು ಬಳಸಿ ಕೂಡ ತ್ವಚೆಯನ್ನು ಆರೈಕೆ ಮಾಡಬಹುದು. ಪ್ರಸ್ತುತ ಅನೇಕ ಕಂಪೆನಿಗಳು ಸಹ ಅಲೋವೇರ ಉತ್ಪನ್ನಗಳನ್ನು ಮಾರುಕಟ್ಟೆಗೆ…

  • ಸುದ್ದಿ

    ಅಡುಗೆ ಮಾಡಲು ಹೊಲದಲ್ಲಿ ಕ್ಯಾರೆಟ್ ಕಿತ್ತಾಗ, ಅದರಲ್ಲಿ ಇದ್ದ ವಸ್ತುವನ್ನು ನೋಡಿ ಶಾಕ್ ಆದ ಮಹಿಳೆ.

    ಸ್ವೀಡನ್ ದೇಶಕ್ಕೆ ಸೇರಿದ ಲೀನಾ ಅನ್ನುವ ಮಹಿಳೆ 16 ವರ್ಷಗಳ ಹಿಂದೆ ತನ್ನ ಮನೆಯಲ್ಲಿ ಇದ್ದಾಗ ತನ್ನ ಮದುವೆಯ ದಿನ ಗಂಡ ಕೊಡಿಸಿದ್ದ ಅಮೂಲ್ಯವಾದ ವಸ್ತುವನ್ನ ಕಳೆದುಕೊಳ್ಳುತ್ತಾಳೆ. ಇನ್ನು ಅದೂ ವೆಡ್ಡಿಂಗ್ ರಿಂಗ್ ಮತ್ತು ದುಬಾರಿ ಬೆಲೆಯ ವಜ್ರದ ಉಂಗುರ ಆದ್ದರಿಂದ ತುಂಬಾ ಬೇಜಾರು ಮಾಡಿಕೊಂಡು ಕಣ್ಣೀರು ಹಾಕುತ್ತ ಮಕ್ಕಳ ಜೊತೆ ಮನೆಯ ತುಂಬಾ ಹುಡುಕಿದಳು ಲೀನಾ, ಆದರೆ ಎಷ್ಟೇ ಹುಡುಕಿದರೂ ಕೂಡ ಆ ಉಂಗುರ ಮಾತ್ರ ಸಿಗಲೇ ಇಲ್ಲ. ಹೀಗೆ 16 ವರ್ಷ ಕಳೆದ ನಂತರ…