Village

ಕೋಲಾರ ಜಿಲ್ಲೆಯಲ್ಲಿರುವ ಹುಂಗೇನಹಳ್ಳಿ ಗ್ರಾಮದ ಬಗ್ಗೆ ನಿಮಗೆಷ್ಟು ಗೊತ್ತು? ಓದಿ ಈ ಲೇಖನವನ್ನು

81

ಹುಂಗೇನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿದೆ.ಇದರ ಮೂಲ ಹೆಸರು ಹೊಂಗೇನಹಳ್ಳಿ.ಮಾಲೂರು ಕೋಲಾರ ಮುಖ್ಯರಸ್ತೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿದೆ.

ಗ್ರಾಮದ ಸುತ್ತಲೂ ಮೂರು ಕೆರೆಗಳಿಗೆ ಗ್ರಾಮದ ಗ್ರಾಮಸ್ಥರಿಗೆ (ರೈತರಿಗೆ) ಕೆರೆಗಳ ಅಚ್ಚುಕಟ್ಟೆನಲ್ಲಿ ಜಮೀನು ಇದೆ.ಹಸಿರಿನಿಂದ ತುಂಬಿದ ಗ್ರಾಮ.ಹುಂಗೇನಹಳ್ಳಿಯ ರೈತರು ಪ್ರಗತಿಪರ ರೈತರಾಗಿದ್ದರು.ಮೊದಲಿನಿಂದಲೂ ತಾಲ್ಲೂಕಿನ ಮಾದರಿ ಗ್ರಾಮವಾಗಿದೆ.ಹುಂಗೇನಹಳ್ಳಿಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿತವಾದ ಆಂಜನೇಯ ಸ್ವಾಮಿ ದೇವಸ್ಥಾನ ಕೋಟೆ ಹೊರಗಡೆ ಇದೆ.ಕೋಟೆ ಒಳಗಡೆ ಊರಬಾಗಿಲಿನಲ್ಲಿ ಮಾರಿಕಾಂಬಾ ದೇವಸ್ಥಾನ ಇದೆ.

ನಮಗೆ ತಿಳಿದ ಪ್ರಕಾರ ನಮ್ಮ ಹಿರಿಯರು ಮದ್ರಾಸ್ ಪ್ರಾಂತ್ಯದ ಕಂಚಿ ಪಟ್ಟಣದಿಂದ ಬಂದವರು.ಇಲ್ಲಿ ಬಂದು ಪ್ರಕೃತಿಯ ಅನುಕೂಲವನ್ನು ನೋಡಿ ಇಲ್ಲಿ ನೆಲೆಸಲು ನಿರ್ಧರಿಸಿದರು.ಆಗ ಸ್ಥಳದಲ್ಲಿ ಹೊಂಗೆ ಮರಗಳು ವಿಪರೀತ ಬೆಳೆದಿದ್ದವು. ಮರದ ಕೆಳಗೆ ವಾಸ ಮಾಡಿ ಗ್ರಾಮ ಮತ್ತು ಕೋಟೆ ಕಟ್ಟಿದರು. ಹೊಂಗೆ ಮರಗಳು ಆಶ್ರಯ ಕೊಟ್ಟಿದ್ದರಿಂದ ಗೊತ್ರದ ಹೆಸರನ್ನು ಹುಂಗಲರ ಗೊತ್ರದವರು ಎಂದು ಕರೆಯುತ್ತಾರೆ.ಹೊಂಗೆ ಮರದ ಸೌದೆಯನ್ನು ಅಡಿಗೆ ಮಾಡಲು ಬಳಸುವುದಿಲ್ಲ. ಕೆಂಪೇಗೌಡರ ಪಾಳೇಗಾರರಾಗಿದ್ದರು. ಊರಿನಲ್ಲಿ ಮೊದಲಿನಿಂದಲೂ ವಿದ್ಯಾವಂತರಿದ್ದರು.

ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ರವರ ತಾಯಿ ಗ್ರಾಮದವರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ‌‌‌‌‌‌‌‌‌‌‌‌‌‌ರವರು ಗ್ರಾಮದಲ್ಲಿ ಕೆಲವು ದಿನಗಳ ಕಾಲ ನೆಲೆಸಿದ್ದರು.ಮತ್ತು ಗ್ರಾಮದಲ್ಲಿ ಮೊದಲಿನಿಂದಲೂ ಹಲವು ವಿದ್ಯಾವಂತರು ನಾಡಿಗೆ ಸೇವೆ ಸಲ್ಲಿಸಿದ್ದಾರೆ.ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ,ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ.

ಶೈಕ್ಷಣಿಕವಾಗಿ ತಾಲ್ಲೂಕಿಗೆ ಅತಿ ಹೆಚ್ಚು ಶಿಕ್ಷಕರನ್ನು ನೀಡಿದ ಗ್ರಾಮ ಎಂದು ಇತಿಹಾಸ ಹೇಳುತ್ತದೆ.

ರಾಜಕೀಯವಾಗಿಯೂ ಗ್ರಾಮ ಪ್ರಸಿದ್ಧಿ ಪಡೆದಿದೆ.ಶ್ರೀ ದೇವಿರಪ್ಪ ಗ್ರಾಮದ ಮೊದಲ ಶಾಸಕ.ಇಂಜಿನೀಯರ್ ಹಿರಣ್ಯಗೌಡರವರು, ಇನ್ನೂ ಕೆಲವರು ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ.ಉದ್ಯಮದಲ್ಲೂ ಗ್ರಾಮ ಹೆಸರು ಪಡೆದಿದೆ ಇಟ್ಟಿಗೆ & ಹೆಂಚು ಕಾರ್ಖಾನೆ ಇದೆ.

About the author / 

Raj Rao

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    IMA ವಿರುದ್ಧ 11 ಸಾವಿರಕ್ಕು ಹೆಚ್ಚು ದಾಕಲಾದ ಕಂಪ್ಲೆಂಟ್…..!

    ಐಎಂಎ ಜ್ಯುವೆಲ್ಲರ್ಸ್ ನಿಂದ ಮೋಸಕ್ಕೊಳಗಾಗಿರುವವರ ಕಂಪ್ಲೆಂಟ್ ಸಂಖ್ಯೆ 11 ಸಾವಿರಕ್ಕೇರಿದೆ. ಶಿವಾಜಿನಗರ ಸಮದ್ ಹೌಸ್ ಚೌಟ್ರಿಯಲ್ಲಿ ಬಂಡಲ್ ಬಂಡಲ್‍ಗಟ್ಟೆ ಕಂಪ್ಲೆಂಟ್‍ಗಳನ್ನು ಪೊಲೀಸರು ಸ್ವೀಕರಿಸಿದ್ದಾರೆ. ಎಸ್‍ಐಟಿ ಮುಖ್ಯಸ್ಥರನ್ನಾಗಿ ಎಡಿಜಿಪಿ ಸಲೀಂ ನೇಮಕ ಬಹುತೇಕ ಖಚಿತ ಅಂತ ತಿಳಿದು ಬಂದಿದೆ. ಮುಸ್ಲಿಂ ಸಮುದಾಯದವರೇ ಆಗಿರುವ ಸಲೀಂ ನಿಯೋಜಿಸಿದ್ರೆ ಉತ್ತಮ, ತನಿಖೆಗೆ ಸಹಕಾರಿಯಾಗುತ್ತದೆ ಅನ್ನೋದು ಗೃಹ ಸಚಿವ ಎಂ.ಬಿ. ಪಾಟೀಲರ ಭಾವನೆ. ಹೀಗಾಗಿ, ಇಂದು ಗೃಹ ಸಚಿವರು ಆದೇಶ ಹೊರಡಿಸುವ ಸಾಧ್ಯತೆ ಇದೆ. ಒಂದು ವೇಳೆ, ಸಲೀಂ ಹಿಂದೆ ಸರಿದರೆ, ಎಡಿಜಿಪಿ…

  • ಉಪಯುಕ್ತ ಮಾಹಿತಿ

    ಆಧಾರ್‌ ಕಾರ್ಡ್‌’ನಲ್ಲಿ ತಪ್ಪುಗಳಿದ್ದರೆ ನೀವೇ, ನಿಮ್ಮ ಮೊಬೈಲ್’ನಲ್ಲೇ ಸರಿಪಡಿಸಬಹುದು! ಹೇಗೆ ಗೊತ್ತಾ?

    ಈಗ ಎಲ್ಲದಕ್ಕೂ ಒಂದೇ ಕಾರ್ಡ್‌ – ಅದುವೇ ಆಧಾರ್‌ ಕಾರ್ಡ್‌.ಸರ್ಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ಸಂಗತಿ ನಮಗೆಲ್ಲ ತಿಳಿದಿದೆ. 12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ,ಈ ದಿನದ ರಾಶಿ ಭವಿಷ್ಯದಲ್ಲಿ ರಾಜಯೋಗವಿದ್ದು ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 13 ಜನವರಿ, 2019 ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ನಿಮ್ಮ…

  • ಸುದ್ದಿ

    ‘ಪಾರ್ಲೆ’ ಉದ್ಯೋಗಿಗಳ ಕೆಲಸಕ್ಕೆ ಕುತ್ತು : 10 ಸಾವಿರ ಕಾರ್ಮಿಕರಿಗೆ ಸಂಕಷ್ಟ……!

     ಏಳೆಂಟು ದಶಕಗಳ ಇತಿಹಾಸ ಹೊಂದಿರುವ ದೇಶದ ಅತ್ಯಂತ ದೊಡ್ಡ ಬಿಸ್ಕತ್ ತಯಾರಿಕಾ ಸಂಸ್ಥೆ ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಸುಮಾರು 10 ಸಾವಿರ ಉದ್ಯೋಗಿಗಳನ್ನು ಕೈಬಿಡುವ ಸಾಧ್ಯತೆಯಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಟೋ ಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಉದ್ಯೋಗ ನಷ್ಟ ಉಂಟಾಗಿರುವ ವರದಿಯ ಬೆನ್ನಲ್ಲೇ ಬೇಡಿಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಪಾರ್ಲೆ ಬಿಸ್ಕತ್ ಸಂಸ್ಧೆ ತನ್ನ 10 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದೆ ಎಂದು ಸುದ್ದಿ ಸಂಸ್ಧೆಯೊಂದು ವರದಿ ಮಾಡಿದೆ. ಜಿಎಸ್ ಟಿ ಕಡಿತಗೊಳಿಸುವಂತೆ ನಾವು…