ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚರಕ ಸಂಹಿತೆ ಇಂದಿಗೂ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಗ್ರಂಥ ಎಂದು ಎಲ್ಲ ವೈದ್ಯರು ಒಕ್ಕೊರಲಿನಿಂದ ಒಪ್ಪುತ್ತಾರೆ , ಹೊಸ ಆರೋಗ್ಯ ಸಮಸ್ಯೆಗಳು , ಜಟಿಲ ಕಾಯಿಲೆಗಳು ಉತ್ಪತ್ತಿ ಆದಾಗ ವೈಜ್ಞಾನಿಕ ಪ್ರಪಂಚ ಆಸೆ ಭರವಸೆಗಳಿಂದ ನೋಡುವುದು ಈ 2ನೇ ಶತಮಾನದ ಗ್ರಂಥದೆಡೆಗೆ , ಚರಕ ಸಂಹಿತೆಯಲ್ಲಿ ಅಗ್ನಿವೇಶ ಎಂಬ ವಿದ್ಯಾರ್ಥಿಯು ಗುರುವಾದ ಅತ್ರೇಯರಲ್ಲಿ ನಮ್ಮ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳಿದ್ದಾನೆ -ಹಿತಕರವಾದ ಅಥವಾ ಅಹಿತಕರವಾದ ಆಹಾರ ಸೇವಿಸುವ ಎರಡು ತರಹದ ಜನರಲ್ಲಿ ಕೂಡ ಕೆಲವರು ಆರೋಗ್ಯದಿಂದ ಇರುತ್ತಾರೆ ,ಕೆಲವರು ರೋಗಿಗಳಾಗುತ್ತಾರೆ ಅಂತಹ ಸಂಧರ್ಭದಲ್ಲಿ ಹಿತ ಅಥವಾ ಅಹಿತ ಆಹಾರದಿಂದಲೇ ಆರೋಗ್ಯ , ಅನಾರೋಗ್ಯಗಳಾಯಿತು ಎಂದು ಹೇಗೆ ನಾವು ನಿಶ್ಚಯಿಸಿಕೊಳ್ಳಬಹುದು ಎಂಬುದೇ ಆ ಪ್ರಶ್ನೆ.
ಇದಕ್ಕೆ ಉತ್ತರಿಸುತ್ತಾ ಅತ್ರೇಯರು ಹೇಳುತ್ತಾರೆ ಕೇವಲ ಹಿತಾಹಾರ ಸೇವನೆಯಿಂದ ಎಲ್ಲ ರೋಗಗಳ ಆತಂಕ ನಿವಾರಣೆ ಅಸಾಧ್ಯ. ಏಕೆಂದರೆ ಅಹಿತ ಆಹಾರಕ್ಕೂ ಮಿಗಿಲಾಗಿ ರೋಗದ ಉತ್ಪತ್ತಿಗೆ ಇನ್ನು ಅನೇಕ ಕಾರಣಗಳಿರುತ್ತವೆ. ಉದಾಹರಣೆಗೆ-ಕಾಲ ವಿಪರ್ಯಾಯ ಎಂದರೆ ಋತು ಕಾಲಕ್ಕೆ ಅನುಸಾರ ಗುಣಗಳಾದ ಚಳಿ ಸೆಖೆ ಮಳೆಗಳು ತೀವ್ರವಾಗಿ ಏರು ಪೆರು ಆಗುವುದು ,ಇದು ರೋಗಕಾರಕ ಕ್ರಿಮಿಗಳನ್ನು ಬಲಪಡಿಸುವುದು ನಮ್ಮ ಶರೀರ ಬಲವನ್ನು ಕಡಿಮೆ ಮಾಡುವುದು.
ಪ್ರಜ್ಞಾಪರಾಧ – ಆರೋಗ್ಯಕ್ಕೆ ಹಾನಿಕರ ಎಂದು ತಿಳಿದು ತಿಳಿದು ಮಾಡುವಂತಹವು ಅನೇಕ ಗುಟ್ಕಾ ,ತಂಬಾಕು ಸೇವನೆಯಿಂದ ಹಿಡಿದು ಐಸ್ ಕ್ರೀಮ್ , ಅತಿ ಮಾಸಲೆಗಳನ್ನು ತಿಂದು ಅಸಿಡಿಟಿ ಮಾಡಿಕೊಳ್ಳುವುದು, ಹಸಿವಿಲ್ಲದಿದ್ದರು ಕೂಡ ಅತಿಯಾಗಿ ತಿನ್ನುವುದು, ಶುಚಿಯಾಗಿ ಕೈ ಕಾಲು ತೊಳೆಯದೆ ಇರುವುದು ,ಸ್ವಚ್ಛ ಬಟ್ಟೆ ಧರಿಸದಿರುವುದು , ಎಲ್ಲವು ಪ್ರಜ್ಞಾಪರಾಧಗಳೇ ,ನಮ್ಮ ಜ್ಞಾನೇಂದ್ರಿಯಗಳಿಗೆ ಒಗ್ಗದ ಶಬ್ದ ,ಸ್ಪರ್ಶ ,ರೂಪ , ರುಚಿ , ಹಾಗು ವಾಸನೆಗಳನ್ನು ಅನುಭವಿಸುವುದು ಇತ್ಯಾದಿ.
ಪ್ರತಿ ವ್ಯಕ್ತಿಯ ಶರೀರದ ರಕ್ತ ಮಾಂಸಾದಿ ಧಾತುಗಳು ,ವಾಸಿಸುವ ಸ್ಥಳ,ಶರೀರ ಬಲ ,ಕಾಲ- ವಾತಾವರಣ , ಸ್ಥೂಲ ಜೀರ್ಣ ಶಕ್ತಿ ಹಾಗು ಸೂಕ್ಷ್ಮವಾದ ಪ್ರತಿ ಕೋಶಗಳ ಮೈಟೊಕಾಂಡ್ರಿಯ ದಲ್ಲಿ ಆಗುವ ಜೀರ್ಣ ಕ್ರಿಯೆ ,ವಯಸ್ಸು , ಅಹಿತದ ಪ್ರಮಾಣ ಇತ್ಯಾದಿ ಅನೇಕ ಕಾರಣಗಳ ವಿವಿಧ ರೀತಿಯ ಸಂಯೋಗದಿಂದ ವ್ಯಾಧಿ ಉತ್ಪತ್ತಿ ಆಗುತ್ತದೆ ಅದಕ್ಕಾಗಿಯೇ ಅದೇ ರೋಗವು ಕೆಲವರಲ್ಲಿ ಶೀಘ್ರವಾಗಿ ಉತ್ಪತ್ತಿ ಆಗಬಹುದು ಕೆಲವರಲ್ಲಿ ನಿಧಾನವಾಗಿ , ಹಾಗು ಸಣ್ಣದಾಗಿಯೂ ಬರಬಹುದು ಅಥವಾ ಉಗ್ರ ರೂಪ ತಾಳಿ ಸಾವಿಗೂಕಾರಣ ಆಗಬಹುದು. ಇದೇ ಕಾರಣಕ್ಕಾಗಿ ಯಾವುದೇ ಕೊರೊನದಂತಹ ಸಾಂಕ್ರಾಮಿಕ ಕಾಯಿಲೆಗಳು ಕೂಡ ಒಂದೇ ಮನೆಯ, ಒಂದೇ ಕಚೇರಿಯ ಎಲ್ಲರಿಗು ಒಂದೇ ತರಹದಲ್ಲಿ ಭಾದಿಸುತ್ತಿಲ್ಲ.
ಮುಂದುವರಿದು ಅತ್ರೇಯರು ಸಾಂಧರ್ಭಿಕವಾಗಿ ಹೇಳುತ್ತಾರೆ “ನಾನಾವೃತ ಮುಖೋ ಜೃಂಭ ,ಕ್ಷವತು, ಹಾಸ್ಯಾಂ ವಾ ಪ್ರವರ್ತಯೇತ್” ಅಂದರೆ ಬಾಯಿ ಹಾಗು ಮೂಗನ್ನು ಮುಚ್ಚದೆ ಆಕಳಿಸುವುದು ,ಸೀನುವುದು ,ನಗೆಯಾಡುವುದು ಮಾಡಬಾರದು ,ಮೂಗಿನ ಹೊಳ್ಳೆಗಳಿಗೆ ಬೆರಳು ಹಾಕುವುದು ,ಉಗುರು ಕಚ್ಚುವುದು ,ಕಂಡ ಕಂಡಲ್ಲಿ ಉಗುಳುವುದು ,ಮಲಮೂತ್ರಗಳ ವಿಸರ್ಜನೆಯನ್ನು ಕೂಡ ಆರೋಗ್ಯದ ದೃಷ್ಟಿಯಿಂದ ಮಾಡದಂತೆ ಎಚ್ಚರಿಸಿದ್ದಾರೆ ,.
ವ್ಯಾಧಿಕ್ಷಮತ್ವ- ಆಯುರ್ವೇದದಲ್ಲಿ ವ್ಯಾಧಿಕ್ಷಮತ್ವ ಎಂಬುದು ಬಹುಚರ್ಚಿತ ವಿಷಯವಾಗಿದ್ದು ಅದನ್ನೇ ಶರೀರ ಬಲ ಅಥವಾ ಈ ದಿನಗಳಲ್ಲಿ ಇಮ್ಯೂನಿಟಿ ಎಂದು ಕರೆಯುತ್ತಾರೆ ,ವ್ಯಾಧಿ ಕ್ಷಮತ್ವ ಎಂದರೆ ವ್ಯಾಧಿ ಬಲವನ್ನು ವಿರೋಧಿಸುವ ಶರೀರ ಹಾಗು ಮನಸ್ಸಿನ ಶಕ್ತಿಯಾಗಿದ್ದು ವ್ಯಾಧಿ ಬರದಂತೆ ತಡೆಯುವುದರೊಂದಿಗೆ ,ಬಂದರೋಗದಿಂದ ಬೇಗನೆ ಗುಣಮುಖವಾಗಲು ಪ್ರಧಾನ ಕಾರಣವಾಗಿರುವ ಪ್ರತಿರೋಧಕ ಶಕ್ತಿಯೇ ಆಗಿರುತ್ತದೆ ಅದರ ಕೊರತೆಯಿಂದಾಗಿ ಅನೇಕ ವಯಸ್ಕರು , ಹೃದ್ರೋಗಿಗಳು ಕೊರೋನ ಕ್ಕೆ ಬಲಿಯಾಗುವುದು ಗೋಚರಿಸುತ್ತಿದೆ ,
ಶರೀರ ಬಲ ಚರಕ ಸಂಹಿತೆ ಪ್ರಕಾರ ಮೂರು ತರಹದ್ದಾಗಿರುತ್ತದೆ ,
1) ಸಹಜ ಬಲ- ಇದು ಜನ್ಮದಿಂದ ಪ್ರಾಪ್ತಿ ಆಗುವಂತದ್ದು ,ಅಪ್ಪ ಅಮ್ಮನಿಂದ ಉತ್ಪತ್ತಿ ಆದ ವೀರ್ಯ ಅಂಡಾಣು, ಗರ್ಭಿಣಿಯ ಆಹಾರ ಹಾಗು ಅವರ ಮನಸ್ಸಿಗೆ ಅನುಗುಣವಾಗಿರುತ್ತದೆ , ಸಧೃಡ ದೇಹ ಇದ್ದು ದುರ್ಬಲ ಮನಸ್ಸಿರಬಹುದು ಅಥವಾ ಬಲಹೀನ ಶರೀರದಲ್ಲಿ ಅಪ್ಪ ಅಮ್ಮನಿಗೆ ಅನುಗುಣವಾಗಿ ಸತ್ವಯುತ ಮನಸ್ಸಿರಬಹುದು.
2) ಎರಡನೆಯದು ಕಾಲಜ ಬಲ- ಎಂದರೆ ಋತುವಿಗೆ ಹಾಗು ವಯಸ್ಸಿಗೆ ಅನುಸಾರವಾಗಿ ಉದಾಹರಣೆಗೆ ಹೇಮಂತ ಶಿಶಿರ ಋತುಗಳಲ್ಲಿ ಸಹಜವಾಗಿ ಶರೀರ ಬಲ ಹೆಚ್ಚಿದ್ದು ಕಾಯಿಲೆಗಳು ಕಮ್ಮಿ ಇರುವುದು ಕಂಡು ಬರುತ್ತದೆ ಅಂತೆಯೇ ಬಾಲ್ಯ , ಯೌವನ ಹಾಗು ವೃದ್ಧಾಪ್ಯ ಕಾಲಾನುಸಾರ ಶರೀರ ಬಲ.
3) ಮೂರನೆಯದಾಗಿ ಯುಕ್ತಿ ಕೃತ ಬಲ- ಅಂದರೆ ನಮ್ಮ ಬುದ್ಧಿವಂತಿಕೆಯಿಂದ ಶರೀರ ಬಲವನ್ನು ಪಡೆದುಕೊಳ್ಳುವುದು ಇದರಲ್ಲಿ ವ್ಯಾಯಾಮ, ಹಾಲು , ತುಪ್ಪ, ಹಣ್ಣುಗಳ ಸೇವನೆ , ಒಳ್ಳೆಯ ದಿನಚರಿ ಪಾಲನೆ ,ಲೇಹ್ಯ ರಾಸಾಯನದಂತಹ ಔಷಧಿಗಳು ಇಂದಿನ ಯುಗದ ವ್ಯಾಕ್ಸೀನ್ ಕೂಡ ಒಳಗೊಂಡಂತೆ ಇದೆ.
ವ್ಯಾಧಿಕ್ಷಮತ್ವ ಎಂಬುದು ಆಯುರ್ವೇದದ ಸಿದ್ಧಾಂತ ಪ್ರಕಾರ ಪೋಲಿಯೋ, ದಡಾರ ಅಥವಾ ಇತರೆ ಯಾವುದೇ ವ್ಯಾಕ್ಸೀನ್ ನಂತೆ ಯಾವುದೇ ಒಂದು ನಿರ್ದಿಷ್ಟ ಕ್ರಿಮಿಯ ರೋಗದ ವಿರುದ್ಧವಾಗಿ ಇರುವುದಿಲ್ಲ, ಇದು ಎರಡು ವಿಷಯಗಳ ಆಧಾರಿತವಾಗಿ ಇದೆ.
ಮೊದಲನೆಯದಾಗಿ ಕಾಯಿಲೆ ತರುವ ಕ್ರಿಮಿಗೆ ಅನುಕೂಲಕರವಾಗುವಂತೆ ನಮ್ಮ ದೇಹ ಇದ್ದಾಗ ಕಾಯಿಲೆ ಆಗುತ್ತದೆ ಹಾಗು ಎರಡನೆಯದಾಗಿ ಎಲ್ಲ ವ್ಯಕ್ತಿಗಳು ಕೂಡ ಒಂದೇ ಮಟ್ಟಕ್ಕೆ ಕಾಯಿಲೆಗೆ ಒಳಪಡುವುದಿಲ್ಲ. ,ತಾತ್ಪರ್ಯ ಏನೆಂದರೆ ಹೇಗೆ ಅನುಕೂಲವಾದಂತ ಭೂಮಿ ಸಿಗದಿದ್ದರೆ ಬಿತ್ತಿದ ಬೀಜ ತಾನೇ ನಾಶವಾಗುವುದೋ ,ಇಂಧನ ಇಲ್ಲದ ಅಥವಾ ಗಾಳಿ ಇಲ್ಲದೆ ಬೆಂಕಿ ಹೇಗೆ ಆರುವುದೋ ಅಂತೆಯೇ ವ್ಯಾಧಿಕ್ಷಮತ್ವದಿಂದಾಗಿ ವ್ಯಾಧಿಗೆ ಅನುಕೂಲ ಪರಿಸ್ಥಿತಿ ನಮ್ಮ ದೇಹದಲ್ಲಿ ಇಲ್ಲದಿದ್ದಾಗ ಸಹಜವಾಗಿ ಸಾಂಕ್ರಾಮಿಕ ಹಾಗು ಇತರೆ ಕಾಯಿಲೆಗಳ ವಿರುದ್ಧ ದೇಹ ಗೆಲ್ಲುತ್ತದೆ , ಕ್ರಿಮಿ ಯಾವುದು ಎಂಬುದು ಮುಖ್ಯ ಅಲ್ಲ ನಮ್ಮ ಶರೀರ ಹೇಗಿದೆ ಎಂಬುದೇ ಅತಿ ಮುಖ್ಯ.
ವ್ಯಾಧಿಕ್ಷಮತ್ವ ಎಂಬುದು ಸೂಪರ್ ಮಾರ್ಕೆಟ್ ಗಳಲ್ಲಿ ಮಾರಾಟಕ್ಕಿರುವ ವಸ್ತುವಲ್ಲ ,ಆರೋಗ್ಯವನ್ನು ಕಾಪಾಡಲು ಬೇಕಾದ ಆಹಾರ ,ವಿಹಾರ, ನಿದ್ರೆ , ಒತ್ತಡ ರಹಿತ ಜೀವನ ಹಾಗು ದಿನಚರಿಗಳಲ್ಲಿ ಅಡಗಿದೆ ,ಅಂತೆಯೇ ಮನೆ ಮದ್ದಿಗೆ ಹೇಳುವ ಅರಶಿನ ಇತ್ಯಾದಿ ಮಸಾಲೆಗಳು ಮಾತ್ರ ಆಯುರ್ವೇದ ಅಲ್ಲ ಅವು ಆಯುರ್ವೇದದ ಔಷಧಿ ಸಮುದ್ರದಿಂದ ಒಂದು ಹನಿ ತೆಗೆದಂತೆ ಮಾತ್ರ .
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಲು ಸಾಲು ಹಬ್ಬಗಳು ಬರುತ್ತಿರುವುದು ಮತ್ತು ಬಿಗ್ ಬಿಲಿಯನ್ ಡೇಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅತಿ ದೊಡ್ಡ ಇ-ಕಾಮರ್ಸ್ ಮಾರ್ಕೆಟ್ಪ್ಲೇಸ್ ಆಗಿರುವ ಫ್ಲಿಪ್ಕಾರ್ಟ್ 50,000 ಕ್ಕೂ ಅಧಿಕ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಫ್ಲಿಪ್ಕಾರ್ಟ್ನ ಸಪ್ಲೈ ಚೇನ್, ಲಾಜಿಸ್ಟಿಕ್ ಮತ್ತು ಗ್ರಾಹಕ ಬೆಂಬಲ ವಿಭಾಗಗಳಲ್ಲಿ ಈ ಉದ್ಯೋಗಗಳನ್ನು ಸೃಜಿಸಿದೆ. ಇದಲ್ಲದೇ, ಬಿಬಿಡಿ ಅಂದರೆ ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಮಾರಾಟ ಜಾಲದಲ್ಲಿ ಶೇ.30 ರಷ್ಟು ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ವರ್ಷದ ದೊಡ್ಡ ಕಾರ್ಯಕ್ರಮವಾದ ಬಿಬಿಡಿ ಸೆಪ್ಟಂಬರ್29 ಕ್ಕೆ…
ಚಳಿಗಾಲ ಬಂತೆಂದರೆ ಏನನ್ನಾದರೂ ತಿನ್ನುತ್ತಲೇ ಇರಬೇಕು ಎನಿಸದೇ ಇರದು. ಕಾಳು, ಹಣ್ಣುಗಳು, ತುಪ್ಪದಂತಹ ಪದಾರ್ಥಗಳು ದೇಹದ ಉಷ್ಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿ, ಹಾಗಾಗಿ ಈ ಬಗೆ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಇದರಿಂದ ದೇಹದ ಉಷ್ಣತೆ ಕಾಪಾಡುವುದರ ಜತೆಗೆ ಕಾಯಿಲೆ ಬೀಳದಿರಲು ಇದೊಂದು ಒಳ್ಳೆಯ ಉಪಾಯವೂ ಹೌದು. ಶೇಂಗಾ ಮತ್ತು ದ್ವಿದಳ ಧಾನ್ಯಗಳು, ಬಾದಾಮಿ ಮತ್ತು ಗೋಡಂಬಿ ಮತ್ತು ಇವುಗಳಿಂದ ತಯಾರಿಸಿದ ಪದಾರ್ಥಗಳು ಉತ್ತಮ. ಅಲ್ಲದೆ ಇವು ದೇಹದೊಳಗಿನ ಕೊಲೆಸ್ಟ್ರಾಲ್ನ್ನು ಹೆಚ್ಚಿಸುವುದಿಲ್ಲ. ಗೋಡಂಬಿ ಸೇವನೆಯಿಂದ ದೇಹದೊಳಗೆ ಕೊಲೆಸ್ಟ್ರಾಲ್…
ಮುಂಬೈನಲ್ಲಿ ನದಿ ಕೆಳಗೆ ಮೆಟ್ರೋ ಮಾರ್ಗ ನಿರ್ಮಿಸಲು ಮುಂಬೈ ಮೆಟ್ರೋ ನಿಗಮ ನಿರ್ಧರಿಸಿದೆ, ಕಾಮಗಾರಿಯೂ ಆರಂಭಗೊಂಡಿದೆ. ಗ್ಯಾಲರಿ ಧಾರಾವಿ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಡುವೆ ಮೀಠಿ ನದಿ ಆಳದಲ್ಲಿ ಅಂದಾಜು 170 ಮೀಟರ್ ಉದ್ದದ ಮೆಟ್ರೋ ಸಾಗಲಿದೆ. ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್ ಸೇಂಟ್ಸ್ ಚರ್ಚ್ ಈ ಯೋಜನೆಗೆ ಸುಮಾರು 54 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ನದಿ ಕೆಳಗೆ ಸುರಂಗ ಕೊರೆಯುವ ಮೊದಲು ಸುರಕ್ಷಿತ ಪರದೆ…
ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ.”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ,ಅಂದರೆ ರುದ್ರನ ಕಣ್ಣು.”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷವೆಂಬುದು ಒಂದು ಮರ.ಆ ಮರದ ಬೀಜವೇ ರುದ್ರಾಕ್ಷಿ.ಶಿವ ಪುರಾಣ,ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.ಅನೇಕ ವರ್ಷಗಳ ಸತತ ಧ್ಯಾನದ ನಂತರ ಸದಾಶಿವ ತನ್ನ ಕಣ್ಣುಗಳನ್ನು ತೆರೆದ.ಆಗ ಕಣ್ಣುಗಳಿಂದ ಅಶ್ರು ಸುರಿಯಿತು.ಆ ಕಣ್ಣಿರಿನಿಂದಲೇ ಜನ್ಯವಾದದ್ದು ರುದ್ರಾಕ್ಷವೃಕ್ಷ ಎಂಬ ಪೌರಾಣಿಕ ಕಥೆಯಿದೆ.
ಆಧುನಿಕತೆ ಬೆಳೆದಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಾನವ ಅನೇಕ ಸಾಧನೆ ಮಾಡಿದ್ದಾನೆ. ಅವುಗಳಿಂದ ಅದೆಷ್ಟು ಒಳ್ಳೆಯ ಫಲಿತಾಂಶ ಪಡೆಯುತ್ತೇವೆಯೋ ಅಷ್ಟೇ ಕೆಟ್ಟಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ನಾವು ಕ್ಷಣ ಮಾತ್ರಕ್ಕೂ ಮರೆಯುವಹಾಗಿಲ್ಲ. ತಂತ್ರಜ್ಞಾನಗಳ ನವೀಕರಣವಾಗುತ್ತಿದ್ದಂತೆ ಮನುಷ್ಯನ ಸಂಬಂಧಗಳಲ್ಲಿ ಬಹಳಷ್ಟು ಅಂತರಗಳು ಸೃಷ್ಟಿಯಾಗುತ್ತಿವೆ.
ದೆಹಲಿಯಲ್ಲಿ ಸತತ 18ನೇ ದಿನವೂ ಡೀಸೆಲ್ ಬೆಲೆ ಏರಿಕೆಯಾಗಿದೆ. ಪರಿಣಾಮ ಪೆಟ್ರೋಲ್ ದರ ಹಾಗೆ ಉಳಿದರೆ ಡೀಸೆಲ್ ಬೆಲೆ ದಾಖಲೆಯನ್ನು ಬರೆದಿದೆ. ಇದರಿಂದಾಗಿ ಇದೇ ಮೊದಲ ಬಾರಿಗೆ ದೇಶದ ರಾಜಧಾನಿಯಲ್ಲಿ ಡೀಸೆಲ್ಗೆ ಪೆಟ್ರೋಲ್ಗಿಂತ ಹೆಚ್ಚಿನ ಬೆಲೆ ನಿಗದಿಯಾಗಿದೆ. ಡೀಸೆಲ್ ಬೆಲೆಯಲ್ಲಿ ಇಂದು 48 ಪೈಸೆ ಹೆಚ್ಚಿಸಲಾಗಿದೆ. ಹೀಗಾಗಿ ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ಈಗ 79.88 ರೂ. ಇದ್ದರೆ, ಪ್ರತಿ ಲೀಟರ್ ಪೆಟ್ರೋಲ್ಗೆ 79.76 ರೂ. ನಿಗದಿಯಾಗಿದೆ. ಈ ಮೂಲಕ ಪೆಟ್ರೋಲ್ಗಿಂತ ಡೀಸೆಲ್ ಬೆಲೆ 12 ಪೈಸೆ…