ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇವರು ಭೂಮಿ ಮತ್ತು ಸ್ವರ್ಗಗಳನ್ನು 6 ದಿನದಲ್ಲಿ ನಿರ್ಮಿಸಿದ ಮತ್ತು ಉಳಿದ ಅಗತ್ಯ ವಸ್ತುಗಳನ್ನು 7ನೇ ದಿನದಂದು ನಿರ್ಮಿಸಿದ ಅನ್ನೋದನ್ನ ಜಗತ್ತಿನ 14 ಮಿಲಿಯನ್ ಜನ ಈಗಲೂ ನಂಬುತ್ತಾರೆ ಅನ್ನೋದನ್ನು ನಾನು ನನ್ನ ಹಿಂದು,ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಯಹೂದಿ ಗೆಳೆಯರಲ್ಲಿ ಹೇಳ್ದಾಗ ಯಹೂದಿ ಗೆಳೆಯನನ್ನು ಬಿಟ್ಟು ಉಳಿದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕರು.
ಕೋಪಗೊಂಡ ವಾನರನೋರ್ವ ಸೂರ್ಯನನ್ನೇ ತಿನ್ನಲು ಪ್ರಯತ್ನಿಸಿ ಮುಖ ಊದಿಸಿಕೊಂಡ ಅನ್ನೋದನ್ನ ಈಗಲೂ ಜಗತ್ತಿನ 100 ಕೋಟಿ ಜನ ನಂಬುತ್ತಾರೆ ಅನ್ನೋದನ್ನ ನಾನು ನನ್ನ ಕ್ರಿಶ್ಚಿಯನ್,ಮುಸ್ಲಿಂ,ಯಹೂದಿ ಮತ್ತು ಹಿಂದು ಗೆಳೆಯರಲ್ಲಿ ಹೇಳಿದಾಗ ಹಿಂದು ಒಬ್ಬನನ್ನು ಬಿಟ್ಟು ಎಲ್ಲ ಬಿದ್ದು ಬಿದ್ದು ನಕ್ಕರು.
ಸಣ್ಣ ಸಣ್ಣ ಹಕ್ಕಿಗಳು ತಮ್ಮ ಸಣ್ಣ ಸಣ್ಣ ಕೊಕ್ಕುಗಳಿಂದ ಕಲ್ಲುಗಳನ್ನ ಹಾಕಿ ಆನೆಗಳ ಇಡೀ ಸೈನ್ಯವನ್ನೇ ಧ್ವಮ್ಸಗೈದವು ಅನ್ನೋದನ್ನ ಈಗಲೂ ಜಗತ್ತಿನ 160 ಕೋಟಿ ಜನ ನಂಬುತ್ತಾರೆ ಅನ್ನೋದನ್ನ ನಾನು ನನ್ನ ಕ್ರಿಶ್ಚಿಯನ್, ಮುಸ್ಲಿಂ, ಹಿಂದು ಮತ್ತು ಯಹೂದಿ ಗೆಳೆಯರಲ್ಲಿ ಹೇಳಿದಾಗ ಮುಸಲ್ಮಾನನೊಬ್ಬನನ್ನು ಬಿಟ್ಟು ಎಲ್ಲ ನಕ್ಕರು.
ದೇವರ ಶಾಪದಿಂದಾಗಿ ಅಂಜೂರದ ಮರವು ಬೇರು ಸಮೇತ ಕಳೆಗುಂದಿತು ಅನ್ನೋದನ್ನ ಈಗಲೂ ಜಗತ್ತಿನ 200 ಕೋಟಿ ಜನ ನಂಬುತ್ತಾರೆ ಅನ್ನೋದನ್ನ ನಾನು ನನ್ನ ಹಿಂದು, ಮುಸ್ಲಿಂ, ಯಹೂದಿ ಮತ್ತು ಕ್ರಿಶ್ಚಿಯನ್ ಗೆಳೆಯರಲ್ಲಿ ಹೇಳಿದಾಗ ಕ್ರೈಸ್ತನೋರ್ವನನ್ನು ಬಿಟ್ಟು ಎಲ್ಲ ನಕ್ಕರು
ಇಲ್ಲಿ ಎಲ್ಲರೂ ಕೋಮುವಾದಿಗಳೇ ತಮ್ಮ ಬುಡಕ್ಕೆ ನೀರು ಬಂದಾಗ ಮಾತ್ರ ಅವರ ಕೋಮುವಾದಿ ಬಣ್ಣ ಹೊರಬರುತ್ತದೆ ಆದ್ದರಿಂದ ಯಾರು ಯಾರನ್ನು ಕೋಮುವಾದಿ ಎಂದು ಬೆರಳು ತೋರಿಸುವ ಮೊದಲು ನಮಗೆ ಆ ನೈತಿಕ ಹಕ್ಕು ಇದೆಯೇ ಅನ್ನೋದನ್ನ ಯೋಚಿಸುವುದು ಒಳಿತು.
ಕೃಪೆ:- ವಾಸಿಮ್ ಅಲ್ತಾಫ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಸುದ್ದಿ ಕೇಳಿ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಬಂದಿದ್ದಾರೆ. ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ,”ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದರು. ಬಹುಶಃ ದರ್ಶನ್ ಅವರು ಭಯ ಪಡುವ…
ಮದುವೆಯಲ್ಲಿ ಮದುಮಗಳಿಗೆ ತಾಳಿಯೊಂದಿಗೆ ಕಾಲುಂಗುರವನ್ನು ಸಹ ಹಾಕುತ್ತಾರೆ, ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಮುತೈದೆಗೆ ತಾಳಿ, ಕುಂಕುಮ, ಹೂವು, ಬಳೆ, ಇವುಗಳೊಂದಿಗೆ ಕಾಲುಂಗುರವು ಬಹಳ ಪ್ರಮುಖ ಪಾತ್ರವಹಿಸುತ್ತದೆ, ಮದುವೆಯಾದ ಮಹಿಳೆ ಕಾಲುಂಗುರ ಧರಿಸಿದರೆ ಶೋಭೆ. ಇದು ಮದುವೆಯ ಪ್ರತೀಕ ಎಂದು ಕೆಲವರು ತಿಳಿದಿದ್ದರೆ ಮತ್ತೆ ಕೆಲವರು ಇದೊಂದು ಸಂಪ್ರದಾಯವೆಂದು ನಂಬುತ್ತಾರೆ. ಕಾಲುಂಗುರ ಧರಿಸುವುದರ ಹಿಂದೆ ಅಡಗಿದೆ ವೈಜ್ಞಾನಿಕ ಕಾರಣ:- ವೇದಗಳ ಅನುಸಾರ ಎರಡು ಕಾಲು ಬೆರಳಿಗೆ ಬೆಳ್ಳಿ ಕಾಲುಂಗುರ ಧರಿಸುವುದರಿಂದ ತಿಂಗಳ ಮುಟ್ಟು ಸರಿಯಾಗಿ ಆಗುವುದಲ್ಲದೇ ಗರ್ಭಧಾರಣೆ…
ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂಬ ಘೋಷವಾಕ್ಯದಡಿ 2014ರ ಲೋಕಸಭೆ ಚುನಾವಣೆಯನ್ನು ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಎದುರಿಸಿತ್ತು. ಆಂತರಿಕ ಆರ್ಥಿಕ ಬೆಳವಣಿಗೆಯ ಭರವಸೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನತೆಗೆ ನೀಡಿತ್ತು. ಇದೀಗ ಎನ್ ಡಿಎ ಸರ್ಕಾರ ಮತ್ತೊಂದು ಬಾರಿ 5 ವರ್ಷಗಳ ಅವಧಿಗೆ ಅಧಿಕಾರದ ಗದ್ದುಗೆ ಏರಲು ಹೊರಟಿದೆ. ಈ ಸಂದರ್ಭದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂದು ಬಯೋಕಾನ್ ಅಧ್ಯಕ್ಷೆ…
ಸುಟ್ಟಗಾಯಗಳೇ ಇಷ್ಟು, ಗಾಯ ವಾಸಿಯಾದರೂ ಕಲೆ ಹೋಗುವುದಿಲ್ಲ.. ಕಲೆಗಳಿಂದಾಗಿ ಚರ್ಮದ ಕಾಂತಿ ಕುಗ್ಗಿದಂತಾಗುತ್ತದೆ. ಈ ಕಲೆಗಳಿಂದಾಗಿ ನಮ್ಮ ಸೌಂದರ್ಯವೇ ಹಾಳಾಗುತ್ತದೆ. ಇಂತಹ ಮಾಸದ ಕಲೆಗಳನ್ನ ಸುಲಭವಾಗಿ ನಿವಾರಿಸಬಹುದು. ಸುಟ್ಟ ಕಲೆಗಳನ್ನ ಹೋಗಲಾಡಿಸಲು ಇಲ್ಲಿವೆ ಸಿಂಪಲ್ ಮನೆ ಮದ್ದುಗಳು. * ಲೋಳೆರಸ ಇದು ಎಲ್ಲಾ ರೀತಿಯ ಚರ್ಮ ರೋಗಗಳಿಗೂ ಪರಿಹಾರ ನೀಡುತ್ತೆ ಎಂದರೆ ತಪ್ಪಾಗಲಾರದು. ಆದ್ದರಿಂದ ಸುಟ್ಟ ಗಾಯದ ಮೇಲೆ ಲೋಳೆರಸ ಲೇಪಿಸುವುದರಿಂದ ಉರಿ ಕಡಿಮೆಗೊಳಿಸಿ. ಕಲೆಯು ಉಳಿಯದಂತೆ ಮಾಡುತ್ತದೆ. * ಪುದೀನಾ ಎಲೆಯನ್ನು ರುಬ್ಬಿ ತೆಳುವಾದ ಹತ್ತಿ…
ಕೇರಳ ರಾಜ್ಯಕ್ಕೆ ಸೇರಿದ ಸಚಿನ್ ಹಾಗೂ ಭವ್ಯಾ ಎಂಬುವವರು ಡಿಪ್ಲೋಮ ಓದುತ್ತಿದ್ದಾಗ ಇಬ್ಬರೂ ಒಳ್ಳೆಯ ಸ್ನೇಹಿತರಾಗುತ್ತಾರೆ, ಇವರ ಸ್ನೇಹ ತುಂಬಾ ಆತ್ಮೀಯವಾಗಿ 8 ತಿಂಗಳು ಮುಂದುವರೆದ ಕಾರಣ ಇವರ ಸ್ನೇಹವನ್ನ ಅಪಾರ್ಥ ಮಾಡಿಕೊಂಡ ಭವ್ಯಾ ಮನೆಯವರು ಸಚಿನ್ ಜೊತೆ ಮಾತನಾಡದೆ ಇರುವಂತೆ ಭವ್ಯಾಗೆ ಎಚ್ಚರಿಕೆಯನ್ನ ನೀಡುತ್ತಾರೆ. ಇನ್ನು ತಮ್ಮ ಮನೆಯವರ ಮಾತಿಗೆ ಬೆಲೆಕೊಟ್ಟ ಭವ್ಯಾ ಸಚಿನ್ ಜೊತೆ ಮಾತನಾಡುವುದನ್ನ ಬಿಟ್ಟು ಬಿಡುತ್ತಾಳೆ, ಇನ್ನು ಈ ಸಮಯದಲ್ಲಿ ನಮ್ಮಿಬ್ಬರ ನಡುವೆ ಇರುವುದು ಬರಿ ಸ್ನೇಹ ಅಲ್ಲ ಪ್ರೀತಿ ಅನ್ನುವುದು…
ಒಮ್ಮೆ ರಾಜನಿಗೆ ಈ ಇಳೆಯಲ್ಲಿ ಯಾರು ಹೆಚ್ಚು ಸುಖೀ ಹಾಗೂ ಸಂತೃಪ್ತ…! ಎಂದು ತಿಳಿಯುವ ಮನಸ್ಸಾಯಿತು. ತನ್ನ ಪ್ರಶ್ನೆಯನ್ನು ಸಭಾಸದರ ಮುಂದಿಟ್ಟ. ತಲೆಗೊಂದೊಂದು ಉತ್ತರ ಬಂತು. ಯಾವ ಉತ್ತರವೂ ರಾಜನಿಗೆ ಸಮಾಧಾನ ತರಲಿಲ್ಲ. ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಹೇಗಾದರೂ ಉತ್ತರ ಕಂಡುಕೊಳ್ಳಬೇಕೆಂಬ ತವಕದಿಂದ ರಾಜ ಮಾರುವೇಷದಲ್ಲಿ ಸಂಚಾರ ಹೊರಟ.