ಸುದ್ದಿ

ಯಾವುದೇ ರಸಗೊಬ್ಬರ ಬಳಕೆ ಮಾಡದೇ. ಅತೀ ಕಡಿಮೆ ಬೆಲೆಯಲ್ಲಿ, ಬೆಳೆಯನ್ನ ತೆಗೆದ ನಟ ಉಪೇಂದ್ರ.

177

ಹಲವಾರು ನಟ ನಟಿಯರು ಲಾಕ್ ಡೌನ್ ಸಮಯದಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಆದರೆ ನಟ ಉಪೇಂದ್ರ ಅವರು ರೈತನಂತೆ ಭೂಮಿಗಿಳಿದು ಕೃಷಿ ಮಾಡುವುದರಲ್ಲಿ ತಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಕೇವಲ ಎರಡೂವರೆ ತಿಂಗಳಲ್ಲಿ ಬೆಳೆಯನ್ನೂ ತೆಗೆದಿದ್ದಾರೆ. ಹೌದು ಉಪೇಂದ್ರ ಅವರು ತಮ್ಮ ಹೊಲದಲ್ಲಿ ಹೂವು, ತರಕಾರಿ ಬೆಳೆದಿದ್ದಾರೆ. ಈ ಖುಷಿಯಲ್ಲಿ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅತೀ ಕಡಿಮೆ ಬೆಲೆಯಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ ಎಂದು ಸಾಲುಗಳನ್ನು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಉಪ್ಪಿ ಬಾಸ್ ಹೇಳಿದ್ದನು ಪ್ರ್ಯಾಕ್ಟಿಕಲಿ ತೋರಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಮತ್ತೂಬ್ಬರು ಕೇವಲ ನಟನೆ ನಿರ್ದೇಶನ ಮಾತ್ರವಲ್ಲ ಎಲ್ಲದರಲ್ಲೂ ಕೂಡ ಕ್ರಿಯೇಟಿವಿಟಿ ಹೊಂದಿದ್ದಾರೆ ಎಂದೆಲ್ಲ ಹೇಳಿದ್ದಾರೆ.

ಉಪ್ಪಿ ತಾವು ಮಾಡಿದ ಕೆಲಸದ ಬಗ್ಗೆ ವಿಡಿಯೋದಲ್ಲಿ ಹೇಳಿದ್ದು ಎರಡೂವರೆ ತಿಂಗಳ ಹಿಂದೆ ನಾವು ಇಲ್ಲಿ ಸಸಿಗಳನ್ನು ನೆಟ್ಟಿದನ್ನು ನೀವು ನೋಡಿರುತ್ತೀರಾ. ಈಗ ಅದರ ಫಲ ಸಿಕ್ಕಿದೆ. ಚೆಂಡು ಹೂ, ಸೌತೆಕಾಯಿ, ಬಿಳಿ ಎರಡು ರೀತಿಯ ಬದನೇಕಾಯಿ, ಎಷ್ಟು ಅದ್ಭುತವಾಗಿದೆ ನೋಡಿ ನಾವು ಯಾವುದೇ ಕ್ರಿಮಿನಾಶಕ, ರಸಗೊಬ್ಬರ ಬಳಕೆ ಮಾಡದೇ. ಕೇವಲ ದನದ ಗೊಬ್ಬರ, ನೀರು ಹಾಕಿ ಬೆಳೆದಿದ್ದೇವೆ. ಹುಳು ಬೀಳುವುದು ಅಂತಲ್ಲ ಶೇಕಡ.5 ರಷ್ಟು ಬೀಳುತ್ತವೆ.

ಹುಳುಬಿಳುವುದು ಸಾಮಾನ್ಯ ನಮ್ಮ ಜೊತೆ ಅವೂ ಬದುಕಬೇಕಲ್ಲವೇ, ನಮ್ಮೊಂದಿಗೆ ಹುಳು ಚಿಟ್ಟೆಗಳು ಸಹ ಇರಬೇಕು. ಕ್ರಿಮಿ ನಾಶಕಗಳನ್ನು ಹೊಡೆದು ಭೂಮಿ ಹಾಳಾಗುವುದರ ಜೊತೆಗೆ, ಕೇವಲ ಶೇ.10ರಷ್ಟು ಇಳುವರಿ ಹೆಚ್ಚು ಬರುತ್ತದೆಂದು ತಪ್ಪು ಕೆಲಸ ಮಾಡುತ್ತೇವೆ. ಇದಾವುದನ್ನು ಬಳಸದೆ ಬೆಳೆದು ತೋರಿಸಬೇಕೆಂದೇ ಈ ಕೃಷಿ ಮಾಡಿದೆ. ಇಗೆ ಮಾಡಿದರೆ ಬೆಳೆದ ತರಕಾರಿಗಳು ನಮ್ಮ ಆರೋಗ್ಯಕ್ಕೂ ಒಳ್ಳೆಯದು ಎಂದು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ

    ಈ ಮಂತ್ರವನ್ನು ಜಪಿಸಿದ್ರೆ, ಏನಾಗುತ್ತೆ ಗೊತ್ತಾ?ಈ ಲೇಖನಿ ಓದಿ…

    ನಮ್ಮ ಭಾರತೀಯ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸ್ತೋತ್ರ ಮತ್ತು ಮಂತ್ರಗಳಿಗೆ ವಿಶೇಷ ಸ್ಥಾನವಿದೆ. ಹಾಗೆಯೇ ಪ್ರತಿಯೊಂದು ಗುರಿ ಉದ್ದೇಶಗಳು ಸಾಕಾರಗೊಳ್ಳುವುದಕ್ಕೆ ಪ್ರತ್ಯೇಕ ಮಂತ್ರಗಳನ್ನು ಆಧ್ಯಾತ್ಮಿಕ ಚಿಂತಕರು ನೀಡಿದ್ದಾರೆ.

  • ಆರೋಗ್ಯ

    ಫ್ಲೋರೋಸಿಸ್ ದುಷ್ಪರಿಣಾಮ

    ಫ್ಲೋರೋಸಿಸ್ ಎಂಬದು ಅತಿಯಾದ ಫ್ಲೋರೈಡ್ ಸೇವನೆಯಿಂದ ಬರುತ್ತದೆ. ದುಷ್ಪರಿಣಾಮಕಾರಿ ಫ್ಲೋರೈಡ್ ಅಂತರ್ಜಲದಲ್ಲಿ ಕಂಡುಬರುತ್ತದೆ. ಕಲ್ಲುಬಂಡೆಗಳಲ್ಲಿರುವ ನೀರಿನಲ್ಲಿ ಹೆಚ್ಚಾಗಿ ಫ್ಲೋರೈಡ್ ಅಂಶ ದೃಢಪಟ್ಟಿರುತ್ತದೆ. ಜೀವರಾಶಿಗಳು ಫ್ಲೋರೈಡ್‌ಯುಕ್ತ ನೀರನ್ನು ಸೇವನೆ ಮಾಡುವುದರಿಂದ, ಫ್ಲೋರೋಸಿಸ್ ನಿಂದ ಬಳಲುತ್ತಾರೆ. ಸಂಶೋಧಕಗಳ ಪ್ರಕಾರ ಫ್ಲೋರೈಡ್ ಮಕ್ಕಳ ಬುದ್ಧಿಮತ್ತೆಯ ಪ್ರಮಾಣದಲ್ಲಿ ಪ್ರಭಾವ ಬೀರಿರುವುದನ್ನು ದಾಖಲಿಸಿದ್ದಾರೆ. ದೀರ್ಘಕಾಲ ಫ್ಲೋರೈಡ್ ಸೇವನೆ ಮಾಡುವುದರಿಂದ ದಂತ ಮತ್ತುಮೂಳೆಗಳಲ್ಲದೆ, ಇತರೆ ಭಾಗದಲ್ಲೂ ದುಃಷ್ಪರಿಣಾಮಗಳು ಬೀರುತ್ತಿವೆ. ಸಕಲ ಅಂಗಾAಗಗಳ ಮೇಲೆಫ್ಲೋರೈಡ್ ಪ್ರಭಾವ ಬೀರುತ್ತದೆ ಹಾಗೂ ಪ್ರಮುಖವಾಗಿ ಹೃದಯ, ಸ್ವಾಶಕೊಶ, ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಮತ್ತು…

  • ಸುದ್ದಿ

    132 ಕೋಟಿಮೌಲ್ಯ ಬೆಲೆ ಬಾಳುವ ಈ ನಂಬರ್ ಪ್ಲೇಟನ್ನು ಮಾರಟಕ್ಕೆ ಇಟ್ಟಿದ್ದಾರೆ, ಇಷ್ಟಕ್ಕೂ ಇದರ ವಿಶೇಷತೆಯಾದರು ಏನು?

    ನಮ್ಮ ದೈನಂದಿನ ದಿನ ಪತ್ರಿಕೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಫ್ಯಾನ್ಸಿ ನಂಬರ್‌ಗಳನ್ನು ಖರೀದಿಸುವ ಸುದ್ದಿಗಳನ್ನು ಓದಿರುತ್ತೇವೆ. ಆದರೇ, ಇಲ್ಲೊಬ್ಬ ಉದ್ಯಮಿ ತನ್ನ ದುಬಾರಿ ಸೂಪರ್ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರ ಬೆಲೆಯು ಕೇವಲ 132 ಕೋಟಿ ಎಂದು ಹೇಳಿಕೊಂಡಿದ್ದಾನೆ.ಹೌದು, ಬ್ರಿಟನ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ‘ಎಫ್1’ ನಂಬರ್ ಪ್ಲೇಟ್‌ಗೆ ಇದೀಗ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಈ ಹಿಂದೆ 2008ರಲ್ಲಿ ಕೇವಲ 4.5 ಕೋಟಿ ಬೆಲೆ ಹೊಂದಿದ್ದ ಎಫ್1 ನಂಬರ್ ಪ್ಲೇಟ್‌ಗಳು…

  • ಜ್ಯೋತಿಷ್ಯ

    ಪ್ರೇಮಿಗಳ ದಿನದಂದು ಈ ರಾಶಿಗಳ ವ್ಯಕ್ತಿಗಳಿಗೆ ಸಿಗಲಿದೆ ಪ್ರೀತಿ..!

    ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಪ್ರೀತಿಯಲ್ಲಿ ಬಿದ್ದವರು ಪ್ರೇಮಿಗಳ ದಿನ ಆಚರಣೆಗೆ ತಯಾರಿ ನಡೆಸುತ್ತಿದ್ದರೆ ಇನ್ನು ಕೆಲವರು ಪ್ರೇಮ ಪರೀಕ್ಷೆಗೆ ಸಿದ್ಧವಾಗ್ತಿದ್ದಾರೆ. ತಮ್ಮ ಹೃದಯ ಕದ್ದವರ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ನಿಜವಾದ ಪ್ರೀತಿ ಸಿಗಬೇಕೆಂದ್ರೆ ಅದೃಷ್ಟ ಕೂಡ ಚೆನ್ನಾಗಿರಬೇಕು. ಈ ಬಾರಿ ಫೆಬ್ರವರಿ 14ರಂದು ಮೂರು ರಾಶಿಯವರ ಅದೃಷ್ಟ ಬದಲಾಗಲಿದೆ. ಅವ್ರಿಗೆ ನಿಜವಾದ ಪ್ರೀತಿ ಸಿಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಪ್ರೇಮಿಗಳ ದಿನ ವೃಷಭ ರಾಶಿಯವರಿಗೆ ಖುಷಿ ತರಲಿದೆಯಂತೆ. ವೃಷಭ ರಾಶಿಯವರು…

  • Health

    ಕಡಲೆ ಹಿಟ್ಟಿನ ರೊಟ್ಟಿಯಿಂದ ನಿಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆಂದು ಓದಿ ತಿಳಿಯಿರಿ…?

    ಮಧುಮೇಹ ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಮಧುಮೇಹಿಗಳಿಗೆ ಹೆಚ್ಚು ಹಸಿವು ಕಾಡುತ್ತದೆ. ಹಾಗಾಗಿ ಬೇಗ ಹಸಿವಾಗದ ಹೊಟ್ಟೆ ತುಂಬಿರುವ ಅನುಭವ ನೀಡುವ ಆಹಾರವನ್ನು ಸೇವಿಸಬೇಕು. ಇದಕ್ಕೆ ಕಡಲೆ ಹಿಟ್ಟಿನ ರೊಟ್ಟಿ ಬೆಸ್ಟ್. ಮಧುಮೇಹಿಗಳಿಗೆ ಮಾತ್ರವಲ್ಲ ರಕ್ತದೊತ್ತಡ, ದೈಹಿಕ ದೌರ್ಬಲ್ಯ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಬೆಸ್ಟ್. ಕಡಲೆ ಹಿಟ್ಟಿನಲ್ಲಿ ಪ್ರೋಟೀನ್ ಹೆಚ್ಚಿರುತ್ತದೆ.ಕಡಿಮೆ ಗ್ಲೈಸೆಮಿಕ್ ಹೊಂದಿರುತ್ತದೆ.ಇದಕ್ಕಾಗಿಯೇ ಇದು ತೂಕ ನಷ್ಟ ಮಾಡುವ ಜೊತೆಗೆ ಮಧುಮೇಹ ನಿಯಂತ್ರಿಸುತ್ತದೆ. ಮಸಲ್ಸ್ ಬೆಳೆಸಲು ಆಸಕ್ತಿ ಹೊಂದಿರುವವರು ಕೂಡ ಕಡಲೆ…

  • ರಾಜಕೀಯ

    ಡಿಕೆಶಿ ರೆಬೆಲ್ ನಡುವೆ ವಾಕ್ ಸಮರ..!ಯಾಕೆ?ಏನಾಯ್ತು?ಮುಂದೆ ಓದಿ…

    ಅಂಬರೀಷ್ ಹಾಗು ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರ ನಡುವೆ ಎಂದು ವಾಕ್ ಸಮರ ಎರ್ಪಟ್ಟಿದೆ. ಈ ನಿಟ್ಟಿನಲ್ಲಿ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಅಂಬರೀಶ್ ಗರಂ ಆಗಿದ್ದಾರೆ.