inspirational

ದರ್ಶನ್‌ ಮತ್ತು ಸುದೀಪ್ ಒಟ್ಟಿಗೆ ನಟಿಸಬೇಕಾಗಿದ್ದ ಆ ಸಿನಿಮಾ ನಿಂತಿದ್ದೇಕೆ? ಇಂದ್ರಜಿತ್ ಬಿಚ್ಚಿಟ್ರು ಮೂಲ ಕಾರಣ.

265

ಕನ್ನಡ ಸಿನಿಪ್ರಿಯರ ಬಹುದಿನಗಳ ಕನಸು ಏನೆಂದರೆ, ದರ್ಶನ್‌ ಮತ್ತು ಸುದೀಪ್ ಒಟ್ಟಿಗೆ ನಟಿಸುವುದು! ಬೆಳ್ಳಿತೆರೆ ಮೇಲೆ ಅವರಿಬ್ಬರನ್ನು ಏಕಕಾಲಕ್ಕೆ ನೋಡಲು ಅಭಿಮಾನಿಗಳು ಕಾದಿದ್ದಾರೆ.

ಇಬ್ಬರು ಕನ್ನಡದ ಸ್ಟಾರ್ ನಟರು. ಅವರದ್ದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಿರುವಾಗ ಅವರಿಬ್ಬರು ಒಟ್ಟಿಗೆ ನಟಿಸಿಬಿಟ್ಟರೆ? ಅದು ಅಭಿಮಾನಿಗಳಿಗೆ ಹಬ್ಬವೇ ಸರಿ. ಅದಿನ್ನೂ ಸಾಧ್ಯವಾಗಿಲ್ಲ. ಮುಂದೆ ಯಾವತ್ತು ಆಗುತ್ತದೆಯೋ ಅದು ಗೊತ್ತಿಲ್ಲ. ಆದರೆ, ಬಹುವರ್ಷಗಳ ಈ ಹಿಂದೆ ಸ್ಟಾರ್ ನಟರನ್ನು ಒಟ್ಟಿಗೆ ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನವೊಂದು ನಡೆದಿತ್ತು! ಅವರಿಬ್ಬರು ಒಟ್ಟಿಗೆ ನಟಿಸಬೇಕಾಗಿದ್ದ ಸಿನಿಮಾಕ್ಕೆ ಇಂದ್ರಜಿತ್ ಲಂಕೇಶ್‌ ನಿರ್ದೇಶಕರಾಗಿ ಕೆಲಸ ಮಾಡಬೇಕಿತ್ತು!

ಆಗತಾನೇ ಚಿತ್ರರಂಗದಲ್ಲಿ ಸುದೀಪ್ ಮತ್ತು ದರ್ಶನ್‌ ಎಂಟ್ರಿ ಕೊಟ್ಟ ಸಮಯ. ಹಿಟ್ ಸಿನಿಮಾಗಳನ್ನು ನೀಡುತ್ತ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುತ್ತಿದ್ದರು. ಇಂದ್ರಜಿತ್‌ ಲಂಕೇಶ್‌ ಕೂಡ ಅದೇ ಸಮಯಕ್ಕೆ ನಿರ್ದೇಶರಕಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ಅವರಿಗೆ ಹಿಂದಿಯ ‘ದೀವಾರ್‌’ ಸಿನಿಮಾ ಭಾರೀ ಇಷ್ಟವಾಗಿ ಬಿಟ್ಟಿತ್ತು. ಅದನ್ನು ಕನ್ನಡಕ್ಕೆ ರಿಮೇಕ್ ಮಾಡುವ ಸಲುವಾಗಿ ಅದರ ಹಕ್ಕಗಳನ್ನು ಅವರು ಪಡೆದುಕೊಂಡು ಬಂದಿದ್ದರು.

‘ದೀವಾರ್‌’ನಲ್ಲಿ ಅಮಿತಾಭ್ ಬಚ್ಚನ್‌ ಮತ್ತು ಶಶಿ ಕಪೂರ್ ಪ್ರಮುಖ ಪಾತ್ರವನ್ನು ಮಾಡಿದ್ದರು. ವಿಜಯ್‌ ವರ್ಮ-ರವಿ ವರ್ಮ ಎಂಬ ಸಹೋದರರ ಪಾತ್ರಗಳಲ್ಲಿ ಅವರಿಬ್ಬರು ನಟಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಕಲೆಕ್ಷನ್ ಮಾಡಿದ ‘ದೀವಾರ್‌’ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ರಿಮೇಕ್ ಆಗಿತ್ತು. ಕನ್ನಡದಲ್ಲಿ ಇಬ್ಬರು ನಿಭಾಯಿಸಿದ್ದ ಪಾತ್ರಗಳನ್ನು ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ‘ಅಮಿತಾಭ್ ಬಚ್ಚನ್ ಅವರು ನಿಭಾಯಿಸಿದ ಪಾತ್ರವನ್ನು ಮಾಡುವಂತೆ ನಾನು ಸುದೀಪ್‌ ಅವರ ಬಳಿ ಕೇಳಿಕೊಂಡೆ. ಅವರು ತುಂಬ ಖುಷಿಯಿಂದಲೇ ಒಪ್ಪಿಕೊಂಡಿದ್ದರು’ ಎಂದಿದ್ದಾರೆ ಇಂದ್ರಜಿತ್‌.

 ಶಶಿ ಕಪೂರ್ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ಚರ್ಚೆ ಶುರುವಾಯಿತು. ‘ಆ ಪಾತ್ರಕ್ಕಾಗಿ ನಾನು ನಟ ದರ್ಶನ್ ಅವರನ್ನು ಅಪ್ರೋಚ್ ಮಾಡಿದೆ. ಅವರು ಸಿನಿಮಾದ ಕಥೆ ಕೇಳಿ, ನಟಿಸಲು ಒಪ್ಪಿಕೊಂಡರು. ಆದರೆ, ಅವರಿಗೂ ಅಮಿತಾಭ್ ಬಚ್ಚನ್‌ ನಿಭಾಯಿಸಿದ್ದ ಪಾತ್ರವೇ ತುಂಬ ಇಷ್ಟವಾಗಿಬಿಟ್ಟಿತ್ತು. ಇಬ್ಬರು ಬಚ್ಚನ್‌ ಅವರ ಆ್ಯಂಗ್ರಿಮ್ಯಾನ್ ಪಾತ್ರವನ್ನೇ ಮಾಡುವುದಕ್ಕೆ ಇಷ್ಟಪಟ್ಟರು. ಆ ಸಿನಿಮಾ ಟೇಕ್ ಆಫ್ ಆಗದೇ ಇರುವುದಕ್ಕೆ ಇದೇ ಕಾರಣ. ಈಗಲೂ ಆ ಸಿನಿಮಾ ಹಕ್ಕಗಳು ನನ್ನ ಬಳಿ ಇವೆ’ ಎಂದು ಮಾಹಿತಿ ನೀಡಿದ್ದಾರೆ ಇಂದ್ರಜಿತ್‌ ಲಂಕೇಶ್. ಒಂದುವೇಳೆ, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಅಂದೇ ಕನ್ನಡ ಸಿನಿಪ್ರಿಯರು ದರ್ಶನ್ ಮತ್ತು ಸುದೀಪ್‌ ಅವರನ್ನು ಒಟ್ಟಿಗೆ ತೆರೆಮೇಲೆ ನೋಡಬಹುದಿತ್ತು!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸಾಲು ಸಾಲು ರಜೆ – 11 ದಿನ ಬ್ಯಾಂಕ್ ಬಾಗಿಲು ಬಂದ್ : ಬ್ಯಾಂಕ್ ಗ್ರಾಹಕರಿಗೊಂದು ಮುಖ್ಯ ಮಾಹಿತಿ….!

    ಅಕ್ಟೋಬರ್ ನಲ್ಲಿ ಹಬ್ಬದ ಕಾರಣ ರಜೆ ಇರುವುದರಿಂದ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 11 ದಿನ ರಜೆ ಇದೆ. ದಸರಾ ನಂತರ ದೀಪಾವಳಿ ಇರುವುದರಿಂದ ಬ್ಯಾಂಕ್ 11 ದಿನ ಕೆಲಸ ಮಾಡುವುದಿಲ್ಲ. ಆರ್.ಬಿ.ಐ. ವತಿಯಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಅಕ್ಟೋಬರ್ 6 ಭಾನುವಾರ. ಅಕ್ಟೋಬರ್ 7 ನವಮಿ. ಅಕ್ಟೋಬರ್ 8 ರಂದು ದಶಮಿ. ಹಾಗಾಗಿ 3 ದಿನ…

  • ಉಪಯುಕ್ತ ಮಾಹಿತಿ

    ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ತಿಂಗಳಿಗೆ 2.5 ಲಕ್ಷ ರೂಪಾಯಿಗಳ ಹಣ ಸಂಪಾದಿಸಿ..!ಹೇಗೆ ಎಂದು ತಿಳಿಯಲು ಈ ಲೇಖನ ಓದಿ..

    OneADನಿಮಗೆ ಎರಡು ಪ್ರಯೋಜನವನ್ನು ನೀಡುತ್ತದೆ – ಹಣ ಸಂಪಾದಿಸಿ ಮತ್ತು ಉಳಿತಾಯ ಮಾಡಿ.!ನಿಮ್ಮ ಸ್ನೇಹಿತರಿಗೆ ಅಪ್ಲಿಕೇಶನ್ ಅನ್ನು ಉಲ್ಲೇಖಿಸಿ ನೀವು ಹಣವನ್ನು ಮಾಡಬಹುದು.

  • ಉಪಯುಕ್ತ ಮಾಹಿತಿ, ದೇವರು

    ಹಾಲಿನಿಂದ ಬೆಳಕಾಗುವ ಪರಿ. ಇದೇನಿದು ಹಾಲಿನಿಂದ ಬೆಳಕೇ? ಒಮ್ಮೆ ನೋಡಿ.!

    ಹಾಲಿನಿಂದ ಬೆಳಕಾಗುವ ಪರಿ. ಇದೇನಿದು ಹಾಲಿನಿಂದ ಬೆಳಕೇ? ಸಂಸ್ಕೃತದಲ್ಲಿ ಒಂದು ಕಥೆ ಇದೆ. ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ. ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ. ಆಗ ಹಾಲು ಹೇಳಿತಂತೆ. ದೇವರೇ ನಾನು ಹಾಲು ಆಕಳು ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ. ಆದರೆ ಈ ಪಾಪಿ ಮಾನವ ನನಗೆ ಹುಳಿ ಇಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ. ನನಗೆ ಹಾಲಾಗೇ ಇರುವಂತೆ ವರ ಕೊಡು ಎಂದು ಬೇಡಿಕೊಂಡಿತಂತೆ. ಆಗ ದೇವರು ನಕ್ಕು ಎಲೈ ಹಾಲೇ…

  • ಜ್ಯೋತಿಷ್ಯ

    ಭಾನುವಾರದ ದಿನ ಭವಿಷ್ಯ..ಈ ದಿನದ ನಿಮ್ಮ ನಕ್ಷತ್ರ ಭವಿಷ್ಯ ಶುಭವೋ, ಅಶುಭವೋ ನೋಡಿ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663953892 call/ whatsapp/ mail raghavendrastrology@gmail.com ಮೇಷ(11 ನವೆಂಬರ್, 2018) ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮ್ಮ ನಿರ್ಲಕ್ಷತನದ ಮತ್ತು…

  • ಸುದ್ದಿ

    ಮಕ್ಕಳನ್ನು ಪಬ್ಜಿ ಗೇಮ್ ನಿಂದ ಹೊರತರಲು ಈ ಉಪಾಯ ಬಳಸಿ…!

    ಮಕ್ಕಳು ಮೊಬೈಲ್ ನೋಡ್ತಾರೆ, ಟಿವಿ ನೋಡ್ತಾರೆಂಬ ಪಾಲಕರ ಆರೋಪ ಈಗ ಸಾಮಾನ್ಯವಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪಾಲಕರ ಆತಂಕಕ್ಕೆ ಕಾರಣವಾಗಿರುವುದು ಪಬ್ಜಿ ಗೇಮ್. ಮಕ್ಕಳ ಪ್ರಾಣವನ್ನೇ ಪಡೆಯುತ್ತಿರುವ ಈ ಪಬ್ಜಿ ಆಟಕ್ಕೆ ಮಕ್ಕಳು ದಾಸರಾಗುತ್ತಿದ್ದಾರೆ. ಇದು ಮಕ್ಕಳ ತಪ್ಪಲ್ಲ. ಈಗಿನ ವಾತಾವರಣ, ಆಟವಾಡಲು ಜಾಗವಿಲ್ಲದ ಪರಿಸ್ಥಿತಿ ಮಕ್ಕಳನ್ನು ಆನ್ಲೈನ್ ಗೇಮ್ ಗೆ ಪ್ರೋತ್ಸಾಹಿಸುತ್ತಿದೆ. ಮಕ್ಕಳು ಅತಿ ಹೆಚ್ಚಿನ ಮಟ್ಟದಲ್ಲಿ ಆನ್ಲೈನ್ ಗೇಮ್ ಗಳನ್ನು ಆಡಿದ್ರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ನಿದ್ರೆ ಕೊರತೆ, ಶಕ್ತಿ ಕಡಿಮೆಯಾಗುವುದು, ದಣಿವು, ಸುಸ್ತು,…