inspirational

ನಿಮ್ಮ ನೆನಪೇ ನಿತ್ಯ ಜ್ಯೋತಿ ನಿಮ್ಮ ಸ್ಮರಣೆಯೇ ಅಮರ ಪ್ರೀತಿ. ಅಂಬಿಗೆ ಸುಮಲತಾ ಶುಭಾಶಯ

130

ಇಂದು ಅಂಬರೀಶ್ ಅವರ 68ನೇ ಜನ್ಮದಿನವಾಗಿದ್ದು, ಈ ಹಿಂದೆ ಅವರ ಅಭಿಮಾನಿಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಅಂಬಿ ನಿಧನದ ನಂತರ ಅಭಿಮಾನಿಗಳು ಅವರ ಸಮಾಧಿ ಸ್ಥಳಕ್ಕೆ ತೆರಳಿ ಜನ್ಮದಿನವನ್ನು ಆಚರಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಲಾಕ್‍ಡೌನ್ ಕಾರಣದಿಂದ ಅದು ಸಾಧ್ಯವಾಗಿಲ್ಲ.

ಸುಮಲತಾ ಅವರು ಟ್ವೀಟ್ ಮಾಡುವ ಮೂಲಕ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. “ಅಂಬರೀಶ್ ಅವರು ಇಂದು 68ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ವಿಧಿ ಅವರನ್ನು ನಮ್ಮಿಂದ ಶಾಶ್ವತವಾಗಿ ದೂರ ಮಾಡಿದೆ. ಅವರ ಹೃದಯ ಬ್ರಹ್ಮಾಂಡದಷ್ಟೇ ತುಂಬಾ ವಿಶಾಲವಾಗಿತ್ತು. ಜೀವನದಲ್ಲಿ ಅವರೊಂದಿಗೆ ನಾನು ಕೆಲವು ಹೆಜ್ಜೆಯನ್ನು ಹಾಕಿದ್ದಕ್ಕೆ ನನಗೆ ಹೆಮ್ಮೆ ಇದೆ” ಎಂದು ಪ್ರೀತಿಯಿಂದ ಅಂಬರೀಶ್ ಬಗ್ಗೆ ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿ ಮೂರು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, “ನಿಮ್ಮ ನೆನಪೇ ನಿತ್ಯ ಜ್ಯೋತಿ, ನಿಮ್ಮ ಸ್ಮರಣೆಯೇ ಅಮರ ಪ್ರೀತಿ” ಎಂದು ಬರೆದುಕೊಂಡಿದ್ದಾರೆ.

ಇನ್ನೂ ರೆಬೆಲ್‍ಸ್ಟಾರ್ ಅಂಬರೀಷ್ ಅವರ ಜನ್ಮ ಜಯಂತಿಯ ಪ್ರಯುಕ್ತ ಯಂಗ್ ಅಭಿಷೇಕ್ ಅಂಬರೀಷ್ ಅಭಿನಯದ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ. ಇಂದು ಬೆಳಗ್ಗೆ 9.45ಕ್ಕೆ ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನೆಲ್‍ನಲ್ಲಿ ದುನಿಯಾ ಸೂರಿ ನಿರ್ದೇಶನದ, ಸುಧೀರ್ ಕೆ.ಎಂ ನಿರ್ಮಾಣದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಅಧಿಕೃತ ಫಸ್ಟ್ ಲುಕ್ ವಿಡಿಯೋ ರಿಲೀಸ್ ಆಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಧ್ಯಾಭ್ಯಾಸ, ಸರ್ಕಾರದ ಯೋಜನೆಗಳು

    ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಕೆ ..!ತಿಳಿಯಲು ಈ ಲೇಖನ ಓದಿ..

    ರಾಜ್ಯದಲ್ಲಿ ಸರಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಕಳೆದ ಮೂರು ವರ್ಷಗಳಲ್ಲಿ 2,14,160ರಷ್ಟು ಕುಸಿತವಾಗಿದೆ.

  • ಸರ್ಕಾರದ ಯೋಜನೆಗಳು

    ಪ್ರಧಾನಿ ನರೇಂದ್ರ ಮೋದಿಯವರಿಂದ ರೇಷನ್ ಕಾರ್ಡುದಾರರಿಗೆ ಸಿಹಿ ಸುದ್ದಿ ..!ತಿಳಿಯಲು ಈ ಲೇಖನ ಓದಿ..

    ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸಂಸದರ ಜತೆ ಸಭೆ ನಡೆಸಿ, ಪಡಿತರ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥ ನೀಡುವ ಬದಲಿಗೆ ಅದರ ಸಬ್ಸಿಡಿ ಹಣವನ್ನು ನೇರವಾಗಿ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.ಇದು ರೇಷನ್ ಕಾರ್ಡುದಾರರಿಗೆ ಲಾಭದಾಯಕವಾದರೆ ಕಾಳಸಂತೆಕೋರರ ಮೇಲೆ ನಿಯಂತ್ರಣ ಹಾಕಲಿದೆ.

  • inspirational

    ಕರೋನಾ ವೈರಸ್ COVID – 19

    MAYOON N/ BIOTECHNOLOGIST / KOLAR ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ.. ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಈ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್…

  • ದೇಗುಲ ದರ್ಶನ, ಸುದ್ದಿ

    ದೇವಸ್ಥಾನಕ್ಕೆ ಇನ್ಮುಂದೆ ಜೀನ್ಸ್, ಶರ್ಟ್ ಹಾಕ್ಕೊಂಡು ಹೋಗಂಗಿಲ್ಲ! ಇಲ್ಲ ಅಂದರೆ ದೇವರ ದರ್ಶನಕ್ಕೆ ನೋ ಎಂಟ್ರಿ.

    ರಾಜ್ಯದ ಪ್ರಮುಖ ಮುಜರಾಯಿ ದೇಗುಲದಲ್ಲಿ ಇನ್ನೂ ಮುಂದೆ ವಸ್ತ್ರ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಜೀನ್ಸ್, ಟೀ ಶರ್ಟ್ ಧರಿಸಿದರೆ ದೇವರ ದರ್ಶನ ಸಿಗುವುದು ಅನುಮಾನವಾಗಿದೆ. ಮುಜರಾಯಿ ಇಲಾಖೆ ಸಚಿವರು ಈ ಸಂಬಂಧ ಸಭೆ ಕರೆಯಲ್ಲಿದ್ದು, ಶೀಘ್ರದಲ್ಲಿಯೇ ವಸ್ತ್ರ ಸಂಹಿತೆ ಯಾವ ರೀತಿ ಇರಬೇಕು ಎನ್ನುವ ನಿಯಮವನ್ನು ರೂಪಿಸಲು ಸಜ್ಜಾಗಿದ್ದಾರೆ.  ಈಗಾಗಲೇ ಕುಕ್ಕೆಯಿಂದ ಮನವಿ ಕೂಡ ಮಾಡಲಾಗಿದ್ದು, ಭಕ್ತಾದಿಗಳು ದೇವರ ದರ್ಶನಕ್ಕೆ ಬರುವಾಗ ತುಂಡು ಬಟ್ಟೆ ಜೀನ್ಸ್, ಟೀ ಶರ್ಟ್ ಧರಿಸಿ ಬರುತ್ತಿದ್ದಾರೆ. ವಸ್ತ್ರ ಸಂಹಿತೆ ಜಾರಿ…

  • ಸುದ್ದಿ

    ಸುಮಲತಾ ಅಂಬರೀಶ್ ವಿರುದ್ದ ಶಾಕಿಂಗ್ ಹೇಳಿಕೆ ಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ.!

    ಹೈವೋಲ್ಟೇಜ್ ಕಣವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮಾತಿನ ಸಮರ ತಾರಕಕ್ಕೇರಿದೆ. ಸಿಎಂ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಏಟಿಗೆ – ಎದುರೇಟು ನೀಡತೊಡಗಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಸುಮಲತಾ ಅವರ ಕುರಿತಾಗಿ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಪಕ್ಷೇತರ ಅಭ್ಯರ್ಥಿಯ ಭಾಷಣದಲ್ಲಿ ಎಲ್ಲಿಯೂ ಮಂಡ್ಯ ಜಿಲ್ಲೆಯ ಜನರ ಸಮಸ್ಯೆ ಬಗ್ಗೆ ಪ್ರಸ್ತಾಪವಾಗಿಲ್ಲ. ಅವರಲ್ಲಿ ನೋವಿನ ಛಾಯೆಯೂ ಕಾಣುತ್ತಿಲ್ಲ. ನಾಟಕೀಯವಾಗಿ ಸಿನಿಮಾ ಡೈಲಾಗ್ ಹೊಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಬಿಜೆಪಿ…

  • ಸುದ್ದಿ

    ಈ ಜಾಗದಲ್ಲಿ 5 ತುಳಸಿ ಎಲೆಯನ್ನು ಇಟ್ಟರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ,.!

    ಈ ಲೋಕದಲ್ಲಿ  ಕಷ್ಟವಿಲ್ಲದೇ ಬದುಕುವ  ಮನುಷ್ಯನನ್ನ  ಎಲ್ಲಿಯೂ ಸಹ  ಕಾಣಲು  ಸಾಧ್ಯವಾಗುವುದಿಲ್ಲ ಯಾಕೆಂದರೆ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ತಮ್ಮದೇ ಆದ ನೂರಾರು ಕಷ್ಟ ಇದ್ದೆ ಇರುತ್ತದೆ.  ಹಾಗೆಯೇ  ಸ್ನೇಹಿತರೆ ನಮಗೆ ಕಷ್ಟಗಳು ಬಂದಾಗ ಯಾವುದೇ ಕಾರಣಕ್ಕೂ ತಲೆ ಮೇಲೆ ಕೈಹಾಕಿ ಕುಳಿತುಕೊಳ್ಳಬಾರದು  ಅದಕ್ಕೊಂದು  ಪರಿಹಾರ ಇದ್ದೇ ಇರುತ್ತದೆ ನಾವು ಪರಿಹಾರವನ್ನು ಉಡುಕಬೇಕು ಆಗ ನಮ್ಮ ಕಷ್ಟಕ್ಕೆ ಪರಿಹಾರ ಸಿಗುತ್ತದೆ. ಹಾಗೆಯೇ ನಾನೊಂದು ಸಲಹೆ ಕೊಡಲು ಇಷ್ಟ  ಪಡುತ್ತೇನೆ  ಕಷ್ಟದ ದಿನಗಳು ಬಂದಾಗ ನಮ್ಮ ಮನಸ್ಸು ದೃಢವಾಗಿರಬೇಕು ಮತ್ತು…