ಸಿನಿಮಾ

ಚಂದನವನದ ನಟನ ಜೊತೆ ಹಾಸ್ಯ ನಟ ಸಿಹಿ ಕಹಿ ಚಂದ್ರು ಮಗಳ ಪ್ರೇಮ ವಿವಾಹ..ಆ ನಟ ಯಾರು ನೋಡಿ…

282

ಸ್ಯಾಂಡಲ್‍ವುಡ್ ನಲ್ಲಿ ನಟ-ನಟಿಯರು ಸ್ಕ್ರೀನ್ ಮೇಲಿನ ಅನೇಕ ಜೋಡಿಗಳು ನಿಜ ಜೀವನದಲ್ಲೂ ಒಂದಾಗುತ್ತಿದ್ದಾರೆ. ಈಗ ಹಿರಿಯ ಖ್ಯಾತ ನಟ ಸಿಹಿ-ಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ಕೂಡ ದಾಪಂತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.

‘ಹಾಗೆ ಸುಮ್ಮನೆ’ ಖ್ಯಾತಿಯ ನಟ ಕಿರಣ್ ಶ್ರೀನಿವಾಸ್ ಹಾಗೂ ‘ಒಂಥರಾ ಬಣ್ಣಗಳು’ ಚಿತ್ರದಲ್ಲಿ ಅಭಿನಯಿಸಿರುವ ಹಿತಾ ಚಂದ್ರಶೇಖರ್ ಪ್ರೀತಿಸುತ್ತಿದ್ದು, ಅವರು ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ಕಿರಣ್ ನಮ್ಮ ಕುಟುಂಬದವರಿಗೆ ಪರಿಚಯವಿದ್ದಾರೆ. ಎರಡು ಕುಟುಂಬದವರ ನಡುವೆ ಉತ್ತಮ ಒಡನಾಟವಿದೆ. ಕಿರಣ್, ನಾನು ಮೊದಲಿಗೆ ಸ್ನೇಹಿತರಾಗಿದ್ದು, ಬಳಿಕ ಪರಸ್ಪರ ಪ್ರೀತಿಸುತ್ತಿದ್ದೆವು.

ಇತ್ತೀಚೆಗಷ್ಟೆ ಇಬ್ಬರು ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇವೆ ಎಂದು ಹಿತಾ ಅವರು ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದಾರೆ. ನಮ್ಮ ಪ್ರೀತಿಯ ವಿಚಾರವನ್ನು ಎರಡು ಕುಟುಂಬದವರಿಗೂ ತಿಳಿಸಿದಾಗ ಅವರು ಕೂಡ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಇನ್ನೂ ಎರಡು ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇವೆ. ಅಂದಿನ ದಿನವೇ ನಮ್ಮ ಮದುವೆಯ ಬಗ್ಗೆ ಅಧಿಕೃತವಾಗಿ ಹೇಳಬೇಕು ಎಂದುಕೊಂಡಿದ್ದೆವು ಅಂತ ಹಿತಾ ಅವರು ತಿಳಿಸಿದ್ದಾರೆ.

ಕನ್ನಡದ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಕಿರಣ್ ರಿಯಾಲಿಟಿ ಶೋ, ಧಾರವಾಹಿ, ಹಿಂದಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್ ಚಿತ್ರವೊಂದರಲ್ಲಿಯೂ ಅವರು ಅಭಿನಯಿಸಲಿದ್ದಾರೆ. ಕಿರಣ್ ಹಾಗೂ ಹಿತಾ ಅವರ ಮದುವೆಗೆ ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ