ರೆಸಿಪಿ

ಎಲೆಕೋಸು ಮಂಚೂರಿ ಮನೆಯಲ್ಲೇ ಮಾಡುವುದು ಹೇಗೆ ಗೊತ್ತಾ?

434

ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎರಡು ಬಟ್ಟಲು ಎಲೆಕೋಸು,
ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಮೀಡಿಯಂ ಸೈಜು ಈರುಳ್ಳಿ, ಕಾನ್೯ ಫ್ಲೋರ್ ಎರಡು ಟೀ ಸ್ಪೂನ್, ಮೈದಾಹಿಟ್ಟು ಎರಡು ಟೀ ಸ್ಪೂನ್, ಅಜಿನ ಮೋಟು ಕಾಲು ಚಮಚ, ಅಚ್ಚ ಕಾರದ ಪುಡಿ 1 ಟೀ ಸ್ಪೂನ್, ಗರಂ ಮಸಾಲ ಅರ್ದ ಟೀ ಸ್ಪೂನ್ ರುಚಿಗೆ ತಕ್ಕಷ್ಟು ಉಪ್ಪು.


ಮಾಡುವ ವಿಧಾನ: ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಎಲೆಕೋಸನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ, ಅದಕ್ಕೆ ಎರಡು ಟೀ ಸ್ಪೂನ್ ಕಾನ್೯ ಫ್ಲೋರ್, ಎರಡು ಟೀ ಸ್ಪೂನ್ ಮೈದಾ ಹಿಟ್ಟು,ಕಾಲು ಚಮಚ ಅಜಿನ ಮೋಟು,ಅಚ್ಚ ಕಾರದ ಪುಡಿ ಒಂದು ಟೀ ಸ್ಪೂನ್, ಗರಂ ಮಸಾಲ ಅರ್ದ ಟೀ ಸ್ಪೂನ್ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿ. ಕಲಸಿದ ತಕ್ಷಣವೇ ಮಾಡಿಬಿಡಬೇಕು .ಇಲ್ಲವಾದರೆ ನೀರು ಬಿಟ್ಟಿಕೊಳ್ಳುತ್ತದೆ. ಕಲಸಲು ಸಹ ನೀರು ಉಪಯೋಗಿಸಬಾರದು.

ನಂತರ ಒಲೆಯ ಮೇಲೆ ಎಣ್ಣೆಯನ್ನು ಇಟ್ಟು ಸಣ್ಣ ಸಣ್ಣ ಉಂಡೆ ಆಕಾರ ಮಾಡಿಕೊಂಡು ಚಿಕ್ಕ ಉರಿಯಲ್ಲಿ ಕರೆದುಕೊಳ್ಳಿ, ಕರೆದಾದ ಮೇಲೆ ಒಲೆಯ ಮೇಲೆ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಕಾಯಿಸಿ ಅದಕ್ಕೆ ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ದಪ್ಪ ಮೆಣಸಿನಕಾಯಿ, ಹಾಗೂ ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಸೇರಿಸಿ, ಒಲೆಯ ಫ್ಲೇಮ್ ದೊಡ್ಡ ದಾಗಿ ಇರಬೇಕು, ಈರುಳ್ಳಿ ಕೆಂಪಗೆ ಆದ ನಂತರ ದಪ್ಪ ಮೆಣಸಿನಕಾಯಿ ಹಾಕಿ ಅದಾದ ನಂತರ ಕರಿದಿಟ್ಟುಕೊಂಡ ಎಲೆಕೋಸು ಬೋಂಡ ಸೇರಿಸಿ, ಅಮೇಲೆ ಚಿಲ್ಲಿಸಾಸ್ ಹಾಗೂ ವಿನಿಗರ್ ಹಾಕಿ , ನಂತರ ಟೊಮ್ಯಾಟೊ ಸಾಸ್ ಸೇರಿಸಿ ಕೈಯಾಡಿಸಿ, ಪ್ಲೇಟ್ ಗೆ ಹಾಕಿ ಸಾಸ್ ಜೊತೆಯಲ್ಲಿ ತಿನ್ನಲು ಕೊಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ತಂತ್ರಜ್ಞಾನ

    ಭಾರತದ ಮೊದಲ ವಿಮಾನ ನಿಲ್ದಾಣ ಸಮುದ್ರದ ಮೇಲೆ ನಿರ್ಮಾಣವಾಗಲಿದೇ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಲಕ್ಷದ್ವೀಪದ ಪ್ರವೇಶದ್ವಾರ ಅಂತಲೇ ಅಗಟ್ಟಿ ನಡುಗಡ್ಡೆ ಜನಪ್ರಿಯವಾಗಿದೆ. ಅಗಟ್ಟಿಯಲ್ಲಿ ಸ್ಥಳೀಯ ವಿಮಾನ ನಿಲ್ದಾಣವಿದೆ. 1988ರಲ್ಲಿ ಇಲ್ಲಿನ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕ ಕಲ್ಪಿಸುವ ಏಕೈಕ ದ್ವೀಪವೂ ಇದೇ ಆಗಿದೆ.

  • ದೇಶ-ವಿದೇಶ

    ಮೋದಿ ಸರ್ಕಾರದ ಹೊಸ ಶಾಕ್ !!!

    ಅಪನಗದೀಕರಣದಿಂದ ಚೇತರಿಸಿಕೊಳ್ಳುವಾಗಲೇ ಮತ್ತೊಂದು ಶಾಕ್ ನೀಡಲು, ಮೋದಿ ಸರಕಾರ ಮುಂದಾಗುವ ಸಾಧ್ಯತೆ ಇದೆ, ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರದಿಯಾಗಿದೆ.

  • ವ್ಯಕ್ತಿ ವಿಶೇಷಣ

    ಭಗತ್ ಸಿಂಗ್’ರವರ ಬಾಲ್ಯದ, ಈ ರೋಚಕ ಕಥೆ ಓದಿದ್ರೆ ನೀವು ಶಾಕ್ ಆಗ್ತೀರಾ..!

    ಸ್ವಾತಂತ್ರ್ಯ ಪೂರ್ವದ ಘಟನೆ. ಪಂಜಾಬಿನ ಒಂದು ಹಳ್ಳಿ. 3 ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಸುತ್ತಾಡಿ ಬರಲು ಮನೆಯಿಂದ ಹೊರಟ. ಅವರೊಂದಿಗೆ ಅವನ ತಂದೆಯ ಮಿತ್ರರೊಬ್ಬರು ಇದ್ದರು. ಮೂವರೂ ಮಾತಾಡುತ್ತ ಮುಂದೆ ಮುಂದೆ ಹೋಗಿ ಅವರ ಊರಿನ ಗಡಿಯಾಚೆ ನಡೆದರು.

  • ಜ್ಯೋತಿಷ್ಯ

    ಮಂತ್ರಾಲಯದ ಶ್ರೀ ರಾಯರನ್ನು ನೆನೆಯುತ್ತ ನಿಮ್ಮ ಇಂದಿನ ಭವಿಷ್ಯವನ್ನು ನೋಡಿರಿ

    ಮೇಷ ರಾಶಿ ಭವಿಷ್ಯ (Wednesday, December 1, 2021) ನೀವು ಚೈತನ್ಯದಿಂದ ತುಂಬಿರುತ್ತೀರಿ ಮತ್ತು ಇಂದು ಅಸಾಮಾನ್ಯವಾದದ್ದೇನಾದರೂ ಸಾಧಿಸುತ್ತೀರಿ. ನಿಮ್ಮ ಮೂಲಕ ಹಣವನ್ನು ಉಳಿಸಲು ಮಾಡಲಾಗಿರುವ ಪ್ರಯತ್ನವು ಇಂದು ವಿಫಲವಾಗಬಹುದು, ಹೇಗಾದರೂ, ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ, ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸುತ್ತದೆ. ಪತ್ನಿಯೊಂದಿಗೆ ಜಗಳ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಅನವಶ್ಯಕ ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ. ಜೀವನದಲ್ಲಿ ಮಹತ್ವದ ವಿಷಯವೆಂದರೆ ನಾವು ಮಾರ್ಪಡಿಸಲು ಸಾಧ್ಯವಿಲ್ಲದ ವಿಷಯಗಳನ್ನು ಒಪ್ಪಿಕೊಳ್ಳಲು ಕಲಿಯುವುದಾಗಿದೆ. ನಿಮ್ಮ ಕಣ್ಣುಗಳು ಅದೆಷ್ಟು ಪ್ರಕಾಶಮಾನವಾಗಿವೆಯೆಂದರೆ ಅವು ನಿಮ್ಮ ಪ್ರೇಮಿಯ…

  • ರಾಜಕೀಯ

    ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್..ಮೇ 28 ಕ್ಕೆ ಮುಗಿಯಲಿದೆ ಸಿದ್ದರಾಮಯ್ಯನವರ ಸರ್ಕಾರ..ತಿಳಿಯಲು ಈ ಲೇಖನ ಓದಿ…

    ತೀವ್ರ ಕುತೂಹಲ ಕೆರಳಿಸಿರುವ ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕವನ್ನು ಪ್ರಕಟಿಸಲಾಗಿದೆ. ಮಹೂರ್ತ ಫಿಕ್ಸ್… ಮೇ 12 ರಂದು ಮತದಾನ ನಡೆಯಲಿದೆ.ತದನಂತರ ಮೇ 15 ರಂದು ಮತಎಣಿಕೆ ನಡೆಯಲಿದೆ. ಮೇ 28ಕ್ಕೆ ಪ್ರಸಕ್ತ ವಿಧಾನಸಭೆಯ ಸದಸ್ಯರ ಅವಧಿ ಮುಕ್ತಾಯವಾಗಲಿದ್ದು,ನಂತರ ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನೀತಿ ಸಂಹಿತೆ ಜಾರಿ… ದೆಹಲಿಯ ಕೇಂದ್ರ ಚುನಾವಣಾ ಆಯೋಗದಲ್ಲಿ ಚುನಾವಣಾಧಿಕಾರಿ ಓಂ ಪ್ರಕಾಶ್ ರಾವತ್ ಅವರು ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಮತ್ತು…

  • inspirational

    ಹೆಚ್ಚು ಅನ್ನ ತಿನ್ನುವುದರಿಂದ ಏನಾಗುತ್ತೆ, ಹಲವು ಜನರಿಗೆ ಈ ಸತ್ಯಗಳೇ ಗೊತ್ತಿಲ್ಲ.

    ಪ್ರಪಂಚದಲ್ಲಿ ಅತಿ ಹೆಚ್ಚು ಮಂದಿ ತಮ್ಮ ಊಟದಲ್ಲಿ ಅನ್ನವನ್ನು ಹೆಚ್ಚು ಬಳಸುತ್ತಾರೆ. ಅಕ್ಕಿ ಪ್ರಪಂಚದ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆಯ ಮುಖ್ಯ ಅಂಶವಾಗಿ ಬಳಸುವ ವಿಶಿಷ್ಟ ಧಾನ್ಯವಾಗಿದೆ, ಯಾವುದೇ ಸುವಾಸನೆ ಮತ್ತು ಮಸಾಲೆಗೆ ಹೊಂದಿಕೊಳ್ಳುವ ಸಾಮರ್ಥ್ಯದ ಕಾರಣದಿಂದ ಭಾಗಶಃ ಭಾಗವಾಗಿದೆ. ಯಾವುದೇ ವಿಧದ ತಿನಿಸುಗಳಲ್ಲಿ ಮೌಲ್ಯದ ಅಂಶವಾಗಿ ಕಾರ್ಯನಿರ್ವಹಿಸುವುದಾದರೆ, ಅಕ್ಕಿ ಒಂದು ಚೆವ್ನೆಸ್ ಮತ್ತು ಮೃದುವಾದ ವಿನ್ಯಾಸವನ್ನು ಹೊಂದಿರುತ್ತದೆ, ಅದು ಊಟಕ್ಕೆ ಪದಾರ್ಥವನ್ನು ಸೇರಿಸುತ್ತದೆ ಮತ್ತು ಅನೇಕ ವಿಧದ ಊಟದ ಯೋಜನೆಗಳನ್ನು ಪೂರೈಸುತ್ತದೆ. ಇನ್ನು ನಮ್ಮ ದೇಹಕ್ಕೆ ಬೇಕಾದ…