ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ದೇಶದಲ್ಲಿ ಸಿಗರೇಟ್ ಸೇವನೆ ಮಾಡುವವರು ಬಹಳಷ್ಟು ಜನರು ಇದ್ದಾರೆ ಬರಿ ಗಂಡಸರು ಅಷ್ಟೇ ಅಲ್ದೆ ಮಹಿಳೆಯರು ಕೂಡ ಈ ಧೂಮಪಾನ ಸೇವನೆ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆರೋಗ್ಯಕ್ಕೆ ಮಾರಕವಾಗಿ ಕಾಡುವಂತ ಈ ಧೂಮಪಾವನ್ನು ನಿಯಂತ್ರಿಸಲು ಹಲವು ವಿಧಾನಗಳಿವೆ ಆದ್ರೆ ಈ ಚಟದಿಂದ ಬೇಗನೆ ಮುಕ್ತಿ ಪಡೆಯಲು ಆಗೋದಿಲ್ಲ, ಅಂತವರಿಗೆ ಈ ನಿಂಬೆ ಜ್ಯುಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಅನ್ನೋದನ್ನ ಧೈಲ್ಯಾಂಡ್ ನ ಸಂಶೋಧನೆ ಸಾಬೀತು ಪಡಿಸಿದೆ.

ಧೂಮಪಾನದಿಂದ ಕಾನ್ಸರ್ ಮುಂತಾದ ಮಾರಕ ಕಾಯಿಲೆಗಳು ಬರುತ್ತವೆ ಅಂತಹ ಕಾಯಿಲೆಗಳಿಂದ ದೂರ ಉಳಿಯಲು ಹಾಗು ಧೂಮಪಾನದ ಚಟವನ್ನು ನಿಯಂತ್ರಿಸಲು ಈ ನಿಂಬೆ ಸಹಕಾರಿ ಅನ್ನೋದನ್ನ ತಿಳಿಯಲಾಗಿದೆ ಹೌದು ಥಾಯ್ಲೆಂಡ್ನ Srinakharinwirot University ಮೆಡಿಸಿನ್ ವಿಭಾಗದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಸಿಗರೇಟ್ ಸೇವನೆಯಿಂದ ಮುಕ್ತಿ ಪಡೆಯಲು ನಿಂಬೆ ಜ್ಯೂಸ್ ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ಈ ಅಧ್ಯಯನಕ್ಕಾಗಿ ಎರಡು ಗುಂಪುಗಳನ್ನು ರಚನೆ ಮಾಡಲಾಯಿತು ಹಾಗೂ ಎರಡು ಗುಂಪುಗಳಲ್ಲಿ ಒಂದು ಗುಂಪಿಗೆ ನಿಂಬೆ ರಸವನ್ನು ಕೊಡಲಾಯಿತು ಇನ್ನೊಂದು ಗುಂಪಿಗೆ ಚ್ಯುಯಿಂಗಮ್ ಕೊಡಲಾಗಿತ್ತು. ಇದರಲ್ಲಿ ಕಂಡು ಬಂದ ಫಲಿತಾಂಶ ಚ್ಯುಯಿಂಗಮ್ ಜಗಿದವರಿಕ್ಕಿಂತ ನಿಂಬೆ ಜ್ಯೂಸ್ ಕುಡಿದವರಲ್ಲಿ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡು ಬಂದಿದೆ. ಅಲ್ಲದೆ ನಿಂಬೆ ರಸವನ್ನು ಸೇವಿಸಿದವರಲ್ಲಿ ಧಮ್ ಹೊಡೆಯುವ ಬಯಕೆಯು ಕಡಿಮೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹಾಗದರೆ ಈ ನಿಂಬೆ ಜ್ಯುಸ್ ತಯಾರಿಸೋದು ಹೇಗೆ ಅನ್ನೋದನ್ನ ಹೇಳುವುದಾದರೆ ಮೊದಲು ಒಂದು ಹಳದಿ ಬಣ್ಣದ ನಿಂಬೆಹಣ್ಣು ಅದರ ಜೊತೆಗೆ ಇನ್ನೊಂದು ಹಸಿರು ಬಣ್ಣದ ನಿಂಬೆ, ಒಂದು ಚಮಚ ಸಕ್ಕರೆ ಒಂದು ಕಪ್ ನೀರು ಹಾಗೂ ಸ್ವಲ್ಪ ಐಸ್. ಇಷ್ಟು ಬೇಕಾಗುತ್ತದೆ ಇದನ್ನು ತಯಾರಿಸೋದು ನಿಂಬೆಯನ್ನು ಕಟ್ ಮಾಡಿ ಅದರ ರಸವನ್ನು ತಗೆದು ಸಕ್ಕರೆ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಸೇವನೆ ಮಾಡಿದರೆ ಸಿಗರೇಟ್ ಸೇದಬೇಕು ಅನ್ನೋ ಬಯಕೆ ಬರೋದಿಲ್ಲ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಈ ನಿಂಬೆ ಜ್ಯುಸ್ ತಯಾರಿಸಿ ಸೇವನೆ ಮಾಡುವುದು ಉತ್ತಮ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ಯಾಂಡಲವುಡ್ನಲ್ಲಿ ಹೊಸತನದಿಂದ ಗೆದ್ದಿದ್ದ ಚಿತ್ರ ಲೂಸಿಯಾ ಎಲ್ಲರ ಗಮನವನ್ನು ಸೆಳೆದಿದ್ದದ್ದು ಆ ಚಿತ್ರದಲ್ಲಿ ಹೀರೋ ಸತೀಶ್ ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ. ಇದೀಗಾ ಅಂತಹದ್ದೇ ಮಾತ್ರೆ ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಗುಳಿಗೆ ಮಾರಾಟ ನಡೆಯುತ್ತಿದೆ ಎನ್ನಲಾಗಿದೆ. ಎಂತಹ ಮನುಷ್ಯನಾದರೂ ಕನಿಷ್ಠ 8-10 ಗಂಟೆಗಳ ಕಾಲ ಅಮಲಿನಲ್ಲಿ ಇಡಬಹುದಾದ ಈ ಮಾತ್ರೆ ಮಾದಕ ವಸ್ತುಗಳನ್ನು ಮೀರಿಸುವಷ್ಟು ಶಕ್ತಿ ಹೊಂದಿದೆ. ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಒಂದು ಟ್ಯಾಬ್ಲೆಟ್‌ನ ಬೆಲೆ 1000 ರೂಪಾಯಿ….
ರಾಜಧಾನಿ ಬೆಂಗಳೂರು ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿದ್ದರೆ ಮತ್ತೊಂದೆಡೆ ಸ್ಮಾರ್ಟ್ ಖದೀಮರು ಹೆಚ್ಚಾಗಿದ್ದಾರೆ. ಕೋಟಿ ಕೋಟಿ ಲೂಟಿಯ ಐಎಂಎ ಪ್ರಕರಣ ಮಾಸುವ ಮುನ್ನವೇ ರಾಜಧಾನಿ ಬೆಚ್ಚಿಬೀಳುವಂತ ಘಟನೆ ಇದಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕಿಗೆ 1 ಕೋಟಿ 90 ಲಕ್ಷ ಹಣ ತುಂಬಲು ಬಂದಾಗ ಆರೋಪಿಗಳು ನೆಲಮಂಗಲ ಪೊಲೀಸರ ಅತಿಥಿಗಳಾಗಿದ್ದಾರೆ. ಆನ್ ಲೈನ್‌ನಲ್ಲಿ ಅಕೌಂಟ್‌ಗೆ ಸಂಬಂಧಪಟ್ಟ ಮೊಬೈಲ್ ನಂಬರ್ ಚೇಂಜ್ ಮಾಡಿ ಬರೋಬ್ಬರಿ 3ಕೋಟಿ ಹಣವನ್ನು ಡ್ರಾ ಮಾಡಿದ್ದ ಆರೋಪಿಗಳು, ಆ ಹಣವನ್ನು ಬ್ಯಾಂಕ್‌ನಲ್ಲಿ ಜಮೆ…
ಸಾಮ್ರಾಜ್ಯ ಗೆದ್ದ ಮಕ್ಕಳಿಗೆ ತಾಯಿಯೇ ಎದುರು ನಿಂತು ಕಿರೀಟ ಹಾಕಿ ಪಟ್ಟಾಭಿಷೇಕ ಮಾಡಿರುವುದು ಚರಿತ್ರೆಯ ಪುಟಗಳಲ್ಲಿ ನಾವು ಓದಿದ್ದೇವೆ. ಆದರೆ ಧಾರವಾಡದಲ್ಲಿ ರೈತರೊಬ್ಬರು ತಮ್ಮ ತಾಯಿಯ ಶತಮಾನೋತ್ಸವಕ್ಕೆ ಬೆಳ್ಳಿ ಕಿರೀಟ ತೊಡಿಸಿ ಸಾವಿರಾರು ಜನರ ಮಧ್ಯೆ ಅಭಿನಂದಿಸಿದ್ದಾರೆ. ಡಾಕ್ಟರ್, ಇಂಜಿನಿಯರ್ ಓದಿ ಕೆಲಸ ಸಿಕ್ಕ ಬಳಿಕ ವಿದೇಶದಲ್ಲಿ ಸುಖ ಜೀವನ ನಡೆಸುವ ಕೆಲ ಮಕ್ಕಳು ತಮ್ಮ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೋ, ಅನಾಥಾಶ್ರಮಕ್ಕೋ ಸೇರಿಸುವ ಕಾಲವಿದು. ಇಂಥಹ ಕಾಲದಲ್ಲಿ ಧಾರವಾಡ ಜಿಲ್ಲೆಯ ಹೊಲ್ತಿಕೋಟಿ ಗ್ರಾಮದ ರೈತ ಮಹದೇವಪ್ಪ ಕೋರಿ…
ಹದಿಹರೆಯದಲ್ಲಿ ಮೊಡವೆ ಏಳುವುದು ಸಾಮಾನ್ಯ. ಆದ್ರೆ ಪಾರ್ಟಿಗೆ ಹೋಗಬೇಕೆಂದಾಗ, ಯಾವುದೋ ಬಹುಮುಖ್ಯ ಸಮಾರಂಭವಿದ್ದಾಗಲೇ ಮುಖದ ಮೇಲೆ ಮೊಡವೆ ಎದ್ದು ಬಿಡುತ್ತದೆ. ಇದು ನಮ್ಮ ಸಂತೋಷಕ್ಕೆ ಕಪ್ಪು ಚುಕ್ಕಿಯಾಗ್ಬಿಡುತ್ತದೆ. ಮೊಡವೆ ಹೋಗಲಾಡಿಸಲು ಕೆಲವೊಂದು ಮನೆ ಮದ್ದುಗಳಿವೆ. 24 ಗಂಟೆಯೊಳಗೆ ನಿಮ್ಮ ಮುಖದ ಮೇಲಿದ್ದ ಮೊಡವೆಗಳು ಮಾಯವಾಗ್ಬಿಡ್ತವೆ. ಅಂತ ಔಷಧಿಗಳನ್ನು ನಾವು ಹೇಳ್ತೇವೆ ಕೇಳಿ. ಜೇನು ತುಪ್ಪ : ಸಾಕಷ್ಟು ಸೌಂದರ್ಯದ ಗುಣಹೊಂದಿರುವ ಜೇನು ತುಪ್ಪ ಮೊಡವೆ ಹೋಗಲಾಡಿಸಲು ಸಹಕಾರಿ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣವಿರುತ್ತದೆ. ರಾತ್ರಿ ಮೊಡವೆಯಾದ ಜಾಗಕ್ಕೆ ಸ್ವಲ್ಪ…
ಸೀತಾಫಲ… ಈ ಕಾಲದಲ್ಲಿ ನಮಗೆ ಲಭಿಸುವ ಹಣ್ಣುಗಳಲ್ಲಿ ಇದೂ ಒಂದು. ಇದರಲ್ಲಿ ವಿಟಮಿನ್ ಎ, ಮೆಗ್ನಿಷಿಯಮ್, ಪೊಟ್ಯಾಷಿಯಂ, ಫೈಬರ್, ವಿಟಮಿನ್ ಬಿ6, ಕ್ಯಾಲ್ಸಿಯಂ,ವಿಟಮಿನ್ ಸಿ, ಐರನ್‌ನಂತಹ ಅತ್ಯಂತ ಮುಖ್ಯವಾದ ಪೋಷಕಗಳು ಅದೆಷ್ಟೋ ಇವೆ.
ನಾಗವಲ್ಲಿ ಪಾತ್ರ ಜನಪ್ರಿಯವಾದ ಕಾರಣ ಅದೇ ಹೆಸರಿನಲ್ಲಿ ಸಿನಿಮಾ ಸಹ ಆಗಿದೆ. ಆದರೆ, ಚಿತ್ರರಂಗದವರು ಅಷ್ಟಕ್ಕೇ ಬಿಡುವ ಹಾಗೆ ಕಾಣುತ್ತಿಲ್ಲ. ವಿಷ್ಣುವರ್ಧನ್ ಮತ್ತು ಸೌಂದರ್ಯ ಅವರ ಸಾವಿಗೆ ಅದೇ ನಾಗವಲ್ಲಿ ಕಾರಣನಾ ಎಂಬ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನ ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಆಗಿದೆ.