ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತನ್ನ ಜೀವನದಲ್ಲಿ ಎದುರಾಗುತ್ತಿದ್ದ ಅಪಾಯಾಕಾರಿ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಿ ಜೀವ ಉಳಿಸಿದ ತನ್ನ ನಾಯಿಗಳಿಗೆ ಜೀವನವನ್ನೇ ಮುಡಿಪಾಗಿಟ್ಟಿರುವುದಾಗಿ ವೇಲ್ಸ್ ಮೂಲದ ಶ್ವಾನ ಪ್ರೇಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವೇಲ್ಸ್ನ ಬಾರ್ಗೋಡ್ ನಿವಾಸಿಯಾಗಿರುವ ಲಿಂಡಾ ಮುಂಕ್ಲೆ(65) ವೇಲ್ಸ್ ಆನ್ಲೈನ್ ಪತ್ರಿಕೆಗೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಬಳಿ ಐದು ವರ್ಷದ ಬಿಯಾ ಮತ್ತು ಅದರ ಮೂರು ವರ್ಷದ ಹೆಣ್ಣುನಾಯಿ ಎನ್ಯಾ ಸೇರಿದಂತೆ ಒಟ್ಟು ನಾಲ್ಕು ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕುತ್ತಿರುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಎರಡು ನಾಯಿ ತನ್ನ ಬಳಿ ವಿಚಿತ್ರವಾಗಿ ವರ್ತಿಸುವುದನ್ನು ನೋಡಿ ವೈದ್ಯಕೀಯ ತಪಾಸಣೆ ಮಾಡಿಸಿದಾಗ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಲಿಂಡಾ ಹೇಳಿದ್ದಾರೆ.
ಒಂದು ದಿನ ನಾನು ಸೋಫಾ ಮೇಲೆ ಸುಮ್ಮನೇ ಕುಳಿತಿದ್ದೆ. ಬಿಯಾ ನನ್ನ ಮೇಲೆ ಜಿಗಿದು ನನ್ನ ಎದೆ ಭಾಗವನ್ನು ಗುದ್ದು, ಮೂಗಿನಿಂದ ವಾಸನೆಯನ್ನು ಗ್ರಹಿಸುತ್ತಾ ವಿಚಿತ್ರವಾಗಿ ವರ್ತಿಸುತ್ತಿತ್ತು. ಇದಕ್ಕೂ ಮುಂಚೆ ಒಮ್ಮೆಯೂ ಈ ರೀತಿ ಮಾಡಿರಲಿಲ್ಲ. ಇದು ಬಹಳ ವಿಚಿತ್ರ ಎನಿಸಿತು. ಆ ಸಮಯದಲ್ಲಿ ಯೋಚಿಸದೇ ನಾನು ಸುಮ್ಮನಾದೆ ಎಂದು ತಿಳಿಸಿದ್ದಾರೆ.
ಸುಮಾರು ಎರಡು ತಿಂಗಳವರೆಗೂ ಇದೇ ರೀತಿ ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿತ್ತು. ಇದರಿಂದ ಎದೆಯ ಒಂದು ಭಾಗದಲ್ಲಿ ಊತದ ಅನುಭವವಾಯಿತು. ಇದರಿಂದ ಎಚ್ಚೆತ್ತು ತಕ್ಷಣ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿದೆ. ವೈದ್ಯರು ವಿಶ್ಲೇಷಿಸಿದ ಬಳಿಕ ಮ್ಯಾಮ್ಮೊಗ್ರಾಮ್(ಸ್ತನ ಕ್ಯಾನ್ಸರ್ ಆರಂಭಿಕ ಹಂತ) ಎಂದು ಖಚಿತಪಡಿಸಿದರು. ಇದು ವೇಗವಾಗಿ ಬೆಳೆದು ಸ್ತನ ಕ್ಯಾನ್ಸರ್ಗೆ ತಿರುಗುವುದಲ್ಲದೇ, ದುಗ್ಧರಸ ಗ್ರಂಥಿಗಳಿಗೂ ಹರಡುತ್ತಿತ್ತು ಎಂದು ಲಿಂಡಾ ವಿವರಿಸಿದ್ದಾರೆ.
ಪರೀಕ್ಷೆಗೆ ಒಳಗಾದ ಬಳಿಕ ಬಿಯಾ ಶ್ವಾನದಂತೆ ಅದರ ಮರಿ ಎನ್ಯಾ ಕೂಡ ವಿಚಿತ್ರವಾಗಿ ವರ್ತಿಸಲು ಶುರು ಮಾಡಿತು ಎಂದು ಮುಂಕ್ಲೆ ಹೇಳಿದ್ದಾರೆ.
ಸದ್ಯ ಲಿಂಡಾ ಅವರು ಚಿಕಿತ್ಸೆ ಪಡೆದುಕೊಂಡಿದ್ದು, ಕ್ಯಾನ್ಸರ್ನಿಂದ ಗುಣಮುಖರಾಗಿದ್ದಾರೆ. ಮೂರನೇ ಕೆಮೊಥೆರಪಿ ಚಿಕಿತ್ಸೆ ವೇಳೆ ತಮ್ಮ ಶ್ವಾನಗಳು ವಿಚಿತ್ರವಾಗಿ ವರ್ತಿಸುವುದನ್ನು ನಿಲ್ಲಿಸಿದವು. ಈ ಬಗ್ಗೆ ವೈದ್ಯರಿಗೆ ತಿಳಿಸಿದಾಗ ಅವರು ಕೂಡ ಅಚ್ಚರಿಗೊಂಡು, ಧನ್ಯವಾದ ಹೇಳುವಂತೆ ತಿಳಿಸಿದರು. ಆದರೆ, ಶ್ವಾನಗಳಿಗೆ ಪದಗಳಲ್ಲಿ ಹೇಗೆ ಧನ್ಯವಾದ ತಿಳಿಸಬೇಕೆಂದು ಗೊತ್ತಾಗುತ್ತಿಲ್ಲ. ಆದರೆ, ನನ್ನ ಜೀವನವನ್ನು ಅವುಗಳಿಗಾಗಿ ಮುಡುಪಾಗಿಟ್ಟಿರುತ್ತೇನೆ ಎಂದು ಲಿಂಡಾ ಭಾವನಾತ್ಮಕವಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮ್ಮ ಬಳಿ ಕಾರಿದ್ದು ಎಲ್ ಪಿ ಜಿ ಸಬ್ಸಿಡಿಯನ್ನೂ ಪಡೆಯುತ್ತಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ನೀಡಲು ಕೇಂದ್ರ ಸರ್ಕಾರ ಸಜ್ಜಾಗ್ತಿದೆ. ದೇಶದಲ್ಲಿ ಎಷ್ಟು ಮಂದಿ ಬಳಿ ಕಾರಿದೆಯೋ ಅವರಿಗೆ ಸಬ್ಸಿಡಿಯಲ್ಲಿ ಅಡುಗೆ ಅನಿಲ ನೀಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಲಿದೆ. ಈ ಬಗ್ಗೆ ಮೋದಿ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಸದ್ಯದಲ್ಲಿಯೇ ಘೋಷಣೆಯಾಗುವ ಸಾಧ್ಯತೆಯಿದೆ.
ಅರಿಶಿನವು ಭಾರತೀಯ ಅಡುಗೆಮನೆಯಲ್ಲಿ ಬಳಸಲಾಗುವ ಪ್ರಸಿದ್ಧ ಮಸಾಲೆಯಾಗಿದೆ. ಆಹಾರಕ್ಕಾಗಿ ಸುವಾಸನೆಯನ್ನು ಮತ್ತು ರುಚಿಯನ್ನು ಸೇರಿಸುವುದರ ಜೊತೆಗೆ, ನಿಮಗೆ ಗೊತ್ತಿಲ್ಲದ ಅರಿಶಿನದ ಇನ್ನೂ 5 ಉಪಯೋಗಗಳಿವೆ.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಿದ್ದಾರೆ, ತಂತ್ರಜ್ಙಾನ ಬೆಳೆಯುತ್ತಿದ್ದಂತೆ ಬ್ಯಾಂಕಿಂಗ್ ವ್ಯವಹಾರಗಳು ಸಹ ಎಲ್ಲರಿಗೂ ಸುಲಭವಾಗುತ್ತಿದೆ. ಹಾಗೆಯೇ ಇಂಟರ್ನೆಟ್ ಹ್ಯಾಕಿಂಗ್ , ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತಿವೆ.ಸಮಯದ ಉಳಿತಾಯದ ಜೊತೆಗೆ ಸುಲಭವಾಗಿ ಹಣದ ವರ್ಗಾವಣೆ, ಬಿಲ್ ಪಾವತಿಯನ್ನು ಮಾಡಬಹುದಾಗಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸದಿದ್ದರೆ ಮೋಸಕ್ಕೂ ಒಳಗಾಗಬೇಕಾಗುತ್ತದೆ. ಬ್ಯಾಂಕಿನಲ್ಲಿ ಸಾಲುಗಟ್ಟಿ ನಿಂತು ಹಣ ಪಾವತಿ ಮಾಡುವುದು, ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದ ಕಾಲ ಬದಲಾಗಿದೆ. ATM ಮಷಿನ್ ಗಳು ಬಂದ ಮೇಲಂತೂ ಜನರು ಹಣವನ್ನು…
ಬೆಂಗಳೂರು, ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ವಾಹನ ಸವಾರರು ಲೈಸೆನ್ಸ್, ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿರಲೇ ಬೇಕು. ಫೋಟೋಕಾಪಿ(ಝೆರಾಕ್ಸ್) ಡೂಪ್ಲಿಕೇಟ್ ಕಾಪಿ ಇದ್ದರೆ ದಂಡ ಬೀಳುವುದು ಖಚಿತ. ದುಬಾರಿ ದಂಡದಿಂದ ಪಾರಾಗಲು 2 ಆ್ಯಪ್ಗಳಿವೆ. ಇವುಗಳಲ್ಲಿ ಯಾವುದಾದರು ಒಂದು ಆ್ಯಪ್ ಇದ್ದರೆ ಹೊಸ ಟ್ರಾಫಿಕ್ ಪನ್ನಿಂದ ಬಚಾವ್ ಆಗಬಹುದು. ಹೊಸ ನಿಯಮ ಜಾರಿಯಾದ ಮೇಲೆ ಯಾವುದೂ ಕೂಡ ಫೋಟೋ ಕಾಪಿ ಇಟ್ಟುಕೊಳ್ಳುವಂತಿಲ್ಲ. ಪ್ರತಿಯೊಂದು ದಾಖಲೆಯೂ ಒರಿಜನಲ್ ಇರಲೇ ಬೇಕು. ಇನ್ನು ಪ್ರತಿ ಬಾರಿ ಮೂಲ ಪ್ರತಿ…
ಪ್ರತಿ ವರ್ಷ ಶಾಲಾ ಆವರಣದಲ್ಲಿ 150 ಗಿಡ ನೆಡುತ್ತೇವೆ, ಆದರೆ ದನಗಳು ದಾಳಿನಡೆಸಿ ಎಲ್ಲವೂ ಹಾಳಾಗುತ್ತವೆ. ಹಾಗಾಗಿ,ಶಾಲೆಗೆ ಕಾಂಪೌಂಡ್ ಕಟ್ಟಿಸಲು ಮೊದಲ ಆದ್ಯತೆ ನೀಡುತ್ತೇನೆ..’ನಟ ಪುನೀತ್ ರಾಜ್ಕುಮಾರ್ ನಡೆಸಿಕೊಡುವ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಭಾಗವಹಿಸಿ 6.4 ಲಕ್ಷ ರೂ. ಗೆದ್ದ ತಾಲೂಕಿನ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೆ.ಎನ್. ತೇಜಸ್ ಅವರ ಮನದಾನದ ಮಾತುಗಳಿವು. ರಿಯಾಲಿಟಿ ಶೋಗಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ನಡೆಸಿದ ಪರೀಕ್ಷೆ ಬರೆದು ಆಯ್ಕೆಯಾದ ವಿದ್ಯಾರ್ಥಿ ತೇಜಸ್ ಜಿಲ್ಲೆಗೆ ಕೀರ್ತಿತಂದಿದ್ದಾನೆ….
ಯುರೋಪ್ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ ಕಳೆದಿವೆ. ವಾಸ್ಕೋಡಿಗಾಮ ಭಾತರಕ್ಕೆ ಬಂದು 523 ವರ್ಷಗಳು ಸಂದಿವೆ. 1460ರ ಸುಮಾರಿಗೆ ಜನಿಸಿದ ಪೋರ್ಚುಗೀಸ್ ಕುಲೀನ ವಾಸ್ಕೋಡಿಗಾಮ 1497ರ ಜುಲೈ 8ರಂದು ಲಿಸ್ಬನ್ನಿಂದ ಪ್ರಯಾಣ ಕೈಗೊಂಡು 1498 ಮೇ 20ರಂದು ಕ್ಯಾಲಿಕಟ್ಗೆ ತಲುಪಿದನು. ಯುರೋಪ್ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 523 ವರ್ಷ ಕಳೆದಿವೆ. ಭಾರತವನ್ನು ವಾಸ್ಕೋಡಿಗಾಮನಿಗಿಂತ…