ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಸಮಾಜದಲ್ಲಿ ಹೈಷಾರಾಮಿ ಜೀವನ ನಡೆಸುವ ಜನರಿಗಿಂತ ಒಪ್ಪತ್ತಿನ ಊಟಕ್ಕಾಗಿ ದಿನಗೂಲಿ ಮಾಡುವ ಮಂದಿ ಜಾಸ್ತಿ. ಅಲ್ಲದೇ ಪೋಷಕರ ಜೊತೆ ತಮ್ಮ ಮಕ್ಕಳು ಕೂಡ ಕೆಲಸ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಆಂಧ್ರಪ್ರದೇಶದ ರೈಲಿನಲ್ಲಿ ಒಬ್ಬ ಹುಡುಗ ಬಹಳ ಆಯಾಸದಿಂದ ಕುಳಿತ್ತಿದ್ದ. ಇದನ್ನು ಕಂಡ ಸಾಫ್ಟವೇರ್ ಉದ್ಯಮಿ ಏನ್ ತಮ್ಮ ಬಹಳ ಆಯಾಸದಿಂದ ಕುಳಿತ್ತಿದ್ದೀಯಾ? ಸಮೋಸ ಎಲ್ಲಾ ಮಾರಿಬಿಟ್ಟೆಯಾ? ಎಂದು ಕೇಳಿದ.
ಇದಕ್ಕೆ ಉತ್ತರಿಸಿದ ಸಮೋಸ ಮಾರುವ ಹುಡುಗ, ಹೌದು ಸಾರ್ ಎಲ್ಲಾ ಮಾರಿಬಿಟ್ಟೆ, ಇನ್ನೇನ್ ಮಾಡುವುದು ಹೊಟ್ಟೆ ಪಾಡಿಗಾಗಿ ಏನಾದರು ಮಾಡಲೇಬೇಕಲ್ವಾ ಸರ್ ಎಂದ.. ಈ ಮಾತನ್ನು ಕೇಳಿ ಬೇಸರಗೊಂಡ ಸಾಫ್ಟವೇರ್ ಉದ್ಯಮಿ, ಒಂದು ಸಮೋಸ ಮಾರಿದರೆ ನಿನಗೆ ಎಷ್ಟು ಸಿಗುತ್ತದೆ? ದಿನಕ್ಕೆ ಎಷ್ಟು ಸಮೋಸ ಮಾರ್ತ್ಯಪ್ಪ? ಎಂದು ಕೇಳಿದ. ಇದಕ್ಕೆ ಸಮೋಸ ಮಾರುವವನು, ಸಾರ್ ಒಂದು ಸಮೋಸ ಮಾರಿದರೆ 75 ಪೈಸೆ ಸಿಗುತ್ತದೆ. ಸೀಸನ್ ಸಮಯದಲ್ಲಿ ದಿನಕ್ಕೆ ಮೂರರಿಂದ ಮೂರು ವರೆ ಸಾವಿರ ಮಾರುತ್ತೇನೆ, ಸೀಸನ್ ಇಲ್ಲದಿದ್ದಾಗ ದಿನಕ್ಕೆ ಎರಡು ಸಾವಿರ ಸೇಲ್ ಮಾಡುತ್ತೇನೆ ಎಂದು ಹೇಳಿದ !
ಮನಸಲ್ಲೇ ಯೋಚಿಸದ ಆ ಉಧ್ಯಮಿ ದಿನಕ್ಕೆ ಎರಡು ಸಾವಿರ ಸಮೋಸ ಮಾರಿದರೆ, ಒಂದು ಸಾವಿರದ ಐನೂರು ರೂ ಆದಾಯ, ಅದೇ ತಿಂಗಳಿಗೆ 45 ಸಾವಿರ ! ನನ್ನ ಸಂಬಳ ತಿಂಗಳಿಗೆ ಕೇವಲ 25 ಸಾವಿರ, ನನ್ನ ಕೆಲಸದ ಒತ್ತಡದಲ್ಲಿ ನನ್ನ ನಗುವನ್ನೇ ಮರೆತು ಹೋಗಿದ್ದೇನೆ, ಆದರೆ ಈ ಹುಡುಗ ಹಾಗಲ್ಲ, ಎಂದುಕೊಂಡು ಮತ್ತೇ ಸಮೋಸ ಹುಡುಗನಿಗೆ, ನೀವೆ ಸಮೋಸವನ್ನು ತಯಾರು ಮಾಡುತ್ತೀರ ಎಂದು ಪ್ರಶ್ನಿಸಿದ? ಇದಕ್ಕೆ ಸಮೋಸ ಮಾರುವವನು, ಇಲ್ಲಾ ಸಾರ್ ನಮ್ಮ ಯಜಮಾನ ಬೇರೆಯವರ ಬಳಿ ಕೊಂಡುಕೊಂಡು ನಮಗೆ ಕೊಡುತ್ತಾನೆ ಎಂದು ಹೇಳಿದ. ಈ ಕೆಲಸ ಬಿಟ್ಟು ಬೇರೆ ಏನು ಮಾಡುತ್ತೀಯಾ? ಎಂದು ಉಧ್ಯಮಿ ಕೇಳಿದ.. ಕಳೆದ ವರ್ಷ ನನ್ನ ಅಕ್ಕನಿಗೆ ಮದುವೆ ಮಾಡಿದೆ, ನಂತರ ನಮ್ಮ ಊರಿನಲ್ಲಿ ಒಂದು ಜಮೀನು ಕೂಡ ಖರೀದಿ ಮಾಡಿದ್ದೇನೆ. ಅದರ ಬೆಲೆ ಈಗ ಸುಮಾರು 15 ಲಕ್ಷವಿದೆ. ಈ ಮಾತನ್ನು ಕೇಳಿ ಆಶ್ಚರ್ಯಚಕಿತನಾದ ಇಂಜಿನಿಯರ್ ನೀನು ಎಲ್ಲಿಯ ತನಕ ವ್ಯಾಸಾಂಗ ಮಾಡಿದ್ದೀಯಾ ಎಂದು ಕೇಳಿದ.
ಇದಕ್ಕೆ ಉತ್ತರಿಸಿದ ಹುಡುಗ, ಸರ್ ನಾನು ಮೂರನೇ ತರಗತಿವರೆಗೂ ಓದಿದ್ದೇನೆ, ಇದಾದ ಮೇಲೆ ಓದಲು ಸಾಧ್ಯವಾಗಲಿಲ್ಲ ಎಂದು ಹೇಳಿದ, ಇದಕ್ಕೆ ಉಧ್ಯಮಿ ಯಾಕೆ ಮುಂದೆ ಓದಬೇಕು ಅನಿಸಲಿಲ್ಲವಾ? ಸಾರ್ ನನ್ನ ವ್ಯಾಪಾರವನ್ನು ನನ್ನ ಮಕ್ಕಳಿಗೆ ಕೊಡಬಹುದು, ಆದರೆ ನಿಮ್ಮ ಉದ್ಯೋಗ ನಿಮ್ಮ ಮಕ್ಕಳಿಗೆ ಕೊಡಲು ಸಾಧ್ಯವಾಗುವುದಿಲ್ಲ ಅಲ್ಲವಾ? ಇದೇ ನನಗೆ ಜನ್ಮ ಕೊಟ್ಟ ತಂದೆ ಕಲಿಸಿದ ನೀತಿ, ಹಣವನ್ನು ಹೇಗೆ ಸಂಪಾದನೆ ಮಾಡಬೇಕು ಎಂಬುದು ನನಗೆ ಗೊತ್ತಾಗಿದೆ, ಹಾಗಾಗಿ ಓದು ನನಗೆ ಅವಶ್ಯಕತೆ ಇಲ್ಲ. ಸರ್ ನನ್ನ ಸ್ಟೇಷನ್ ಬಂತು ನಾನು ಹೊರಡುತ್ತೇನೆ ಎಂದು ಹೇಳಿ ಹೊರಟು ಬಿಟ್ಟ ಸಮೋಸ ಮಾಡುವ ಹುಡುಗ..
ನೋಡಿದ್ರಲ್ಲ ವಿದ್ಯೆ ಎಂಬುದು ಬರೀ ಜ್ಞಾನಾರ್ಜನೆಗೆ ಮತ್ತು ಒಳ್ಳೆಯ ನಾಗರೀಕನಾಗಿ ಬದುಕಲು, ದಯವಿಟ್ಟು ಓದನ್ನು ವ್ಯವಹಾರಕ್ಕೆ ಉಪಯೋಗಿಸಬೇಡಿ. ವಿದ್ಯೆ ಇಲ್ಲದವರನ್ನು ಕೀಳು ಮಟ್ಟದಲ್ಲಿ ನೋಡಬೇಡಿ, ಓದಿದವನಿಗೆ ಒಂದೇ ಕೆಲಸ, ಓದಾದೇ ಇಲ್ಲದವನಿಗೆ ಮಾಡಿದ್ದೆಲ್ಲಾ ಕೆಲಸಾನೇ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಜಿಫ್ ಸ್ಟಾರ್ ಯಶ್ ಅವರು 34ನೇ ವರ್ಷಕ್ಕೆ ಕಾಲಿಟ್ಟು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಯಶ್ ಮುದ್ದಿನ ಮಗಳು ಐರಾ ತನ್ನ ಅಪ್ಪನ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸಿದ್ದಾಳೆ. ರಾಧಿಕಾ ತನ್ನ ಮಗಳು ಐರಾ ಜೊತೆ ಕೇಕ್ ತಯಾರಿಸುತ್ತಿರುವ ವಿಡಿಯೋವನ್ನು ಯಶ್ ಅವರ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ರಾಧಿಕಾ ಅವರು ಸರ್ಪ್ರೈಸ್ ಹಾಗಿ ಯಶ್ ಗೆ ನಿಮ್ಮ ಜೀವನವನ್ನು ನಾವು ಪಡೆದುಕೊಂಡಂತೆ, ನಿಮ್ಮ ಖಾತೆಯನ್ನು ಸಹ ಪಡೆದುಕೊಂಡಿದ್ದೇವೆ ಎಂದು ನಿಮ್ಮ ದೊಡ್ಡ ಅಭಿಮಾನಿಯಾಗಿ ನಮ್ಮ…
ಸಾಮಾನ್ಯವಾಗಿ ಸೆಟ್ನಲ್ಲಿ ತಂತ್ರಜ್ಞರೆಲ್ಲ ಮನೆಯವರಂತೆ ಇರುತ್ತಾರೆ. ಮನಸ್ತಾಪಗಳು ಬಂದರು ಬಹಳ ಕಾಲ ಇರುವುದಿಲ್ಲ. ಅಲ್ಲಿಂದಲ್ಲಿಗೆ ಮರೆತು ಒಂದಾಗಿ ಕೆಲಸ ಮಾಡಿಕೊಂಡು ಇರುತ್ತಾರೆ. ಆದರೆ, ‘ಸೂರ್ಯವಂಶಿ’ ಚಿತ್ರದ ಸೆಟ್ನಲ್ಲಿ ಮಾತ್ರ ಎಲ್ಲ ಅವಾಂತರವೇ ಆಗಿಹೋಗಿದೆ. ಆ ಚಿತ್ರದ ಹೀರೋ ಅಕ್ಷಯ್ಕುಮಾರ್. ನಿರ್ದೇಶನ ಮಾಡುತ್ತಿರುವುದು ರೋಹಿತ್ ಶೆಟ್ಟಿ. ಇದೀಗ ಇವರಿಬ್ಬರು ಸೆಟ್ನಲ್ಲಿ ಹೊಡೆದಾಡಿಕೊಂಡಿದ್ದಾರೆ. ಹಾಗಾದರೆ, ಅಕ್ಷಯ್ ಮತ್ತು ರೋಹಿತ್ ಹೀಗೆ ಹೊಡೆದಾಡಿಕೊಂಡರು? ಗಾಬರಿ ಆಗಬೇಡಿ. ಇದು ನಿಜವಾದ ಜಗಳವಲ್ಲ. ಬದಲಿಗೆ, ಕಾಮಿಡಿ ಜಗಳ. ಈ ರೀತಿ ಅವರಿಬ್ಬರು ನಡೆದುಕೊಳ್ಳಲೂ ಕಾರಣವಿದೆ. ಅದೇನೆಂದರೆ, ಇತ್ತೀಚಿಗೆ…
ಈ ರಾಜ್ಯದ ಮುಖ್ಯಮಂತ್ರಿ ಇದುವರೆಗೂ ಅಧಿಕಾರ ಕಳೆದುಕೊಂಡಿಲ್ಲ , ತಿಂಗಳಿಗೆ 5 ಸಾವಿರ ಪಡಿಯುವ ಭಾರತದ ಅತ್ಯಂತ ಭರವಸೆ ಮೂಡಿಸಿದ ಮುಖ್ಯಮಂತ್ರಿ ಇವರೇ ಮಾಣಿಕ್ ಸರ್ಕಾರ್.
ಕೆಲ ರೈತರು ಹೊಂದಲ್ಲ ಒಂದು ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ಹೊಸ ಪ್ರಯೋಗಗಳನ್ನು ಮಾಡಿ ತಮ್ಮ ಕೃಷಿಯಲ್ಲಿ ಲಾಭವನ್ನು ಗಳಿಸುತ್ತಾರೆ. ರಾಯಚೂರು ಜಿಲ್ಲೆ ಒಂದೆಡೆ ಪ್ರವಾಹಕ್ಕೆ ಸಿಲುಕಿ ಬರಗಾಲದಿಂದ ತತ್ತರಿಸಿ ಹೋಗಿದೆ. ಇಂತಹ ಸಮಯದಲ್ಲೂ ಕೂಡ ಜಿಲ್ಲೆಯ ದೇವದುರ್ಗ ತಾಲೂಕಿನ ರೈತರು ಅಡುಗೆ ಎಣ್ಣೆಯನ್ನು ಬಳಸಿ ಉತ್ತಮ ಕೃಷಿ ಮಾಡಿ ರೈತರ ಪಾಲಿಗೆ ಸ್ಫೂರ್ತಿಯಾಗಿದ್ದಾರೆ. ನಾರಾಯಣಪುರ ಬಲದಂಡೆ ಎಂಬುವ ಕಾಲುವೆಯ ನೀರನ್ನು ನಂಬಿಕೊಂಡು ಕೃಷಿ ಮಾಡುತ್ತಿರುವ ಅನೇಕ ರೈತರ ಮುಖ್ಯ ಬೆಳೆಗಳೆಂದರೆ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ. ಆದರೆ…
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಾಗ್ತಿರುತ್ತಾರೆ. ಪಿಗ್ಗಿ ಡ್ರೆಸ್ ಸಾಮಾನ್ಯವಾಗಿ ಸುದ್ದಿಗೆ ಬರ್ತಿರುತ್ತದೆ. ಕೆಲ ದಿನಗಳ ಹಿಂದೆ ಪತಿ ನಿಕ್ ಜೊತೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಬಟ್ಟೆ ವಿಚಾರಕ್ಕೆ ಟ್ರೋಲ್ ಆಗಿದ್ದರು. ಈಗ ಪ್ರಿಯಾಂಕಾ ಇನ್ನೊಂದು ಹಾಟ್ ಫೋಟೋ ವೈರಲ್ ಆಗಿದೆ. ಪ್ರಿಯಾಂಕಾ ಇನ್ಸ್ಟೈಲ್ ಮ್ಯಾಗಜಿನ್ ಗಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಪ್ರಿಯಾಂಕಾ ಸೀರೆಯುಟ್ಟಿದ್ದಾರೆ. ಆದ್ರೆ ಬ್ಲೌಸ್ ತೊಟ್ಟಿಲ್ಲ. ಬೆತ್ತಲೆ ಬೆನ್ನು ತೋರಿಸಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಪ್ರಿಯಾಂಕಾರ ಕೆಲ ಫೋಟೋ ಹಾಗೂ…
ಕುಟುಂಬದ ಆರ್ಥಿಕ ಸಂಕಷ್ಟವನ್ನು ತೀರಿಸಿಕೊಳ್ಳಲು ಕೆಲವರು ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮಕ್ಕೆ ಬರುತ್ತಾರೆ. ಸಮಾಜಕ್ಕೆ ಏನಾದರೂ ಒಳಿತು ಮಾಡುವ ಉದ್ದೇಶದಿಂದ ಕೆಲವರು ಹಾಟ್ ಸೀಟ್ಮೇಲೆ ಕೂರುತ್ತಾರೆ. ವಿದ್ಯಾಭ್ಯಾಸಕ್ಕೆ ಸಹಾಯ ಆಗಲಿ ಎಂದೂ ಕೆಲವರು ಪುನೀತ್ ರಾಜ್ ಕುಮಾರ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಂಥದ್ರಲ್ಲಿ, ಇವರೆಲ್ಲರಿಗಿಂತಲೂ ಕೊಂಚ ವಿಭಿನ್ನವಾಗಿ ಕಂಡಿದ್ದು ಮನೋಜ್ ಎಂಬ ಯುವಕ. ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಗೆದ್ದ ಹಣದಿಂದ ತಂದೆಗೆ ಸಹಾಯ ಮಾಡಬೇಕು ಎಂಬ ಇಚ್ಛೆಏನೋ ಮನೋಜ್ ಗಿದೆ. ಆದ್ರೆ,ಅದಕ್ಕಿಂತ ಹೆಚ್ಚಾಗಿ ತಾನು ಮುಟ್ಟಾಳ ಅಲ್ಲ ಎಂಬುದನ್ನ…