ಪ್ರೇಮ, ಸ್ಪೂರ್ತಿ

ಕೈ, ಕಾಲು ಇಲ್ಲದಿದ್ರೂ ಆಕೆಯನ್ನೇ ಮದುವೆಯಾಗ್ತೀನಿ ಎಂದ ಪ್ರೇಮಿ…ಆದರೆ ವಿಧಿಬರಹ..!

316

ಗುಜರಾತ್‍ನ ಜಾಮ್‍ನಗರದಲ್ಲಿ ಇದೇ ರೀತಿಯ ಲವ್‍ಸ್ಟೋರಿಯೊಂದು ಬೆಳಕಿಗೆ ಬಂದಿದೆ. ಬಹುತೇಕ ಲವ್ ಸ್ಟೋರಿಗಳಂತೆ ಈ ಕಥೆ ಕೂಡಾ ದುರಂತ ಅಂತ್ಯ ಕಂಡಿದೆ. ನಿಶ್ಚಿತಾರ್ಥವಾಗಿ ಎರಡು ತಿಂಗಳ ನಂತ್ರ ಭಾವಿ ಪತ್ನಿಗೆ ಎಲೆಕ್ಟ್ರಿಕಲ್ ಶಾಕ್ ಹೊಡದಿತ್ತು. ಇದ್ರಿಂದ ಯುವತಿಯ ಎರಡು ಕಾಲು, ಕೈ ಕತ್ತರಿಸಬೇಕಾಯ್ತು. ಇಷ್ಟಾದ್ರೂ ಆಕೆಯನ್ನೇ ಮದುವೆಯಾಗ್ತೇನೆಂದು ಭರವಸೆ ನೀಡಿದ್ದ ಭಾವಿ ಪತಿ ಆರು ತಿಂಗಳು ಆಕೆ ಜೊತೆ ಆಸ್ಪತ್ರೆಯಲ್ಲಿದ್ದ. ಆದ್ರೆ ಯುವತಿ ಬದುಕಿ ಬರಲಿಲ್ಲ. ಯುವತಿ ಶವಕ್ಕೆ ವಧುವಿನಂತೆ ಸಿಂಗಾರ ಮಾಡಿ ಅಂತ್ಯಸಂಸ್ಕಾರ ಮಾಡಲಾಯ್ತು.

ಕಣ್ಣೀರಿನ ಪ್ರೇಮ ಕಥೆ ನಡೆದಿರುವುದು ಗುಜರಾತಿನ ಜಾಮ್ ನಗರದಲ್ಲಿ. ಚಿರಾಗ್ ಮತ್ತು ಹಿರಲ್ 8 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬುಧವಾರ ಹಿರಲ್ ಗೆ ಇನ್ನೊಂದು ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಈಗಾಗಲೇ ಆರು ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹಿರಲ್ ಮಂಗಳವಾರ ಕೊನೆಯುಸಿರೆಳೆದ್ಲು. ಕೈ, ಕಾಲು ಕಳೆದುಕೊಂಡಿದ್ರೂ ಹಿರಲ್ ಮೇಲೆ ಚಿರಾಗ್ ಪ್ರೀತಿ ಕಡಿಮೆಯಾಗಿರಲಿಲ್ಲ. ಆರು ತಿಂಗಳ ಕಾಲ ಹಿರಲ್ ಆರೈಕೆ ಮಾಡಿದ್ದ ಚಿರಾಗ್ ಸಾಕಷ್ಟು ಪ್ರೀತಿ ನೀಡಿದ್ದ. 

ಇಬ್ಬರು ಒಂದಾಗಿ ಬಾಳುವ ಕನಸು ಕಂಡಿದ್ದರು. ಆದ್ರೆ ಹಿರಲ್ ಸಾವು ಚಿರಾಗ್ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಚಿರಾಗ್ ನೋವು ಆಸ್ಪತ್ರೆ ಸಿಬ್ಬಂದಿ ಕಣ್ಣಲ್ಲೂ ನೀರು ತರಿಸಿತ್ತು. ಚಿಕ್ಕ ಚಿಕ್ಕ ವಿಷಯಕ್ಕೆ ಜಗಳವಾಡಿ ಕೊನೆಗೆ ಡೈವೋರ್ಸವರೆಗೂ ಹೋಗುವ ಸಂಬಂಧಗಳ ನಡುವೆ ಚಿರಾಗ್ ತನ್ನ ಪ್ರೀತಿಯ ಹಿರಲ್ ಮೇಲೆ ತೋರಿದ ಪ್ರೀತಿ ನಿಜಕ್ಕೂ ಇತರರಿಗೆ ಮಾದರಿ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಜೀವನಪೂರ್ತಿ ಯಾರೊಂದಿಗೆ ಇರಬೇಕು ಎಂದು ಚಿರಾಗ್ ಆಸೆಪಟ್ಟಿದ್ದನೋ ಆಕೆ ಅರ್ಧದಲ್ಲೇ ಬಾರದ ಲೋಕಕ್ಕೆ ತೆರಳಿದ್ದು ಮಾತ್ರ ವಿಧಿ ವಿಪರ್ಯಾಸ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಕ್ಕಳನ್ನು ಪಬ್ಜಿ ಗೇಮ್ ನಿಂದ ಹೊರತರಲು ಈ ಉಪಾಯ ಬಳಸಿ…!

    ಮಕ್ಕಳು ಮೊಬೈಲ್ ನೋಡ್ತಾರೆ, ಟಿವಿ ನೋಡ್ತಾರೆಂಬ ಪಾಲಕರ ಆರೋಪ ಈಗ ಸಾಮಾನ್ಯವಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪಾಲಕರ ಆತಂಕಕ್ಕೆ ಕಾರಣವಾಗಿರುವುದು ಪಬ್ಜಿ ಗೇಮ್. ಮಕ್ಕಳ ಪ್ರಾಣವನ್ನೇ ಪಡೆಯುತ್ತಿರುವ ಈ ಪಬ್ಜಿ ಆಟಕ್ಕೆ ಮಕ್ಕಳು ದಾಸರಾಗುತ್ತಿದ್ದಾರೆ. ಇದು ಮಕ್ಕಳ ತಪ್ಪಲ್ಲ. ಈಗಿನ ವಾತಾವರಣ, ಆಟವಾಡಲು ಜಾಗವಿಲ್ಲದ ಪರಿಸ್ಥಿತಿ ಮಕ್ಕಳನ್ನು ಆನ್ಲೈನ್ ಗೇಮ್ ಗೆ ಪ್ರೋತ್ಸಾಹಿಸುತ್ತಿದೆ. ಮಕ್ಕಳು ಅತಿ ಹೆಚ್ಚಿನ ಮಟ್ಟದಲ್ಲಿ ಆನ್ಲೈನ್ ಗೇಮ್ ಗಳನ್ನು ಆಡಿದ್ರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ನಿದ್ರೆ ಕೊರತೆ, ಶಕ್ತಿ ಕಡಿಮೆಯಾಗುವುದು, ದಣಿವು, ಸುಸ್ತು,…

  • ವಿಸ್ಮಯ ಜಗತ್ತು

    ಈ ಸುಂದರ ಸೆಲ್ಫಿ ಫೋಟೋದ ಹಿಂದಿರುವ ಭಯಾನಕ, ರೋಚಕ ಸತ್ಯ ಗೊತ್ತಾ ನಿಮ್ಗೆ! ಮುಂದೆ ಓದಿ…

    ಇತ್ತೀಚೆಗೆ ಜೋಡಿಯೊಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಮ್ಮ ಸೆಲ್ಪಿ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದು,ಇದೀಗ ಆ ಸುಂದರ ಸೆಲ್ಪಿ ಹಿಂದಿನ ರೋಚಕ ಭಯಾನಕತೆಯಿಂದಾಗಿ, ಈ ಫೋಟೋ ವೈರಲ್ ಆಗುತ್ತಿದೆ.

  • ಸುದ್ದಿ, ಸ್ಪೂರ್ತಿ

    42 ನಿಮಿಷಗಳಲ್ಲಿ 80 ಕಿಮೀ ಚಲಿಸಿ. ಅವಳಿ ಮಕ್ಕಳ ಜೀವ ಉಳಿಸಿದ ಅಂಬ್ಯುಲೆನ್ಸ್ ಸಿಬ್ಬಂದಿ.

    ಸಂಚಾರಿ ಪೊಲೀಸರ ನೆರವಿನಿಂದ ಅವಳಿ ಮಕ್ಕಳನ್ನ ಅಂಬ್ಯುಲೆನ್ಸ್ ಸಿಬ್ಬಂದಿ ಹಾವೇರಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ. ಹಾವೇರಿ ನಗರದ ನಿವಾಸಿ ಲಕ್ಷ್ಮಿ ಜಿಲ್ಲಾಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಮಕ್ಕಳಲ್ಲಿ ತೀವ್ರತರದ ಸಮಸ್ಯೆ ಕಾಣಿಸಿಕೊಂಡಿತ್ತು. ಜಿಲ್ಲಾಸ್ಪತ್ರೆಯ ವೈದ್ಯರ ಸಲಹೆಯಂತೆ ಆದಷ್ಟು ಬೇಗ ನವಜಾತ ಶಿಶುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅರ್ಥಮಾಡಿಕೊಂಡ ಅಂಬ್ಯುಲೆನ್ಸ್ ಸಿಬ್ಬಂದಿ ಕೇವಲ 42 ನಿಮಿಷಗಳಲ್ಲಿ 80 ಕಿಮೀ ಕ್ರಮಿಸಿ ಮಕ್ಕಳನ್ನು ಕಿಮ್ಸ್ ಗೆ ದಾಖಲಿಸಿದ್ದಾರೆ….

  • ಆರೋಗ್ಯ

    ನೀವು ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವುದರಿಂದ ಆಗುವ ಸಮಸ್ಯೆ ..!ತಿಳಿಯಲು ಈ ಲೇಖನ ಓದಿ..

    ಟಿವಿ ವೀಕ್ಷಣೆಯಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರೋ ಪುರುಷರು ಓದಲೇಬೇಕು. ಯಾಕಂದ್ರೆ ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವ ಪುರುಷರ ವೀರ್ಯಾಣು ಶೇ.35ರಷ್ಟು ಕಡಿಮೆಯಾಗುತ್ತದೆ.

  • ಸಿನಿಮಾ

    ಐಟಿ ದಾಳಿ ವೇಳೆ ಪುನೀತ್ ರಾಜಕುಮಾರ್ ಮನೆ ಮುಂದೆ ಸಚಿವ ಡಿಕೆ.ಶಿವಕುಮಾರ್ ಬಂದಿದ್ದೇಕೆ ಗೊತ್ತಾ..?

    ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಐಟಿ ದಾಳಿಗೆ ಸ್ಯಾಂಡಲ್ವುಡ್ ಗುರಿಯಾಗಿದೆ. ಹೌದು ಕನ್ನಡದ ಸ್ಟಾರ್ ನಟರು, ಹಾಗೂ ನಿರ್ಮಾಪಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು 24 ಗಂಟೆಗಳಿಂದ ಅಧಿಕಾರಿಗಳು ಆಸ್ತಿ ಪಾಸ್ತಿ ಕುರಿತಂತೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಿನ್ನೆ ಬೆಳಗ್ಗೆ ಬೆಂಗಳೂರಿನ ಸುಮಾರು 25 ಕಡೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಂಗದೂರು, ದಿ ವಿಲನ್ ನಿರ್ಮಾಪಕ ಸಿ.ಆರ್ ಮನೋಹರ್ ಹಾಗೂ ರಾಕ್ ಲೈನ್ ವೆಂಕಟೇಶ್, ಮತ್ತು…

  • ಸುದ್ದಿ

    ರಣಂ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ದುರ್ಮರಣ ಪ್ರಕರಣ- ತನಿಖೆ ನಡೆಸುವವೇಳೆ ಸ್ಫೋಟಕ ಟ್ವಿಸ್ಟ್…….!

    ನಟ ಚಿರಂಜೀವಿ ಸರ್ಜಾ ಅಭಿನಯದ `ರಣಂ’ ಚಿತ್ರದ ಶೂಟಿಂಗ್ ವೇಳೆ ಇಬ್ಬರು ದುರ್ಮರಣಕ್ಕೀಡಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸಪ್ಪನ ಹಣದ ದಾಹಕ್ಕೆ ಇಬ್ಬರು ಅಮಾಯಕರು ಬಲಿಯಾಗಿರುವುದು ಆಂತರಿಕ ತನಿಖೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ.ಶೂಟಿಂಗ್ಗೆ ಅನುಮತಿ ಇಲ್ಲದೇ ಹೋದರೂ 5 ಸಾವಿರ ಹಣ ಪಡೆದು ಪೇದೆ ಶೂಟಿಂಗ್ ಮಾಡಿಸಿದ್ದನು. ತನಿಖಾ ವರದಿ ಕೈ ಸೇರುತ್ತಿದ್ದಂತೆಯೇ ಪೊಲೀಸ್ ಪೇದೆಯನ್ನು ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ. ಬಾಗಲೂರು ಠಾಣೆಯ ಪೇದೆಯಾಗಿದ್ದ ಭೀಮಾ…