ಸಿನಿಮಾ, ಸುದ್ದಿ

ವಿನೋದ್ ರಾಜ್ ರನ್ನು ಕ್ಯಾರೆ ಎನ್ನದ ಟಿವಿ ಶೋಗಳು, ಹುಡುಕಿಕೊಂಡು ಬಂತು ಬಂಪರ್ ಆಫರ್.

554

ಒಂದು ಕಾಲದಲ್ಲಿ ನೃತ್ಯ ಅಂದ್ರೆ ಏನು ಅಂತ ಸ್ಯಾಂಡಲ್ ವುಡ್ ಗೆ ತೋರಿಸಿಕೊಟ್ಟವರು ಅಂದ್ರೆ ನಟ ವಿನೋದ್ ರಾಜ್. ಹೌದು. ತಮ್ಮ ನೃತ್ಯದ ಮೂಲಕ ಇಡೀ ಕರ್ನಾಟಕವನ್ನೇ ಗೆದ್ದಿದ್ದರು. ಇನ್ನು ಅವರು ಕೆಲವು ಸಿನಿಮಾಗಳಲ್ಲಿ ನಟನಾಗಿ ನಟಿಸಿದ್ದು, ಎಲ್ಲರೂ ಅವರ ನಟನೆ ಹಾಗು ನೃತ್ಯಕ್ಕೆ ಫಿದಾ ಆಗಿದ್ದರು. ಆದರೆ ಕಾಲ ಕಳೆದಂತೆ ಅವರಿಗೆ ಚಿತ್ರಗಳ ಅವಕಾಶ ಕಡಿಮೆಯಾಗಿದ್ದರಿಂದ ಅವರು ಚಿತ್ರರಂಗದಿಂದ ದೂರ ಉಳಿಯಬೇಕಾಯಿತು. ಇನ್ನು ಅವರ ಕೊನೆ ಸಿನಿಮಾ 2009ರಲ್ಲಿ ತೆರೆ ಕಂಡ ‘ಯಾರದು’ ಆಗಿದ್ದು, ನಂತರ ಅವರು ಬಣ್ಣ ಹಚ್ಚಲೇ ಇಲ್ಲ. ಆದ್ರೆ ಈಗ ಮತ್ತೆ ಅವರು ತೆರೆ ಮೇಲೆ ಕಾಣಿಸಿಕೊಳ್ಳಲು ಬಣ್ಣ ಹಚ್ಚಲಿದ್ದಾರೆ.

ಮತ್ತೆ ತೆರೆ ಮೇಲೆ ಬರಲಿರುವ ವಿನೋದ್ ರಾಜ್

ವಿನೋದ್ ರಾಜ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅವರು ಹಾಗು ಅವರ ನೃತ್ಯವನ್ನು ಇಷ್ಟ ಪಡದವರೇ ಇಲ್ಲ. ಇನ್ನು ಅವರನ್ನು ಕನ್ನಡದ ಮೈಕಲ್ ಜಾಕ್ಸನ್ ಎಂದು ಎಲ್ಲರೂ ಕರೆಯುತ್ತಾರೆ. ಆದರೆ ಅವರು ಸಿನಿಮಾ ಕ್ಷೇತ್ರದಿಂದ ಬಲು ಬೇಗ ದೂರಾಗಿದ್ದು, ಎಲ್ಲರಿಗು ಬೇಸರದ ಸಂಗತಿಯಾಗಿತ್ತು. ಜೊತೆಗೆ ಅವರನ್ನು ಮತ್ತೆ ತೆರೆ ಮೇಲೆ ನೋಡಬೇಕೆಂದುಕೊಂಡರೂ ಅದು ಆಗಿರಲಿಲ್ಲ. ಆದ್ರೆ ಈಗ ಅವರು ,ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಹೌದು. ಮುಖವಾಡ’ ಎಂಬ ಚಿತ್ರತಂಡ ತಮ್ಮ ಸಿನಿಮಾಗೆ ವಿನೋದ್ ರಾಜ್ ರನ್ನು ಕರೆತರುವ ತಯಾರಿ ನಡೆಸಿದೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಸಿದ್ದು, ಅವರ ಅಂತಿಮ ಒಪ್ಪಿಗೆ ಮಾತ್ರ ಬಾಕಿ ಇದೆ ಎಂದು ಚಿತ್ರತಂಡ ತಿಳಿಸಿದೆ.

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುವಂತೆ ಒಪ್ಪಿಗೆ

ಇನ್ನು ‘ಮುಖವಾಡ’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಇನ್ನು ಈ ಸಿನಿಮಾದಲ್ಲಿ ಪವನ್ ತೇಜ್ ನಾಯಕನಾಗಿದ್ದು, ಶಿಲ್ಪಾ ಮಂಜುನಾಥ್ ನಾಯಕಿಯಾಗಿದ್ದಾರೆ. ಶಿಲ್ಪಾ ಈಗಾಗಲೇ ಕನ್ನಡ ಹಾಗೂ ತಮಿಳು ಸಿನಿಮಾ ಮಾಡಿದ್ದಾರೆ. ಇನ್ನು ಈ ಸಿನಿಮಾಗೆ ಸಹದೇವ್ ಆಕ್ಷನ್ ಕಟ್ ಹೇಳುತ್ತಿದ್ದು, ಎಸ್ ಕೆ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಹಾಗಾಗಿ ಈ ಚಿತ್ರದ ಕೆಲವೊಂದು ದೃಶ್ಯಗಳಿಗೆ ವಿನೋದ್ ರಾಜ್ ನಟಿಸಬೇಕೆಂದು ಚಿತ್ರತಂಡದ ಆಸೆಯಾಗಿದೆ. ಹಾಗಾಗಿ ಚಿತ್ರತಂಡ ಅವರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.

ಒಟ್ಟಿನಲ್ಲಿ ಅನೇಕ ವರ್ಷಗಳ ಬಳಿಕ ಮತ್ತೆ ಡಾನ್ಸ್ ರಾಜನಾದ ವಿನೋದ್ ರಾಜ್ ಅವರು ತೆರೆ ಮೇಲೆ ಬರುತ್ತಿದ್ದಾರೆ. ಇನ್ನು ಅವರು ಬಣ್ಣ ಹಚ್ಚುತ್ತಿರುವುದು ನಿಜಕ್ಕೂ ಎಲ್ಲರಿಗು ಸಂತಸದ ವಿಷಯವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಧೋನಿ ನಿವೃತ್ತಿಗೆ ಕೊಹ್ಲಿ ಪ್ರತಿಕ್ರಿಯೆ…..!

    ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಎಂ.ಎಸ್.ಧೋನಿ ಸ್ಲೋ ಬ್ಯಾಟಿಂಗ್ ಟೀಕೆಗೆ ಗುರಿಯಾಗಿತ್ತು. ಇಷ್ಟೇ ಅಲ್ಲ ಧೋನಿ ನಿವೃತ್ತಿಗೂ ಒತ್ತಡ ಕೇಳಿ ಬಂದಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಧೋನಿ ಎಲ್ಲಾ ಟೀಕಿಗೆ ಉತ್ತರಿಸಿದ್ದಾರೆ. 50 ರನ್ ಸಿಡಿಸೋ ಮೂಲಕ ಭಾರತದ ದಿಟ್ಟ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಆದರೆ ಪಂದ್ಯ ಗೆಲ್ಲಲಿಲ್ಲ ಅನ್ನೋ ಕೊರಗು ಇನ್ನು ಮಾಸಿಲ್ಲ. ಇದರ ನಡುವೆ ಮತ್ತೆ ಧೋನಿ ನಿವೃತ್ತಿ ಪಶ್ನೆ ಎದ್ದಿದೆ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ….

  • ಸುದ್ದಿ

    8 ತಿಂಗಳ ಗರ್ಭಿಣಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ರೆಕಾರ್ಡ, ಜಾಲತಾಣದಲ್ಲಿ ವೈರಲ್.!

    ಗರ್ಭಾವಸ್ಥೆ ಎನ್ನುವುದು ಹೆಣ್ಣಿನ ಜೀವನದ ಬಹಳ ಮಹತ್ವದ ಘಟ್ಟ ಎನ್ನುತ್ತಾರೆ. ಈ ಸಮಯದಲ್ಲಿ ತಾಯಿ ತನ್ನ ಮಗುವಿನ ಬೆಳವಣಿಗೆಗಾಗಿ ಬಹಳ ಜಾಗರೂಕಳಾಗಿರಬೇಕು. ಹೆಚ್ಚು ಕಷ್ಟವಾಗುವ ಕೆಲಸಗಳನ್ನು ಮಾಡಬಾರದು. ಆದರೆ ಇಲ್ಲೊಬ್ಬರು ಮಹಿಳೆ ತಾವು 8ನೇ ತಿಂಗಳ ಗರ್ಭವತಿಯಾಗಿರುವಾಗ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಕೆಲವು ದಿನಗಳ ಮುನ್ನವೇ  ಮಾಡಲಾಗಿದ್ದು ಈಗ ಈ ವಿಡಿಯೋ ವೈರಲ್ ಆಗುತ್ತಿದೆ. ಚೂಡಾಮಣಿ ಪತಿ ಸಾಫ್ಟ್‍ವೇರ್ ಎಂಜಿನಿಯರ್. ಪತ್ನಿಗೆ ಅವರ ಸಂಪೂರ್ಣ ಸಹಕಾರ ಇದೆ. ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗು…

  • ಸುದ್ದಿ

    ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರಗಳನ್ನು, ಹಂಚದ ಪೋಸ್ಟ್‌ಮ್ಯಾನ್‌.

    ಕಳೆದ ನಾಲ್ಕು ವರ್ಷಗಳಿಂದ ಪತ್ರಗಳನ್ನು ಹಂಚದೆ ಯಲಬುರ್ಗಾ ತಾಲೂಕಿನ ಪೋಸ್ಟ್‌ಮ್ಯಾನ್‌ ನಿರ್ಲಕ್ಷ್ಯ ತೋರಿದ ಸುರೇಶ್. ಪೋಸ್ಟ್‌ಮ್ಯಾನ್‌ ಸುರೇಶ್ ತಳವಾರ ಎನ್ನುವರು ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರ, ಎಟಿಎಮ್ ಕಾರ್ಡ್, ಪರೀಕ್ಷಾ ಪ್ರವೇಶ ಪತ್ರ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಹಂಚದೆ ನಿರ್ಲಕ್ಷ್ಯ ತೋರಿರುವ ಈ ಘಟನೆ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕಂಡುಬಂದಿದೆ.  ಸರ್ಕಾರಿ ಕಚೇರಿಗಳಿಂದ ಬಂದ ಪೋಸ್ಟ್, ಹಾಗೂ ಬ್ಯಾಂಕಿನಿಂದ ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳು ಬರುತ್ತಿಲ್ಲವೆಂದು ಗ್ರಾಹಕರು ತಲೆಕೆಡಿಸಿಕೊಂಡಿದ್ದಾರೆ….

  • ವ್ಯಕ್ತಿ ವಿಶೇಷಣ

    ತಮ್ಮ ಜೀವನದಲ್ಲಿ ಜಾಸ್ತಿ ಓದದೇ ಇದ್ರೂ ಯಶಸ್ಸು ಕಂಡ ಭಾರತೀಯರ ಬಗ್ಗೆ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ..

    ಓದು ಜೀವನಕ್ಕೆ ತುಂಬಾನೇ ಮುಖ್ಯ., ವಿದ್ಯೆ ಮುಖ್ಯ ಆದ್ರೆ ವಿನಯ ಅತ್ಯಗತ್ಯ. ವಿನಯಾನ ಯಾವ ಶಾಲೇಲೂ ಹೇಳಿಕೊಡಲ್ಲ. ಯೋಗ ಎಲ್ಲರಿಗೂ ಬರಬಹುದು, ಆದ್ರೆ ಯೋಗ್ಯತೆ ಕೆಲವರಿಗೆ ಮಾತ್ರ ಇರತ್ತೆ.. ” ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಅಂತಾರೆ ದೊಡ್ಡವರು. ಹಾಗೆ ಎಲ್ಲಾ ಜ್ಞಾನಾನೂ ಪುಸ್ತಕದಿಂದಾನೆ ಸಿಗಲ್ಲ, ಅನುಭಾವಾನೂ ಅಷ್ಟೇ ಮುಖ್ಯ. 1. ಅಕ್ಷಯ್ ಕುಮಾರ್:- ಮಾರ್ಷಲ್ ಆರ್ಟ್ಸ್ ಮುಂದುವರಿಸಬೇಕು ಅಂತ ಕಾಲೇಜನ್ನ ಬಿಟ್ರು. ಇವ್ರೊಂಥರ ಮಲ್ಟಿ ಟ್ಯಾಲೆಂಟೆಡ್. ನಟನೆ ಮಾಡ್ತಾರೆ, ಅಡಿಗೆ ಮಾಡ್ತಾರೆ, ಫೈಟ್…

  • ವಿಸ್ಮಯ ಜಗತ್ತು

    ಈ ಊರಿನ ಗಂಡಸರಿಗೆ ಮಾತ್ರ, ಹೆಣ್ಣು ದೆವ್ವಗಳು ಕೊಡುತ್ತಿರುವ ಕಾಟವಾದ್ರೂ ಏನು ಗೊತ್ತಾ..?ಶಾಕ್ ಆಗ್ತೀರಾ!ಈ ಲೇಖನ ಓದಿ…

    ದೆವ್ವ -ಭೂತಗಳ ಇರುವಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿರುತ್ತವೆ. ದೆವ್ವಗಳ ಬಗ್ಗೆ ಕೆಲವರು ನಂಬಿದ್ರೆ, ಇನ್ನೂ ಕೆಲವರು ನಂಬೋದಿಲ್ಲ.ಆದ್ರೆ ನಾವು ಆಗಾಗ ದೆವ್ವಗಳ ಇರುವಿಕೆ ಬಗ್ಗೆ ಕೇಳುತ್ತಲೇ ಇರುತ್ತೇವೆ.ಆದ್ರೆ ಈ ಗ್ರಾಮದಲ್ಲಿ ಹೆಣ್ಣು ದೆವ್ವ ಇದೆ ಎಂಬ ಕಾರಣಕ್ಕೆ ಇಡೀ ಊರಿನ ಜನ ಭಯಗೊಂಡು ಊರನ್ನೇ ಬಿಟ್ಟಿರುವ ಘಟನೆ ನಡೆದಿದೆ.

  • ದೇವರು, ದೇವರು-ಧರ್ಮ

    ರಾಮ ರಾವಣನ್ನು ವಿಜಯ ದಶಮಿ ಯಂದು ಕೊಂದು ಶ್ರೀಲಂಕಾ ದಿಂದ ಅಯೋಧ್ಯೆಗೆ ತೆರಳಲು 21 ದಿನ ಅಂದು ದಿಪಾವಳಿ

    ದಿಪಾವಳಿ ಯಾಕೆ 21 ದಿನಗಳ ನಂತರ ಆಚರಿಸಲಾಗುತ್ತದೆ?
    ಇದು ನಿಜನ? ರಾಮ ರಾವಣನ್ನು ವಿಜಯ ದಶಮಿ ಯಂದು ಕೊಂದು ಶ್ರೀಲಂಕಾ ದಿಂದ ಅಯೋಧ್ಯೆಗೆ ತೆರಳಲು 21 ದಿನ ಅಂದು ದಿಪಾವಳಿ