ಸಿನಿಮಾ, ಸುದ್ದಿ

ಕಿಚ್ಚ ಸುದೀಪ್ ಗೆ ಪತ್ನಿಯಿಂದಲೇ ಧಮ್ಕಿ, ಪತ್ನಿಗೆ ಹೆದರಿ ಹನ್ನೊಂದು ಬಾರಿ ಒಂದೇ ಸಿನಿಮಾ ನೋಡಿದ ಕಿಚ್ಚ.!

57

ತಿಯೊಬ್ಬ ಸಿನಿಮಾ ಅಭಿಮಾನಿಯಾಗಲಿ ನಟನಾಗಲಿ‌ ಒಂದು ಸಿನಿಮಾವನ್ನು ಎಷ್ಟು ಬಾರಿ ನೋಡಬಹುದು ಹೇಳಿ? ಹೇಗಾದರು ಮಾಡಿ ಎರಡರಿಂದ ಮೂರು ಬಾರಿ ಸಿನಿಮಾ ವೀಕ್ಷಣೆ ಮಾಡಬಹುದು. ಅದರಲ್ಲೂ ಸ್ಟಾರ್ ನಟರಂತೂ ತಾವು ಮಾಡಿದ ಸಿನಿಮಾವನ್ನು ಒಂದು ಬಾರಿ ನೋಡುವುದೇ ಕಷ್ಟದ ಪರಿಸ್ಥಿತಿ. ಆದರೆ, ಚಿತ್ರರಂಗದ ಕಿಚ್ಚ ಮಾತ್ರ ಒಂದೇ ಸಿನಿಮಾವನ್ನು ಹತ್ತರಿಂದ ಹನ್ನೊಂದು ಬಾರಿ ನೋಡಿದ್ದಾರಂತೆ. ಅದೂ ಅವರ ಪತ್ನಿಯೊಂದಿಗೆ! ಪತ್ನಿಯ ಧಮ್ಕಿಗೆ ಹೆದರದೆ ಫೈಲ್ವಾನ್ ಈ ರೀತಿ ಮಾಡಿದ್ದಾರಂತೆ.

ಕಿಚ್ಚ ಸುದೀಪ್ ಅಭಿನಯದ ದಬಾಂಗ್-3 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸದ್ಯ ಚಿತ್ರ ತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದೆ. ಚಿತ್ರದ ಕುರಿತ ಸಂದರ್ಶನವೊಂದರಲ್ಲಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿ ಈ ರೀತಿ ಹೇಳಿದ್ದಾರೆ. ನನ್ನ ಪತ್ನಿಯಿಂದಾಗಿ ಹೃತಿಕ್ ರೋಷನ್ ಅಭಿನಯದ ಕಹೋ ನಾ ಪ್ಯಾರ್ ಹೈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಹತ್ತರಿಂದ ಹನ್ನೊಂದು ಬಾರಿ ನೋಡಿದ್ದೇನೆ. ನೀನು ನನ್ನನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗದಿದ್ದರೆ ನಾನು ಬೇರೆಯವರ ಜೊತೆ ಹೋಗುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಪ್ರತೀ ಬಾರಿ ಅವಳ ಜೊತೆ ಚಿತ್ರಮಂದಿರಕ್ಕೆ ಹೋಗಿ ಕುಳಿತು, ಚಿತ್ರ ನೋಡಿ ಮರಳಿ ಬರುತ್ತಿದ್ದೆ ಎಂದು ಮಡದಿಯ ಧಮ್ಕಿ ಕುರಿತು ಹೇಳಿದ್ದಾರೆ.

ಮೊದಲ ಬಾರಿ ಸಿನಿಮಾ ನೋಡಿದಾಗ ಹೃತಿಕ್ ರೋಷನ್ ಅವರ ನಟನೆ, ಡ್ಯಾನ್ಸ್, ಸ್ಟೈಲ್ ಸೇರಿದಂತೆ ಅವರ ಅಭಿನಯ ನನಗೆ ತುಂಬಾ ಇಷ್ಟವಾಗಿತ್ತು. ಸಿನಿಮಾದಲ್ಲಿ ಹೃತಿಕ್ ಡ್ಯಾನ್ಸ್ ಮಾಡುತ್ತಿದ್ದಾಗ, ಇಲ್ಲಿ ನನ್ನ ಪತ್ನಿ ನನ್ನ ಕೈ ಚಿವುಟುತ್ತಿದ್ದರು. ಆಗ ನನಗೆ ಸಿಟ್ಟು ಬರುತ್ತಿತ್ತು. ನಾನು ಒಬ್ಬ ನಟ. ನನಗೂ ರಾಜ್ಯದ ತುಂಬ ಅಭಿಮಾನಿಗಳು ಇದ್ದರು. ಆದರೆ, ನನ್ನ ಪತ್ನಿ ಬೇರೆ ನಟನ ಅಭಿಮಾನಿಯಾಗಿದ್ದು, ಬೇಸರ ಮೂಡಿಸುತ್ತಿತ್ತು ಎಂದು ಹಾಸ್ಯಭರಿತವಾಗಿ ಹೇಳಿದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ, ಸುದ್ದಿ, ಸ್ಪೂರ್ತಿ

    ಡಿ-ಬಾಸ್ ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಅಭಿಮಾನಿಗಳು.

     ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮನೆ ಮುಂದೆ ದೊಡ್ಡ ಬೋರ್ಡ್ ಹಾಕುವ ಮೂಲಕ ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಈಗ ದರ್ಶನ್ ಅವರ ಮನವಿಗೆ ಅಭಿಮಾನಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬವಿದ್ದು, ಡಿ-ಬಾಸ್ ಜನ್ಮದಿನವನ್ನು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಆದರೆ ಬ್ಯಾನರ್, ಕೇಕ್, ಹಾರ ತಂದು ಅದ್ಧೂರಿಯಾಗಿ ನನ್ನ ಹುಟ್ಟುಹಬ್ಬ ಆಚರಿಸಬೇಡಿ ಎಂದು ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದರು. ಕಳೆದ ವರ್ಷ ದರ್ಶನ್ ತಮ್ಮ ಹುಟ್ಟುಹಬ್ಬಕ್ಕೆ ಬ್ಯಾನರ್,…

  • ಆಧ್ಯಾತ್ಮ

    ಮಹಾಲಕ್ಷ್ಮಿಯ ಹದಿನೆಂಟು ಪುತ್ರರ ಹೆಸರುಗಳು.

    ದೇವಸಖ – ಓಂ ದೇವಸಖಾಯ ನಮಃ, ಚಿಕ್ಲೀತ – ಓಂ ಚಿಕ್ಲೀತಾಯ ನಮಃ, ಆನಂದ – ಓಂ ಆನಂದಾಯ ನಮಃ ಕರ್ದಮ – ಓಂ ಕರ್ದಮಾಯ ನಮಃ , ಶ್ರೀಪ್ರದ – ಓಂ ಶ್ರೀಪ್ರದಾಯ ನಮಃ, ಜಾತವೇದ – ಓಂ ಜಾತವೇದಾಯ ನಮಃ, ಅನುರಾಗ – ಓಂ ಅನುರಾಗಾಯ ನಮಃ, ಸಂವಾದ – ಓಂ ಸಂವಾದಾಯ ನಮಃ, ವಿಜಯ – ಓಂ ವಿಜಯಾಯ ನಮಃ, ವಲ್ಲಭ – ಓಂ ವಲ್ಲಭಾಯ ನಮಃ, ಮದ – ಓಂ ಮದಾಯ…

  • ಸುದ್ದಿ, ಸ್ಪೂರ್ತಿ

    ವಿದೇಶಿ ಉದ್ಯೋಗವನ್ನ ಬಿಟ್ಟು ಬಂದು, ಈ ಒಂದು ಪ್ಲಾನ್ ನಿಂದ ಲಕ್ಷಾಧಿಪತಿಯಾದ ರೈತ, ಆ ಪ್ಲಾನ್ ಏನು ಗೊತ್ತಾ.

    ಮನುಷ್ಯ ಇಷ್ಟು ಅಭಿವೃದ್ಧಿ ಹೊಂದಿ ಈ ಹಂತಕ್ಕೆ ಬಂದಿದ್ದಾನೆ ಅಂದರೆ ಅದಕ್ಕೆ ಕಾರಣ ಆತನ ಸೂಕ್ಷ್ಮವಾದ ಬುದ್ದಿ ಮತ್ತು ಆತನ ಸೂಕ್ಷ್ಮ ಅವಲೋಕನೆ ಆಗಿದೆ. ಜೀವನದಲ್ಲಿ ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ನಮ್ಮನ್ನ ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಅಥವಾ ನಮ್ಮನ್ನ ಪಾತಾಳಕ್ಕೆ ತಳ್ಳಬಹುದು, ಆದರೆ ಕೆಲವೊಮ್ಮೆ ನಾವು ಮಾಡುವ ಚಿಕ್ಕ ಯೋಚನೆಗಳು ನಮ್ಮ ಜೀವನವನ್ನ ಬದಲಾವಣೆ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ನಾವು ಹೇಳುವ ಈ ವ್ಯಕ್ತಿ 4 ಲಕ್ಷ ಸಂಬಳದ ಉದ್ಯೋಗವನ್ನ ಬಿಟ್ಟು…

  • ದೇಶ-ವಿದೇಶ

    ಮೋದಿ ಸರ್ಕಾರದ ಹೊಸ ಶಾಕ್ !!!

    ಅಪನಗದೀಕರಣದಿಂದ ಚೇತರಿಸಿಕೊಳ್ಳುವಾಗಲೇ ಮತ್ತೊಂದು ಶಾಕ್ ನೀಡಲು, ಮೋದಿ ಸರಕಾರ ಮುಂದಾಗುವ ಸಾಧ್ಯತೆ ಇದೆ, ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರದಿಯಾಗಿದೆ.

  • ಜೀವನಶೈಲಿ

    ಸಮೀಕ್ಷೆ ಪ್ರಖಾರ ಭಾರತೀಯರು ಮೊಬೈಲ್’ನಲ್ಲಿ ಮಾಡೋದೇನು ಗೊತ್ತಾ..?ತಿಳಿಯಲು ಈ ಲೇಖನ ಓದಿ..ಶೇರ್ ಮಾಡಿ..

    ಪ್ರಸ್ತುತ ದಿನಗಳಲ್ಲಿ ಎಲ್ಲರನ್ನು ಆಕರ್ಷಿಸುತ್ತಿರುವ ಮೊಬೈಲ್ ಫೋನ್ ಒಂದು ಕ್ಷಣ ಇಲ್ಲ ಅಂದರೆ ಇರಲು ಸಾಧ್ಯವಿಲ್ಲವೇನೋ ಅನ್ನೋ ರೀತಿಯಲ್ಲಿ ಜನ ಅದಕ್ಕೆ ಅವಲಂಬಿತರಾಗಿದ್ದಾರೆ. ಹೀಗುರುವಾಗ ಇದರ ಮೇಲೆ ಒಂದು ಸಮೀಕ್ಷೆ ನಡೆಸಿದಾಗ ಭಾರತೀಯರು ಮೊಬೈಲ್ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಅನ್ನೋದನ್ನ ತಿಳಿಯಲಾಗಿದೆ. ಭಾರತೀಯರು ತಮ್ಮ ಬೇಸರವನ್ನು ನಿವಾರಿಸಿಕೊಳ್ಳಲು ಏನು ಮಾಡುತ್ತಾರೆ ಗೊತ್ತಾ..? ಒಂದು ಸಮೀಕ್ಷೆ ಹೇಳುವ ಪ್ರಕಾರ ಭಾರತದ ಶೇ.72ರಷ್ಟು ಮಂದಿ ತಮ್ಮ ಬೇಸರ ನಿವಾರಿಸಿಕೊಳ್ಳುವುದಕ್ಕಾಗಿಯೇ ಸಂದೇಶ, ಕರೆ ಮತ್ತು ಯಾವುದೇ ಸಕಾರಣವಿಲ್ಲದೆಯೇ ತಮ್ಮ ಮೊಬೈಲ್ ನೋಡುತ್ತಾರಂತೆ….