ಸುದ್ದಿ

ತಾಯಿಗೆ ಡಿಕ್ಕಿ ಹೊಡೆದ ಕಾರಿಗೆ ಒದ್ದ ಬಾಲಕ. ಎಲ್ಲೆಡೆ ವಿಡಿಯೋ ವೈರಲ್.!

62

ತಾಯಿಗೆ ಕಾರು ಡಿಕ್ಕಿ ಹೊಡೆದ ನಂತರ ಪುಟ್ಟ ಬಾಲಕ ಸಿಟ್ಟಿನಿಂದ ಕಾರಿಗೆ ಒದೆಯುವ ಮೂಲಕ ತಾಯಿಯ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚೀನಾದ ಚಾಂಗ್ಕಿಂಗ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ತಾಯಿ ಝೀಬ್ರಾ ಕ್ರಾಸ್ ಮೂಲಕ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಆಗ ತಾಯಿ ನೆಲಕ್ಕೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಬಾಲಕ ಮೊದಲು ತಾಯಿಯನ್ನು ಮಾತನಾಡಿಸುತ್ತಾನೆ. ನಂತರ ಸಿಟ್ಟಿಗೆದ್ದು ಕಾರಿಗೆ ಒದೆಯಲು ಪ್ರಾರಂಭಿಸಿದ್ದಾನೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರು ಚಾಲಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಯಿ ಜೊತೆಗೆ ಬಾಲಕ ರಸ್ತೆ ದಾಟುತ್ತಿರುತ್ತಾನೆ. ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ತಾಯಿ ಕೆಳಗೆ ಬೀಳುತ್ತಾರೆ. ಮೊದಲು ತಾಯಿಯನ್ನು ಮಾತನಾಡಿಸಿ, ನಂತರ ಬಾಲಕ ಕಾರಿಗೆ ಒದೆಯುತ್ತಾನೆ. ಆಗ ಚಾಲಕ ಕಾರಿನಿಂದ ಇಳಿದು ಬಂದಿದ್ದು, ಬಾಲಕ ತನ್ನ ತಾಯಿ ಬಳಿ ಓಡಿ ಹೋಗುತ್ತಾನೆ. ನಂತರ ಸುತ್ತಲಿನ ಜನ ಘಟನಾ ಸ್ಥಳದತ್ತ ಧಾವಿಸುತ್ತಾರೆ. ಕೆಳಗೆ ಬಿದ್ದಿದ್ದ ಮಹಿಳೆಯನ್ನು ಎತ್ತಿ ಅದೇ ಕಾರಿನ ಹಿಂದಿನ ಸೀಟಿನಲ್ಲಿ ಕೂರಿಸುತ್ತಾರೆ.

ಅದೃಷ್ಟವಶಾತ್ ಬಾಲಕ ಹಾಗೂ ತಾಯಿಗೆ ಗಂಭೀರ ಗಾಯಗಳಾಗಿಲ್ಲ. ಅಪಘಾತಕ್ಕೆ ಕಾರು ಚಾಲಕನೇ ಸಂಪೂರ್ಣ ಹೊಣೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ. 
ಈ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟರಿನಲ್ಲಿ 83,500 ಜನ ವೀಕ್ಷಿಸಿದ್ದಾರೆ. ಬಾಲಕ ಸಾವಿರಾರು ನೆಟ್ಟಿಗರ ಹೃದಯವನ್ನು ಗೆದ್ದಿದ್ದಾನೆ. ದಯವಿಟ್ಟು ನಿನ್ನ ಮುಗ್ಧ, ಪರಿಶುದ್ಧ ಹೃದಯವನ್ನು ಸದಾ ಕಾಪಾಡಿಕೋ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡುತ್ತಿರುವ ಮಹಿಳೆ ಈಗ 1 ಕೋಟಿಯ ಒಡತಿ,.! ಏಗೆ ಗೊತ್ತಾ.?

    ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‍ಪತಿ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಬಬಿತಾ ತಾಡೆ ಅವರು 1 ಕೋಟಿ ಗೆದ್ದು ಕೋಟ್ಯಧಿಪತಿಯಾಗಿದ್ದಾರೆ. ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ತಯಾರಕಿಯಾಗಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಅಮರಾವತಿಯವರಾದ ಬಬಿತಾ ತಾಡೆ ಕೆಬಿಸಿ 11ರಲ್ಲಿ ಕೋಟ್ಯಧಿಪತಿಯಾಗಿ ಹೊರಹೊಮ್ಮೆದ್ದಾರೆ. ಪ್ರತಿದಿನ ಸರಿ ಸುಮಾರು 450 ಕ್ಕೂ ಅಧಿಕ ಮಕ್ಕಳಿಗೆ ಇತರೆ ಅಡುಗೆ ಸಹಾಯಕಿಯರ ಜೊತೆ ಸೇರಿ ಊಟ ಸಿದ್ದಪಡಿಸುತ್ತಾರೆ. ಪ್ರತಿ ತಿಂಗಳು 1,500 ರೂ. ಸಂಬಳ ಪಡೆಯುತ್ತಿದ್ದ ಬಬಿತಾ…

  • ಬ್ಯಾಂಕ್

    ಶೂನ್ಯ ಬ್ಯಾಲೆನ್ಸ್ ಖಾತೆದಾರರಿಗೊಂದು ಶಾಕಿಂಗ್ ಸುದ್ದಿ ಕೊಟ್ಟ ಬ್ಯಾಂಕ್,.!!

    ಐಸಿಐಸಿಐ ಬ್ಯಾಂಕ್’ಶೂನ್ಯ ಬ್ಯಾಲೆನ್ಸ್’ ಖಾತೆದಾರರು ತಮ್ಮ ಶಾಖೆಗಳಲ್ಲಿ ಮಾಡುವ ಪ್ರತಿ ನಗದು ವಿತ್ ಡ್ರಾವಲ್ ಮೇಲೆರೂ. 100 ರಿಂದ 125 ವರೆಗೆ ಶುಲ್ಕವನ್ನು ಭರಿಸಬೇಕಾಗುತ್ತದೆ. ಜಿರೋ ಬ್ಯಾಲೆನ್ಸ್ ಖಾತೆದಾರರು ಮಾಡುವ ಪ್ರತಿ ನಗದು ಹಿಂಪಡೆಯುವಿಕೆ ಮೇಲೆ ರೂ. 100-125 ಶುಲ್ಕ ವಿಧಿಸುವ ಜೊತೆಗೆ ಕರೆನ್ಸಿ ಮರುಬಳಕೆ ಮೇಲೆಮಾಡುವ ನಗದು ಠೇವಣಿ ಮೇಲೂ ಶುಲ್ಕ ವಿಧಿಸಲು ಐಸಿಐಸಿಐ ಬ್ಯಾಂಕ್ ನಿರ್ಧರಿಸಿದೆ. ಇದೇ ಸಂದರ್ಭ, ಎಲ್ಲಆನ್ಲೈನ್ ವ್ಯವಹಾರ ಸೇವೆಗಳ ಮೇಲೆ ಶುಲ್ಕ ತೆಗೆದಿರುವ ಐಸಿಐಸಿಐ ಬ್ಯಾಂಕ್, ಡಿಜಿಟಲ್ ವ್ಯವಹಾರವನ್ನುಉತ್ತೇಜಿಸಲು ಮುಂದಾಗಿರುವುದಾಗಿ…

  • ರಾಜಕೀಯ

    ಮುಖ್ಯಮಂತ್ರಿಗಳ ಪ್ರಕಾರ ಈ ಸಂಘಟನೆಗಳು ಮತ್ತು ಈ ಪಕ್ಷದ ನಾಯಕರೇ ಉಗ್ರಗಾಮಿಗಳಂತೆ..! ಹಾಗಾದ್ರೆ ನಿಜವಾದ ಉಗ್ರಗಾಮಿಗಳು ಯಾರು..?

    ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಈ ಹೇಳಿಕೆ ಬರಬಾರದಿತ್ತು. ಅವರು ಚಾಮರಾಜನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತ, ಬಿಜೆಪಿಯವರನ್ನು ಟೀಕಿಸುವ ಭರದಲ್ಲಿ ಬಿಜೆಪಿ ಪಕ್ಷ ಹಾಗೂ ಆರ್.ಎಸ್.ಎಸ್ ಮತ್ತು ಭಜರಂಗದಳ ಸಂಘಟನೆಗಳು “ಉಗ್ರಗಾಮಿಗಳು” ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಜೊತೆಗೆ ತಾವು ಏನು ಕಡಿಮೆ ಇಲ್ಲ ಎನ್ನುವಂತೆ ದಿನೇಶ್ ಗುಂಡೂರಾವ್ ಅವರು ಬಿಜೆಪಿ ನಾಯಕರನ್ನು ‘ಜಿಹಾದಿಗಳು’ ಎಂದು ಕರೆದಿದ್ದಾರೆ.

  • ರಾಜಕೀಯ

    ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದೇಕೆ ಗೊತ್ತಾ ಕಾಂಗ್ರೆಸ್ ಪಕ್ಷದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್..?

    ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಗಳಿದ್ದಾರೆ. ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈ ಶಾಸಕಿ ಮೋದಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇದಿಕೆ ಮೇಲೆ ಮಾತನಾಡುತ್ತ ಬಹಳ ಜನ ರಾಜಕಾರಣಿಗಳನ್ನ ಕಳ್ಳರು, ಸುಳ್ಳರು, ಮೋಸಗಾರರು ಎಂದು ಕರೆಯುತ್ತಾರೆ. ಆದ್ರೆ ಎಲ್ಲಾ ರಾಜಕಾರಣಿಗಳು ಆ ಪಟ್ಟಿಗೆ ಸೇರುವುದಿಲ್ಲ. ಕೆಲವು ರಾಜಕಾರಣಿಗಳ ನಡೆಯನ್ನು, ಕೆಲಸವನ್ನು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪ್ರಧಾನಿ ನರೇಂದ್ರ…

  • ಮನರಂಜನೆ

    ಕೊನೆಗೂ ಗಾಯಕ ಚಂದನ್ ಶೆಟ್ಟಿಗೆ ತನ್ನ ಮನದ ಮಾತು ತಿಳಿಸಿದ ನಿವೇದಿತಾ ಗೌಡ..!

    ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿದ್ದ ಬಾರ್ಬಿ ಡಾಲ್ ನಿವೇದಿತಾ ಗೌಡ ತನ್ನ ಆತ್ಮೀಯ ಗೆಳೆಯ ರ‍್ಯಾಪರ್ ಚಂದನ್ ಶೆಟ್ಟಿಗೆ ಕಾಫಿ ಮಗ್ ಮೂಲಕ ತಮ್ಮ ಮನದ ಮಾತನ್ನು ಹೇಳಿದ್ದಾರೆ. ನಿವೇದಿತಾ ತಮ್ಮ ಗೆಳೆಯ ಚಂದನ್ ಅವರಿಗೆ ಒಂದು ಕಾಫಿ ಮಗ್ ನೀಡಿದ್ದಾರೆ. ಆ ಕಾಫಿ ಮಗ್ ಮೇಲೆ “ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ನನ್ನ ಪಕ್ಕದಲ್ಲೇ ಇರಬೇಕು ಎಂದು ನಾನು ಬಯಸುತ್ತೇನೆ. ಇಂತಿ ನಿನ್ನ ಪ್ರೀತಿಯ ನಿವಿ” ಎಂದು ಬರೆದು ಅದನ್ನು ಚಂದನ್‍ಗೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9 663218 892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9 66321 8892 ಮೇಷ ಸ್ನೇಹಿತರು ಜೊತೆಗಿನ ಚಟುವಟಿಕೆಗಳು ಆಹ್ಲಾದಕರವಾಗಿರುತ್ತವೆ – ಇಲ್ಲದಿದ್ದರೆ ನೀವು ಖಾಲಿ ಕೈಯಲ್ಲಿ ಜೊತೆ…