ಸುದ್ದಿ

ಆಕಾಶದಿಂದ ಪಾತಾಳಕ್ಕೆ ಇಳಿದ ಈರುಳ್ಳಿ, ಕೇಜಿಗೆ ಈರುಳ್ಳಿ 25 ರೂಪಾಯಿ.!

237

ಗಗನ ಸೀಳಿ ಬ್ರಹ್ಮಾಂಡ ತಲುಪಿದ್ದ ಈರುಳ್ಳಿ ಬೆಲೆ ಇದೀಗ ನಿಧಾನವಾಗಿ ಇಳಿಕೆಯತ್ತ ಮುಖ ಮಾಡಿದೆ. ದೇಶದ ವಿವಿಧೆಡೆ 200 ರೂ. ಗಡಿ ದಾಟಿದ್ದ ಈರುಳ್ಳಿ ಬೆಲೆ ಇದೀಗ 170 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಆದರೆ ನೆರೆಯ ಆಂಧ್ರಪ್ರದೇಶದಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಅಂದರೆ ನಿಮಗೆ ಅಚ್ಚರಿಯಾದಿತು. ಹೌದು, ಆಂಧ್ರ ಸರ್ಕಾರ ಈರುಳ್ಳಿಗೆ ಸಬ್ಸಿಡಿ ಘೋಷಣೆ ಮಾಡಿದ್ದು, ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಆಗಿದೆ.

ರಾಜ್ಯದ ರೈತು ಬಜಾರ್‌ಗಳಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಆಗಿದೆ. ಸಬ್ಸಿಡಿ ಆಧಾರದಲ್ಲಿ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿರುವುದು ಪ್ರಶಂಸೆಗೆ ಪಾತ್ರವಾಗಿದೆ. ದೇಶಾದ್ಯಂತ ಈರುಳ್ಳಿ ಬೆಲೆ ಹೆಚ್ಚಳವಾಗಿದ್ದು, ಇದನ್ನರಿತ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಸರ್ಕಾರ ಈರುಳ್ಳಿ ಮೇಲೆ ಸಬ್ಸಿಡಿ ಘೋಷಣೆ ಮಾಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನಾಪತ್ತೆಯಾಗಿ ಮೂರು ವರ್ಷದ ನಂತರ ಟಿಕ್ ಟಾಕ್ ನಲ್ಲಿ ಪತ್ತೆಯಾದ ಪತಿ!

    ಒಂದಿಲ್ಲೊಂದು ಪ್ರಮಾದಕ್ಕ ಕಾರಣವಾಗುತ್ತಿರುವ ಟಿಕ್ ಟಾಕ್ ಮೊಬೈಲ್ app ಅನ್ನು ನಿಷೇಧಿಸಲು ಹಲವು ರಾಜ್ಯಗಳು ಮುಂದಾಗಿರುವ ಹೊತ್ತಲ್ಲೇ ಈ ವಿಡಿಯೋದಿಂದ ಮಹಿಳೆಯೊಬ್ಬರು ನಾಪತ್ತೆಯಾದ ತಮ್ಮ ಪತಿಯನ್ನು ಕಂಡುಕೊಂಡಿದ್ದಾರೆ. ಈ ಮೂಲಕ ವಿರಳಾತಿವಿರಳ ಪ್ರಕರಣದಲ್ಲಿ ಟಿಕ್ ಟಾಕ್ ಉಪಕಾರಕ್ಕೂ ಬಂದಂತಾಗಿದೆ! ತಮಿಳುನಾಡಿನ ವಿಲ್ಲುಪುರಂ ನ ಜಯಪ್ರಧಾ ಎಂಬ ಮಹಿಳೆ ಸುರೇಶ್ ಎಂಬುವವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಆದರೆ 2017 ರ ಆರಂಭದಲ್ಲಿ ಸುರೇಶ್ ಅವರು ತಮ್ಮ ಊರಾದ ಕೃಷ್ಣಗಿರಿಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ನಂತರ ಅವರು ವಾಪಸ್…

  • inspirational, ಸುದ್ದಿ

    ನಿವೃತ್ತಿ ಬಳಿಕ ಮಾಡೋದೇನು? ಎಂಬ ಪ್ರಶ್ನೆಗೆ ಕೊಹ್ಲಿ ಕೊಟ್ಟ ಉತ್ತರ ತಿಳಿದರೆ ಶಾಕ್ ಆಗುತ್ತೀರಾ…!

    ಪಂಜಾಬಿ ಕುಟುಂಬದಲ್ಲಿ ಜನಿಸಿದ ವಿರಾಟ್‌ ಕೊಹ್ಲಿ, ಹುಟ್ಟಿದ್ದು-ಬೆಳೆದದ್ದು ಎಲ್ಲವೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ. ಅಂದಹಾಗೆ ಕೊಹ್ಲಿ ತಮ್ಮ ಬಾಲ್ಯದ ದಿನಗಳಲ್ಲಿ ಭಾರಿ ತಿಂಡಿ ಪೋತರಾಗಿದ್ದರು. ಬಾಯಲ್ಲಿ ನೀರು ತರುವಂತಹ ರುಚಿಕರ ತಿಂಡಿ ತಿನಿಸುಗಳೆಂದರೆ ಕೊಹ್ಲಿಗೆ ಅಚ್ಚುಮೆಚ್ಚು. ಇತ್ತೀಚೆಗೆ 31ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿರಾಟ್‌ ಕೊಹ್ಲಿ ಇನ್ನು ಹೆಚ್ಚೆಂದರೆ 5-6 ವರ್ಷ ಟೀಮ್‌ ಇಂಡಿಯಾದಲ್ಲಿ ಆಡಬಹುದು. ಈ ಅವಧಿಯಲ್ಲಿ ಅವರು ಸಾಧಿಸುವುದು ಬಹಳಷ್ಟಿದೆ. ಆದರೆ, ಇವೆಲ್ಲವೂ ಮುಗಿದನಂತರ ಅವರು ಮಾಡುವುದಾದದರೂ ಏನು? ಕೊಹ್ಲಿ ನಿವೃತ್ತಿ ನಂತರದ ದಿನಗಳ ಕುರಿತಾಗಿ…

  • ಸುದ್ದಿ

    ಅಡಿಕೆ ಮರ ಏರುವ ಯಂತ್ರ ಆವಿಷ್ಕರಿಸಿದ ಬಂಟ್ವಾಳ ರೈತ, ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರ ಪ್ರಶಂಸೆ…!

    ಮಂಗಳೂರು: ರೈತನೊಬ್ಬ ಅಡಕೆ ಮರವನ್ನು ಯಂತ್ರವೊಂದರ ಸಹಾಯದಿಂದ ಹತ್ತುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅಡಕೆ ಮರಕ್ಕೆ ಅತ್ಯಂತ ಸುಲಭವಾಗಿ ಹತ್ತಿ ಅಡಕೆ ಕೀಳುವ ಬೈಕ್ ಮಾದರಿಯ ಯಂತ್ರವೊಂದನ್ನು ಬಂಟ್ವಾಳದ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ್ದು, ಇದಕ್ಕೀಗ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಂದಲೂ ಮೆಚ್ಚುಗೆಯಿಂದ ಟ್ವೀಟ್ ಮಾಡಿದೆ. ಸಜೀಪಮೂಡ ಗ್ರಾಮದ ಕೋಮಾಲಿ ನಿವಾಸಿ, ಗಣಪತಿ ಭಟ್ ಅವರ ಯಂತ್ರದ ಮೂಲಕ ಮಹಿಳೆಯರೂ ಮರ ಏರಲು ಸಾಧ್ಯವಾಗಿದೆ. ಯುವತಿಯೋರ್ವಳು ಮರ ಏರುತ್ತಿರುವ…

  • ಉಪಯುಕ್ತ ಮಾಹಿತಿ

    ನಿಮ್ಮ ಫೋನ್ ಒರ್ಜಿನಲ್ ಹೌದೋ? ಅಲ್ಲವೋ? ಎಂದು ತಿಳಿಯುವುದು ಹೇಗೆ ಗೊತ್ತಾ..?ಇದನ್ನು ಓದಿ …

    ಆನ್‌ಲೈನ್‌ ಮಾರುಕಟ್ಟೆ ಇಂದಿನ ದಿನದಲ್ಲಿ ಮೊಬೈಲ್ ಫೋನ್‌ಗಳ ಮಾರಾಟವನ್ನು ಹೆಚ್ಚು ಮಾಡುತ್ತಿದೆ. ವಿವಿಧ ಆಫರ್‌ಗಳು, ಹೊಸ ಫೋನ್ ಲಾಂಚ್ ಗಳು ಸೇರಿದಂತೆ ಎಕ್ಸ್‌ಕ್ಲೂಸಿವ್ ಸೇಲ್‌ಗಳು ಸೇರಿದಂತೆ ಅನೇಕ ಆಫರ್ ಗಳು ಲಭ್ಯವಿದೆ.

  • ಸುದ್ದಿ

    ಶೀಘ್ರದಲ್ಲೇ ಇನ್ಮುಂದೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆಗಳಲ್ಲಿ ಬಿಸಿ ಬಿಸಿ ಟೀ ಲಭ್ಯ…!

    ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಏರ್ಪೋರ್ಟ್ಗಳು ಮತ್ತು ಮಾಲ್ಗಳಲ್ಲಿ ನೀವು ‘ಟೀ’ಯನ್ನು ಮಣ್ಣಿನ ಲೋಟಗಳಲ್ಲಿ(ಕುಲ್ಹಾದ್) ಕುಡಿಯುವ ಅವಕಾಶ ಸದ್ಯದಲ್ಲೇ ಸಿಗಲಿದೆ. ಇಂಥದ್ದೊಂದು ವ್ಯವಸ್ಥೆ ಜಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ ನಿರ್ದೇಶನ ನೀಡಿದ್ದಾರೆ ಮಣ್ಣಿನ ಲೋಟಗಳನ್ನು ಬಳಸುವ ಪರಿಸರಸ್ನೇಹಿ ವ್ಯವಸ್ಥೆಯನ್ನು ದೇಶದ ಪ್ರಮುಖ100 ರೈಲ್ವೆ…

  • inspirational

    ಸೀತಾಫಲ ಹಣ್ಣನ್ನು ನೀವು ತಿಂದಿರಬಹುದು ಆದರೆ, ಇದರ ಅದ್ಬುತ ರಹಸ್ಯಗಳನ್ನು ನೋಡಿ.

    ಈ ಪ್ರಪಂಚದಲ್ಲಿ ಹಲವು ರೀತಿಯ ಹಣ್ಣುಗಳು ಸಿಗುತ್ತದೆ ಮತ್ತು ಅದರಲ್ಲಿ ಕೆಲವು ಹಣ್ಣುಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾದರೆ ಇನ್ನು ಕೆಲವು ಹಣ್ಣುಗಳು ಕೇವಲ ರುಚಿಯನ್ನ ಮಾತ್ರ ನೀಡುತ್ತದೆ. ಇನ್ನು ಸೀತಾಫಲ ಹಣ್ಣನ್ನು ಯಾರು ತಾನೇ ಇಷ್ಟಪಡಲ್ಲ ಹೇಳಿ, ಪ್ರತಿಯೊಬ್ಬರು ಕೂಡ ಒಮ್ಮೆಯಾದರೂ ಈ ಹಣ್ಣಿನ ರುಚಿ ನೋಡಿರುತ್ತೀರಿ, ಇನ್ನು ಈ ಹಣ್ಣಿನ ಜ್ಯೂಸ್ ಕೂಡ ಕುಡಿದಿರಬಹುದು ಆದರೆ ಈ ಹಣ್ಣಿನಲ್ಲಿರುವ ಕೆಲವು ಅದ್ಬುತ ರಹಸ್ಯಗಳ ಬಗ್ಗೆ ಮಾತ್ರ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಹೌದು ಸೀತಾಫಲ ಸಾಮಾನ್ಯವಾದ…