ಸುದ್ದಿ

ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಟ್ರೈಲರ್ ಗೆ ಸ್ಟಾರ್ ನಟರ ಅಭಿಪ್ರಾಯವೇನು ಗೊತ್ತಾ,.!

25

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಐದು ಭಾಷೆಯಲ್ಲಿ ರಿಲೀಸ್ ಆಗಿದ್ದು ಎಲ್ಲಾ ಭಾಷೆಯ ಚಿತ್ರಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಮತ್ತು ತಂಡ ಸುಮಾರು ಮೂರು ವರ್ಷಗಳಿಂದ ಪಟ್ಟ ಶ್ರಮ ಈ ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ. ಒಂದು ವಿಭಿನ್ನ ರೀತಿಯ ಸಿನಿಮಾ ಇದಾಗಿದ್ದು ಚಿತ್ರಾಭಿಮಾನಿಗಳ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಮೆಚ್ಚಿಕೊಂಡಿದ್ದಾರೆ. ಅವನೇ ಶ್ರೀಮನ್ನಾರಾಯಣನ ಟ್ರೈಲರ್ ನೋಡಿ ಸ್ಟಾರ್ಸ್ ಹೇಳಿದ್ದೇನು?

“ಅವನೇ ಶ್ರೀಮನ್ನಾರಾಯಣ ಅದ್ಬುತವಾದ ಟ್ರೈಲರ್. ಚಿತ್ರತಂಡದ ಶ್ರಮ ಈ ಟ್ರೈಲರ್ ನಲ್ಲಿ ಕಾಣುತ್ತಿದೆ. ರಕ್ಷಿತ್ ಶೆಟ್ಟಿ ಮತ್ತೆ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಿ. ಒಳ್ಳೆಯದಾಗಲಿ” ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.

ಟ್ರೈಲರ್ ನ ಪ್ರತಿಯೊಂದು ಫ್ರೇಮ್ ನಲ್ಲಿ ಚಿತ್ರತಂಡದ ಕಠಿಣ ಶ್ರಮ ಎದ್ದು ಕಾಣುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ” ಎಂದು ನಟ ನಿರೂಪ್ ಭಂಡಾರಿ ಹೇಳಿದ್ದಾರೆ. ಇನ್ನು ಅನೂಪ್ ಭಂಡಾರಿ ಕೂಡ ಹಾಡಿ ಹೊಗಳಿದ್ದಾರೆ. “ಒಂದು ಹಿಟ್ ನೀಡಿದ ನಂತರ ಒಂದು ಚಿತ್ರಕ್ಕಾಗಿ ಮೂರು ವರ್ಷಗಳನ್ನು ಕಳೆಯುವುದು ನಿಜವಾದ ಪ್ಯಾಶನ್. ಇಡೀ ತಂಡಕ್ಕೆ ಬೆಸ್ಟ್ ವಿಶಸ್” ಎಂದು ಹೇಳಿದ್ದಾರೆ.

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ “ಅವನೇ ಶ್ರೀಮನ್ನಾರಾಯಣ ಅದ್ಬುತವಾದ ಟ್ರೈಲರ್. ಚಿತ್ರತಂಡದ ಶ್ರಮ ಈ ಟ್ರೈಲರ್ ನಲ್ಲಿ ಕಾಣುತ್ತಿದೆ. ರಕ್ಷಿತ್ ಶೆಟ್ಟಿ ಮತ್ತೆ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಿ. ಒಳ್ಳೆಯದಾಗಲಿ” ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.

ಅವನೇ ಶ್ರೀಮನ್ನಾರಯಣ’ನನ್ನು ಹೊಗಳಿದ ಸುದೀಪ್ “ಒಂದು ದಿನ ಮುಂಚಿತವಾಗಿಯೆ ಟ್ರೈಲರ್ ಕಳುಹಿಸಿದ್ದಕ್ಕೆ ಧನ್ಯವಾದಗಳು ರಕ್ಷಿತೆ ಶೆಟ್ಟಿ. ಒಂದು ಪದದಲ್ಲಿ ಹೇಳಬೇಕೆಂದರೆ ಇದು ಕ್ರಾಫ್ಟೆಡ್. ಒಂದು ಕೇಂದ್ರ ಬಿಂದು ತಲುಪಲು ಒಂದು ತಂಡ ಒಟ್ಟಿಗೆ ಇದ್ದು, ಒಟ್ಟಿಗೆ ಕೆಲಸ ಮಾಡಿ, ಒಟ್ಟಿಗೆ ಯೋಚಿಸಿ ಮತ್ತು ಒಟ್ಟಿಗೆ ಕಾರ್ಯಗತಕ್ಕೆ ತಂದಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ” ಎಂದು ಹೇಳಿದ್ದಾರೆ

ಮಲಯಾಳಂ ನಟ ನಿವಿನ್ ಪೌಲಿ “ಪ್ರತಿ ಫ್ರೇಮ್ ಕೂಡ ಅದ್ಭುತವಾಗಿದೆ. ಮಲಯಾಳಂ ಚಿತ್ರರಂಗಕ್ಕೆ ಸ್ವಾಗತ. ಅದ್ದೂರಿಯಾದ ದೃಶ್ಯ ವಿದು” ಎಂದು ಮಲಯಾಳಂ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ತಮಿಳು ನಟ ಧನುಷ್ “ಚಮತ್ಕಾರ, ಸಾಹಾಸ, ಕ್ರಿಯೆ ಮತ್ತು ಭವ್ಯತೆ ಎಲ್ಲವನ್ನು ಹೊಂದಿದೆ ಅಭಿನಂದನೆಗಳು. ಇಡಿ ತಂಡಕ್ಕೆ ಒಳ್ಳೆಯದಾಗಲಿ” ಎಂದು ತಮಿಳು ನಟ ಧನುಷ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಮೆಚ್ಚಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Sports, ಕ್ರೀಡೆ

    ಕ್ರಿಕೆಟ್ ನಲ್ಲಿ ಹೊಸ ನಿಯಮ ಜಾರಿಗೆ ನಿಮಗೋತ್ತಾ

    ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ‘ದಿ ಹಂಡ್ರೆಡ್’ ಪುಸ್ತಕದಿಂದ ಒಂದು ಎಲೆಯನ್ನು ತೆಗೆದುಕೊಳ್ಳಲು ನಿರ್ಧರಿಸಿದೆ ಮತ್ತು ಓವರ್-ರೇಟ್ ಅಪರಾಧಗಳಿಗೆ ಪಂದ್ಯದೊಳಗೆ ದಂಡವನ್ನು ಪರಿಚಯಿಸಿದೆ. ಓವರ್-ರೇಟ್‌ನಲ್ಲಿ ಹಿಂದುಳಿದಿರುವ ತಂಡಗಳು (ಅಂದರೆ ನಿಗದಿತ ಸಮಯದೊಳಗೆ ಓವರ್‌ಗಳನ್ನು ಬೌಲ್ ಮಾಡದ ತಂಡಗಳು) ಈಗ ತಕ್ಷಣವೇ ಶಿಕ್ಷೆಗೆ ಗುರಿಯಾಗುತ್ತವೆ ಮತ್ತು ಉಲ್ಲಂಘನೆಯ ಹಂತದಿಂದ ಹೆಚ್ಚುವರಿ ವ್ಯಕ್ತಿಯನ್ನು ವೃತ್ತದೊಳಗೆ ನಿಲ್ಲಿಸುವಂತೆ ಒತ್ತಾಯಿಸಲಾಗುತ್ತದೆ. “ಫೀಲ್ಡಿಂಗ್ ತಂಡವು ಇನಿಂಗ್ಸ್‌ನ ಅಂತಿಮ ಓವರ್‌ನ ಮೊದಲ ಚೆಂಡನ್ನು ಇನ್ನಿಂಗ್ಸ್‌ನ ಅಂತ್ಯಕ್ಕೆ ನಿಗದಿತ ಅಥವಾ ಮರುನಿಗದಿಪಡಿಸಿದ ಸಮಯದ ಮೂಲಕ ಬೌಲ್ ಮಾಡುವ…

    Loading

  • ರೆಸಿಪಿ

    ಚಳಿಗಾಲಕ್ಕೆ ಬಿಸಿ ಬಿಸಿ ಹಳ್ಳಿ ಶೈಲಿಯ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಮಾಡುವ ವಿಧಾನ ನೋಡಿ…

    ಈಗಂತೂ ಚಳಿಗಾಲ. ಏನಾದರೂ ಸ್ಪೈಸಿ ಸ್ಪೈಸಿ ತಿನ್ನಲೇ ಬೇಕು ಅನ್ನಿಸದೆ ಇರೋದಿಲ್ಲ. ಅದರಲ್ಲೂ ನಾನ್ವೆಜ್ ತಿನ್ನುವವರು ಚಿಕನ್ ನಲ್ಲಿ ವಿಧ ವಿಧವಾದ ಸ್ಪೈಸಿಯಾದ ಕಬಾಬ್, ಚಿಕನ್ ಫ್ರೈ ಮಾಡಿ ತಿನ್ನುತ್ತಾರೆ. ಆದರೆ ಇನ್ನೂ ಏನಾದರೂ ಸ್ಪೆಷಲ್ ಮಾಡಬೇಕು ಎನ್ನಿಸಿದರೆ ಈ ಚಳಿಗಾಲದಲ್ಲಿ ಅದೂ ಹಳ್ಳಿ ಶೈಲಿಯಲ್ಲಿ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಆದರೆ ಮಾಡೋದು ಹೇಗೆ ಗೊತ್ತಿಲ್ಲ ಎಂದರೆ ಚಿಕನ್ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ ನೋಡಿ… ಚಿಕನ್ ಚಾಪ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಈರುಳ್ಳಿ –…

  • ಉಪಯುಕ್ತ ಮಾಹಿತಿ

    ಸರ್ಕಾರದಿಂದ ಬೋರ್ ವೆಲ್ ಕೊರೆಸುವ ರೈತರಿಗೆ 2.5ಲಕ್ಷದ ಸಬ್ಸಿಡಿ..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ ಮತ್ತು ಎಲ್ಲರಿಗೂ ಮರೆಯದೇ ಶೇರ್ ಮಾಡಿ…

    ಹೌದು,ನೀವೂ ಕೇಳಿದ್ದು ನಿಜ, ರೈತರು ಸರ್ಕಾರದ ಈ  ಯೋಜನೆ ಮೂಲಕ  2.5 ಲಕ್ಷ ಸಬ್ಸಿಡಿ ಪಡೆದು ಬೋರ್ ವೆಲ್ ಕೊರೆಸುವ ಸಂಪೂರ್ಣ ಮಾಹಿತಿ ಇಲ್ಲಿದೆ… ಈ ಮಾಹಿತಿ ನಮ್ಮ ರೈತ ಭಾಂದವರಿಗೆ ಹೆಚ್ಚು ಉಪಯುಕ್ತವಾಗಿದ್ದು,ಆದಷ್ಟೂ ಎಲ್ಲರಿಗೂ ಮತ್ತು ನಿಮ್ಮ ಸ್ನೇಹಿತರಿಗೂ ಮರೆಯದೇ ಶೇರ್ ಮಾಡಿ… ಈಗಂತೂ ಹಲವಾರು ವಿಭಾಗಗಳಲ್ಲಿ ಸರ್ಕಾರಗಳು ಜನರಿಗೆ ಉಪಯುಕ್ತವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ.ಅದರಲ್ಲಿ ಇದು ಒಂದು ರೈತರಿಗೆ ಅನುಕೂಲವಾಗುವಂತಹ ಯೋಜನೆಯಾಗಿದೆ. ಕೆಲವೊಂದು ಅಭಿವೃದ್ಧಿ ನಿಗಮದ ಸಹಕಾರದಡಿಯಲ್ಲಿ ಗಂಗಾ ಕಲ್ಯಾಣ ಯೋಜನೆ ಜಾರಿಯಲ್ಲಿದ್ದು.. ಇದರ…

  • ಸ್ಪೂರ್ತಿ

    ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ 7 ವರ್ಷದ ಪುಟ್ಟ ಬಾಲಕನೊಬ್ಬನ ಕಥೆ ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ..

    7 ವರ್ಷದ ಕ್ಸಿಯೋ ಚಾಂಗ್ ಜಿಯಾಂಗ್ ಚೀನಾದ ಕಿಂಗ್‍ಡಾವೋ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದಾನೆ. ಈತನ ವಿಡಿಯೋವನ್ನ ಮೊದಲು ಚೀನಾದ ವಿಡಿಯೋ ಹಂಚಿಕೆ ಜಾಲತಾಣ ಪೀರ್‍ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದ್ದು, ಅನಂತರ ವೈರಲ್ ಆಗಿದೆ.

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(25 ಡಿಸೆಂಬರ್, 2018) ಸಕಾರಾತ್ಮಕವಾಗಿರುವ ಮತ್ತು ಬೆಂಬಲ ನೀಡುವ ಸ್ನೇಹಿತರೊಂದಿಗೆಹೊರಗೆ ಹೋಗಿ. ಇಂದು ನೀವು ನೀವು ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು…

  • ಜ್ಯೋತಿಷ್ಯ

    ಚಂದ್ರಗ್ರಹಣ ದೋಷ ನಿವಾರಣೆಗೆ ಇಲ್ಲಿದೆ ಪರಿಹಾರ ಏನೆಂದು ತಿಳಿಯಿರಿ….!

    ಈ ಬಾರಿ ಚಂದ್ರಗ್ರಹಣ ಧನಸ್ಸು ಮತ್ತು ಮಕರ ರಾಶಿಯವರಿಗೆ ಹೆಚ್ಚು ದೋಷಕರವಾಗಲಿದೆ. ವೃಷಭ ಲಗ್ನ ಮತ್ತು ಮಿಥುನ ಲಗ್ನದಲ್ಲಿ ಚಂದ್ರಗ್ರಹಣ ಸಂಭವಿಸುತ್ತಿದೆ. ಹಾಗಾಗಿ ಧನಸ್ಸು, ಮಕರ, ವೃಷಭ ಮತ್ತು ಮಿಥುನ ರಾಶಿಯವರಿಗೆ ಸ್ವಲ್ಪ ಮಟ್ಟದ ದೋಷ ಎದುರಾಗಲಿದೆ ಎಂದು ಜೋತಿಷ್ಯಶಾಸ್ತ್ರಜ್ಞರು ಹೇಳುತ್ತಾರೆ. ದೋಷ ನಿವಾರಣೆ: ಗ್ರಹಣ ಕಾಲದಲ್ಲಿ ಧನಸ್ಸು, ಮಕರ, ವೃಷಭ ಮತ್ತು ಮಿಥುನ ರಾಶಿಯವರು ನಿದ್ರೆ ಮಾಡದೇ ಕೆಳಗೆ ನೀಡಲಾಗಿರುವ ಶ್ಲೋಕವನ್ನು ಕ್ರಮಬದ್ಧವಾಗಿ ಹೇಳುತ್ತಾ ಪಾರಾಯಣ ಮಾಡಬೇಕು. ಯೋ ಸೌ ವ್ರಜಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ…