ಸುದ್ದಿ

ಇದ್ದಕ್ಕಿದ್ದಂತೆ ಚೈತ್ರಾ ಕೋಟೂರ್ ಉಡುಗೆ-ತೊಡುಗೆಯ ವ್ಯತ್ಯಾಸಕ್ಕೆ ಕಾರಣವೇನು? ಅದಕ್ಕೆ ಚೈತ್ರಾ ಅವರು ಕೊಟ್ಟ ಉತ್ತರವಿದು ?

67

ಚೈತ್ರಾ ಕೋಟೂರ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರೆಲ್ಲರಿಗೂ ತುಂಬಾನೇ  ಶಾಕ್ ಆಗಿತ್ತು. ಚೈತ್ರಾ  ಅವರು ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರು ಎಲ್ಲರೂ ಚೈತ್ರಾರವರನ್ನೇ ನೋಡುತ್ತಿದ್ದರು ಅವರು ಧರಿಸಿರುವ  ವಸ್ತ್ರವಿನ್ಯಾಸ ಕೂಡ ಬದಲಾಗಿದ್ದೂ, ಬಿಗ್ ಮನೆಯ ಸ್ಪರ್ಧಿಗಳಿಗೆ, ಅಷ್ಟೇ ಅಲ್ಲದೆ ಪ್ರೇಕ್ಷಕರಿಗೂ ಕೂಡ ಶಾಕ್ ನೀಡಿದೆ.

ಚೈತ್ರಾ ಡ್ರೆಸ್ಸಿಂಗ್‌ ಸೆನ್ಸ್ ಬದಲಾಗಿದ್ದೇಕೆ? “ನಾನು, ಚಂದನ್ ಯಾವಾಗಲೂ ಟಾರ್ಗೆಟ್ ಆಗಿರುತ್ತಿದ್ದೆವು, ಏನೆ ಕಮೆಂಟ್ ಬಂದರೂ, ಬಿರುದು ಅದನ್ನು ನಾನು ನಗುನಗುತ್ತ ಸ್ವೀಕರಿಸುತ್ತಿದ್ದೆ. ಏನೇ ನೆಗೆಟಿವ್ ಆದರೂ ಕೂಡ ಅದನ್ನು ನನ್ನ ಮೇಲೆ ತಂದು ಹೇಳುತ್ತಿದ್ದರು. ನಾನು ಏನೇ ಕಷ್ಟಕೊಟ್ಟರೂ, ಏನೇ ಹೇಳಿದರೂ ನಾನು ಅದನ್ನು ಸಹಿಸಿಕೊಂಡು ಇರುತ್ತೇನೆ ಎಂದು ಎಲ್ಲರೂ ತಿಳಿದುಕೊಳ್ಳುತ್ತಿದ್ದರು, ಕಂಫರ್ಟ್‌ಜೋನ್‌ನಲ್ಲಿ ಇರುವವರಿಗೆ ಬೇರೆಯವರ ಹೆಸರು ಹೇಳಲು ಧಮ್ ಇರೋದಿಲ್ಲ, ಏನಾದರೂ ಬೇರೆಯವರ ಹೆಸರು ಹೇಳಿದ್ರೆ ಏನು ಅಂದುಕೊಳ್ತಾರೋ ಏನೋ ಎನ್ನುವುದು ಅವರ ತಲೆಯಲ್ಲಿರತ್ತೆ.

ಈ ತರ ನಾನು ಮೊದಲು ಇರಲಿಲ್ಲ, ಅತ್ತಿದ್ದೇನೆ. ಹೊರಗಡೆ ಹೋದಮೇಲೆ ನನಗೆ ವೈಯಕ್ತಿಕವಾಗಿ ನಾನು ಬದಲಾಗಬೇಕು ಅನ್ನಿಸ್ತು, ಹೀಗಾಗಿ ನಾನು ನನ್ನ ಡ್ರೆಸ್ಸಿಂಗ್ ಕೂಡ ಬದಲಾಯಿಸಿಕೊಂಡಿದ್ದೇನೆ. ಯಾರು ಸುಮ್ಮನಿರುತ್ತಾರೋ ಅವರನ್ನು ಬಲಿಪಶು ಮಾಡುತ್ತಾರೆ ಇವರು”ಎಂದಿದ್ದಾರೆ ಚೈತ್ರಾ ಕೋಟೂರ್.

ಚೈತ್ರಾ ತಲೆಯಲ್ಲಿ ಏನಿದೆ? ನಿಮ್ಮ ಮುಂದೆ ಎಲ್ಲರೂ ಸೂಪರ್ ಸೂಪರ್ ಅಂತಾರೆ, ಆಮೇಲೆ ನಾಮಿನೇಟ್ ಮಾಡ್ತಾರೆ ಎಂದು ರಕ್ಷಾರಿಗೆ ಚಂದನ್ ಸಲಹೆ ನೀಡಿದ್ದಾರೆ. ಒಟ್ಟಾರೆಯಾಗಿ ಚೈತ್ರಾ ಈ ಬಾರಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಸರಿಯಾದ ಕಾಂಪಿಟೇಶನ್ ಕೊಡಲಿದ್ದಾರೆ ಎಂಬುದು ಅವರ ನಡವಳಿಕೆ, ಅವರ ಉತ್ಸಾಹದಲ್ಲಿ ಮೇಲ್ನೋಟಕ್ಕೆ ಗೋಚರಿಸುತ್ತಿದೆ, ನೋಡೋಣ ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ