ಸುದ್ದಿ

ಹುಟ್ಟುತ್ತಲೇ ಅಪ್ಪನನ್ನು ನೋಡಿ ಸ್ಮೈಲ್ ಮಾಡಿದ ಮಗು. ಅದರಲ್ಲೂ ಒಂದು ವಿಶೇಷ ಇದೆ.

112

ಮನೆಗೆ ಪುಟ್ಟ ಕಂದ ಬರುತ್ತಿದೆ ಎಂದರೆ ಅದಕ್ಕಿಂತ ಸಂತೋಷದ ಕ್ಷಣ ಬೇರೆ ಯಾವುದಿದೆ ಹೇಳಿ..? ಮಗು ಹುಟ್ಟಿದಾಗಿನಿಂದ ಅದರ ಆಟ, ಪಾಠ, ನಗು, ಅಳು, ಚೇಷ್ಟೆ ಎಲ್ಲವನ್ನೂ ಕಣ್ತುಂಬಿಕೊಳ್ಳುವುದೇ ಚೆಂದ. 
ಅದರಲ್ಲೂ ಆಗ ತಾನೆ ಹುಟ್ಟಿದ ಮಗುವೊಂದು ತನ್ನ ಅಪ್ಪನನ್ನು ನೋಡಿ ಸ್ಮೈಲ್ ಮಾಡಿದರೆ….ಆ ಅನುಭವ ಹೇಗಿರುತ್ತದೆ ನೀವೇ ಊಹಿಸಿಕೊಳ್ಳಿ. ಅಂದಹಾಗೆ ಈ ಫೋಟೋ ಬ್ರೆಜಿಲ್‍ನ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿರುವ ಫ್ಲಾವಿಯೋ ಎಂಬ ಸೈನಿಕನ ಪುಟ್ಟ ಕುಟುಂಬದ್ದು. ಫ್ಲಾವಿಯೋ ಪತ್ನಿ ತಾರ್ಸಿಲಾ ಕಳೆದ ಆಗಸ್ಟ್‍ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹುಟ್ಟುತ್ತಲೇ ಫ್ಲಾವಿಯೋ ಆಪರೇಷನ್ ಥಿಯೇಟರ್‍ಗೆ ಬಂದು ಆ ಮುದ್ದು ಕಂದನನ್ನು ಮಾತನಾಡಿಸಿದ್ದಾರೆ. ಅಪ್ಪನ ಧ್ವನಿ ಕೇಳುತ್ತಿದ್ದಂತೆ ಮಗು ಆಂಟೊನೆಲ್ಲಾ ಆತನನ್ನು ನೋಡಿ ಸ್ಮೈಲ್ ಮಾಡಿದೆ. ಆ ಕ್ಷಣವನ್ನು ಅಲ್ಲೇ ಇದ್ದ ವೈದ್ಯರು ಸೆರೆಹಿಡಿದಿದ್ದಾರೆ.

ಆಗ ತಾನೆ ಹುಟ್ಟಿದ ಮಕ್ಕಳು ಈ ರೀತಿ ನಗುವುದು ಅಪರೂಪ. ಆದರೆ ಆಂಟೊನೆಲ್ಲಾ ಅಪ್ಪನನ್ನು ನೋಡಿ ನಗೆ ಬೀರಿದ ಹಿಂದೆ ಒಂದು ವಿಶೇಷವಿದೆ. ತಾರ್ಸಿಲಾ ಗರ್ಭಿಣಿಯಾದಾಗಿನಿಂದ ಪತಿ ಫ್ಲಾವಿಯೋ ಆಕೆ ಹೊಟ್ಟೆ ಬಳಿ ಬಂದು ಮಗುವನ್ನು ಮಾತನಾಡಿಸುತ್ತಿದ್ದರಂತೆ. ಗಂಟೆಗಂಟೆಗೊಮ್ಮೆ ಗುಡ್ ಮಾರ್ನಿಂಗ್, ಗುಡ್ ಆಫ್ಟರ್ ನೂನ್, ಗುಡ್ ಈವ್ನಿಂಗ್, ಐ ಲವ್ ಯೂ, ಹೀಗೆ ಮಗುವಿನ ಬಳಿ ಮಾತನಾಡುತ್ತಿದ್ದರಂತೆ. ಆಶ್ಚರ್ಯ ಎಂದರೆ ಫ್ಲಾವಿಯೋ ಹಾಗೆ ಮಾತನಾಡುತ್ತಿದ್ದಾಗಲೆಲ್ಲಾ ಗರ್ಭದಲ್ಲಿದ್ದ ಮಗು ಚಲನೆಯಾಡುತ್ತಿತ್ತಂತೆ. 
ಅದೇ ರೀತಿ ಮಗು ಹುಟ್ಟಿದಾಗ ಕೂಡಾ ಫ್ಲಾವಿಯೋ ಮಗಳನ್ನು ಮಾತನಾಡಿಸಿದ್ದಾರೆ. ಅಪ್ಪನ ಧ್ವನಿ ಕೇಳುತ್ತಿದ್ದಂತೆ ಆ ಪುಟ್ಟ ಕಂದ ಆ ಧ್ವನಿಯನ್ನು ಕಂಡುಹಿಡಿದು ಕೂಡಲೇ ಮಿಲಿಯನ್ ಡಾಲರ್ ಸ್ಮೈಲ್ ನೀಡಿದೆ. ಆಂಟೊನೆಲ್ಲಾ ಹುಟ್ಟಿದ್ದು ಆಗಸ್ಟ್‍ನಲ್ಲಾದರೂ ಈ ಅಪರೂಪದ ಫೋಟೋ ಈಗ ಇಂಟರ್‍ನೆಟ್‍ನಲ್ಲಿ ಹರಿದಾಡುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    “ಸೊನ್ನೆ” (ಝೀರೋ) ಕಂಡುಹಿಡಿದದ್ದು ಭಾರತ.ಹಾಗಿದ್ರೆ ಉಳಿದ ನಂಬರಗಳನ್ನು ಕಂಡುಹಿಡಿದಿದ್ದು ಯಾರು ಗೊತ್ತೇ.?ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ಬ್ರಹ್ಮ ಗುಪ್ತ ಇದನ್ನು ಡೆವಲಪ್ ಮಾಡಿ ಈಗಿನ ಸೊನ್ನೆ ರೂಪಕ್ಕೆ ತಂದ? ಹಾಗಿದ್ದರೆ ಕೇವಲ ಒಂದೂವರೆ ಸಾವಿರ ವರ್ಷದ ಹಿಂದೆ ಬಂದಿದ್ದಾ ಸೊನ್ನೆ ? ಅದರ ಮೊದಲು ಏನಿತ್ತು ? ಉಳಿದ ನಂಬರಗಳು ಯಾರು ಕಂಡುಹಿಡಿದಿದ್ದು ?

  • ಸುದ್ದಿ

    ಟಿಕ್ ಟಾಕ್ ಖಾತೆ ಡಿಲಿಟ್ ಮಾಡಿ ದೇಶಪ್ರೇಮ ತೋರಿದ ಚಾಲೆಂಜಿಂಗ್ ಸ್ಟಾರ್. ಅಭಿಮಾನಿಗಳು ಖಾತೆ ಡಿಲೀಟ್.

    ಕನ್ನಡದ ಹೆಮ್ಮೆಯ ನಟ, ಅಭಿಮಾನಿಗಳ ಡಿ.ಬಾಸ್ ಸ್ಯಾಂಡಲ್ ವುಡ್ ನ ಬ್ರಾಂಡ್ ಅಂತೆಲ್ಲ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕೂಡ ಚೀನಾ ವಸ್ತು ಹಾಗೂ ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿದ್ದು, ಈ ವಿಚಾರವಾಗಿ ದರ್ಶನ್ ಫ್ಯಾನ್ಸ್ ಮೊದಲು ಟಿಕ್ ಟಾಕ್ ಗೆ ಗುಡ್ ಬೈ ಹೇಳಿದ್ದಾರೆ. ಟಿಕ್ ಟಾಕ್ ನಲ್ಲಿಯೂ ಡಿಬಾಸ್ ಹೆಸರು ದಾಖಲೆ ನಿರ್ಮಿಸಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ದರ್ಶನ್ ಅಭಿಮಾನಿಗಳು ಖಾತೆ ಡಿಲೀಟ್ ಮಾಡಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ….

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಸೋಮವಾರ,ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(24 ಡಿಸೆಂಬರ್, 2018) ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನುಶಮನಗೊಳಿಸುತ್ತದೆ. ನೀವು ಇದರಲ್ಲಿ…

  • inspirational

    ಮಗನ ಟಿಕ್‌ಟಾಕ್ ಹುಚ್ಚು – ಸಾಸ್ ಚೆಲ್ಲಿ ಅಮ್ಮನಿಗೆ ಕಣ್ಣೀರು ಬರುವಂತೆ ಮಾಡಿದ ಪುತ್ರ..!

    ಟಿಕ್ ಟಾಕ್ ಮಾಡಲು ಹೋದ ಯುವಕನಿಗೆ ಮನೆಯವರು ಸಖತ್ ಗೂಸಾ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗುತ್ತಿದೆ. ಯುವಕನೊಬ್ಬ ಟಿಕ್ ಟಾಕ್ ಮಾಡಲು ನೆಲದ ಮೇಲೆ ಮಲಗಿ ರಕ್ತವಾಂತಿ ಮಾಡುವಂತೆ ನಟಿಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಮಗನ ಸ್ಥಿತಿನೋಡಿ ಗಾಬರಿಗೊಂಡು ಜೋರಾಗಿ ಕಿರುಚಾಡುತ್ತಾ ಮನೆಯ ಸದಸ್ಯರಿಗೆ ಕರೆಯಲು ಹೋಗುತ್ತಾರೆ. ಮಹಿಳೆ ಕಿರುಚಾಟದ ಶಬ್ದ ಕೇಳಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ನೆಲದ ಮೇಲೆ ಮಲಗಿಕೊಂಡು ನಟಿಸುತ್ತಿದ್ದ ಯುವಕ ನಗುತ್ತಾ ಎದ್ದುಕುಳಿತಿದ್ದಾನೆ. ಮಗನ…

  • ಸುದ್ದಿ

    ಸ್ಪೋಟಕ ಮಾಹಿತಿ;ಪಬ್‌ಜಿ ವ್ಯಸನದಿಂದಾಗಿ ಯುವಕನ ಜೀವನವಾಯ್ತು ನರಕ!

    ಜನಪ್ರಿಯ ಆನ್‌ಲೈನ್ ಆಟಗಳಲ್ಲಿ ಒಂದಾದ ಪಬ್‌ಜಿ ಇತ್ತೀಚಿಗೆ ಯಾವಾಗಲೂಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. ಪಬ್‌ಜಿ ಆಟಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಇತರೆ ವ್ಯಸನಗಳಿಗೆತುತ್ತಾಗಿದ್ದಾರೆ ಎಂಬ ಅನೇಕ ಪ್ರಕರಣಗಳು ದಾಖಲಾಗಿವೆ. ಇಂತಹುದೇ ಮತ್ತೊಂದು ಪ್ರಕರಣ ಹೈದರಾಬಾದ್‌ನಲ್ಲಿವರದಿಯಾಗಿದೆ. ಹೌದು, ಪಬ್‌ಜಿ ಆಟದ ಕಾರಣದಿಂದಾಗಿ ಹೈದರಾಬಾದ್‌ನ 19 ವರ್ಷದ ಯುವಕನೋರ್ವಪಾರ್ಶ್ವವಾಯುವಿಗೆ ಒಳಗಾಗಿದ್ದಾನೆ ಎಂದು ತಿಳಿದುಬಂದಿದೆ. ಹೌದು, ಕಳೆದ ಆಗಸ್ಟ್ 26 ರಂದು ಈ ಘಟನೆ ನಡೆದಿದ್ದು, ಪಬ್‌ಜಿಗೆವ್ಯಸನಿಯಾಗಿದ್ದ ಹೈದರಾಬಾದ್‌ನ ಯುವಕನಿಗೆ ಪಾರ್ಶ್ವವಾಯು ಅಪ್ಪಳಿಸಿದೆ. ಐಸಿಯುಗೆ ಕರೆದೊಯ್ಯಲಾಗಿರುವಆತ ತನ್ನ ಬಲಗೈ…

  • ಉಪಯುಕ್ತ ಮಾಹಿತಿ, ಗ್ಯಾಜೆಟ್

    ಮಿಲಿಯನ್ ಬಳಕೆದಾರರಿಗೆ ಜಿಯೋ ಕ್ರಿಸ್‌ಮಸ್’ಗೆ ನೀಡುತ್ತಿದೆ ಹೊಸ ಸೇವೆ.! ತಿಳಿಯಲು ಈ ಲೇಖನ ಓದಿ…

    ರಿಲಾಯನ್ಸ್ ಮಾಲೀಕತ್ವದ ಜಿಯೋ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಕೇವಲ ಡೇಟಾ-ಉಚಿತ ಕರೆಗಳ ಸೇವೆಯನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲಿಲ್ಲ. ಇದರ ಬದಲಿಗೆ ಹೊಸ ಮಾದರಿಯ ಆಪ್‌ ಸೇವೆಗಳನ್ನು ನೀಡುವ ಮೂಲಕ ಹೊಸ ಹಾದಿಯನ್ನು ಟೆಲಿಕಾಂ ಕಂಪನಿಗಳಿಗೆ ತೋರಿಸಿಕೊಟ್ಟಿತ್ತು.