ಸುದ್ದಿ

ಶ್ರೀರಾಮನ ಬಂಟ ಹನುಮನನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ ಭಕ್ತಿ ಮೆರೆದ ಅಯೋಧ್ಯೆಯ ಮುಸ್ಲಿಂ ಕುಟುಂಬ.

74

ಹಿಂದೂ, ಮುಸ್ಲಿಂ ಎಂಬ ಭೇದವಿಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತಿದೆ. ಇದಕ್ಕೆ ಅಯೋಧ್ಯೆಯ ಮುಸ್ಲಿಂ ಕುಟುಂಬವೊಂದು ಸಾಕ್ಷಿಯಾಗಿದೆ. ತಮ್ಮ ಮಗ, ಮಗಳ ಮದುವೆ ಆಮಂತ್ರಣ ಪ್ರತಿಕೆಯಲ್ಲಿ ರಾಮನ ಭಂಟ ಹನುಮನ ಚಿತ್ರವನ್ನು ಮುದ್ರಿಸಿ ಕುಟುಂಬ ಭಕ್ತಿ ಮೆರೆದಿದೆ.

ಹೌದು. ಉತ್ತರ ಪ್ರದೇಶ ಚಾರೇರ ಗ್ರಾಮದ ಮುಸ್ಲಿಂ ಕುಟುಂಬ ಶ್ರೀರಾಮನ ಬಂಟ ಹನುಮನ ಚಿತ್ರವುಳ್ಳ ಕ್ಯಾಲೆಂಡರ್ ಒಂದನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದೆ. ಅಷ್ಟೇ ಅಲ್ಲದೆ ಈ ಪತ್ರಿಕೆಯಲ್ಲಿ ಬ್ರಹ್ಮ, ವಿಷ್ಣು, ಶಿವ ಹಾಗೂ ನಾರದರ ಚಿತ್ರವನ್ನೂ ಕೂಡ ಕುಟುಂಬ ಮುದ್ರಿಸಿದೆ. ರಸೂಲಾಬಾದ್‍ನ ಹೋಮಿಯೋಪತಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೊಹಮ್ಮದ್ ಮುಬೀನ್ ಅವರು ತಮ್ಮ ಮಗ ಮತ್ತು ಮಗಳು ಲಗ್ನ ಪತ್ರಿಕೆಯಲ್ಲಿ ಹಿಂದೂ ದೇವರ ಚಿತ್ರ ಮುದ್ರಿಸಿದ್ದಾರೆ. ಮುಬೀನ್ ಅವರ ಮಗ ಮೊಹಮದ್ ನಸೀರ್ ಹಾಗೂ ಮಗಳು ಅಮೀನಾ ಬಾನೋ ಅವರ ಮದುವೆ ನಡೆಯಲಿದೆ. ಶುಕ್ರವಾರ ನಸೀರ್ ಮದುವೆಯಾದರೆ, ರವಿವಾರದಂದು ಅಮೀನಾ ಮದುವೆ ನಡೆಯಲಿದೆ. ಹೀಗಾಗಿ ಮುಬೀನ್ ಅವರು ತಮ್ಮ ಮಕ್ಕಳ ಮದುವೆಗೆ ಹಿಂದೂ ದೇವರುಗಳುಳ್ಳ ವಿಶೇಷ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ.

ಈಗಾಗಲೇ 700 ಮಂದಿಗೆ ಲಗ್ನ ಪತ್ರಿಕೆ ಹಂಚಿದ್ದೇನೆ. ಹಿಂದೂ ಮಿತ್ರರಿಗೂ ಲಗ್ನ ಪತ್ರಿಕೆ ಹಂಚಿ ಮದುವೆಗೆ ಕರೆದಿದ್ದೇನೆ. ಯಾರೂ ಕೂಡ ಈವರೆಗೆ ಇದಕ್ಕೆ ವಿರೋಧಿಸಿಲ್ಲ. ನನ್ನ ಸಂಬಂಧಿಕರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಮಕ್ಕಳು ಕೂಡ ಖುಷಿಯಿಂದ ಲಗ್ನ ಪತ್ರಿಕೆಯನ್ನು ಒಪ್ಪಿದ್ದಾರೆ. ಎಲ್ಲರೂ ಇದು ಒಳ್ಳೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಖುಷಿಯಿಂದ ಮುಬೀನ್ ಹೇಳಿದ್ದಾರೆ. 
ಹಿಂದೂಗಳು ಮತ್ತು ಮುಸ್ಲಿಮರು ಯಾವಾಗಲೂ ಇಲ್ಲಿ ಪರಿಪೂರ್ಣ ಸಾಮರಸ್ಯದಿಂದ ವಾಸಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕುಟುಂಬ, ನಮ್ಮ ಅಲ್ಲಾಹುವಿನ ಮೇಲೆ ನಮಗೆ ಎಷ್ಟು ನಂಬಿಕೆ ಇದೆಯೋ ಅಷ್ಟೇ ನಂಬಿಕೆ ಹಿಂದೂ ದೇವ, ದೇವತೆಯರ ಮೇಲಿದೆ ಎಂದು ಹೇಳಿ ಎಲ್ಲರ ಮನ ಗೆದ್ದಿದ್ದಾರೆ. 
ಮುಬೀನ್ ಅವರು ಈ ಬಗ್ಗೆ ಮಾತನಾಡಿ, ಲಗ್ನ ಪತ್ರಿಕೆ ಮುದ್ರಿಸುವ ವಿಚಾರದಲ್ಲಿ ಯಾರೂ ನನ್ನ ಮೇಲೆ ಒತ್ತಡ ಹೇರಿರಲಿಲ್ಲ. ಕುಟುಂಬ ಸದಸ್ಯರ ಅನುಮತಿ, ಅಭಿಪ್ರಾಯ ಪಡೆದು ನಾನು ಪತ್ರಿಕೆ ಆಯ್ಕೆ ಮಾಡಿದ್ದೇನೆ ಎಂದಿದ್ದಾರೆ. ಈ ಸಾಮರಸ್ಯ ಎರಡು ಸಮುದಾಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸಿದೆ ಎಂದು ಸ್ಥಳೀಯರೊಬ್ಬರು ಮುಬೀನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಂತಹ ಹೆಬ್ಬುಲಿ ನಟಿ – ಅಮಲಾ ಪೌಲ್…!

    ಬಹುಭಾಷಾ ನಟಿ ಅಮಲಾ ಪೌಲ್ ಅವರು ತಮಿಳಿನಲ್ಲಿ ನಟಿಸಿದ ‘ಅದಾಯಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ನಟಿ ಅಮಲಾ ಪೌಲ್ ನಟಿಸಿದ ಅದಾಯಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತಾಯಿ ತನ್ನ ಕಾಣೆಯಾದ ಮಗಳನ್ನು ಹುಡುಕಿಕೊಡಿ ಎಂದು…

  • ಸಿನಿಮಾ

    ಈ ನಟನ ಬಳಿ ಇರುವ ಐಷಾರಾಮಿ ವ್ಯಾನಿಟಿ ವ್ಯಾನ್’ನ ವಿಶೇಷತೆಗಳು ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ನಟ, ನಟಿಯರು ಶೂಟಿಂಗ್‌ಗೆ ತೆರಳುವಾಗ ಅವರೊಂದಿಗೆ “ವ್ಯಾನಿಟಿ ವ್ಯಾನ್‌’ ಕೂಡಾ ತೆರಳುವುದು ಸಾಮಾನ್ಯ. ಕೆಲವರದ್ದು ಸಾಮಾನ್ಯ ಸೌಲಭ್ಯ ಇರುವ ವ್ಯಾನ್‌ ಆದರೆ ಇನ್ನು ಕೆಲವರನ್ನು ಅತ್ಯಾಧುನಿಕ ಸೌಲಭ್ಯ ಇರುವ ವ್ಯಾನಿಟಿ ವ್ಯಾನ್‌. ಈ ಅತ್ಯಾಧುನಿಕ ವ್ಯಾನಿಟಿ ವ್ಯಾನ್‌ ಹೊಂದಿರುವವರ ಸಾಲಿಗೆ ಇದೀಗ ನಟ ಶಾರುಖ್‌ ಖಾನ್‌ ಕೂಡಾ ಸೇರ್ಪಡೆಯಾಗಿದ್ದಾರೆ.

  • ಸುದ್ದಿ

    ಪೊಲೀಸರ ನಿರ್ಲಕ್ಷ್ಯ. ಪಾಕ್ ಪರ ಘೋಷಣೆ ಕೂಗಿದ್ದ ದೇಶದ್ರೋಹಿ ವಿದ್ಯಾರ್ಥಿಗಳ ಬಿಡುಗಡೆ!ಕಿಡಿಕಾರಿದ ವಕೀಲರು.

    ಪಾಕ್ ಪರವಾಗಿ ಘೋಷಣೆಯನ್ನು ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಇಂದು ಜಾಮೀನು ನೀಡಿದೆ. ಹೌದು ಹುಬ್ಬಳಿಯ ನ್ಯಾಯಾಲಯ ಜೆಎಂಎಫ್‍ಸಿ-2 ಇಂದು ಜಾಮೀನಿನ ಮೇಲೆ ದೇಶದ್ರೋಹಿಗಳನ್ನು ಬಿಡುಗಡೆ ಮಾಡಿದೆ. ಇದು ಪೋಲೀಸರ ನಿರ್ಲ್ಯಕ್ಷ ಹಾಗೂ ಇವರ ಸೋಮಾರಿತನದಿಂದ ದೇಶದ್ರೋಹಿ ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಜಾಮೀನಿನ ಮುಖಾಂತರ ಹೊರಗಡೆ ಬಂದಿದ್ದಾರೆ ಇದರ ವಿರುದ್ಧ ವಕೀಲ ಸಂಘದ ಅಧ್ಯಕ್ಷ ಅಶೋಕ್ ಕಿಡಿಕಾರಿದ್ದಾರೆ. ಹುಬ್ಬಳಿ ಗ್ರಾಮೀಣದ ಪೊಲೀಸರು ಸರಿಯಾದ ಸಮಯಕ್ಕೆ ಚಾರ್ಜ್ ಶೀಟ್ ಸಲ್ಲಿಸದೇ ಇರುವ ಕಾರಣ ನ್ಯಾಯಾಲಯ ದೇಶ…

  • ರೆಸಿಪಿ

    ಮನೆಯಲ್ಲೇ ಕಾಲ್ ಸೂಪ್ ಮಾಡುವ ಸಿಂಪಲ್ ವಿಧಾನ…

    ಪ್ರತಿ ಸಂಡೇ, ಚಿಕನ್, ಮಟನ್, ಫಿಶ್ ತಿನ್ನುತ್ತೀರಾ. ಹೀಗಾಗಿ ಈ ವಾರ ಆರೋಗ್ಯಕ್ಕೆ ಉತ್ತಮವಾದ ಕಾಲ್ ಸೂಪ್ ಮಾಡಿ ಸವಿಯಿರಿ. ಮಕ್ಕಳಿಂದ ವೃದ್ಧರವೆಗೂ ಕಾಲ್ ಸೂಪನ್ನು ಕುಡಿಯುತ್ತಾರೆ. ಆದರೆ ಮಕ್ಕಳು ಕುಡಿಯಲು ಇಷ್ಟಪಡುವುದಿಲ್ಲ. ಅದಕ್ಕೆ ಮಸಲಾ ಹಾಕಿ ರುಚಿಕರವಾಗಿ ಮಾಡಿಕೊಟ್ಟರೆ ಕುಡಿಯುತ್ತಾರೆ. ಆದ್ದರಿಂದ ಎರಡು ವಿಧಾನದಲ್ಲಿ ಕಾಲ್ ಸೂಪ್ ಮಾಡುವ ವಿಧಾನ ನಿಮಗಾಗಿ… ಬೇಕಾಗುವ ಸಾಮಾಗ್ರಿಗಳು 1. ಮೇಕೆ ಕಾಲು – 2, 2. ಈರುಳ್ಳಿ – ಮೀಡಿಯಂ, 3. ಬೆಳ್ಳುಳ್ಳಿ – 2-3 ಎಸಳು4. ಶುಂಠಿ –…

  • ಸುದ್ದಿ

    ಮಗಳ ಮದುವೆಗೋಸ್ಕರ ಕೂಡಿಟ್ಟಿದ್ದ ಬರೋಬ್ಬರಿ 50ಲಕ್ಷ ಹಣವನ್ನು ನೆರೆ ಸಂತ್ರಸ್ತರಿಗೆ ಕೊಟ್ಟ ಮಹಾನ್ ತಾಯಿ!ಮತ್ತೆ ಮಗಳ ಮದ್ವೆ ಹೇಗೆ?

     ಉತ್ತರ ಕರ್ನಾಟಕದಲ್ಲಿನ ಭೀಕರ ಪ್ರವಾಹದಿಂದಾಗಿ ಆಸ್ತಿ ಪಾಸ್ತಿ, ಹಣದ ಜೊತೆಗೆ ಜನರ ಪ್ರಾಣ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದ ಸಾವಿರಾರು ಜನರಿಗೆ ಹಲವಾರು ಹಲವಾರು ರೀತಿಯಲ್ಲಿ ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ.ಮುಂಬೈನ ಸುಮನ್ ರಾವ್ ಎನ್ನುವ ಮಹಿಳೆಯೊಬ್ಬಳು ತಮ್ಮ ಮಗಳ ಮದುವೆಗೋಸ್ಕರ ಕೂಡಿಟ್ಟಿದ್ದ ಹಣವನ್ನು ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕದ ಜನರಿಗೋಸ್ಕರ ಕೊಡುವುದರ ಮುಖಾಂತರ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.    ಇದೆ ವರ್ಷ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಮಗಳ ಮದುವೆ ಮಾಡಬೇಕೆಂದು ೫೦ ಲಕ್ಷರೂ…