Health

ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಬಳಸುತ್ತೀರಾ?ಹಾಗಾದರೆ ಈ ಅಭ್ಯಾಸದಿಂದ ಅಪಾಯ ತಪ್ಪಿದ್ದಲ್ಲ ಎಚ್ಚರ!

140

ಮೊಬೈಲ್‌ ಪರಿಚಯವಾದ ಮೇಲೆ ಜಗತ್ತಿನ ಜನರ ದಿನಚರಿಯೇ ಬದಲಾಗಿದೆ. ಕೆಲವರಿಗಂತೂ ಒಂದು ಅರ್ಧ ತಾಸು ಮೊಬೈಲ್ ಬಿಟ್ಟಿರು ಎಂದರೆ ಬಿಟ್ಟಿರಲು ಸಾಧ್ಯವಾಗುವುದಿಲ್ಲ.  ಯಾರು ಮೆಸೇಜ್‌ ಮಾಡಿರಬಹುದು,ಯಾರು ಕಾಲ್‌ ಮಾಡಿರಬಹುದು ಎಂದು ಮನಸ್ಸು ಆ ಕಡೆ ಸೆಳೆಯುತ್ತಿರುತ್ತದೆ, ಮೊಬೈಲ್‌ ಬಳಸುವುದು ಎಲ್ಲರಲ್ಲಿ ಒಂದು ಚಟವಾಗಿ ಬಿಟ್ಟಿದೆ ಎಂದು ತಪ್ಪಾಗಲಾರದು.

ಇನ್ನು ನಮ್ಮ ದಿನನಿತ್ಯದ ಎಷ್ಟೋ ಕೆಲಸ ಕಾರ್ಯಗಳಿಗೆ ಮೊಬೈಲ್‌ ಅನ್ನೇ ಅವಲಂಬಿಸಿದ್ದೇವೆ. ಬ್ಯಾಂಕ್‌ ವ್ಯವಹಾರದಿಂದ ಹಿಡಿದು ಮನೆಗೆ ದಿನಸಿ ತರುವುದಕ್ಕೂ ಮೊಬೈಲ್‌ ಬೇಕೇಬೇಕು. ನಮ್ಮ ಬಹುತೇಕ ವ್ಯವಹಾರಗಳು ಆನ್‌ಲೈನ್‌ ಮೂಲಕವೇ ನಡೆಯುವುದರಿಂದ ಮೊಬೈಲ್‌ ಇಲ್ಲದೆ ದಿನ ಕಳೆಯಲು ಕಷ್ಟವಾಗಬಹುದು.

ಹಾಗಂತ ಮಲಗುವ ಮುನ್ನ ಹಾಗೂ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ಮೇಲೆ ಕಣ್ಣಾಡಿಸುವ ಅಭ್ಯಾಸವಿದ್ದರೆ ನಿಮ್ಮ ಆರೋಗ್ಯ ಅಪಾಯದಲ್ಲಿದೆ ಎಂದು ಅಧ್ಯಯನ ವರದಿ ಹೇಳಿದೆ.ಬೆಳಗ್ಗೆ ಎದ್ದ ತಕ್ಷಣ ಇಮೇಲ್ ಚೆಕ್ ಮಾಡಲು, ನ್ಯೂಸ್‌ ಓದಲು, ಸ್ಟೇಟಸ್‌ ಚೆಕ್‌ ಮಾಡಲು ಮೊಬೈಲ್‌ ನೋಡುವ ಅಭ್ಯಾಸ ಹೆಚ್ಚಿನವರಲ್ಲಿದೆ.

ಆದರೆ ಐಡಿಸಿ(International Data Corporation)ನಡೆಸಿದ ಅಧ್ಯಯನದಲ್ಲಿ ಶೇ. 80ರಷ್ಟು ಸ್ಮಾರ್ಟ್‌ಫೋನ್‌ ಬಳಕೆದಾರರು ಬೆಳಗ್ಗೆ ಎದ್ದು 15 ನಿಮಿಷದೊಳಗಾಗಿ ಮೊಬೈಲ್‌ ಸ್ಕ್ರೀನ್ ಮೇಲೆ ಕಣ್ಣಾಡಿಸುತ್ತಾರೆ. ಪ್ರತಿ 5 ಜನ ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ 4 ಜನರು ಮೊಬೈಲ್‌ ಬಳಸುವ ಚಟ ರೂಢಿಸಿಕೊಂಡಿದ್ದಾರೆ ಎಂದು ಅಧ್ಯಯನ ಹೇಳಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಮನರಂಜನೆ

    ಕಿರಿಕ್ ರಾಣಿ ತಾವೇನು ಜಾಕಿಚಾನ್ ತಂಗಿನೋ, ಬ್ರೂಸ್ಲಿ ಬಾಮೈದ ಅಂತಾ ತಿಳಿದುಕೊಂಡು ಕಿಕ್ ಕೊಟ್ರಾ..!

    ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದು, ಶೋಗೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಬಿಗ್ ಬಾಸ್ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದಾರೆ.

  • Animals

    ಯಾವುದೀ ಮುಧೋಳ ನಾಯಿ? ಏನೀದರ ಸ್ಪೆಷಾಲಿಟಿ? ಇಲ್ಲಿದೆ ನೋಡಿ ಮಾಹಿತಿ

    ಮುಧೋಳ ಹೌಂಡ್ / ಮುಧೋಲ್ ಹೌಂಡ್, ಇದನ್ನು ಮರಾಠಾ ಹೌಂಡ್, ಪಾಶ್ಮಿ ಹೌಂಡ್ ಮತ್ತು ಕ್ಯಾಥೆವಾರ್ ಡಾಗ್ ಎಂದೂ ಕರೆಯುತ್ತಾರೆ, ಇದು ಭಾರತದಿಂದ ದೃಷ್ಟಿಗೋಚರ ತಳಿಯಾಗಿದೆ. ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಷನಲ್ ಕೆನಲ್ ಕ್ಲಬ್ (ಐಎನ್‌ಕೆಸಿ) ಈ ತಳಿಯನ್ನು ವಿವಿಧ ತಳಿಗಳ ಹೆಸರಿನಲ್ಲಿ ಗುರುತಿಸುತ್ತವೆ. ಕೆಸಿಐ ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸಿದರೆ, ಐಎನ್‌ಕೆಸಿ ಮುಧೋಲ್ ಹೌಂಡ್ ಹೆಸರನ್ನು ಬಳಸುತ್ತದೆ ರಾಜ್ಯದ ಬಾಗಲಕೋಟೆ ಜಿಲ್ಲೆಯ ಸಣ್ಣ ಪಟ್ಟಣ ಮುಧೋಳ ಎಂಬ ಊರಿನ ಹೆಸರನ್ನು…

  • ಸುದ್ದಿ

    ಪತಿಯ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಂತಹ ಮಹಿಳೆ.. ಕಾರಣ?

    ಮಹಿಳೆಯೊಬ್ಬಳು ಪತಿಯ ರುಂಡ ಕತ್ತರಿಸಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದ ಘಟನೆ ಅಸ್ಸಾಂನಲ್ಲಿ ನಡೆದಿದೆ.ಸೋನಿಟ್‍ಪುರ್ ಜಿಲ್ಲೆಯ ಮಜ್ಗಾಂವ್‍ನ ನಿವಾಸಿ ಗುಣೇಶ್ವರಿ ಬರ್ಕಟಕಿ (48) ಕೊಲೆ ಮಾಡಿದ ಮಹಿಳೆ. ಮುಧಿರಾಮ್ ಕೊಲೆಯಾದ ಪತಿ. ಘಟನೆಯು ಮೇ 28ರಂದು ನಡೆದಿದ್ದು, ಮಹಿಳೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಮುಧಿರಾಯ್ ಮದ್ಯ ವ್ಯಸನಿಯಾಗಿದ್ದು, ಮನೆಯಲ್ಲಿ ನಿತ್ಯವೂ ಪತ್ನಿ ಗುಣೇಶ್ವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಕೊಡಲಿಯಿಂದ ಹಲ್ಲೆ ಕೂಡ ಮಾಡಿದ್ದ. ಹೀಗಾಗಿ ಪತಿಯಿಂದ…

  • ಉಪಯುಕ್ತ ಮಾಹಿತಿ

    ಸಾಮಾನ್ಯವಾಗಿ ಬಾಳೆ ಬಾಳೆಹಣ್ಣಿನ ಬಗ್ಗೆ ಎಲ್ಲರಿಗೂ ಗೊತ್ತು..ಆದರೆ ಬಾಳೆ ಸಿಪ್ಪೆಯ ಉಪಯೋಗಗಳ ಬಗ್ಗೆ ಗೊತ್ತಾ..?

    ನಾವು ಸಾಮಾನ್ಯವಾಗಿ ಬಾಳೆ ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಕುತ್ತೆವೆ.ಆದರೆ ಬಾಳೆಹಣ್ಣಿನ ಸಿಪ್ಪೆಯಿಂದ ಆಗೋ ಉಪಯೋಗ ತಿಳಿದುಕೊಂಡರೆ ನೀವು ಸಿಪ್ಪೆಯನ್ನು ಎಸೆಯುವುದಿರಲಿ ಅದನ್ನೇ ಕಾಪಾಡಿಕೊಳ್ಳುತ್ತಿರ..ಹೇಗೆ ಉಪಯೋಗ ಅನ್ನೋ ಕುತೂಹಲವೇ ಇದನ್ನು ಓದಿ

  • ಸುದ್ದಿ

    ಅಂದ ಹೆಚ್ಚಿಸಿಕೊಳ್ಳಲು ಹೋದ ವೈದ್ಯೆ ಆಸ್ಪತ್ರೆ ಪಾಲು ….! ಬ್ಯೂಟಿಪಾರ್ಲರ್​ಗೆ ಹೋಗುವ ಹೆಂಗಸರೇ ಎಚ್ಚರ…ಎಚ್ಚರ!!

    ಹಬ್ಬ ಬಂತು ಅಂದ್ರೆ ಖುಷಿ ಖುಷಿಯಿಂದ ಆಚರಣೆಗೆ ಸಿದ್ಧವಾಗೋ ಹೆಣ್ಣುಮಕ್ಕಳು ಏನೇ ವಿಶೇಷ ಕಾರ್ಯಕ್ರಮ ಇದ್ದರೂ ಬ್ಯೂಟಿಪಾರ್ಲರ್​ಗೆ ಒಮ್ಮೆ ಭೇಟಿ ಕೊಟ್ಟು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ. ಆದರೆ ಇಂತಹದ್ದೆ ಆಸೆಯಿಂದ ಬ್ಯೂಟಿಪಾರ್ಲರ್​ಗೆ ಹೋಗಿದ್ದ ವೈದ್ಯೆಯೊಬ್ಬರು ತಮ್ಮ ಮುಖವನ್ನು ಶಾಶ್ವತವಾಗಿ ಹಾಳುಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಿಎಂಎಚ್​ ರಸ್ತೆಯಲ್ಲಿರುವ ಕ್ಲಬ್​ ಸಿಟ್ರಸ್​​ ಸಲೂನ್​ನಲ್ಲಿ ಈ ಘಟನೆ ನಡೆದಿದೆ. ಯಶೋಧಾ ಎಂಬ ವೈದ್ಯೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್​ಗೆ ತೆರಳಿದ್ದರು. ಈ ವೇಳೆ…

  • ಸುದ್ದಿ

    ಪ್ರಧಾನಿ ನರೇಂದ್ರ ಮೋದಿಗೋಸ್ಕರ ಸಮೋಸ, ಮಾವಿನ ಚಟ್ನಿ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ.

    ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ದಿನೇ ದಿನೇ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಈಗ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪ್ರಧಾನಿ ನರೇಂದ್ರ ಮೋದಿಗಾಗಿ ಸಮೋಸ ಮತ್ತು ಮಾವಿನ ಕಾಯಿ ಚಟ್ನಿಯನ್ನು ತಯಾರಿಸಿದ್ದಾರೆ. ಜೂನ್‌ 4ರಂದು ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ಮಾರಿಸನ್‌ ಉತ್ಸುಕರಾಗಿದ್ದಾರೆ. ಜೂನ್‌ 4ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಉತ್ಸುಕರಾಗಿರಾಗುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌, ಪ್ರಧಾನಿ ಮೋದಿಗಾಗಿ ಸಮೋಸ ಮತ್ತು ಮಾವಿನ ಕಾಯಿ ಚಟ್ನಿಯನ್ನು ತಯಾರಿಸಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ….