ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ನಿರ್ದೇಶಕ ಮತ್ತು ನಟ ಶಂಕರ್ ನಾಗ್ ಅವರು, ಕ್ರಿಕೆಟರ್ ಧೋನಿ ಅವರ ಮತ್ತು ಪ್ರಧಾನ ಮಂತ್ರಿ ಮೋದಿ ಅವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ಸೋಮವಾರ ಸಂಜೆ ಮುಂಬೈನಲ್ಲಿ ನಡೆದ ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ನಂತರ ಜಿಕ್ಯೂ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಮ್ಮ ಸಕ್ಸಸ್ ಮಂತ್ರ ಯಾವುದು ಎಂದು ಕೇಳಿದಾಗ, ನಾನು ನನಗೆ ಇಷ್ಟವಾದ ಕೆಲಸ ಮಾಡುತ್ತೇನೆ. ಆಗ ಅದು ಸಹಜವಾಗಿ ಬರುತ್ತದೆ ಅದೇ ನನ್ನ ಸಕ್ಸಸ್ ಮಂತ್ರ ಎಂದು ಹೇಳಿದ್ದಾರೆ.
ಇದರ ಜೊತೆಗೆ ನಿಮ್ಮ ರೋಲ್ ಮಾಡೆಲ್ ಯಾರು ಎಂದು ಕೇಳಿದಾಗ, ನನಗೆ ಹಲವರು ಜನ ರೋಲ್ ಮಾಡೆಲ್ ಗಳು ಇದ್ದಾರೆ ಎಂದು ಯಶ್ ಉತ್ತರಿಸಿದರು. ಈ ವೇಳೆ ಅವರ ಪೈಕಿ ಮೊದಲ ಮೂರು ಜನರನ್ನು ಹೇಳಿ ಎಂದಾಗ, ನನಗೆ ನಮ್ಮ ಕನ್ನಡದ ನಿರ್ದೇಶಕ ಮತ್ತು ನಟ ಶಂಕರ್ ನಾಗ್ ಅವರ ಈಗ ಬದುಕಿಲ್ಲ ಆದರೆ ಅವರ ನನಗೆ ಮಾದರಿಯಾಗಿದ್ದಾರೆ. ಕ್ರಿಕೆಟರ್ ಎಂಎಸ್ ಧೋನಿ ಅವರು ಕೂಡ ನನಗೆ ಮಾದರಿ ಅವರ ವರ್ತನೆ ನನಗೆ ತುಂಬಾ ಇಷ್ಟ. ಹಾಗೇ ನೋಡಿದರೆ ನಮ್ಮ ಪ್ರಧಾನ ಮಂತ್ರಿಯವರು ಕೂಡ ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ.

ತಮ್ಮ ಮಂದಿನ ಯೋಜನೆಗಳ ಬಗ್ಗೆ ಕೇಳಿದಾಗ, ನಾನು ಭವಿಷ್ಯದ ಬಗ್ಗೆ ಹಲವು ಯೋಜನೆಗಳನ್ನು ಮಾಡಿದ್ದೇನೆ. ಮುಂದಿನ 10 ವರ್ಷಗಳಲ್ಲಿ ಮತ್ತಷ್ಟು ಪ್ರಬುದ್ಧತೆ ಪಡೆದುಕೊಂಡ ನಟನಾಗಿ ನನ್ನ ವೃತ್ತಿಯನ್ನು ಇಂದಿಗಿಂತಲೂ ಹೆಚ್ಚು ಒಳ್ಳೆಯ ರೀತಿಯಲ್ಲಿ ನಿರ್ವಹಿಸಬೇಕು ಎಂಬುದು ನನ್ನ ಭವಿಷ್ಯದ ಯೋಜನೆ. ಜೊತೆಗೆ ನನ್ನ ಕಡೆ ಉಸಿರಿರುವರೆಗೂ ನಟನಾಗಿ ಇರಬೇಕು ಎಂಬುದು ನನ್ನ ಆಸೆ. ಸದ್ಯ ಕೆಜಿಎಫ್-2 ಮಾಡುತ್ತಿದ್ದೇನೆ ನಂತರ ಮುಂದಿನ ಚಿತ್ರದ ಬಗ್ಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಸೋಮವಾರ ಸಂಜೆ ಮುಂಬೈನಲ್ಲಿ ಜಿಕ್ಯೂ 50ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಮಾಡಿದ ಸಾಧನೆ, ಯುವ ಮನಸ್ಸುಗಳಲ್ಲಿ ಸಂಚಲನ ಸೃಷ್ಟಿಸಿದ ಅವರ ಯೋಚನೆಯನ್ನು ಪರಿಗಣಿಸಿ, ಭಾರತದ 50 ಶ್ರೇಷ್ಠ ಯುವ ಪ್ರಭಾವಶಾಲಿಗಳಿಗೆ ಜಿಕ್ಯೂ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಿತು. ದಿ ಜಿಕ್ಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ 50 ಯುವ ಭಾರತೀಯರು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಈ ಕಾರ್ಯಕ್ರಮವನ್ನು ಮಾಡಿದೆ. 50 ಬೇರೆ ಬೇರೆ ಕ್ಷೇತ್ರಗಳಲ್ಲಿ ಆಯ್ಕೆಯಾದ ಯುವ ವ್ಯಕ್ತಿಗಳ ಸಾಲಲ್ಲಿ ಇಡೀ ಭಾರತೀಯ ಚಿತ್ರರಂಗದಿಂದ ಯಶ್ ಆಯ್ಕೆಯಾಗಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಾವು ಎಂದರೆ ಎಂಥವರಿಗೂ ಭಯ ಆಗುತ್ತೆ. ಅಂತಹದರಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದರೊಂದಿಗೆ ಸ್ನೇಹ ಬೆಳಸಿಕೊಂಡು ಅವುಗಳೊಂದಿಗೆ ಬೆರೆಯುತ್ತಾಳೆ ಈ ಪುಟ್ಟ ಬಾಲಕಿ.
ಸೋಮವಾರ, 26/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಹೆಚ್ಚಿನ ಆದಾಯ ಬರಲಿದೆ. ಶುಭಮಂಗಲ ಕಾರ್ಯಗಳು ನಡೆದಾವು. ವಾಹನ ಮಾರಾಟದಿಂದ ಲಾಭ. ದೇಹಾರೋಗ್ಯದಲ್ಲಿ ಸಮಸ್ಯೆ ಇದ್ದು ಆರೋಗ್ಯದ ಭಾಗ್ಯ ಕಾಳಜಿ ಇರಲಿ. ಇವತ್ತಿನ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದೆ. ವೃಷಭ:- ಆರ್ಥಿಕ ಸ್ಥಿತಿಯಲ್ಲಿ ಸಮತೋಲನ.ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲ. ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ. ಬಂಧುಗಳ ಸಹಕಾರ ದೊರೆಯಲಿದೆ. ಪರಿಶ್ರಮದ ಬಲದಿಂದಲೇ ಉದ್ಯೋಗ ಲಾಭ. ಹಣಕಾಸಿನ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ದೇಹಾರೋಗ್ಯ ಸುಧಾರಿಸಲಿದ್ದು ಕಾಳಜಿ ಇರಲಿ. ಮಿಥುನ:–…
ನಿಮ್ಮ ಮಕ್ಕಳು ಕೂಡ ವಸ್ತು ಅಥವಾ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಅಸಮರ್ಥರಾಗಿದ್ದಾರೆಯೇ? ಹೌದು ಎಂದಾದರೆ ಅದರ ಬಗ್ಗೆ ಟೆನ್ಶನ್ ಮಾಡಬೇಡಿ. ಈ ಸಮಸ್ಯೆಗೆ ಪರಿಹಾರವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಒಂದು ವೇಳೆ ನಿಮ್ಮ ಮಕ್ಕಳಿಗೆ ಯಾವುದೆ ವಿಷಯವನ್ನು ಅರ್ಥಮಾಡಿಕೊಳ್ಳಲು ಅಥವಾ ಅದನ್ನು ನೆನಪು ಮಾಡಿಕೊಳ್ಳಲು ಕಷ್ಟವಾದರೆ, ಅವರಿಗೆ ಅದನ್ನು ಸ್ವಲ್ಪ ಜೋರಾಗಿ ಓದಲು ಹೇಳಿ.
ಯೆಮೆನ್ ನಲ್ಲಿ ಮದುವೆಯಾದ ಮೊದಲ ರಾತ್ರಿಯೇ 8 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ವಿಶ್ವದಾದ್ಯಂತ ಮಹಿಳಾ ಸಂಘಟನೆಗಳು ಇದರ ವಿರುದ್ಧ ತಿರುಗಿ ಬಿದ್ದಿವೆ. ಯೆಮೆನ್ ಕೆಟ್ಟ ಪದ್ಧತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಅವರು ನಟ ಎನ್ನುವುದಕ್ಕಿಂತ ಒಂದೊಳ್ಳೆ ಮನಸ್ಸಿರುವ ವ್ಯಕ್ತಿ ಎಂದರೂ ತಪ್ಪಿಲ್ಲ. ಆದ್ದರಿಂದ ಅಭಿಮಾನಿಗಳ ಬಳಿ ಪ್ರೀತಿಯಿಂದ ಯಜಮಾನ, ಡಿ ಬಾಸ್, ಗಜ, ಯೋಧ, ದಚ್ಚು ಎಂದೆಲ್ಲಾ ಕರೆಸಿಕೊಳ್ಳುತ್ತಾರೆ.ಪ್ರಾಣಿ ಪಕ್ಷಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ದರ್ಶನ್, ಮೈಸೂರು ರಸ್ತೆಯಲ್ಲಿ ದೊಡ್ಡ ಫಾರಂ ಹೌಸ್ ಹೊಂದಿದ್ದಾರೆ. ಸ್ವಲ್ಪ ಬಿಡುವು ದೊರೆತರೆ ಸಾಕು ಫಾರಂ ಹೌಸ್ಗೆ ತೆರಳುವ ಅವರು, ಪ್ರೀತಿಯ ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾರೆ. ಫಾರಂಹೌಸ್ನಲ್ಲಿ ಪ್ರಾಣಿಗಳಿಗಾಗಿ ಹುಲ್ಲು ಕತ್ತರಿಸುತ್ತಾರೆ,…
ಬಿಹಾರದ ಬಾಗಲ್ಪುರದ ಧ್ರುವಗಂಜ್ ಗ್ರಾಮದ 19 ವರ್ಷದ ಯುವಕ ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ್ದಾರೆ. ಅಲ್ಲದೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಹ್ವಾನಿಸಿದರೂ ಭಾರತದಲ್ಲೇ ರಿಸರ್ಚ್ ಮಾಡುತ್ತೇನೆ ಎಂದು ಹೇಳುವ ಮೂಲಕ ಯುವಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ. 19 ವರ್ಷದ ಯುವಕ ಗೋಪಾಲ್ ಪ್ರತಿ ವರ್ಷ ದೇಶದ 100 ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. 2019ರಲ್ಲಿ ಗೋಪಾಲ್ ಈ ಕೆಲಸ ಶುರು ಮಾಡಿದ್ದು, ಈಗ 8 ಮಕ್ಕಳ ಆವಿಷ್ಕಾರಕ್ಕಾಗಿ ತಾತ್ಕಾಲಿಕ ಪೇಟೆಂಟ್ ಕೂಡ ಪಡೆದಿದ್ದಾರೆ….