ಸುದ್ದಿ

‘ಸೂರ್ಯವಂಶಿ’ ಶೂಟಿಂಗ್ ಸೆಟ್‌ನಲ್ಲೇ ಜಗಳವಾಡಿಕೊಂಡ ಅಕ್ಷಯ್‌ ಕುಮಾರ್ ಹಾಗು ರೋಹಿತ್ ಶೆಟ್ಟಿ!!

33

ಸಾಮಾನ್ಯವಾಗಿ ಸೆಟ್‌ನಲ್ಲಿ ತಂತ್ರಜ್ಞರೆಲ್ಲ ಮನೆಯವರಂತೆ ಇರುತ್ತಾರೆ. ಮನಸ್ತಾಪಗಳು ಬಂದರು ಬಹಳ ಕಾಲ ಇರುವುದಿಲ್ಲ. ಅಲ್ಲಿಂದಲ್ಲಿಗೆ ಮರೆತು ಒಂದಾಗಿ ಕೆಲಸ ಮಾಡಿಕೊಂಡು ಇರುತ್ತಾರೆ. ಆದರೆ, ‘ಸೂರ್ಯವಂಶಿ’ ಚಿತ್ರದ ಸೆಟ್‌ನಲ್ಲಿ ಮಾತ್ರ ಎಲ್ಲ ಅವಾಂತರವೇ ಆಗಿಹೋಗಿದೆ. ಆ ಚಿತ್ರದ ಹೀರೋ ಅಕ್ಷಯ್‌ಕುಮಾರ್. ನಿರ್ದೇಶನ ಮಾಡುತ್ತಿರುವುದು ರೋಹಿತ್ ಶೆಟ್ಟಿ. ಇದೀಗ ಇವರಿಬ್ಬರು ಸೆಟ್‌ನಲ್ಲಿ ಹೊಡೆದಾಡಿಕೊಂಡಿದ್ದಾರೆ. 

ಹಾಗಾದರೆ, ಅಕ್ಷಯ್‌ ಮತ್ತು ರೋಹಿತ್ ಹೀಗೆ ಹೊಡೆದಾಡಿಕೊಂಡರು? ಗಾಬರಿ ಆಗಬೇಡಿ. ಇದು ನಿಜವಾದ ಜಗಳವಲ್ಲ. ಬದಲಿಗೆ, ಕಾಮಿಡಿ ಜಗಳ. ಈ ರೀತಿ ಅವರಿಬ್ಬರು ನಡೆದುಕೊಳ್ಳಲೂ ಕಾರಣವಿದೆ. ಅದೇನೆಂದರೆ, ಇತ್ತೀಚಿಗೆ ಒಂದು ವದಂತಿ ಹಬ್ಬಿತ್ತು.

‘ಸೂರ್ಯವಂಶಿ’ ಸೆಟ್‌ನಲ್ಲಿ ಎಲ್ಲವೂ ಸರಿ ಇಲ್ಲ. ರೋಹಿತ್ ಮತ್ತು ಅಕ್ಷಯ್‌ಕುಮಾರ್ ನಡುವೆ ಜಗಳವಾಗಿದೆ. ಅಂತಿಮವಾಗಿ ಕರಣ್ ಜೋಹರ್ ಮಧ್ಯ ಪ್ರವೇಶ ಮಾಡಿ, ಈ ಜಗಳವನ್ನು ಬಿಡಿಸಿದ್ದಾರೆ ಎಂದು ರೂಮರ್ ಕೇಳಿಬಂದಿತ್ತು. ಇಂಥ ರೂಮರ್‌ಗೆ ಸರಿಯಾಗಿಯೇ ಉತ್ತರ ನೀಡಬೇಕೆಂಬ ಉದ್ದೇಶದಿಂದ ನಕಲಿ ಜಗಳ ಮಾಡಿದ್ದಾರೆ ಅಕ್ಕಿ-ರೋಹಿತ್‌.

ಈ ರೀತಿ ನಕಲಿ ಜಗಳದ ವಿಡಿಯೋವನ್ನು ಅಕ್ಷಯ್‌ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲು ಚಿತ್ರದ ನಾಯಕಿ ಕತ್ರಿನಾ ಕೈಫ್‌, ವದಂತಿ ಹಬ್ಬಿರುವ ಸುದ್ದಿಯನ್ನು ಕ್ಯಾಮರಾಗೆ ತೋರಿಸುತ್ತಾರೆ. ಆನಂತರ ಏಕಾಏಕಿ ರೋಹಿತ್ ಮತ್ತು ಅಕ್ಷಯ್‌ ಜಗಳ ಆಡೋಕೆ ಶುರು ಮಾಡುತ್ತಾರೆ. ಸೆಟ್‌ನಲ್ಲಿರುವ ಇತರರು ಅವರನ್ನು ಸಮಾಧಾನ ಪಡಿಸಲು ಮುಂದಾಗುತ್ತಾರೆ. ಕೊನೆಗೆ ಇಬ್ಬರು ನೆಲಕ್ಕೆ ಬೀಳುತ್ತಾರೆ. ವದಂತಿಗಳಿಗೆ ಹೀಗೂ ಉತ್ತರ ನೀಡಬಹುದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ