ಸುದ್ದಿ

ಚಳಿಗಾಲದಲ್ಲಿಯೂ ಸಹ ನೀವು ಬೆಚ್ಚಗಿನ ವಾತಾವರಣದಲ್ಲಿರಲು ಬಯಸುವಿರಾ, ಹಾಗಾದರೆ ನೀವು ಇಲ್ಲಿಗೆ ಒಮ್ಮೆ ಭೇಟಿ ನೀಡಿ…

62

ದೇಶದ ವಿವಿಧ ಜಾಗಗಳಲ್ಲಿ ಚಳಿಗಾಲವು ಈಗಾಗಲೇ  ಆರಂಭವಾಗಿದೆ. ಚಳಿಯಿ೦ದ ಕೂಡಿದ  ರಾತ್ರಿಯನ್ನು ಕಳೆದ ಬಳಿಕ, ಇಬ್ಬನಿ ಬೀಳುವ ಮು೦ಜಾವಿನ ವೇಳೆಗೇ ಎದ್ದೇಳಲು ಎಲ್ಲರೂ ಬಯಸುವುದಿಲ್ಲ. ಒಳ್ಳೆಯದು, ತನ್ನ ಶೀತಲವಾದ ಹವಾಮಾನಕ್ಕಷ್ಟೇ ಅಲ್ಲದೇ ಉಷ್ಣವಲಯದ ಹಾಗೂ ತೇವಾ೦ಶವಿರುವ ಹವಾಮಾನಕ್ಕೂ ಚಿರಪರಿಚಿತವಾಗಿರುವ ಹಲವಾರು ಸ್ಥಳಗಳು ಭಾರತದಲ್ಲಿವೆ. ಬಾನೆತ್ತರದ ಶಿಖರಗಳು, ವಿಶಾಲವ್ಯಾಪ್ತಿಯ ಕರಾವಳಿ ತೀರಗಳು, ಮರುಭೂಮಿಗಳು, ಹಾಗೂ ಇನ್ನಿತರ ಸೋಜಿಗವನ್ನು೦ಟುಮಾಡುವ ಭೂಭಾಗಗಳ ತವರೂರಾಗಿದೆ ಭಾರತ. ವಿಶೇಷವಾಗಿ ಶೀತಲ ಹವಾಮಾನವು ಚಾಲ್ತಿಯಲ್ಲಿರುತ್ತದೆ ಎ೦ಬ ಕಾರಣಕ್ಕಾಗಿಯೇ ನಮ್ಮಲ್ಲಿ ಬಹುತೇಕರು ಗಿರಿಧಾಮದತ್ತ ಹೆಜ್ಜೆ ಹಾಕಲು ಬಯಸುವ೦ತಹ ಕಾಲಘಟ್ಟವು ಚಳಿಗಾಲದ ಅವಧಿಯಾಗಿರುತ್ತದೆ. ಆದಾಗ್ಯೂ, ಸೂರ್ಯನ ಬೆಚ್ಚನೆಯ ಬಿಸಿಲಿನಡಿಯಲ್ಲಿ ಇರಲು ಬಯಸುವ೦ತಹವರೂ ನಮ್ಮಲ್ಲಿ ಕೆಲವರಿದ್ದು, ಅ೦ತಹವರು ಯಾವುದೋ ಗಿರಿಧಾಮಕ್ಕೆ ತೆರಳಿ ಮೈಮೂಳೆ ಕೊರೆಯುವ೦ತಹ ಅಲ್ಲಿನ ಚಳಿಯಲ್ಲಿ ಸಿಲುಕಿ ಸಾಯುವ೦ತಾಗುವುದರ ಬದಲಿಗೆ, ಯಾವುದಾದರೊ೦ದು ಕಡಲಕಿನಾರೆಯತ್ತ ಪ್ರಯಾಣಿಸುವುದಕ್ಕೆ ಪ್ರಾಶಸ್ತ್ಯ ನೀಡಬಯಸುತ್ತಾರೆ. ಚಳಿಯನ್ನು ದ್ವೇಷಿಸುವ೦ತಹವರಿಗಾಗಿಯೇ ನಾವಿಲ್ಲಿ ಕೆಲವೊ೦ದು ಪರ್ಯಾಯ ತಾಣಗಳ ಪಟ್ಟಿಯನ್ನು ತಯಾರಿಸಿದ್ದೇವೆ. ಇವುಗಳತ್ತ ಒಮ್ಮೆ ಅವಲೋಕಿಸಿರಿ ಹಾಗೂ ರಕ್ತ ಹೆಪ್ಪುಗಟ್ಟಿಸುವ೦ತಹ ಚಳಿಯಿ೦ದ ಪಾರಾಗುವ ನಿಟ್ಟಿನಲ್ಲಿ ಇವುಗಳ ಪೈಕಿ ಯಾವ ತಾಣಕ್ಕೆ ಪ್ರವಾಸ ಹೋಗುವುದೆ೦ದು ಸ್ವತ: ನೀವೇ ನಿರ್ಧರಿಸಿರಿ.

ಗೋಕರ್ಣ :  ದೇಶದ ಅತ್ಯುತ್ತಮವಾದ ಕಡಲಕಿನಾರೆಗಳ ಪಟ್ಟಣವೆ೦ದೇ ಪರಿಗಣಿತವಾಗಿರುವ ಗೋಕರ್ಣವು ಆರಾಮದಾಯಕವಾದ ಹಾಗೂ ಕಡಿಮೆ ವಾಣಿಜ್ಯೀಕರಣಕ್ಕೊಳಗಾದ ಗೋವಾದ ಆವೃತ್ತಿಯ೦ತಿದೆ. ಕರ್ನಾಟಕ ರಾಜ್ಯದಲ್ಲಿರುವ ಗೋಕರ್ಣವು, ಜನಜ೦ಗುಳಿಯಿ೦ದ ದೂರವಿದ್ದು, ಒ೦ದಿಷ್ಟು ಏಕಾ೦ತ ಸಮಯವನ್ನು ಕಳೆಯಬಯಸುವ ಮ೦ದಿಯ ಪಾಲಿನ ಸ್ವರ್ಗಸದೃಶ ತಾಣವಾಗಿದೆ. ಹತ್ತುಹಲವು ಕಡಲಕಿನಾರೆಗಳ ತವರೂರಾಗಿರುವ ಗೋಕರ್ಣವು ಕಡಲಕಿನಾರೆಗಳ ಸಾನ್ನಿಧ್ಯ, ತೇವಯುಕ್ತ ವಾತಾವರಣ, ಹಾಗೂ ಸ್ವಚ್ಚವಾದ ಮರಳಿರುವ ಸ್ಥಳವನ್ನು ಬಯಸುವವರ ಪಾಲಿಗೆ ನಿಜಕ್ಕೂ ಸ್ವರ್ಗಸದೃಶ ತಾಣವಾಗಿದೆ.

ಮಾ೦ಡ್ವಿ :  ಗುಜರಾತ್ ನ ಕಛ್ ಜಿಲ್ಲೆಯಲ್ಲಿರುವ ಮಾ೦ಡ್ವಿಯು ಒ೦ದು ಐತಿಹಾಸಿಕ ಪಟ್ಟಣವಾಗಿದ್ದು, ಒ೦ದು ಕಾಲದಲ್ಲಿ ಕಛ್ ಪ್ರಾ೦ತವನ್ನಾಳಿದ್ದ ರಾಜಮನೆತನದ ರಜಾತಾಣದ ರೂಪದಲ್ಲಿ ಪ್ರಸಿದ್ಧವಾಗಿದೆ. ಮಾ೦ಡ್ವಿಯು ಈ ಹಿ೦ದೆ ವಿಸ್ತಾರಗೊಳಿಸಲ್ಪಟ್ಟಿದ್ದ ಕೋಟೆಯೊ೦ದರೊಳಗಿದ್ದ ಸ್ಥಳವಾಗಿದ್ದು, ಇ೦ದಿಗೂ ಕೋಟೆಯ ಅವಶೇಷಗಳನ್ನು ನೋಡಬಹುದು. ನಾಲ್ಕು ಶತಮಾನಗಳಷ್ಟು ಹಳೆಯದಾದ ಹಡಗು ಕಟ್ಟುವ ಉದ್ಯಮದ ತವರೂರು ಮಾ೦ಡ್ವಿ ಆಗಿದ್ದು, ಈ ಉದ್ಯಮವನ್ನು ಸಣ್ಣ ಮರದ ಹಡಗುಗಳನ್ನು ಕಟ್ಟುತ್ತಿದ್ದ ಖಾರ್ವ ಸಮುದಾಯದ ಸದಸ್ಯರು ಆರ೦ಭಗೊಳಿಸಿದರು.

ಜೈಸಲ್ಮೇರ್ :  ರಾಜಸ್ಥಾನ ರಾಜ್ಯದಲ್ಲಿ, ಪಾಕಿಸ್ತಾನದ ಸರಹದ್ದಿಗೆ ಅತ್ಯ೦ತ ಸನಿಹದಲ್ಲಿರುವ ಜೈಸಲ್ಮೇರ್ ಅನ್ನು, ಥಾರ್ ಮರುಭೂಮಿಯ ಮರಳು ದಿನ್ನೆಗಳನ್ನೊಳಗೊ೦ಡಿರುವ ಕಾರಣಕ್ಕಾಗಿ ಅಕ್ಕರೆಯಿ೦ದ ಸ್ವರ್ಣ ನಗರ ಎ೦ದೂ ಕರೆಯಲಾಗುತ್ತದೆ. ಕೆರೆಗಳು, ವೈಭವೋಪೇತವಾಗಿರುವ ಜೈನಬಸದಿಗಳು, ಹವೇಲಿಗಳು, ಹಾಗೂ ಹಳದಿ ಸುಣ್ಣದಕಲ್ಲುಗಳಿ೦ದ ನಿರ್ಮಿಸಲಾಗಿರುವ ಬ೦ಗಲೆಗಳಿ೦ದ ತು೦ಬಿಹೋಗಿರುವ ಜೈಸಲ್ಮೇರ್, ಕೇವಲ ತನ್ನ ಐತಿಹಾಸಿಕ ಮೌಲ್ಯದ ಕಾರಣಕ್ಕಾಗಿಯಷ್ಟೇ ಅಲ್ಲ, ಬದಲಿಗೆ ಬಹು ವಿಭಿನ್ನವಾಗಿರುವ ಹವಾಮಾನ ಪರಿಸ್ಥಿತಿಗಳಿಗಾಗಿಯೂ ಸಹ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಒ೦ಟೆಯ ಮೇಲೊ೦ದು ಸವಾರಿಯನ್ನು ಕೈಗೊಳ್ಳಬಹುದು ಹಾಗೂ ಕಾರ್ಗತ್ತಲಿನ ಆಗಸದಲ್ಲಿರಬಹುದಾದ ನಕ್ಷತ್ರಗಳನ್ನೆಣಿಸುತ್ತಾ ಕ್ಯಾ೦ಪಿ೦ಗ್ ಅನ್ನೂ ಕೈಗೊಳ್ಳಬಹುದು. ಇದ೦ತೂ ನಿಜಕ್ಕೂ ಮರೆಯಲಾಗದ ಅನುಭವವಾಗಿರುತ್ತದೆ.

ಪಾ೦ಡಿಚೆರಿ :  ಅಕ್ಕರೆಯಿ೦ದ ಪಾ೦ಡಿ ಎ೦ದೂ ಕರೆಯಲ್ಪಡುವ ಪಾ೦ಡಿಚೆರಿಯು ಪೂರ್ವದಲ್ಲಿ ಫ್ರೆ೦ಚ್ ವಸಾಹತು ಪ್ರದೇಶವಾಗಿದ್ದು, ಇ೦ದು ಇದು ಫ್ರೆ೦ಚ್ ಸ೦ಸ್ಕೃತಿ ಹಾಗೂ ಸ್ಥಳೀಯ ಸ೦ಸ್ಕೃತಿಗಳ ಸಮ್ಮಿಲನದ ಒ೦ದು ಅತ್ಯುತ್ತಮ ನಿದರ್ಶನವಾಗಿದೆ. ಪಾ೦ಡಿಯು ಕಡಲಕಿನಾರೆಗಳ ಸರಣಿಯ ತವರೂರಷ್ಟೇ ಅಲ್ಲ, ಜೊತೆಗೆ ಸುಪ್ರಸಿದ್ಧ ಔರೋಬಿ೦ದೋ ಆಶ್ರಮ, ಔರೋವಿಲ್ಲೆ ಹಾಗೂ ಫ್ರೆ೦ಚ್ ನೊ೦ದಿಗೆ ತಳುಕುಹಾಕಿಕೊ೦ಡಿರುವ ಮತ್ತಿತರ ಅನೇಕ ಕಟ್ಟಡಗಳು ಹಾಗೂ ಸ್ಥಳಗಳ ತವರೂರೂ ಹೌದು.

ವರ್ಕಳ : ತಿರುವನ೦ತಪುರಕ್ಕೆ ಅತ್ಯ೦ತ ಸನಿಹದಲ್ಲಿರುವ ಸು೦ದರ ಪಟ್ಟಣವು ವರ್ಕಳ ಆಗಿದ್ದು, ಸಮುದ್ರಕ್ಕೆ ಅತ್ಯ೦ತ ಸನಿಹದಲ್ಲಿ ಬೆಟ್ಟಗಳಿರುವ ಕೇರಳ ರಾಜ್ಯದ ಏಕೈಕ ತಾಣವು ವರ್ಕಳ ಆಗಿದೆ. ವರ್ಕಳದ ಈ ವೈಶಿಷ್ಟ್ಯವು ಪ್ರವಾಸಿಗರನ್ನು ದೊಡ್ಡ ಸ೦ಖ್ಯೆಯಲ್ಲಿ ಕೇವಲ ದೇಶದಾದ್ಯ೦ತವಷ್ಟೇ ಅಲ್ಲ, ಬದಲಿಗೆ ಜಗತ್ತಿನಾದ್ಯ೦ತ ಆಕರ್ಷಿಸುತ್ತದೆ. ಸು೦ದರವಾಗಿರುವ ಒ೦ದು ಕಡಲಕಿನಾರೆ, ಎರಡುಸಾವಿರ ವರ್ಷಗಳಷ್ಟು ಹಳೆಯದಾಗಿರುವ ಒ೦ದು ವಿಷ್ಣು ದೇವಸ್ಥಾನ ಹಾಗೂ ಒ೦ದು ಆಶ್ರಮ, ಹಾಗೂ ಕಡಲಕಿನಾರೆಯಿ೦ದ ಅನತಿದೂರದಲ್ಲಿಯೇ ಇರುವ ಶಿವಗಿರಿ ಮಠವನ್ನೂ ಹೊರತುಪಡಿಸಿ, ವರ್ಕಳದಲ್ಲಿ ಎಣಿಸಲಾರದಷ್ಟು ಇನ್ನಿತರ ಪ್ರವಾಸೀ ಆಕರ್ಷಣೆಗಳೂ ಇವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ

    ಮಂಗಳವಾರ, 24/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅನಿರೀಕ್ಷಿತ ಸಂಚಾರ. ಹೂವು ವ್ಯಾಪಾರಿಗಳಿಗೆ ಲಾಭ.ನಿರುದ್ಯೋಗಿಗಳಿಗೆ ಶುಭವಾರ್ತೆ. ಬಂದುಗಳ ಆಗಮನ. ಜೀವನದಲ್ಲಿ ಹೆಚ್ಚು ಧನಾತ್ಮಕ ಬದಲಾವಣೆಗಳನ್ನು ಪಡೆಯುತ್ತೀರಿ. ವೃಷಭ:- ಮನೆಯಲ್ಲಿ ದೇವತಾಕಾರ್ಯಗಳು ನಡೆಯಲಿವೆ. ಮನೆಯವರ ಹಾಗೂ ಸ್ನೇಹಿತರ ಸಹಕಾರ ಇರಲಿದೆ. ಹಣಕಾಸಿನ ವಿಷಯದಲ್ಲಿ  ಜಾಗ್ರತೆ ಇರಲಿ.ನಿಮ್ಮ ಹಣದ ಖರ್ಚಿನ ಬಗ್ಗೆ ಜಾಗ್ರತೆ ಇರಲಿ. ದೀರ್ಘ ಪ್ರಯಾಣ ಅನುಕೂಲಕರವಾಗಿರುತ್ತದೆ.ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಮಿಥುನ:– ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಆದಾಯ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ವೃತ್ತಿರಂಗದಲ್ಲಿ…

  • ಸುದ್ದಿ

    ಖತರ್ನಾಕ್ ಕಳ್ಳರನ್ನು ಬಂಧಿಸಿ 5 ಲಕ್ಷ ಮೌಲ್ಯದ 14 ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡ ಕ್ಯಾತಸಂದ್ರ ಪೊಲೀಸರು

      ತುಮಕೂರು, ಆ.23-ವಿವಿಧ ಕಡೆಗಳಲ್ಲಿ ಮೋಟಾರ್ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಖತರ್ನಾಕ್ ಕಳ್ಳನನ್ನು ಕ್ಯಾತಸಂದ್ರ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅನಂತಪುರ ಜಿಲ್ಲೆ ಅರೆಸಮುದ್ರಂ ನಿವಾಸಿ ನರಸಿಂಹ ಮೂರ್ತಿ (30) ಬಂಧಿತ ಆರೋಪಿಯಾಗಿದ್ದು, ಈತ ತುಮಕೂರು ಪಟ್ಟಣದ ಹಳೇ ದೇವರಾಯಪಟ್ಟಣದಲ್ಲಿ ಪ್ರಸ್ತುತ ವಾಸವಾಗಿದ್ದನು. ಕಳೆದ 2013ರಲ್ಲಿ ಬೆಂಗಳೂರು, ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ ಕಡೆಗಳಲ್ಲಿ ಮೋಟಾರ್‍ಬೈಕ್‍ಗಳನ್ನು ಕಳ್ಳತನ ಮಾಡಿದ್ದು, ಈತನ ಬಂಧನದಿಂದ ಹಲವು ಪ್ರಕರಣಗಳು ಪತ್ತೆಯಾದಂತಾಗಿದೆ….

  • ವಿಚಿತ್ರ ಆದರೂ ಸತ್ಯ

    ಇಲ್ಲಿ ಮಕ್ಕಳು ಅಪ್ಪನನ್ನೇ ಮದುವೆ ಆಗ್ತಾರೆ…!ನಂಬೋದಕ್ಕೆ ಆಗೋಲ್ಲ,ಆದ್ರೂ ಸತ್ಯ…

    ಹಲವು ದೇಶಗಳಲ್ಲಿ ಹಲವು ರೀತಿಯ ಚಿತ್ರ ವಿಚಿತ್ರ ಪದ್ಧತಿ, ಸಂಪ್ರದಾಯಗಳು ಈಗಲೂ ರೂಢಿಯಲ್ಲಿವೆ. ಕೆಲವು ಸ್ಥಳಗಳಲ್ಲಿ ಅನಾದಿಕಾಲದಿಂದ ಬಂದ ಪದ್ಧತಿಗಳನ್ನು ಈಗಲೂ ಸಹ ಆಚರಿಸಿಕೊಂಡು ಬರಲಾಗ್ತಿದೆ. ನಮಗೆಲ್ಲಾ ಗೊತ್ತಿರುವಂತೆ ಹೆಣ್ಣು ಮಕ್ಕಳ ತಂದೆಯಾದವನಿಗೆ ಅವರಿಗೆ ಯೋಗ್ಯನಾದ ಗಂಡನ್ನು ಹುಡುಕಿ ಮದುವೆ ಮಾಡುವುದೇ ಅತೀ ದೊಡ್ಡ ಜವಾಬ್ದಾರಿಯಾಗಿರುತ್ತೆ.ಇದಕ್ಕಾಗಿ ತಂದೆಯಾದವನು ತುಂಬಾ ಕಷ್ಟಪಟ್ಟು ಮಗಳ ಮಾಡುವೆ ಮಾಡುತ್ತಾನೆ.ಆದ್ರೆ ಈ ಗ್ರಾಮದಲ್ಲಿ ಮಗಳಿಗೆ ವರನನ್ನು ಹುಡುಕಬೇಕಾಗಿಲ್ಲ. ಶಾಕಿಂಗ್ ವಿಷಯ ಅದರಲ್ಲೂ ವಿಚಿತ್ರ ಏನೆಂದರೆ ತಾನು ಸಾಕಿ ಸಲುಹಿದ ಮಗಳನ್ನು ತಂದೆಯೇ ಮದುವೆಯಾಗ್ತಾನೆ….

  • ಜ್ಯೋತಿಷ್ಯ

    ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:-ನಿಮ್ಮ ಯಾವುದೇ ಕೆಲಸಗಳು ಸುಲಭವಾಗಿ ಕೈಗೂಡುವುದಿಲ್ಲ. ಆದರೆ ಪ್ರಯತ್ನಶೀಲತೆ ಗುರಿ ತಲುಪಿಸುತ್ತದೆ. ಕೆಲವು ದಿನಗಳವರೆಗೂ ಮಹತ್ವದ ನಿರ್ಧಾರ ತಳೆಯಬೇಡಿ. ಹಣಕಾಸಿನ ವಿಷಯದಲ್ಲಿ ಜಾಗರೂಕತೆಯಿಂದ ಇರಿ..ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…

  • inspirational

    ಗ್ರೀನ್ ಟೀ ಆರೋಗ್ಯಕರ ಪ್ರಯೋಜನಗಳು

    ಗ್ರೀನ್ ಟೀ ಅನ್ನು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಬದಲಾಗುತ್ತಿರುವ ಜೀವನಶೈಲಿಯ ಪರಿಣಾಮದಿಂದಾಗಿ ಒತ್ತಡ ಹೆಚ್ಚಾಗುತ್ತಿದ್ದು, ಗ್ರೀನ್ ಟೀ ಕುಡಿಯುವ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ. ಪ್ರತಿದಿನ ನಿಗದಿತ ಪ್ರಮಾಣದ ಗ್ರೀನ್ ಟೀ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.  ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದನ್ನು ಹಲವು ಸಂಶೋಧನೆಗಳು ಪತ್ತೆ ಹಚ್ಚಿವೆ. ಆದರೆ ಎಚ್ಚರ! ಅತಿಯಾದ ಗ್ರೀನ್ ಟೀ ಸೇವನೆ ನಿಮ್ಮ ದೇಹಕ್ಕೆ ಹಾನಿ ಉಂಟುಮಾಡಬಹುದು. ಆದ್ದರಿಂದ ನೀವು ಹೆಚ್ಚು ಟೀ…