ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಬ್ಬಬ್ಬಾ ಎಂದರೆ ಒಂದು ಕೋಣದ ಬೆಲೆ ಎಷ್ಟಿರಬಹುದು? ಒಂದು3 ಲಕ್ಷ , ಇಲ್ಲಾ 10 ಲಕ್ಷ. ಆದರೆ ಈ ಕೋಣದ ಬೆಲೆ ಕೇಳಿದರೆ ನಿಮಗೆ ತಲೆ ತಿರುಗಿ ಬೀಳುವುದು ಖಂಡಿತ ಕೋಣ ವ್ಯಾಪಾರದ ಪುಷ್ಕರ್ ಮೇಳದಲ್ಲಿ ಕಂಗೊಳಿಸಿದ ಈ ಕೋಣದ ಬೆಲೆ ಬರೋಬ್ಬರಿ 14 ಕೋಟಿ ರೂ.! ಪುಷ್ಕರ್ ಜಾತ್ರಗೆ ಬಂದ 14 ಕೋಟಿರೂ. ಮೌಲ್ಯದ ಭೀಮ ಕೋಣ ಇದೀಗ ದೇಶದೆಲ್ಲೆಡೆ ಸುದ್ದಿಮಾಡ್ತಿದೆ.

ಆರು ವರ್ಷದ ಕೋಣವಾಗಿದ್ದು, 1,300 ಕೆ.ಜಿ.ತೂಕ ಹೊಂದಿದೆ. ಈ ವಿಶಿಷ್ಟ ಕೋಣವನ್ನು ಜೋಧಪುರದಿಂದ ಮಾಲೀಕ ಜವಾಹರ್ ಲಾಲ್ ಜಂಗಿದ್, ಅವರ ಮಗ ಅರವಿಂದ್ ಜಂಗಿದ್ ಹಾಗೂ ಅವರ ಕುಟುಂಬದ ಸದಸ್ಯರು ಪುಷ್ಕರ್ ಜಾತ್ರೆಗೆ ಕರೆ ತಂದಿದ್ದಾರೆ.

ಜಾತ್ರೆಯ ಮೊದಲ ದಿನವೇ ಕೋಣವನ್ನು ನೋಡಲು ಜನ ಮುಗಿಬಿದ್ದಿದ್ದು, ಸಾಲುಗಟ್ಟಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೋಣದ ಮಾಲೀಕ ಜಂಗಿದ್ ಈ ಕುರಿತು ಪ್ರತಿಕ್ರಿಯಿಸಿ, ಭೀಮಾನ ನಿರ್ವಹಣೆಗೆ ಹಾಗೂ ಆಹಾರಕ್ಕಾಗಿ ಪ್ರತಿ ತಿಂಗಳು 1.5 ಲಕ್ಷ ರೂ. ಖರ್ಚು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಪ್ರತಿ ದಿನ ಒಂದು ಕೆ.ಜಿ.ತುಪ್ಪ, ಅರ್ಧ ಕೆ.ಜಿ. ಬೆಣ್ಣೆ, 200 ಗ್ರಾಂ.ಜೇನುತುಪ್ಪ, 25 ಲೀಟರ್ ಹಾಲು, ಒಂದು ಕಿಲೋ ಗೋಡಂಬಿ ಬಾದಾಮಿ ಸಹ ಈ ಕೋಣಕ್ಕೆ ಬೇಕಾಗುತ್ತದೆ. ಜಾತ್ರೆಗೆ ಬರುವುದಕ್ಕೂ ಮೊದಲು ಈ ಕೋಣಕ್ಕೆ 14 ಕೋಟಿ ರೂ.ಗಳ ಪ್ರಸ್ತಾಪವನ್ನು ನಾವುಸ್ವೀಕರಿಸಿದ್ದೇವೆ. ಆದರೆ ನಾವು ಭೀಮನನ್ನು ಮಾರಾಟ ಮಾಡಲು ಬಯಸುವುದಿಲ್ಲ. ಜಾತ್ರೆಯಲ್ಲಿಯೂ ಕೋಣಗಳನ್ನು ಮಾರಾಟಕ್ಕೆ ತರುವುದಿಲ್ಲ. ಬದಲಿಗೆ ಮರ‍್ರಾ ತಳಿಯನ್ನು ಸಂರಕ್ಷಿಸುವ ಹಾಗೂ ಉತ್ತೇಜಿಸಲು ಈ ಕೋಣದ ಪ್ರದರ್ಶನ ಮಾತ್ರ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.ಭೀಮನ ತೂಕವು ಕಳೆದ ವರ್ಷಕ್ಕಿಂತ ಈ ಬಾರಿ100 ಕೆ.ಜಿ. ಹೆಚ್ಚಿದ್ದು, ಬೆಲೆ ಸಹ 2 ಕೋಟಿ ರೂ. ಹೆಚ್ಚಿಸಲಾಗಿದೆ. ಕಳೆದ ವಾರ್ಷವೂ ಕೋಣ ಮೇಳಕ್ಕೆ ಮಾಲೀಕರೊಂದಿಗೆ ಆಗಮಿಸಿತ್ತು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶಾಲಾ ಹಾಸ್ಟೆಲ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪುಟ್ಟ ಮಕ್ಕಳಿರುವ ಶಾಲೆ, ಹಾಸ್ಟೆಲ್‌ಗಳಲ್ಲಿ ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಹಾಗಿರುವಾಗ ಬೆಂಕಿ, ಶಿಥಿಲ ಕಟ್ಟಡಗಳ ಬಗ್ಗೆ ನಿಗಾ ಇಡಬೇಕಾಗಿರುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಶಾಲಾ ಹಾಸ್ಟೆಲ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 10 ವರ್ಷದ ವಿದ್ಯಾರ್ಥಿ ಬೆಂಕಿಯಲ್ಲೇ ಬೆಂದು ಮೃತಪಟ್ಟಿದ್ದಾನೆ. ತೆಲಂಗಾಣಾದ ಖಮ್ಮಮ್‌ನಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಹಾಸ್ಟೆಲ್‌ನಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ. ಅಷ್ಟೇ ಅಲ್ಲದೆ ಹಾಸ್ಟೆಲ್…
ಭಾರತ-ಚೀನಾ ಗಡಿ ವಿವಾದದಲ್ಲಿ 20 ಜನ ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆ ರೋಣ ಪಟ್ಟಣದ ಯುವಕನೊರ್ವ ಭಾರತೀಯ ಸೈನಿಕರ ಬಗ್ಗೆ ಅಶ್ಲೀಲ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಪಟ್ಟಣದ ಬಸವರಾಜ ಗೋಮಾಡಿ, ಬಸವರಾಜ್ ಯಶ್ ಎಂಬ ಹೆಸರಿನಿಂದ ಪೋಸ್ಟ್ ಹರಿಬಿಟ್ಟಿದ್ದಾನೆ. ಕರ್ನಾಟಕದ ಅದರಲ್ಲೂ ಶಾಂತಿನಾಡು ಗದಗ ಜಿಲ್ಲೆಯ ಯುವಕ ಚೀನಾ ಸೈನಿಕರಿಗೆ ಸಪೋರ್ಟ್ ಮಾಡಿದ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿದೆ. ‘ಹೆಚ್ಚೆಚ್ಚು ಭಾರತೀಯ ಸೈನಿಕರನ್ನು ಚೀನಾದವರು ಕೊಲ್ಲಲಿ ಈ ದರಿದ್ರ…
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಎರಡನೇ ಪಟ್ಟಿಯನ್ನು 24 ಗಂಟೆಗಳಲ್ಲಿಯೇ ಎರಡನೇ ಪಟ್ಬಿ ಬಿಡುಗಡೆ ಮಾಡಿದೆ. ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್, ಬಸವನ ಬಾಗೇವಾಡಿ- ಎಸ್.ಕೆ ಬೆಳ್ಳುಬ್ಬಿ, ಇಂಡಿ- ಕಾಸಾಗೌಡ ಬಿರಾದಾರ್, ಗುರಮಿಠಕಲ್- ಲಲಿತಾ ಅನಾಪುರ್, ಬೀದರ್- ಈಶ್ವರ್ ಸಿಂಗ್ ಠಾಕೂರ್, ಭಾಲ್ಕಿ- ಪ್ರಕಾಶ್ ಖಂಡ್ರೆ, ಗಂಗಾವತಿ- ಪರಣ್ಣ ಮುನವಳ್ಳಿ, ಕಲಘಟಗಿ-…
ಅಂದಿನ ವೈಸ್ ರಾಯ್ ಹೌಸ್ ಅಂದ್ರೆ ಇಂದಿನ ರಾಷ್ಟ್ರಪತಿ ಭವನ, ಐತಿಹಾಸಿಕ ಹೌಸ್ ಮುಂದೆ 1946 ರಲ್ಲಿ ನಗು ಮುಖದಿಂದ ನಿಂತಿರುವ ‘ರಾಷ್ಟ್ರಪಿತ’- ‘ಮಹಾತ್ಮಾ’ಗಾಂಧೀಜಿ ಮತ್ತು ಬ್ರಿಟಿಷ್ Political Leader (ಬ್ರಿಟನ್ ಪ್ರಜೆ ಆಗಿದ್ದರೂ ಸಹಿತ, ಗಾಂಧಿ ಅವರ ಅಪ್ಪಟ ಅಭಿಮಾನಿ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಲನಾಥ್(70) ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಕೆಲವು ತಿಂಗಳುಗಳಿಂದ ವಯೋಸಹಜ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಗುರುವಾರ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣಿ ಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು. ಆಕಾಶವಾಣಿ ‘ಎ’ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು…
ಬ್ರಿಟೀಷರ ಅಟ್ಟಹಾಸ ತಾರಕಕ್ಕೇರಿದಾಗ, ಭಾರತವನ್ನು ಬ್ರಿಟೀಷರ ಕಪಿಮುಷ್ಟಿಯಿಂದ ಬಿಡಿಸಲು ಜನಿಸಿದ ಶಾಂತಿ ಪ್ರವರ್ತಕ ಮಹಾತ್ಮಾ ಗಾಂಧಿ. ಗುಜರಾತ್ ನ ಪೋರ್ ಬಂದರ್ ನಲ್ಲಿ ಅಕ್ಟೋಬರ್ 2, 1869 ರಂದು ಮೋಹನ್ ದಾಸ್ ಕರಮ್ ಚಂದ್ ಗಾಂಧಿಯಾಗಿ ಜನಿಸಿ, ವಿದೇಶದಲ್ಲಿ ಕಾನೂನು ಪದವಿ ಪಡೆದು ದಕ್ಷಿಣ ಭಾರತದಲ್ಲೇ ಹೋರಾಟ ಆರಂಭಿಸಿ ಭಾರತಕ್ಕೆ ಬಂದರು.