ಸುದ್ದಿ

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ..!

29

ಇಂಟರ್‌ನೆಟ್ ಸ್ಟಾರ್ ರಾನು ಮೊಂಡಲ್ ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ರಾನು ಮೊಂಡಲ್ ಅವರು ಮಾರ್ಕೆಟ್‌ಗೆ ಹೋಗಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ರಾನು ಅವರನ್ನು ನೋಡಿ ಖುಷಿಯಾಗುತ್ತಾರೆ. ಅಲ್ಲದೆ ಅವರ ಕೈ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಅಭಿಮಾನಿಯ ವರ್ತನೆ ನೋಡಿ ರಾನು ಅವರ ಮೇಲೆ ರೇಗಾಡುತ್ತಾರೆ.

ಅಭಿಮಾನಿ ಕೈ ಹಿಡಿದು ಎಳೆಯುತ್ತಿದ್ದಂತೆ ರೊಚ್ಚಿಗೆದ್ದ ರಾನು, ನನ್ನ ಕೈಯನ್ನು ಏಕೆ ಹೀಗೆ ಹಿಡಿದು ಎಳೆದಿದ್ದೀರಿ. ಈ ರೀತಿ ಕೈ ಹಾಕುವುದು ಸರಿನಾ? ಏನಿದೆಲ್ಲಾ? ಎಂದು ಮಹಿಳೆ ಮೇಲೆ ರೇಗಾಡುತ್ತಾರೆ. ರಾನು ಅವರ ವರ್ತನೆನೋಡಿ ಮಹಿಳೆ ನಗುವ ಮೂಲಕ ಸುಮ್ಮನಾಗುತ್ತಾರೆ.

ಈ ವಿಡಿಯೋ ಈಗ ವೈರಲ್  ಆಗುತ್ತಿದ್ದು, ಕಮೆಂಟ್ ಮಾಡುವ ಮೂಲಕ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಕೆಲವರು, ‘ರಾನುಗೆ ಈಗ ಅಹಂಕಾರ ಬಂದಿದೆ’ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ‘ರಾನು ಮೊಂಡಲ್ ಅವರ ಆ್ಯಟಿಟ್ಯೂಡ್ ನೋಡಿ’ಎಂದು ಕಮಂಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ರಾನು 1972ರಲ್ಲಿ ಬಿಡುಗಡೆಯಾದ `ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾಮಂಗೇಶ್ಕರ್ ಅವರು ಹಾಡಿದ “ಏಕ್ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋವೈರಲ್ ಆಗಿತ್ತು. ಈ ವಿಡಿಯೋವನ್ನು ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆದ ಬೆನ್ನಲೇ ರಾನು ಅವರಿಗೆ ರಿಯಾಲಿಟಿ ಶೋನಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಬಳಿಕ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಚಿತ್ರದಲ್ಲಿ ಹಾಡಲು ರಾನು ಅವರಿಗೆ ಅವಕಾಶ ಕೊಟ್ಟಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಈ ಜಾಗದಲ್ಲಿ 5 ತುಳಸಿ ಎಲೆಯನ್ನು ಇಟ್ಟರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ,.!

    ಈ ಲೋಕದಲ್ಲಿ  ಕಷ್ಟವಿಲ್ಲದೇ ಬದುಕುವ  ಮನುಷ್ಯನನ್ನ  ಎಲ್ಲಿಯೂ ಸಹ  ಕಾಣಲು  ಸಾಧ್ಯವಾಗುವುದಿಲ್ಲ ಯಾಕೆಂದರೆ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ತಮ್ಮದೇ ಆದ ನೂರಾರು ಕಷ್ಟ ಇದ್ದೆ ಇರುತ್ತದೆ.  ಹಾಗೆಯೇ  ಸ್ನೇಹಿತರೆ ನಮಗೆ ಕಷ್ಟಗಳು ಬಂದಾಗ ಯಾವುದೇ ಕಾರಣಕ್ಕೂ ತಲೆ ಮೇಲೆ ಕೈಹಾಕಿ ಕುಳಿತುಕೊಳ್ಳಬಾರದು  ಅದಕ್ಕೊಂದು  ಪರಿಹಾರ ಇದ್ದೇ ಇರುತ್ತದೆ ನಾವು ಪರಿಹಾರವನ್ನು ಉಡುಕಬೇಕು ಆಗ ನಮ್ಮ ಕಷ್ಟಕ್ಕೆ ಪರಿಹಾರ ಸಿಗುತ್ತದೆ. ಹಾಗೆಯೇ ನಾನೊಂದು ಸಲಹೆ ಕೊಡಲು ಇಷ್ಟ  ಪಡುತ್ತೇನೆ  ಕಷ್ಟದ ದಿನಗಳು ಬಂದಾಗ ನಮ್ಮ ಮನಸ್ಸು ದೃಢವಾಗಿರಬೇಕು ಮತ್ತು…

  • Sports

    ಕ್ರಿಕೆಟ್ ವೃತ್ತಿಯಲ್ಲಿ ಆಟವಾಡದೆಯೇ ಗಳಿಸಬಹುದು 20 ಲಕ್ಷದವರೆಗೆ ಸಂಬಳ…!

    ಕ್ರಿಕೆಟ್ ಬಹುತೇಕರ ಕನಸು. ಆದ್ರೆ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭದ ಕೆಲಸವಲ್ಲ. ಕ್ರೀಡೆ ಗೊತ್ತಿಲ್ಲದವರಿಗೂ ಕ್ರಿಕೆಟ್ ಜಗತ್ತಿನಲ್ಲಿ ಕೆಲಸ ಸಿಗುತ್ತದೆ. ಒಳ್ಳೆ ವಿದ್ಯಾಭ್ಯಾಸ ಹೊಂದಿರುವವರು ಕ್ರಿಕೆಟ್ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಗಳಿಕೆ ಮಾಡ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ, ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ ಕ್ರಿಕೆಟ್ ಗೆ ಸಂಬಂಧಿಸಿದ ಅನೇಕ ಕೆಲಸಗಳಿವೆ. ಪಂದ್ಯದ ತೀರ್ಪುಗಾರನಾಗಿ ನೀವು ಕೆಲಸ ಮಾಡಬಹುದು. ಪ್ರತಿ ಪಂದ್ಯಕ್ಕೆ 30 ಸಾವಿರ ರೂಪಾಯಿ ನೀಡಲಾಗುತ್ತದೆ. ಐಸಿಸಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ…

  • ಸಿನಿಮಾ

    ರಜನಿಕಾಂತ್ ಅಭಿಮಾನಿಗಳು ಅರೆಸ್ಟ್ !!!

    ರಜನೀಕಾಂತ್ ರಾಜಕೀಯ ಪ್ರವೇಶ ವಿಚಾರದಲ್ಲಿ ತಮಿಳುನಾಡಲ್ಲಿ ಭಾರೀ ಜಟಾಪಟಿ ಸಾಗಿದೆ. ಅದೂ ಕೂಡಾ ರಜನಿ ವಿಚಾರದಲ್ಲಿ ತಮಿಳು ಭಾಷಿಗರ ನಡುವೆಯೇ ಜಟಾಪಟಿ ನಡೆಯುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದಕ್ಕೆ ತಮಿಳು ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಜನಿ ಅಭಿಮಾನಿಗಳು ತಲೈವಾ ಪರ ನಿಂತಿದ್ದಾರೆ. ಯಾರು ಏನೇ ಹೇಳಲಿ, ನೀವು ರಾಜಕೀಯಕ್ಕೆ ಎಂಟ್ರಿ ಕೊಡಿ ಅಂತ ಇದ್ದಾರೆ ಅವರ ಅಭಿಮಾನಿಗಳು.

  • ಸುದ್ದಿ

    ಪ್ರತಿಪಕ್ಷದ ನಾಯಕರಾದ ಮೇಲೆ ತಮ್ಮ ವರಸೆಯನ್ನು ಬದಲಾಯಿಸಿಕೊಂಡ ಸಿದ್ದರಾಮಯ್ಯ,.!!

     ಪ್ರತಿಪಕ್ಷದ ನಾಯಕರಾದ ಮೇಲೆ ಸಿದ್ದರಾಮಯ್ಯ ತಮ್ಮ ವರಸೆ ಬದಲಾಯಿಸಿದ್ದಾರೆ. ಎಲ್ಲ ಶಾಸಕರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ. ಕಳೆದೆರಡು ದಿನಗಳಲ್ಲಿ ಐದು ಬಾರಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಧಿವೇಶನದಲ್ಲಿ ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ರಮೇಶ್‍ಕುಮಾರ್ ಹಾಗೂ ಶಾಸಕರ ಸಲಹೆ ಪಡೆದು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಸ್ಥಾನ ಪಡೆಯಲು ಸಿದ್ದರಾಮಯ್ಯನವರು ನಡೆಸಿದ ಪ್ರಯತ್ನದ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂದು ಹೈಕಮಾಂಡ್ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಸಿದ್ದು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ. ಇವರ ಆಪ್ತರು ಹಾಗೂ…

  • ಭವಿಷ್ಯ

    ಫೆಬ್ರವರಿಯಲ್ಲಿ ‘ಮೋದಿ’ಗೆ ಗಂಡಾಂತರ..!ಕಿಂಗ್ ಮೇಕರ್ ಆಗಲಿದ್ದಾರೆ “ಎಚ್’ಡಿಕೆ”!ಈ ಗುರೂಜಿಯಿಂದ ಭವಿಷ್ಯ…

    ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಗುರೂಜಿ, ಪ್ರಧಾನಿ ಈಗಾಗಲೇ ಎರಡು ದೊಡ್ಡ ಗಂಡಾಂತರಗಳಿಂದ ತಪ್ಪಿಸಿಕೊಂಡು ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.