ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೇಂದ್ರದ ಪ್ರಸ್ತಾವನೆ ಜಾರಿಗೊಂಡರೆ ಇನ್ನು ಸರಕಾರಿ ನೌಕರರು 8 ಗಂಟೆ ಬದಲು 9 ಗಂಟೆ ಕೆಲಸ ಮಾಡಬೇಕಾಗುತ್ತದೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗಿನ ಕೆಲಸದ ಅವಧಿ 6 ಗಂಟೆವರೆಗೆ ವಿಸ್ತರಣೆಯಾಗಲಿದೆ! ಕೇಂದ್ರ ಸರಕಾರ ಪ್ರಕಟಿಸುವ ವೇತನ ನಿಯಮಾವಳಿಯ ಕರಡು ವರದಿಯಲ್ಲಿಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಆದರೆ, ಬಹು ಚರ್ಚೆಯಲ್ಲಿರುವ ಕನಿಷ್ಠ ವೇತನದ ವಿಷಯವನ್ನು ಇಲ್ಲಿ ಉಲ್ಲೇಖಿಸಲಾಗಿಲ್ಲ. ಭವಿಷ್ಯದಲ್ಲಿ ವೇತನ ನಿಗದಿ ಮಾಡುವಾಗ ಮೂರು ಭೌಗೋಳಿಕ ವರ್ಗೀಕರಣವನ್ನು ಪರಿಗಣಿಸಬೇಕು ಎಂಬುದನ್ನು ಹೊರತು ಪಡಿಸಿದರೆ ಉಳಿದುದೆಲ್ಲವೂ ಹಳೆ ವಿಚಾರಗಳೆ.
ಹಾಗಂತ,ಇದು ಏಕಾಏಕಿ ಜಾರಿಯಾಗಲಿರುವ ನಿಯಮವಲ್ಲ.ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯಬೇಕು ಎಂಬ ಕಾರಣಕ್ಕೆ ಆಕ್ಷೇಪಗಳನ್ನುಆಹ್ವಾನಿಸಲಾಗಿದೆ. ಕರಡಿನಲ್ಲಿರುವ ಇನ್ನೊಂದು ಗೊಂದಲ ಅಂಶವೆಂದರೆ, ಈಗ ತಿಂಗಳ ವೇತನ ನೀಡುವಾಗ ಈಗ 8 ಗಂಟೆಯ ಕೆಲಸದ ಅವಧಿಯನ್ನು ಗಮನಿಸಿ,26 ಕಾರ್ಯ ದಿನಗಳೆಂದು ಪರಿಗಣಿಸಲಾಗುತ್ತಿತ್ತು. ಮುಂದೆ ಅದು ಬದಲಾಗುವುದೇಎಂಬ ಸ್ಪಷ್ಟತೆ ಇಲ್ಲ.
ಕೇಂದ್ರದ ಪ್ರಸ್ತಾವನೆಗೆ ಸಿಐಟಿಯು, ಬಿಎಎಂಎಸ್ ಸೇರಿದಂತೆ ಬಹುತೇಕ ಎಲ್ಲ ಕಾರ್ಮಿಕ ಸಂಘಟನೆಗಳು ಆಕ್ಷೇಪ ಎತ್ತಿವೆ. ಕೆಲವು ಕಾರ್ಖಾನೆಗಳು ಆಗಲೇದಿನಕ್ಕೆ ಒಂಬತ್ತು ಗಂಟೆ ಕೆಲಸ ಮಾಡಿಸುತ್ತಿವೆ. ಈ ನಿಯಮಾವಳಿ ಅದಕ್ಕೊಂದು ಅಧಿಕೃತ ಮುದ್ರೆ ಒತ್ತಲಿದೆ. ಈ ನಿಯಮಾವಳಿಯು ಜನರ ಕಲ್ಯಾಣದ ಬಗ್ಗೆ ಮೌನವಾಗಿರುವುದರಿಂದ ನಮ್ಮ ವಿರೋಧವಿದೆ ಎಂದು ಸಿಐಟಿಯು ಉಪಾಧ್ಯಕ್ಷ ಎ.ಕೆ. ಪದ್ಮನಾಭನ್ ಹೇಳಿದ್ದಾರೆ. ‘ಸ್ವಾತಂತ್ರ್ಯ ಪಡೆದು 70 ವರ್ಷ ಕಳೆದರೂ ಕನಿಷ್ಠವೇತನ ಜಾರಿಯಾಗಿಲ್ಲ. ಈ ನಿಯಮಾವಳಿಗಳಲ್ಲಿ ಬದುಕಿನ ಗುಣಮಟ್ಟದ ಉಲ್ಲೇಖವೇ ಇಲ್ಲ’ ಎಂದು ಬಿ ಎಂ ಎಸ್ ಅಧ್ಯಕ್ಷ ಸಿ.ಕೆ. ಸಾಜಿನಾರಾಯಣನ್ ಹೇಳಿದ್ದಾರೆ.
ಕೇಂದ್ರದ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯೊಂದು ದಿನಕ್ಕೆ 375 ರೂ.ವನ್ನು ರಾಷ್ಟ್ರೀಯ ಕನಿಷ್ಠ ವೇತನವಾಗಿ ಪರಿಗಣಿಸಬೇಕು ಎಂದು ಸೂಚಿಸಿತ್ತು. ಅಂದರೆ,ತಿಂಗಳಿಗೆ ಕನಿಷ್ಠ ವೇತನ 9,750 ರೂ.ಹಾಗೂ ನಗರ ವಾಸಿಗಳಿಗೆ 1,430 ರೂ. ವಸತಿ ಭತ್ಯೆ ನೀಡಲುಸಲಹೆ ನೀಡಿತ್ತು. ಆದರೆ, ಹೊಸ ಕಾರ್ಮಿಕವೇತನ ನಿಯಮಾವಳಿ ಕರಡಿನಲ್ಲಿ ಈ ಅಂಶಗಳನ್ನು ಪರಿಗಣಿಸಲಾಗಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಕೃತಿಯ ಅನೇಕ ಸುಂದರವಾದ ಉಡುಗೊರೆಗಳಲ್ಲಿ ಸೂರ್ಯೋದಯ-ಸೂರ್ಯಾಸ್ತದ ಸೊಬಗು ತುಂಬಾ ಅದ್ಭುತ.ಈ ಸೂರ್ಯೋದಯ-ಸೂರ್ಯಾಸ್ತವನ್ನು ನೋಡುವುದರಿಂದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ.ಈ ಸೌಂದರ್ಯ
ಕೆಂಪೇಗೌಡ ಇಂಟರ್ಚೇಂಜ್ ಮೆಟ್ರೊ ನಿಲ್ದಾಣ’ ಏಕಕಾಲದಲ್ಲಿ 20,000 ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ನಿಲ್ದಾಣದ ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ…
ಕೆಲವು ದಿನಗಳ ಹಿಂದೆ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಬಾಲಿವುಡ್ ನಟ ಅಭಿತಾಬ್ ಬಚ್ಚನ್ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ ಸುಧಾಮೂರ್ತಿ ಅವರು ‘ಕೌನ್ ಬನೇಗ ಕರೋಡ್ ಪತಿ’ ಗೆ ಸ್ಪರ್ಧಿಯಾಗಿ ಹೋಗಿದ್ದಾರಾ ಅಥವಾ ಅತಿಥಿಯಾಗಿ ಹೋಗಿದ್ದಾರಾ ಎಂಬ ಗೊಂದಲ ಮೂಡಿತ್ತು. ಇದೀಗ ಆ ಗೊಂದಲಕ್ಕೆ ತೆರೆ ಬಿದ್ದಿದೆ. ಸುಧಾಮೂರ್ತಿ ಅವರು ನಟ ಅಭಿತಾಬ್ ಬಚ್ಚನ್ ನಿರೂಪಣೆಯ ‘ಕೌನ್…
ಬೆಳ್ತಂಗಡಿಯಿಂದ ಆರು ಕಿ.ಮೀ. ಅಂತರದ ಕಾರ್ಕಳ ರಸ್ತೆಯಲ್ಲಿ ಬಂದರೆ ಬದ್ಯಾರ್ ಎಂಬಲ್ಲಿ ಇಳಿದು ಮತ್ತೆ ಒಂದು ಕಿ.ಮೀ. ಸಾಗಿದರೆ ಪುರಾತನವಾದ ಸಂತಾನ ಗೋಪಾಲಕೃಷ್ಣ ದೇವಸ್ಥಾನ ತಲುಪಬಹುದು. ಕರಾವಳಿಯಲ್ಲಿ ಇಂತಹ ದೇವಾಲಯವಿರುವುದು ಒಂದೆರಡು ಮಾತ್ರ. ಈ ಬಾರಿಯ ಜಾತ್ರೆ 2020ರ ಜನವರಿ ಇಂದ ನಡೆಯಲಿದೆ. ಮಕ್ಕಳಿಲ್ಲದ ದಂಪತಿ ಇಷ್ಟಾರ್ಥ ಪ್ರಾಪ್ತಿಯಾದಾಗ ನಿರ್ಮಾಣ ಮಾಡಿದ್ದ ಈ ದೇವಾಲಯಕ್ಕೆ ಆರುನೂರು ವರ್ಷಗಳ ಇತಿಹಾಸವಿದೆ. ಚಾಲುಕ್ಯ ಶಿಲ್ಪ ಶೈಲಿಯ ವೇಣುಗೋಪಾಲನ ವಿಗ್ರಹ ಇಲ್ಲಿದೆ. ಪ್ರತ್ಯೇಕವಾಗಿ ದುರ್ಗೆ ಮತ್ತು ದೈವಗಳಿಗೂ ಆರಾಧನೆ ನಡೆಯುತ್ತದೆ. 2012ರಲ್ಲಿ ದೇವಾಲಯ…
ದಿನದ ಆರಂಭ ಶುಭವಾಗಿದ್ದರೆ ದಿನ ಪೂರ್ತಿ ಶುಭವಾಗಿರುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ದಿನ ಶುಭವಾಗಿರಲು ಆರಂಭದಲ್ಲಿ ಯಾವ ಕೆಲಸವನ್ನು ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜೊತೆಗೆ ಯಾವ ಕೆಲಸ ಮಾಡಿದ್ರೆ ದಿನಪೂರ್ತಿ ಕೆಟ್ಟದಾಗಿರುತ್ತದೆ ಎಂಬುದನ್ನೂ ಹೇಳಲಾಗಿದೆ.
ಬಿಗ್ ಬಾಸ್ ಕನ್ನಡ-5′ ಕಾರ್ಯಕ್ರಮಕ್ಕೆ ಕಾಲಿಟ್ಟ ಕ್ಷಣದಿಂದಲೇ, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿರುವ ಸ್ಪರ್ಧಿ ಅಂದ್ರೆ ಅದು ನಿವೇದಿತಾ ಗೌಡ. ಕನ್ನಡವನ್ನ ಇಂಗ್ಲೀಷ್ ಸ್ಟೈಲ್ ನಲ್ಲಿ ಮಾತನಾಡುವ ‘ಬಾರ್ಬಿ ಡಾಲ್’ ನಿವೇದಿತಾ ಮನೆಯ ಒಳಗೆ ಹಾಗೂ ಹೊರಗೆ ಸಖತ್ ಸುದ್ದಿಯಾಗುತ್ತಿದ್ದು, ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ದಾರೆ.