ಸುದ್ದಿ

ನೀವು ನಿಂತು ಆಹಾರವನ್ನು ಸೇವನೆ ಮಾಡುತ್ತಿದ್ದೀರಾ ಹಾಗಾದರೆ ಇದನ್ನು ನೀವು ತಪ್ಪದೆ ತಿದುಕೊಳ್ಳಬೇಕು.!

71

ನಿಂತುಕೊಂಡು ತಿಂದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮಗಳು ಬೀರಬಹುದು ಎಂದು ನಾವು ತಿಳಿದುಕೊಳ್ಳಬೇಕು. ಇಂದಿನ ಸೂಪರ್ ಫಾಸ್ಟ್ ಯುಗದಲ್ಲಿ ನಮಗೆ ಕುಳಿತುಕೊಂಡು ಆರಾಮವಾಗಿ ತಿನ್ನಲು ಪುರುಸೊತ್ತೇ ಇಲ್ಲ. ಅದು ಹೋಟೆಲ್ ಗಳಿಗೆ ಹೋದರೂ ಅಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಸೆಲ್ಫ್ ಸರ್ವೀಸ್ ಮಾಡಿ, ನಿಂತುಕೊಂಡೇ ತಿನ್ನುವ ವ್ಯವಸ್ಥೆ ಮಾಡಿರುವರು. ಆದರೆ ನಿಂತುಕೊಂಡು ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ ಎನ್ನುವ ಪ್ರಶ್ನೆ ಮೂಡುವುದು. ಆದರೆ ನೆಲದ ಮೇಲೆ ಕುಳಿತುಕೊಂಡು, ಕಾಲುಗಳನ್ನು ಮಡಚಿಟ್ಟು ತಟ್ಟೆಯಲ್ಲಿ ಬಡಿಸಿಟ್ಟ ಊಟ ಮಾಡುವ ಸೊಗಸೇ ಬೇರೆ. ಈ ರೀತಿಯಾಗಿ ಊಟ ಮಾಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎಂದು ಆಯುರ್ವೇದವು ಹೇಳಿದೆ.

ನೀವು ತಿನ್ನುವಂತಹ ಭಂಗಿಯು ನಿಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಕೆಲವೊಂದು ಮಂದಿ ತಾವು ಮಲಗಿಕೊಂಡು ತಿನ್ನುತ್ತೇವೆ ಎಂದು ಹೇಳುತ್ತಾರೆ. ಆದರೆ ಇದರಿಂದ ಆತ್ಮತೃಪ್ತಿ ಸಿಗುತ್ತದೆಯೇ ಹೊರತು, ದೇಹಕ್ಕೆ ಲಾಭವಿಲ್ಲ. ಇದರಿಂದ ಅಜೀರ್ಣ ಬರಬಹುದು. ಹಾಗೆ ಹೊಟ್ಟೆಉಬ್ಬರ ಮತ್ತು ಕಿರಿಕಿರಿ ಉಂಟಾಗಬಹುದು. ಮಹಿಳೆಯರ ಮೇಲೆ ನಡೆಸಿದಂತಹ ಒಂದು ಅಧ್ಯಯನದ ಪ್ರಕಾರ ಮಲಗಿ ತಿನ್ನುವಂತಹ ಜನರಲ್ಲಿ ಸ್ವಲ್ಪ ಸಮಯದ ಬಳಿಕ ತೊಂದರೆ ಕಂಡುಬರುವುದು. ಇದರಲ್ಲಿ ಬೇರೆಯವರಿಗೆ ಹೋಲಿಸಿದರೆ ಜೀರ್ಣಕ್ರಿಯೆಯು ತುಂಬಾ ನಿಧಾನವಾಗುವುದು.

ತಿಂದ ಕೂಡಲೇ ಎದ್ದು ನಿಂತರೇ ನೆರವಾಗುವುದೇ? : ಮಲಗಿ ಅಥವಾ ಕುಳಿತುಕೊಂಡು ತಿನ್ನುವುದಕ್ಕೆ ಹೋಲಿಸಿದರೆ, ತಿಂದ ಬಳಿಕ ನಿಲ್ಲುವುದು ಮತ್ತು ನಡೆಯುವುದು ವೇಗದ ಜೀರ್ಣಕ್ರಿಯೆಗೆ ಸಹಕಾರಿ ಆಗಿದೆ ಎಂದು ಮತ್ತೊಂದು ಅಧ್ಯಯನವು ಹೇಳಿದೆ. ಅದಾಗ್ಯೂ, ಇದರಲ್ಲಿ ಅತೀ ಕೆಟ್ಟದು ಎಂದರೆ ಅದು ಮಲಗಿಕೊಂಡು ತಿನ್ನುವುದು. ತಿಂದ ಬಳಿಕ ನಡೆಯುವುದರಿಂದ ಸ್ವಲ್ಪ ಮಟ್ಟಿಗೆ ನೆರವಾಗಿದೆ ಮತ್ತು ಇದರಿಂದ ಸುಮಾರು 50 ಕ್ಯಾಲರಿ ದಹಿಸಲು ನೆರವಾಗಿದೆ. ಇದು ದೀರ್ಘಕಾಲಕ್ಕೆ ತೂಕ ಇಳಿಸಿಕೊಳ್ಳಲು ನೆರವಾಗಲಿದೆ. ಆದರೆ ಇಲ್ಲಿ ಹೇಗೆ ತಿನ್ನುತ್ತೀರಿ ಎನ್ನುವುದಕ್ಕಿಂತಲೂ ನೀವು ಏನು ತಿನ್ನುತ್ತೀರಿ ಎನ್ನುವುದು ಮುಖ್ಯವಾಗಿರುವುದು.

ನಿಂತುಕೊಂಡು ತಿಂದರೆ ಅದು ಆರೋಗ್ಯಕ್ಕೆ ಒಳ್ಳೆಯದೇ? : ನಿಂತುಕೊಂಡು ತಿಂದರೆ ಆಗ ಕ್ಯಾಲರಿ ದಹಿಸಬಹುದು ಎಂದು ಹೆಚ್ಚಿನವರು ಭಾವಿಸಿರಬಹುದು. ಆದರೆ ತೂಕ ಕಳೆದುಕೊಳ್ಳಲು ಇದು ಆರೋಗ್ಯಕಾರಿ ವಿಧಾನವೇ? ಖಂಡಿತವಾಗಿಯೂ ಇದು ಆರೋಗ್ಯಕಾರಿ ವಿಧಾನವಲ್ಲ. ನಿಂತುಕೊಂಡು ತಿಂದರೆ ಆಗ ತಿನ್ನುವ ವೇಗ ಅಧಿಕವಾಗುವುದು ಮತ್ತು ಸ್ವಲ್ಪ ಹೆಚ್ಚು ಆಹಾರ ಹೊಟ್ಟೆ ಸೇರುವುದು. ನೀವು ನಿಂತುಕೊಂಡು ಹೆಚ್ಚು ಆಹಾರ ತಿಂದರೆ ಆಗ ಅದಕ್ಕೆ ಯಾವುದೇ ರೀತಿಯಿಂದಲೂ ಪರಿಹಾರ ಸಿಗದು.

ಎಚ್ಚರ..! : ನಿಂತುಕೊಂಡು ತಿಂದರೆ ಅದರಿಂದ ಕ್ಯಾಲರಿ ದಹಿಸಬಹುದು ಎಂದು ಕೆಲವೊಂದು ಸಂದರ್ಭದಲ್ಲಿ ಸಾಬೀತು ಆಗಿದೆ. ಆದರೆ ನಿಂತುಕೊಂಡು ತಿನ್ನುವುದು ದೀರ್ಘಕಾಲಕ್ಕೆ ಒಳ್ಳೆಯ ಅಭ್ಯಾಸವಲ್ಲ. ನಿಂತುಕೊಂಡು ತಿಂದರೆ ಆಗ ಅತಿಯಾಗಿ ತಿನ್ನಬಹುದು ಮತ್ತು ಹೊಟ್ಟೆ ಉಬ್ಬರ ಬರಬಹುದು. ಕೆಲವೊಂದು ಪ್ರಕರಣದಲ್ಲಿ ಎದೆಯುರಿ ಮತ್ತು ಆಮ್ಲೀಯ ಹಿಮ್ಮುಖ ಹರಿವು ತಗ್ಗಿಸುವುದು. ಆದರೆ ಆಹಾರ ಸೇವಿಸಲು ಇದು ಸರಿಯಾದ ಕ್ರಮವಲ್ಲ.ಇದರಿಂದ ನೆಲದ ಮೇಲೆ ಕುಳಿತುಕೊಂಡು, ಆರಾಮವಾಗಿ ತಿನ್ನಬೇಕು. ಇದರಿಂದ ಮನಸ್ಸಿಗೂ ಖುಷಿ ಸಿಗುವುದು ಮತ್ತು ದೇಹವು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು. ಇಷ್ಟು ಮಾತ್ರವಲ್ಲದೆ ಜೀರ್ಣಕ್ರಿಯೆಗೆ ಇದು ಸಹಕಾರಿ ಆಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ದೇವರ ಆಶೀರ್ವಾದದಿಂದ ಲಕ್ಷದಲ್ಲಿ ಯಾರೋ ಒಬ್ಬರಿಗೆ ಮಾತ್ರ ಅಂತಹ ಕನಸು ಬರುತ್ತದೆ ಅಕಸ್ಮಾತ್ ಬಂದ್ರೆ ಅವರು ಕೋಟ್ಯಧಿಪತಿ ಆಗುವುದಂತೂ ಗ್ಯಾರಂಟಿ…ಅಷ್ಟಕ್ಕೂ ಆ ಕನಸು ಯಾವುದು.? ಇಲ್ಲಿ ಓದಿ…

    ಲಕ್ಷದಲ್ಲಿ ಯಾರೋ ಒಬ್ಬರಿಗೆ ಮಾತ್ರ  ಈ ಕನಸು ಬೀಳುತ್ತದೆ ಆದರೆ ಈ ಕನಸು ಬಿದ್ದರೆ ಮಾತ್ರ ನೀವು ಕೊಟ್ಯಧಿಪತಿ ಆಗೋದು ಅಂತೂ ಸತ್ಯ ಬಿಡಿ. ಹಾಗಾದ್ರೆ ಆ ಕನಸು ಯಾವುದು ಮತ್ತು ಈ ಕನಸು ಏಕೆ ಬೀಳುತ್ತೆ ಮತ್ತು ಯಾವ ಪುಣ್ಯ ಫಲ ಇದ್ದರೆ ಮಾತ್ರ ಈ ಕನಸು ಬೀಳುತ್ತದೆ ಎಂಬುದನ್ನು ತಿಳಿಯಲು ಈ ಲೇಖನ ಮರೆಯದೇ ಸಂಪೂರ್ಣ ಓದಿರಿ.  ಮನುಷ್ಯ ಅಂದಮೇಲೆ ಪ್ರತಿ ಒಬ್ಬರಿಗೆ ಸಹ ರಾತ್ರಿ ಮಲಗಿದ ಮೇಲೆ ಕನಸು ಬೀಳುತ್ತದೆ, ಕೆಲವು ಜನಕ್ಕೆ…

  • ಸ್ಪೂರ್ತಿ

    ಜೀವನದಲ್ಲಿ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂಬುದು ಸತ್ಯ..ಅದಕ್ಕೆ ಸುನಿತಾ ಮಂಜುನಾಥ್ ರವರೇ ನೈಜ್ಯ ಉದಾಹರಣೆ…

    ಸಾಕಷ್ಟು ಸಮಾಜಸೇವೆಗಳನ್ನು ಮಾಡಿ ಹೆಸರಾಗಿರುವ ಸುನಿತಾ ಮಂಜುನಾಥ್ ರವರ ಬಹು ದೊಡ್ಡ ಕನಸಿನ ಆಂದೋಲನವೇ “ಕಸದಿಂದ ರಸ” ತಮ್ಮದೇ ಶಾಲೆಯ ಮಕ್ಕಳಿಗೆ ಹುರಿದುಂಬಿಸಿ..‌ ದೇಶದ ಬಗ್ಗೆ ಅಭಿಮಾನವನ್ನು ಹೆಚ್ಚು ಮಾಡುತ್ತಿರುವ ಇವರು ನಿಜಕ್ಕೂ ಗ್ರೇಟ್..

  • ಸುದ್ದಿ

    ಕಾಫಿ ಡೇ ಮಾಲೀಕ,ಮಾಜಿ ಸಿ ಎಂ ಎಸ್‌.ಎಂ.ಕೃಷ್ಣ ಅಳಿಯ, ಸಿದ್ಧಾರ್ಥ ನೇತ್ರಾವತಿ ನದಿ ಬಳಿ ಕಾಣೆ……!

    ಮಾಜಿ ವಿದೇಶಾಂಗ ಸಚಿವ, ಮಾಜಿ ರಾಜ್ಯಪಾಲ, ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಕರ್ನಾಟಕದ ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ ಅವರು ಸೋಮವಾರ ದಿಢೀರ್‌ ನಾಪತ್ತೆಯಾಗಿದ್ದು, ಕುಟುಂಬ ಹಾಗೂ ಆಪ್ತ ವಲಯದಲ್ಲಿ ಆತಂಕ ಮನೆ ಮಾಡಿದೆ.ಕೆಫೆ ಕಾಫಿ ಡೇ ಸೇರಿದಂತೆ ಹಲವು ಉದ್ಯಮಗಳನ್ನು ಮುನ್ನಡೆಸುತ್ತಿದ್ದ ಸಿದ್ಧಾರ್ಥ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಅವರು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಇದ್ದು, ಅವರಿಗಾಗಿ ಸ್ಥಳೀಯ ಪೊಲೀಸರು ಭಾರೀ ಹುಡುಕಾಟ ನಡೆಸಿದ್ದಾರೆ. ಆಗಿದ್ದೇನು?: ಸಿದ್ಧಾರ್ಥ ಅವರು ಸೋಮವಾರ ವ್ಯವಹಾರ ನಿಮಿತ್ತ ತಮ್ಮ ಇನ್ನೋವಾ ವಾಹನದಲ್ಲಿ ಬೆಂಗಳೂರಿನಿಂದ…

  • ರಾಜಕೀಯ

    ಸಿದ್ದರಾಮಯ್ಯ ಮಣಿಸಲು ಕೋಲಾರ ಜನ ಶಪಥ! ಸಂಸದ ಮುನಿಸ್ವಾಮಿ

    ‘ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅಷ್ಟೇ ಅಲ್ಲ, ಅವರ ನಾಯಕ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬಂದರೂ ಭಯವಿಲ್ಲ. ಅವರನ್ನು ಸೋಲಿಸಿ ಮನೆಗೆ ಕಳುಹಿಸಲು ಕ್ಷೇತ್ರದ ಜನ ಶಪಥ ಮಾಡಿದ್ದಾರೆ! ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ವಕ್ಕಲೇರಿ ಗ್ರಾಮದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು. ‘ವರ್ತೂರು ಪ್ರಕಾಶ್‌ ಅಧಿಕಾರ ಇಲ್ಲದಿದ್ದರೂ ಕ್ಷೇತ್ರದ ಹಳ್ಳಿಹಳ್ಳಿಗೂ ಹೋಗಿ ಜನರ ಕಷ್ಟ ಆಲಿಸುತ್ತಿದ್ದಾರೆ. ಇದನ್ನು ಬಿಜೆಪಿ ಹೈಕಮಾಂಡ್ ಗಮನಿಸುತ್ತಿದೆ. ಕೆಲಸ ಮಾಡುವವರಿಗೆ…

  • ಉಪಯುಕ್ತ ಮಾಹಿತಿ

    ನಿಮ್ಮ ಕೂದಲು ಸೋಪಾಗಿ ಬೆಳೆಯಬೇಕಂದರೆ ಈರುಳ್ಳಿಯಿಂದ ಹೀಗೆ ಮಾಡಿ…

    ಈರುಳ್ಳಿ ಆರೋಗ್ಯಕ್ಕೆ ಮಾತ್ರ ವಲ್ಲದೆ ಕೂದಲಿಗೂ ತುಂಬಾ ಉಪಯೋಗಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕೂದಲಿನ ಆರೈಕೆಯಲ್ಲಿ ಈರುಳ್ಳಿ ಬಳಸು ಕೂದಲು ಸೊಂಪಾಗಿ ಬೆಳೆಯಬೇಕೇ? ಈರುಳ್ಳಿ ರಸ ಹಚ್ಚಿವುದು ಹೇಗೆ ಎಂದು ಹೆಚ್ಚಿನವರಿಗೆ ಅಚ್ಚರಿಯಾಗಬಹುದು. ತುಂಬಾ ದುಬಾರಿಯಾಗಿರುವ ಕೆಲವು ಚಿಕಿತ್ಸೆ ಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಕೂದಲಿಗೆ ಚಿಕಿತ್ಸೆ ನೀಡಿದರೆ ತುಂಬಾ ಒಳ್ಳೆಯದು.ಕೂದಲು ಉದುರುವ ಸಮಸ್ಯೆಗೆ ಈರುಳ್ಳಿ ಬಳಸಿಕೊಳ್ಳುವುದು ಹೇಗೆ ಎಂದು ನೀವು ತಿಳಿಯಿರಿ. ಈರುಳ್ಳಿ ರಸ ಮತ್ತು ಬಿಸಿ ನೀರು: ಕೇಶದ ಸಮಸ್ಯೆಗೆ ಈರುಳ್ಳಿ ರಸವನ್ನು ಬಿಸಿ ನೀರಿನೊಂದಿಗೂ ಸಹ…

  • ಆರೋಗ್ಯ

    ಊಟವಾದ ತಕ್ಷಣ ನೀರನ್ನು ಕುಡಿಯಬಾರದು ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ನಾವು ಪ್ರತಿದಿನ ಕನಿಷ್ಠ ಎಂಟು ಗ್ಲಾಸ್ ನೀರನ್ನು ಕುಡಿಯಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ನೀರು ಕುಡಿಯಲು ಸರಿಯಾದ ಸಮಯ ಯಾವುದು? ಶರೀರದಲ್ಲಿ ನೀರಿನ ಪರಿಣಾಮವನ್ನು ಗರಿಷ್ಠವಾಗಿಸಲು ಅದನ್ನು ಸೇವಿಸಲು ಅತ್ಯುತ್ತಮ ಸಮಯ ಯಾವುದು ಮತ್ತು ಹಾನಿಕಾರಕ ಪರಿಣಾಮವನ್ನು ತಪ್ಪಿಸಲು ನೀರನ್ನು ಯಾವ ಸಮಯ ದಲ್ಲಿ ಸೇವಿಸಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.