govt

ಸುಪ್ರೀಂ ಕೋರ್ಟ್ ನ ಆದೇಶವನ್ನು ಪಾಲಿಸದ 32 ಕಂಪನಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್,..!!

41

ಮುಂಬೈ ಮೂಲದ 32 ಕಂಪನಿಗಳ ನಿರ್ವಾಹಕ ನಿರ್ದೇಶಕರಿಗೆ ಬಂಧನದಭೀತಿ ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದ ಈ 32 ಕಂಪನಿಗಳ ಉನ್ನತಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್  ಜಾಮೀನು ರಹಿತ ವಾರಂಟ್ ಸೂಚಿಸಿದೆ . ಮೂರು ವರ್ಷಗಳ ಹಿಂದೆ ನೀಡಿದ ಆದೇಶವನ್ನು ಇವರು ಪಾಲಿಸಿಲ್ಲ ಎಂಬುದು ಇದಕ್ಕೆ ಮುಖ್ಯ ಕಾರಣವಾಗಿದೆ . ಮುಂಬೈ ಮೂಲದ ಕಂಪನಿಗಳಾದ ಅಕ್ಷರ್ ಮರ್ಸಾಂಟೈಲ್, ಬೀಟಾ ಟ್ರೇಡಿಂಗ್, ಅನ್​ಶುಲ್ ಮೆರ್ಸಾಂಟೈಲ್, ಎವರ್​ಫ್ರೇಮ್ ಟ್ರೇಡಿಂಗ್, ಹೈಝೋನ್ ಟ್ರೇಡಿಂಗ್, ಇನಾರ್ಬಿಟ್ ಟ್ರೇಡಿಂಗ್, ಲಕ್ಷ್ ಮರ್ಸಾಂಟೈಲ್, ಮ್ಯಾಜಿನೋಟ್ ಟ್ರೇಡಿಂಗ್, ಮಾಂಟ್ರಿಯಲ್ ಟ್ರೇಡಿಂಗ್, ನ್ಯೂಟ್ರೀ ಮರ್ಸಾಂಟೈಲ್, ಸರ್ವೇಶ್ವರ ಟ್ರೇಡಿಂಗ್ ಮೊದಲಾದ ಕಂಪನಿಗಳು ಸುಪ್ರೀಂ ಕೆಂಗಣ್ಣಿಗೆ ಗುರಿಯಾಗಿವೆ.

2016ರಲ್ಲಿ ಪ್ರಕರಣವೊಂದರ ಸಂಬಂಧ ಈ 32 ಕಂಪನಿಗಳು ಷೇರು ಪೇಟೆ ನಿಯಂತ್ರಣ ಸಂಸ್ಥೆಯಾದ ಸೆಬಿಗೆ ತಲಾ 5 ಲಕ್ಷ ದಂಡಕಟ್ಟುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಮೂರು ವರ್ಷಗಳಾದರೂ ಕಂಪನಿಗಳಿಂದ ಯಾವುದೇ ಸ್ಪಂದನೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ SEBI 2017ರಲ್ಲಿ ನ್ಯಾಯಾಂಗ ನಿಂದನೆಪ್ರಕರಣ ದಾಖಲಿಸಿತು. ಇದರ ವಿಚಾರಣೆ ನಡೆಸಿದ ನ್ಯಾರೋಹಿಂಗ್ಟನ್ ಎಫ್ ನಾರಿಮನ್ ನೇತೃತ್ವದ ಸರ್ವೋಚ್ಚ ನ್ಯಾಯಪೀಠ ಈಗ ಈ ಕಂಪನಿಗಳ ಅಧಿಕಾರಿಗಳಿಗೆ ನಾನ್ ಬೇಲಬಲ್ ವಾರೆಂಟ್ ಹೊರಡಿಸಿದೆ.

ಬ್ಯಾಂಕ್ ಆಫ್ ರಾಜಸ್ಥಾನ್ ಸಂಸ್ಥೆಯ ಮಾಜಿ ಪ್ರೊಮೋಟರ್ಸ್ ಆದ ಟಯಾಲ್ ಕುಟುಂಬ ಮತ್ತಿತರ ಸಂಸ್ಥೆಗಳು ವಂಚನೆ ಎಸಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ SEBI ಮಂಡಳಿಯು2013ರಲ್ಲಿ ಪ್ರವೀಣ್ ಟಯಾಲ್, ಅವರಕುಟುಂಬ ಸದಸ್ಯರಾದ ಸಂಯಜ್ ಟಯಾಲ್, ನವೀನ್ಟಯಾಲ್, ಸೌರಭ್ ಟಯಾಲ್ ಸೇರಿದಂತೆ ಈ ವಂಚನೆಯಲ್ಲಿ ಷಾಮೀಲಾದಹಲವು ಸಂಸ್ಥೆಗಳಿಗೆ ತಲಾ 5 ಲಕ್ಷ ರೂದಂಡ ಕಟ್ಟುವಂತೆ ಆದೇಶಿಸಿತು.

ಸುಪ್ರೀಂ ಕೋರ್ಟ್ 2016ರಲ್ಲಿ ಈ ಆದೇಶವನ್ನುಎತ್ತಿ ಹಿಡಿದು ತೀರ್ಪು ನೀಡಿತು.ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರವೂ ಹಲವು ಕಂಪನಿಗಳು ದಂಡ ಕಟ್ಟಲು ಆಸಕ್ತಿ ತೋರಲಿಲ್ಲ. ಕೋರ್ಟ್ ನೋಟೀಸ್ ಅನ್ನು ಮಾಧ್ಯಮಗಳಲ್ಲಿ ಪ್ರಕಟಿಸಿದಾಗಲೂ 32 ಕಂಪನಿಗಳು 5 ಲಕ್ಷ ರೂ ದಂಡವನ್ನು  ಕಟ್ಟಲು ಮುಂದೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಸೆಬಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿತು.ಈಗ ಜಾಮೀನು ರಹಿತ
ವಾರೆಂಟ್ ಹೊರಡಿಸಿಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಅಂಬಿ ಅಂತಿಮ ದರ್ಶನಕ್ಕೆ ಬಾರದೆ ಮಂಡ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ರಮ್ಯಾ ವಿರುದ್ದ ಮತ್ತೆ ಮಂಡ್ಯದಲ್ಲಿ ಆಕ್ರೋಶ…

    ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ನಿಧನರಾದ ಸಂದರ್ಭದಲ್ಲಿ ಅನಾರೋಗ್ಯದ ನೆಪವೊಡ್ಡಿ ಅಂತಿಮ ದರ್ಶನಕ್ಕೆ ಆಗಮಿಸದೇ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಂಸದೆ ರಮ್ಯಾ ವಿರುದ್ಧ ಮತ್ತೆ ಮಂಡ್ಯ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾಜಕೀಯ ಮಾಡಲು ಮಂಡ್ಯ ಬೇಕು. ಆದರೆ, ಮಂಡ್ಯ ಜನತೆಯ ಕಷ್ಟ-ಸುಖದಲ್ಲಿ ರಮ್ಯಾ ಭಾಗಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಯೋಧ ಹೆಚ್. ಗುರು ಹುತಾತ್ಮರಾಗಿದ್ದಾರೆ. ಮಂಡ್ಯದ ಮಾಜಿ ಸಂಸದರಾಗಿರುವ ರಮ್ಯಾ ಯೋಧನ ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ…

  • ಸುದ್ದಿ

    ‘ಕುರಿ’ ಪ್ರತಾಪ್ ಲೈಫಲ್ಲಿ ಫಸ್ಟ್‌ ಟೈಮ್ ಏನೇನೋ ಆಗ್ತಿದೆ..! ಏನೇನ್ ಆಗ್ತಿದೆ ಗೊತ್ತಾ?

    ‘ಕುರಿ’ ಪ್ರತಾಪ್‌ ಈಗ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಕಾರಣ, ಬಿಗ್ ಬಾಸ್‌. ಅಲ್ಲದೆ, ಕನ್ನಡ ಚಿತ್ರರಂಗದ ಬೇಡಿಕೆಯ ಈ ಹಾಸ್ಯನಟನ ಬದುಕಲ್ಲಿ ಈಗ ಫಸ್ಟ್ ಟೈಮ್ ಏನೇನೋ ಆಗ್ತಿದೆಯಂತೆ! ನಟ ಕುರಿ ಪ್ರತಾಪ್ ವೃತ್ತಿಜೀನವ ಆರಂಭಿಸಿದ್ದು ಕಿರುತೆರೆ ಮೂಲಕ. ಆನಂತರ ಅವರು ಬೆಳ್ಳಿತೆರೆಯಲ್ಲಿ ಬೇಡಿಕೆಯ ಹಾಸ್ಯನಟರಾಗಿ ಮಿಂಚಿದರು. ಬಳಿಕ ಮತ್ತೆ ‘ಮಜಾ ಟಾಕೀಸ್‌’ ಮೂಲಕ ವೀಕ್ಷಕರಿಗೆ ಕಾಮಿಡಿ ಕಚಗುಳಿ ನೀಡಿದರು. ಇದೀಗ ಅವರು ‘ಬಿಗ್ ಬಾಸ್‌’ ಮನೆ ಸೇರಿಕೊಂಡಿದ್ದಾರೆ. ಜತೆಗೆ ಅವರ ಲೈಫಲ್ಲಿ ಫಸ್ಟ್ ಟೈಮ್‌ ಏನೇನೋ ಆಗ್ತಿದೆ!…

  • ಸುದ್ದಿ

    ಟೀ ಕುಡಿಯಲು ದುಡ್ಡಿಲ್ಲದೆ ಪರದಾಡ್ತಿದ್ದ ನಟಿ ಮನೆಯಲ್ಲಿ ದೇವರ ಫೋಟೊ ಬದಲು ಸಲ್ಮಾನ್ ಫೋಟೋ..!ಯಾಕೆ ಗೊತ್ತಾ?

    ಪೂಜಾ 2018ರಲ್ಲಿ ಕ್ಷಯ ರೋಗ (ಟಿಬಿ) ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಅವರು 6 ತಿಂಗಳವರೆಗೂ ಮುಂಬೈನ ಶಿವಾಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕ್ಷಯರೋಗದಿಂದ ಬಳಲಿ ಮಾರ್ಚ್‌ನಲ್ಲಿ ಆಸ್ಪತ್ರೆಗೆ ದಾಖಲಾದಾಗ ಕೇವಲ 23 ಕೆ.ಜಿಯಷ್ಟಿತ್ತು ಅವರ ತೂಕ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರ ಆರೋಗ್ಯ ಸುಧಾರಿಸಿದ್ದು ತೂಕದಲ್ಲೂ 20 ಕೆ.ಜಿಯಷ್ಟು ಹೆಚ್ಚಾಗಿದ್ದಾರೆ. ಪೂಜಾ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗಿತ್ತು. ಇತ್ತೀಚೆಗೆ ಪೂಜಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಚಿತ್ರರಂಗಕ್ಕೆ ಹಿಂದಿರುಗುವುದಾಗಿ ಹೇಳಿದ್ದಾರೆ….

  • ಉದ್ಯೋಗ

    ಯುವ ಪರಿವರ್ತಕರಿಗಾಗಿ ಅರ್ಜಿ ಆಹ್ವಾನ

    ಬೆಂಗಳೂರು ನಿಮ್ಹಾನ್ಸ್‌ನ ಜನ ಆರೋಗ್ಯ ಕೇಂದ್ರದ ಎಪಿಡೀಮಿಯಾಲಜಿ ವಿಭಾಗದ ವತಿಯಿಂದ ಅನುಷ್ಠಾನಗೊಂಡಿರುವ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ  ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಗೌರವಧನ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ರಾಷ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ನಾನ ಸಂಸ್ದೆ (ನಿಮ್ಹಾನ್ಸ್) ಬೆಂಗಳೂರು ಇಲ್ಲಿ ತರಬೇತಿ…