ಸುದ್ದಿ

18ನೇ ವೆಡ್ಡಿಂಗ್ ಡೇ ವಾರ್ಷಿಕೋತ್ಸವದಲ್ಲಿ ಸುದೀಪ್ ದಂಪತಿಯ ಸಂಭ್ರಮ…!

121

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಅವರು ಇಂದು ತಮ್ಮ 18ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸುದೀಪ್ ಹಾಗೂ ಪ್ರಿಯಾ ಅಕ್ಟೋಬರ್ 18, 2001ರಲ್ಲಿ ಮದುವೆಯಾಗಿದ್ದರು. ಇಂದಿಗೆ ಸುದೀಪ್ ಮತ್ತು ಪ್ರಿಯಾ ಅವರು ಮದುವೆಯಾಗಿ 18 ವರ್ಷಗಳು ಕಳೆದಿವೆ. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಇಬ್ಬರಿಗೂ ಶುಭಾಶಯ ತಿಳಿಸುತ್ತಿದ್ದಾರೆ.

ನೆಚ್ಚಿನ ನಟ ವಿವಾಹ ವಾರ್ಷಿಕೋತ್ಸವ ಇರುವ ಹಿನ್ನೆಲೆಯಲ್ಲಿ ಸುದೀಪ್ ಅಭಿಮಾನಿಗಳ ಸಂಘಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಧ ವಿಧವಾದ ಪೋಸ್ಟರ್ ಗಳನ್ನು ಪೋಸ್ಟ್ ಮಾಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ಪ್ರಿಯಾ ಅವರು `ಪೈಲ್ವಾನ್’ ಸಿನಿಮಾ ನೋಡಿ, ಅದರಲ್ಲಿ ಸುದೀಪ್ ಮದುವೆ ಮನೆಗೆ ಮಾಸ್ ಆಗಿ ಎಂಟ್ರಿ ಕೊಡುತ್ತಾರೆ. ಆಗ ಮದುವೆ ಹುಡುಗಿಯಾಗಿ ನಾನು ಕೂರಬೇಕಿತ್ತು ಎಂದು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಸುದೀಪ್ ಅವರು ವಿವಾಹ ವಾರ್ಷಿಕೋತ್ಸವ ಸಂಭ್ರಮ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಸುದೀಪ್ ತಮ್ಮ ಪತ್ನಿ ಪ್ರಿಯಾ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಈ ದಂಪತಿಗೆ ಸಾನ್ವಿ ಎಂಬ ಮಗಳಿದ್ದಾಳೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ಮಿಸ್ ಸೌತ್ ಇಂಡಿಯಾ’ ಕಿರೀಟ ತನ್ನದಾಗಿಸಿಕೊಂಡ ಕಿರುತೆರೆ ನಟಿ ಕುಲವಧು ಧನ್ಯಾ….

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ಇತ್ತೀಚೆಗಷ್ಟೆ ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಟಿ ದೀಪಿಕಾ ಅವರು ಈ ಬಗ್ಗೆ ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ತಾವು ವಿನ್ನರ್ ಆದ ತಕ್ಷಣದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮತ್ತು ತಮ್ಮ ಗೆಳೆಯನಿಗೆ ಧನ್ಯವಾದ ತಿಳಿಸಿದ್ದಾರೆ. “ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದರಲ್ಲೂ ನಾನು ‘ಮಿಸ್ ಸೌತ್ ಇಂಡಿಯಾ…

  • ಉಪಯುಕ್ತ ಮಾಹಿತಿ

    ಸದ್ಯದಲ್ಲೇ “ಗೋವು ” ಆನ್ಲೈನ್ ಮಾರುಕಟ್ಟೆ ..!ತಿಳಿಯಲು ಈ ಲೇಖನ ಓದಿ ..

    ಹಳೆಯ ವಸ್ತುಗಳು ಇದ್ದರೆ “ಮಾರಿ ಬಿಡಿ’ ಎನ್ನುವುದು ವೆಬ್ ಸೈಟ್ ಒಂದರ ಜಾಹೀರಾತು. ಅದೇ ರೀತಿ ಗೋವುಗಳ ಮಾರಾಟಕ್ಕೆ ಪ್ರತ್ಯೇಕವಾದ ವೆಬ್ಸೈಟ್ ಇದ್ದರೆ ಹೇಗಿರುತ್ತದೆ. ಇನ್ನು ಆರು ತಿಂಗಳು ಕಾದು ಕುಳಿತರೆ ಅದೂ ಸಿದ್ಧವಾಗಿ ಬಿಡುತ್ತದೆ. ಅದೂ ಓಎಲ್‌ಎಕ್ಸ್, ಕ್ವಿಕರ್ ಮಾದರಿಯಲ್ಲಿಯೇ.

  • ಸುದ್ದಿ

    ಎನ್​ಆರ್​ಸಿ ಪಟ್ಟಿಯಿಂದ 19.06 ಲಕ್ಷ ಜನ ಹೊರಕ್ಕೆ ಇವರೆಲ್ಲರ ಪರಿಸ್ಥಿತಿ ಏನು, ಇದನ್ನೊಮ್ಮೆ ಓದಿ..?

    ಅಸ್ಸಾಂ ಸರ್ಕಾರ ಶನಿವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್​ಆರ್​ಸಿ) ಅಂತಿಮ ಪಟ್ಟಿಯ ಪ್ರಕಾರ 19.06 ಲಕ್ಷ ಜನರು ಭಾರತೀಯ ಪೌರರಲ್ಲ ಎಂದು ಹೇಳಲಾಗಿದೆ. ಹಾಗೆಂದು ತಕ್ಷಣವೇ ಇವರನ್ನು ಬಂಧಿಸದಿರಲು ಹಾಗೂ ಅಕ್ರಮ ನಿವಾಸಿಗಳು ಎಂದು ಘೋಷಿಸದಿರಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ತಮ್ಮ ಬಳಿ ದಾಖಲೆಗಳಿದ್ದರೆ, ಅವುಗಳನ್ನು ಒದಗಿಸಿ ತಮ್ಮ ಪೌರತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಲು ಇವರೆಲ್ಲರಿಗೂ ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ….

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ…ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ

    ಶನಿವಾರ, 21/4/2018,  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಮೇಷ:– ಎಲ್ಲಾ ವಿಚಾರಕ್ಕೂ ಪರರ ಸಲಹೆಯನ್ನು ಕೇಳುತ್ತಾ ಕೂತರೆ ಉತ್ತಮ ಅವಕಾಶ ತಪ್ಪಿ ಹೋಗುವುದು ಸಾಧ್ಯತೆ. ಅಂಜಿಕೆ, ಅಧೈರ್ಯ ಬದಿಗಿಟ್ಟು?   ಕಾರ್ಯವನ್ನು ಮುನ್ನುಗ್ಗಿ ಮಾಡಿ. ದೈವಬಲವಿದೆ. ನೀವು ಯಶಸ್ಸನ್ನು ಹೊಂದುವಿರಿ….

  • ಸುದ್ದಿ

    ಮೋದಿ ಹುಟ್ಟುಹಬ್ಬಕ್ಕೆ ಜೆಡಿಎಸ್ ಶಾಸಕರಿಂದ ವಿಶೇಷ ಪೂಜೆ….!

    ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತೆಯೇ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಮೊದಲಾದವರು ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಂಡಿದ್ದು, ಈ ಪೂಜೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಭಾಗಿಯಾಗಿದ್ದಾರೆ. ಬಿಜೆಪಿ ನಾಯಕರೊಂದಿಗೆ ವಿಶೇಷ ಪೂಜೆ ನೆರವೇರಿಸಿದ ಮಾಜಿ ಸಚಿವ ಜಿ.ಟಿ. ದೇವೇಗೌಡ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಜೆಡಿಎಸ್ ನಾಯಕರನ್ನು ಟೀಕಿಸುತ್ತಲೇ ಬಿಜೆಪಿ ಹತ್ತಿರವಾಗುತ್ತಿದ್ದಾರೆ. ರಾಜಕೀಯ…