ಉಪಯುಕ್ತ ಮಾಹಿತಿ

ನಿಮ್ಮ ತ್ವಚೆಯನ್ನು ಕಾಪಾಡಿಕೊಂಡು ಸೌಂದರ್ಯವಾಗಿ ಕಾಣಬೇಕೇ? ಹಾಗಾದರೆ ನೀವು ಇದನ್ನು ಬಳುಸುವುದು ಉತ್ತಮ.!

60

ಯೌವ್ವನದಲ್ಲಿ ತ್ವಚೆಯ ಸೌಂದರ್ಯದ ಕಾಳಜಿವಹಿಸಿದರೆ ವಯಸ್ಸಾದಂತೆ ಅದರ ಪ್ರತಿಫಲ ಕಾಣಬಹುದು. ಸಾಮಾನ್ಯವಾಗಿ ಹೆಚ್ಚಿನವರು ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಹಲವು ರೀತಿಯ ರಾಸಾಯನಿಕ ಸೌಂದರ್ಯವರ್ಧಕಗಳ ಮೊರೆ ಹೋಗುವವರೇ ಹೆಚ್ಚು. ಆದರೆ ಎಲ್ಲ ಕಡೆಯು ಹೇರಳವಾಗಿ ದೊರೆಯುವ ಕೆಲ ಗಿಡಗಳಿಂದಲೂ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಹೌದು, ಲೋಳೆಸರ, ಕತ್ಲಿಗಿಡ ಎಂದೆಲ್ಲಾ ಕರೆಸಿಕೊಳ್ಳುವ ಅಲೋವೇರ ಎಲೆಗಳನ್ನು ಬಳಸಿ ಕೂಡ ತ್ವಚೆಯನ್ನು ಆರೈಕೆ ಮಾಡಬಹುದು. ಪ್ರಸ್ತುತ ಅನೇಕ ಕಂಪೆನಿಗಳು ಸಹ ಅಲೋವೇರ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಆದರೆ ನೇರವಾಗಿ ಲೋಳೆಸರ ಎಲೆಗಳಿಂದಲೇ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ನೆನಪಿರಲಿ.

ಅಲೋವೇರಾ ಚರ್ಮದ ಮೇಲೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಬರುತ್ತದೆ. ಅಲ್ಲದೆ, ಚರ್ಮಕ್ಕೆ ಬೇಕಾದ ಪೋಷಕಾಂಶ ಕೂಡ ಲೋಳೆರಸದಿಂದ ಸಿಗುತ್ತದೆ. ಒಂದು ವೇಳೆ ಚರ್ಮದ ಅಲರ್ಜಿಯಿದ್ದರೆ ನೀವು ಅಲೋವೇರ ಜೆಲ್​ಗಳನ್ನು ಬಳಸದಿರುವುದು ಉತ್ತಮ.

ಚರ್ಮದ ಹೊಳಪು : ಚರ್ಮದ ಸೌಂದರ್ಯವನ್ನು ಸುಧಾರಿಸಲು ಬಯಸಿದರೆ, ಅಲೋವೆರಾ ಜೆಲ್ ಅನ್ನು ಬಳಸುವುದು ಉತ್ತಮ. ನಿಮ್ಮ ಮುಖದಿಂದ ಧೂಳು, ಕೊಳಕು, ಡೆಡ್​ ಸ್ಕಿನ್​ ಮತ್ತು ಕೊಳೆಯನ್ನು ಸ್ವಚ್ಛಗೊಳಿಸಲು ಇದು ತುಂಬಾ ಸಹಾಯಕವಾಗಿದೆ. ಇದು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುವುದಲ್ಲದೆ ಆಕರ್ಷಣೀಯವಾಗಿಸುತ್ತದೆ.

ವಿರೋಧಿ ಗುಣಲಕ್ಷಣಗಳು:  ವಯಸ್ಸಾಗುವಿಕೆಯ ವಿರೋಧಿ ಗುಣಗಳು ಅಲೋವೆರಾದಲ್ಲಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳೂ ಮುಖದ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ಪ್ರತಿದಿನ ಬಳಸುವುದರಿಂದ ಯೌವ್ವನ ಮತ್ತು ಸೌಂದರ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಬಹುದು.

ಬಿಸಿಲಿನ ಬೇಗೆ : ಸನ್ ಬರ್ನ್ ಸಮಸ್ಯೆಯನ್ನು ತೊಡೆದುಹಾಕಲು ಅಲೋವೆರಾ ಜೆಲ್ ಸಹಕಾರಿ. ಪಿಂಪಲ್​ಗಳನ್ನು ಹೋಗಲಾಡಿಸುವಲ್ಲಿ ಅಲೋವೆರಾ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಮುಖದಿಂದ ಮೇಕ್ಅಪ್ ತೆಗೆದುಹಾಕಲು ಸಹ ಅಲೋವೆರಾ ಜೆಲ್ ತುಂಬಾ ಉಪಯುಕ್ತ. ಇದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ.

ಪಾದದ ತೊಂದರೆ : ಕಣಕಾಲುಗಳನ್ನು ಮೃದು ಮತ್ತು ಸುಂದರವಾಗಿಸಲು ಮತ್ತು ಪಾದದ ಬಿರುಕಿನ ಸಮಸ್ಯೆಗೂ ಅಲೋವೆರಾ ಜೆಲ್​ಗಳನ್ನು ಬಳಸಬಹುದು. ಹಾಗೆಯೇ ಈ ಜೆಲ್ ಅನ್ನು ತುಟಿಗಳನ್ನು ಮೃದುವಾಗಿ ಮತ್ತು ಗುಲಾಬಿಯಂತೆ ಸುಂದರವಾಗಿಸಲು ಸಹ ಪರಿಣಾಮಕಾರಿಯಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉದ್ಯೋಗ

    ಕೆಲಸದ ಜೊತೆಗೆ ಇವುಗಳನ್ನು ಮಾಡಿದ್ರೆ, ನಿಮ್ಗೆ ಕೆಲಸದಲ್ಲಿ ಪ್ರಮೋಷನ್ ಸಿಗುತ್ತೆ!

    ಸರಕಾರಿ ಮತ್ತು ಖಾಸಗಿ ಕಂಪನಿ ಎಲ್ಲಿ ಕೆಲಸ ಮಾಡಿದರೂ ,ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿದರೂ, ಉದ್ದ್ಯೋಗಿಗಳು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದರು ಪ್ರಮೋಷನ್, ಸಂಬಳ ಹೆಚ್ಚಳದ ಬಗ್ಗೆ ಎದರು ನೋಡುತ್ತಿರುತ್ತಾರೆ

  • ಸುದ್ದಿ

    ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಂತಹ ಹೆಬ್ಬುಲಿ ನಟಿ – ಅಮಲಾ ಪೌಲ್…!

    ಬಹುಭಾಷಾ ನಟಿ ಅಮಲಾ ಪೌಲ್ ಅವರು ತಮಿಳಿನಲ್ಲಿ ನಟಿಸಿದ ‘ಅದಾಯಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ನಟಿ ಅಮಲಾ ಪೌಲ್ ನಟಿಸಿದ ಅದಾಯಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತಾಯಿ ತನ್ನ ಕಾಣೆಯಾದ ಮಗಳನ್ನು ಹುಡುಕಿಕೊಡಿ ಎಂದು…

  • ಜೀವನಶೈಲಿ

    ನಿಮ್ಮ ದೇಹದ ಶಾಖವನ್ನು ಕಡಿಮೆ ಮಾಡಲು ಈ ಆಹಾರ ಕ್ರಮಗಳನ್ನು ಅನುಸರಿಸಿ…ತಿಳಿಯಲು ಈ ಲೇಖನ ಓದಿ…

    ದೇಹದಲ್ಲಿ ಬಿಸಿಯಾಗಲು ಮತ್ತು ಶರೀರ ತಾಪಮಾನ ಏರಿಕೆಗೆ ಹಲವು ಕಾರಣಗಳಿವೆ. ನಿಮ್ಮ ಸುತ್ತಲಿನ ಪರಿಸರದ ಕಾರಣದಿಂದಾಗಿ ನಿಮ್ಮ ದೇಹದಲ್ಲಿನ ಶಾಖಕ್ಕೆ ಕಾರಣ.

  • ಸುದ್ದಿ

    ಧೋನಿ ನಿವೃತ್ತಿಗೆ ಕೊಹ್ಲಿ ಪ್ರತಿಕ್ರಿಯೆ…..!

    ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಎಂ.ಎಸ್.ಧೋನಿ ಸ್ಲೋ ಬ್ಯಾಟಿಂಗ್ ಟೀಕೆಗೆ ಗುರಿಯಾಗಿತ್ತು. ಇಷ್ಟೇ ಅಲ್ಲ ಧೋನಿ ನಿವೃತ್ತಿಗೂ ಒತ್ತಡ ಕೇಳಿ ಬಂದಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಧೋನಿ ಎಲ್ಲಾ ಟೀಕಿಗೆ ಉತ್ತರಿಸಿದ್ದಾರೆ. 50 ರನ್ ಸಿಡಿಸೋ ಮೂಲಕ ಭಾರತದ ದಿಟ್ಟ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಆದರೆ ಪಂದ್ಯ ಗೆಲ್ಲಲಿಲ್ಲ ಅನ್ನೋ ಕೊರಗು ಇನ್ನು ಮಾಸಿಲ್ಲ. ಇದರ ನಡುವೆ ಮತ್ತೆ ಧೋನಿ ನಿವೃತ್ತಿ ಪಶ್ನೆ ಎದ್ದಿದೆ. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ….

  • ಸುದ್ದಿ

    ಪಾನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ಸುದ್ದಿ, ಬೇಗ ಎಚ್ಛೆತ್ತುಕ್ಕೊಳ್ಳಿ ನಿರ್ಲಕ್ಷ ಮಾಡಿದರೆ ಬಾರಿ ದಂಡ ಕಟ್ಟಬೇಕಾಗುತ್ತದೆ.

    ಪಾನ್ ಕಾರ್ಡ್ ಯಾರ ಬಳಿ ಇಲ್ಲ ಹೇಳಿ, ಎಲ್ಲರ ಬಳಿ ಇದ್ದೆ ಇರುತ್ತದೆ. ಪಾನ್ ಕಾರ್ಡ್ ಇಲ್ಲದೆ ಯಾವುದೇ ವ್ಯಾಪಾರ ಮತ್ತು ವ್ಯವಹಾರವನ್ನ ಮಾಡಲು ಸಾಧ್ಯವಿಲ್ಲ ಮತ್ತು ಯಾವುದೇ ಹಣದ ವಹಿವಾಟನ್ನ ಸಹ ಮಾಡಬೇಕೆಂದರೆ ನಿಮಗೆ ಪಾನ್ ತುಂಬಾ ಅವಶ್ಯಕ. ಇನ್ನು ಕಳೆದ ಎರಡು ವರ್ಷಗಳಿಂದ ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನ ಜಾರಿಗೆ ತರಲಾಗಿದ್ದು ಆ ನಿಯಮಗಳನ್ನ ಪಾಲಿಸುವುದು ಕಡ್ಡಾಯ ಕೂಡ ಆಗಿತ್ತು. ಈ ಹಿಂದೆ ಬ್ಯಾಂಕುಗಳಲ್ಲಿ ವ್ಯವಹಾರಗಳನ್ನ ಮಾಡಬೇಕೆಂದರೆ ತುಂಬಾ ಸುಲಭವಾಗಿ ಮಾಡಬಹುದಾಗಿತ್ತು…

  • ಸುದ್ದಿ

    ಹುಟ್ಟಿದ ಮಕ್ಕಳಿಗೆ ಮಂಗಳ ಮುಖಿಯರಿಂದ ಆಶೀರ್ವಾದ ಮಾಡಿಸಿದರೆ ಏನಾಗುತ್ತೆ ಗೊತ್ತಾ..?

    ನಮ್ಮ ಸಮಾಜದಲ್ಲಿ ಈಗ್ಲೂ ಮಂಗಳಮುಖಿಯರಿಗೆ ಸರಿಯಾದ ಗೌರವ ಸಿಗ್ತಿಲ್ಲ. ಆದ್ರೆ ಮಂಗಳಮುಖಿ ಮನೆಗೆ ಬಂದ್ರೆ ಬರಿಗೈನಲ್ಲಿ ಕಳುಹಿಸುವುದಿಲ್ಲ. ಮಂಗಳಮುಖಿ ಆಶೀರ್ವಾದ ಮಾಡಿದ್ರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಮನೆಗೆ ಬಂದ ಮಂಗಳಮುಖಿಯನ್ನು ತೃಪ್ತಿಪಡಿಸಿ ಆಶೀರ್ವಾದ ಪಡೆಯಬೇಕೆಂಬ ನಂಬಿಕೆ ಇದೆ. ಮಕ್ಕಳಿಗೂ ಮಂಗಳಮುಖಿಯರ ಆಶೀರ್ವಾದ ಸಿಗಬೇಕಂತೆ. ನವಜಾತ ಶಿಶು ಜನಿಸಿದ ನಂತ್ರ ಬರುವ ಮೊದಲ ಬುಧವಾರ ಮಗುವನ್ನು ಮಂಗಳಮುಖಿ ಮಡಿಲಿಗೆ ಹಾಕಬೇಕಂತೆ. ಮಂಗಳಮುಖಿ, ಮಗುವಿಗೆ ಆಶೀರ್ವಾದ ನೀಡಿದ್ರೆ ಮಗು ಬಹಳ ಭಾಗ್ಯಶಾಲಿಯಾಗುತ್ತದೆಯಂತೆ. ಮಗು ಹುಟ್ಟಿದ ನಂತ್ರ ಅನ್ನ ಪ್ರಾಶನದವರೆಗೆ…